ಕಡಬ ನ್ಯೂಸ್

➤ ನೆಲ್ಯಾಡಿ ಬಸ್ ಪಲ್ಟಿ ಹಲವರಿಗೆ ಗಾಯ

ನ್ಯೂಸ್ ಕಡಬ) newskadaba.com ನೆಲ್ಯಾಡಿ , ಡಿ. 19  ಮದ್ದೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಖಾಸಗಿ ಬಸ್ಸೊಂದು ಮಂಗಳೂರು- ಬೆಂಗಳೂರು ರಾ.ಹೆ. 75ರ ನೆಲ್ಯಾಡಿ ಸಮೀಪದ ಲಾವತ್ತಡ್ಕ ಕೊರಮೇರು ಎಂಬಲ್ಲಿ ಪಲ್ಟಿಯಾದ ಘಟನೆ ಡಿ.19 ರಂದು ಮುಂಜಾನೆ ನಡೆದಿದೆ.   ಈ ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದು, ಮೂವರನ್ನು ಮಂಗಳೂರಿನ .ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.  ಉಳಿದಂತೆ ಗಾಯಗೊಂಡವರನ್ನು ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ.

➤ ನೆಲ್ಯಾಡಿ ಬಸ್ ಪಲ್ಟಿ ಹಲವರಿಗೆ ಗಾಯ Read More »

ಕ್ರೈಮ್ ನ್ಯೂಸ್

➤ ನಾಡಬಂದೂಕಿನ ಗುಂಡು ತಗುಲಿ ಬಾಲಕ ಮೃತ್ಯು

ನ್ಯೂಸ್ ಕಡಬ) newskadaba.com ರಾಮನಗರ , ಡಿ. 19  ನಾಡಬಂದೂಕಿನ ಗುಂಡು ಅಕಸ್ಮಿಕವಾಗಿ ತಗುಲಿ ಬಾಲಕನೋರ್ವ ಮೃತಪಟ್ಟ ಘಟನೆ  ರಾಮನಗರ ತಾಲೂಕಿನ ಕಾಡಶಿವನಹಳ್ಳಿಯಲ್ಲಿ ನಡೆದಿದೆ. ಬಂದೂಕು ತೆಗೆದುಕೊಂಡು ಮಕ್ಕಳು ಆಟವಾಡುವಾಗ ಮೃತ ಶಮಾ ಸಹೋದರ ಸಾಜೀದ್(16) ಬಂದೂಕಿನ ಟ್ರಿಗರ್​ ಒತ್ತಿದ್ದಾನೆ. ಈ ವೇಳೆ ನಾಡಬಂದೂಕಿನ ಗುಂಡು ತಗುಲಿ ಶಮಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯುಪಿ ಮೂಲದ ಅಮಿನುಲ್ಲಾ, ಸಮ್​ಸೂನ್​ ಕುಟುಂಬ ಮೂರು ದಿನದ ಹಿಂದಷ್ಟೆ ಕೂಲಿ ಕೆಲಸಕ್ಕೆ ಬಂದಿದ್ದು ಮಲ್ಲೇಶ ಎಂಬಾತನ ಜಮೀನಿನಲ್ಲಿ ಕೆಲಸಕ್ಕಿದ್ದರು. ತಂದೆ-ತಾಯಿ ತೋಟದಲ್ಲಿ ಕೆಲಸ

➤ ನಾಡಬಂದೂಕಿನ ಗುಂಡು ತಗುಲಿ ಬಾಲಕ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ ಬೆಂಗಳೂರು ಸಾರಿಗೆ ಬಸ್ ಡಿಕ್ಕಿ ➤ ಮೂವರು ವಿದ್ಯಾರ್ಥಿಗಳು ಮೃತ್ಯು

(ನ್ಯೂಸ್ ಕಡಬ) newskadaba.com ಬಳ್ಳಾರಿ , ಡಿ. 19  ಬಳ್ಳಾರಿ: ಸಾರಿಗೆ ಬಸ್​ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಬಳ್ಳಾರಿ ತಾಲೂಕಿನ ಹಲಕುಂದಿ ಬಳಿ ತಡರಾತ್ರಿ ಸಂಭವಿಸಿದೆ. ಕನಕರಾಜು(19), ಶಂಕರ(18),  ಹೊನ್ನೂರ(22) ಮೃತ ದುರ್ದೈವಿಗಳು. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ರಸ್ತೆ ಕ್ರಾಸ್ ಮಾಡುವ ವೇಳೆ ಬೆಂಗಳೂರಿನಿಂದ ಜೇವರ್ಗಿಗೆ ಹೊರಟಿದ್ದ ಸಾರಿಗೆ ಬಸ್​ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಎಸ್​​​ಸಿ, ಎಸ್​​ಟಿ ಹಾಸ್ಟಲ್ ವಿದ್ಯಾರ್ಥಿಗಳು. ಇವರು 2 ದಿನದ

➤ ಬೆಂಗಳೂರು ಸಾರಿಗೆ ಬಸ್ ಡಿಕ್ಕಿ ➤ ಮೂವರು ವಿದ್ಯಾರ್ಥಿಗಳು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ರಾಜ್ಯದಲ್ಲಿ ಮತ್ತೆ 14 ಮಂದಿಗೆ ಕೋವಿಡ್ ಸೋಂಕು

(ನ್ಯೂಸ್ ಕಡಬ) newskadaba.com ಬೆಂಗಳೂರು ಡಿ. 17. ರಾಜ್ಯದಲ್ಲಿ ಮತ್ತೆ ಕೊರೋನಾ ಸೋಂಕು ಹೆಚ್ಚಳವಾಗುತ್ತಿದ್ದು, ಶುಕ್ರವಾರ 14 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 36 ಮಂದಿ ಗುಣಮುಖರಾಗಿದ್ದಾರೆ.   ಸೋಂಕಿತರ ಪೈಕಿ ಬೆಂಗಳೂರು 10, ದಕ್ಷಿಣ ಕನ್ನಡ 2 ಹಾಗೂ ಚಿಕ್ಕಬಳ್ಳಾಪುರದಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. 27 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. 20 ತಿಂಗಳ ಬಳಿಕ ಕನಿಷ್ಟ ಪ್ರಕರಣಗಳು ಪತ್ತೆಯಾಗಿದ್ದವು. ಈಗ ಮತ್ತೆ ಏರಿಕೆಯಾಗಿದೆ.

ರಾಜ್ಯದಲ್ಲಿ ಮತ್ತೆ 14 ಮಂದಿಗೆ ಕೋವಿಡ್ ಸೋಂಕು Read More »

ಕರಾವಳಿ

ಗಡಿ ವಿವಾದ: ಮುಂಬೈಯಲ್ಲಿ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮುಬೈ, ಡಿ. 17. ಮುಂಬೈ ಕರ್ನಾಟಕದ ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಮೇಲೆ ದೌರ್ಜನ್ಯ ನಡೆಯುತ್ತಿದೆ ಆದರೆ ಈ ವಿಷಯದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಎನ್ ಸಿ.ಪಿ ಕಾಂಗ್ರೆಸ್ , ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ಬೃಹತ್ ಹೋರಾಟ ನಡೆಸಲು ನಿರ್ಧರಿಸಿದೆ.

ಗಡಿ ವಿವಾದ: ಮುಂಬೈಯಲ್ಲಿ ಬೃಹತ್ ಪ್ರತಿಭಟನೆ Read More »

ರಾಷ್ಟ್ರೀಯ ನ್ಯೂಸ್

ರೇಬಿಸ್ ಖಾಯಿಲೆಗೆ ತುತ್ತಾಗಿ ಬಾಲಕ ಮೃತ್ಯು..!

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಡಿ. 17. ಕೆಲದಿನಗಳ ಹಿಂದೆ ಮನೆಯ ಮುಂದೆ ಆಟವಾಡುತ್ತಿದ ಕರ್ಲಗದ್ದೆ ರಮೇಶ್ ಎಂಬವರ ಪುತ್ರ ಪ್ರಧಾನ್ (12) ಎಂಬ ಬಾಲಕನಿಗೆ ಬೀದಿ ನಾಯಿ ದಾಳಿ ಮಾಡಿತ್ತು. ಮನೆಯವರು ಸೂಕ್ತ ಚಿಕಿತ್ಸೆ ಕೊಡಿಸಿರಲಿಲ್ಲ ಎನ್ನಲಾಗಿದೆ.   ನಂತರದಲ್ಲಿ ಬಾಲಕನಿಗೆ ತೀವ್ರ ಜ್ವರ ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ವೈದ್ಯರು ಬಾಲಕ ರೇಬಿಸ್ ಕಾಯಿಲೆಗೆ ತುತ್ತಾಗಿದ್ದಾನೆ ಎಂದು ತಿಳಿಸಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದಾನೆ ಎಂದೆನ್ನಲಾಗಿದೆ. .

ರೇಬಿಸ್ ಖಾಯಿಲೆಗೆ ತುತ್ತಾಗಿ ಬಾಲಕ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ !

(ನ್ಯೂಸ್ ಕಡಬ) newskadaba.com ಮಾಲೂರು, ಡಿ. 17. ಶೌಚಾಲಯಕ್ಕೆ ತೆರಳಿದ್ದ ಗರ್ಭಿಣಿ ಮಹಿಳೆಯೊಬ್ಬರು ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ನಗರದ ಪುರಸಭೆಯಲ್ಲಿ ನಡೆದಿದೆ.   ಉತ್ತರಪ್ರದೇಶದ ಮಹಿಳೆ ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ಹೋಗಿದ್ದಾಗ ಆಕೆಗೆ ಬಿ.ಪಿ ಜಾಸ್ತಿಯಾಗಿತ್ತು. ತಕ್ಷಣವೇ ಅವರನ್ನು ಕೋಲಾರ ಆಸ್ಪತ್ರೆಗೆ ಸಾಗಿಸಲು ವೈದ್ಯರು ಸೂಚಿಸಿದ್ದರು. ಆಂಬುಲೆನ್ಸ್ ಬರುವಷ್ಟರಲ್ಲಿ ಮಹಿಳೆಗೆ ಶೌಚಾಲಯದಲ್ಲೇ ಹೆರಿಗೆಯಾಗಿದೆ. ನಂತರ ಆಶಾ ಕಾರ್ಯಕರ್ತೆಯರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರು.

ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ ! Read More »

ಕರ್ನಾಟಕ

ನೀರಾನೆ ಬಾಯಿಯಿಂದ ಬದುಕಿಬಂದ ಪುಟ್ಟ ಪೋರ.. !

(ನ್ಯೂಸ್ ಕಡಬ) newskadaba.com ಉಗಾಂಡ, ಡಿ. 17. ಹಸಿದ ನೀರಾನೆಯೊಂದು 2 ವರ್ಷದ ಬಾಲಕನ್ನು ನುಂಗುತ್ತಿದ್ದಾಗ ದಾರಿಹೋಕನ ಕಲ್ಲೇಟಿಗೆ ಹೆದರಿ ಮಗುವನ್ನು ಹೊರ ಉಗುಳಿದ ಘಟನೆ ಆಫ್ರೀಕಾದ ಉಗಾಂಡದಲ್ಲಿ ನಡೆದಿದೆ.   ಕಾಡಿನಿಂದ ಬಂದ ನೀರಾನೆಯೊಂದು ರಸ್ತೆಯಲ್ಲಿ ಆಡುತ್ತಿದ್ದ 2 ವರ್ಷದ ಮಗುವನ್ನು ಬಾಯಿಯಲ್ಲಿ ಕಚ್ಚಿ ಇನ್ನೇನು ನುಂಗಬೇಕು ಅನ್ನುವ ಹೊತ್ತಿನಲ್ಲಿ ಅದೇ ರಸ್ತೆಯಲ್ಲಿ ಬಂದ ವ್ಯಕ್ತಿಯೊಬ್ಬರು ಕಲ್ಲು ಹೊಡೆದ ಪರಿಣಾಮ ಮಗುವನ್ನು ನೀರಾನೆ ಹೊರಕ್ಕೆ ಉಗುಳಿದೆ. ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಗು ಸದ್ಯ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ

ನೀರಾನೆ ಬಾಯಿಯಿಂದ ಬದುಕಿಬಂದ ಪುಟ್ಟ ಪೋರ.. ! Read More »

ಅಂತರ್ರಾಷ್ಟ್ರೀಯ ನ್ಯೂಸ್

ಪಾಟ್ನಾ ಕಳ್ಳ ಬಟ್ಟಿ ದುರಂತ ➤ ಐವರು ಮೃತ್ಯು

(ನ್ಯೂಸ್‌ ಕಡಬ) newskadaba.com ಬಿಹಾರ, ಡಿ. 17. ಬಿಹಾರದ ಸಿವಾನ್ ಜಿಲ್ಲೆಯಲ್ಲಿ ವಿಷಪೂರಿತ ಮದ್ಯ ಸೇವಿಸಿ ಐದು ಮಂದಿ ಮೃತಪಟ್ಟ ಘಟನೆ ನಡೆದಿದೆ. ಮೃತರೆಲ್ಲರು ಭಗವಾನ್ ಪುರ ಹಾತ್ ಪೊಲೀಸ್ ಠಾಣೆ ವ್ಯಾಪ್ತಿಯ ಬ್ರಹ್ಮಸ್ಥಾನ ಮತ್ತು ಸೊಂಧನಿ ಗ್ರಾಮದವರು ಎಂದು ತಿಳಿದು ಬಂದಿದೆ. ಈ ಅವಘಡದಲ್ಲಿ ಐವರು ಮೃತಪಟ್ಟಿದ್ದು, ಶಿವಕುಮಾರ್ (25) ಮತ್ತು ದೀಪಕ್ (15) ಚಿಕ್ಕಿತ್ಸೆ ಪಡೆಯುತ್ತಿದ್ದಾರೆ. ಎರಡು ರಾಸಾಯನಿಕ ಬಾಟಲಿಗಳನ್ನು ವಶಪಡಿಸಿಕೊಂಡು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಪಾಟ್ನಾ ಕಳ್ಳ ಬಟ್ಟಿ ದುರಂತ ➤ ಐವರು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೃಷ್ಣಾ ನದಿಯಲ್ಲಿ ಮುಳುಗಿ 5 ವಿದ್ಯಾರ್ಥಿಗಳು ಮೃತ್ಯು

(ನ್ಯೂಸ್‌ ಕಡಬ) newskadaba.com ಆಂಧ್ರಪ್ರದೇಶ, ಡಿ. 17. ಕೃಷ್ಣಾ ನದಿನೀರಿನಲ್ಲಿ ಮುಳುಗಿ ಐವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.   ಯನಮಲಕುದೂರು ಬಳಿ ಸ್ನಾನಕ್ಕೆಂದು ಏಳು ವಿದ್ಯಾರ್ಥಿಗಳು ನದಿಗೆ ಇಳಿದಿದ್ದು, ಐವರು ನೀರಿನಲ್ಲಿ ಮುಳುಗಿದ್ದಾರೆ ಇಬ್ಬರು ಬಾಲಕರು ಈಜಿ ದಡ ಸೇರಿದ್ದಾರೆ ಎಂದು ತಿಳಿದು ಬಂದಿದೆ. ಮೃತ ವಿದ್ಯಾರ್ಥಿಗಳೆಲ್ಲರು ವಿಜಯವಾಡದ ಪಟಮಾತಲಂಕಾ ಮೂಲದವರಾಗಿದ್ದು, ಸ್ಥಳೀಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಈವರೆಗೆ ಎರಡು ಮೃತದೇಹಗಳು ಪತ್ತೆಯಾಗಿದ್ದು, ಉಳಿದ ಮೃತದೇಹಗಳ ಶೋಧ ಕಾರ್ಯಾಚರಣೆ ನಡೆಯುತ್ತಿದೆ

ಕೃಷ್ಣಾ ನದಿಯಲ್ಲಿ ಮುಳುಗಿ 5 ವಿದ್ಯಾರ್ಥಿಗಳು ಮೃತ್ಯು Read More »

ಕ್ರೈಮ್ ನ್ಯೂಸ್
Scroll to Top