ಕಡಬ ನ್ಯೂಸ್

ಕಡಬ: ಯುವಕ ನಾಪತ್ತೆ – ದೂರು

(ನ್ಯೂಸ್ ಕಡಬ) newskadaba.com ಕಡಬ, ಜೂ.16. ಕಡಬ ಸಮೀಪದ ಪೆಲತ್ರಾಣೆ ನಿವಾಸಿ ಅಬ್ಬಾಸ್ ಅವರ ಪುತ್ರ ಆದಂ(23) ಗುರುವಾರ ಮಧ್ಯಾಹ್ನ ತನ್ನ ಸ್ನೇಹಿತ ಮರ್ದಾಳ ನಿವಾಸಿ ಸಂತೋಷ್ ಎಂಬವನೊಂದಿಗೆ ತನ್ನ ಕಾರಿನಲ್ಲಿ ಹೋಗಿದ್ದು ಮುರಳಿ ಬಾರದೇ ನಾಪತ್ತೆಯಾಗಿದ್ದಾನೆ. ಗುರುವಾರ ರಾತ್ರಿ 12 ಗಂಟೆಯಾದರೂ ಆದಂ ಮನೆಗೆ ಬಾರದ ಕಾರಣ ಮನೆಯವರು ಸಂತೋಷನಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆ ಸಮಯ “ಆದಂ ಪೆರಿಯಶಾಂತಿಯಲ್ಲಿ ಕಾರಿನಿಂದ ಇಳಿದಿರುವುದಾಗಿ” ಹೇಳಿದ್ದು ಆದಂ ನ ಕಾರನ್ನು ಮನೆಗೆ ತಂದು ಕೊಟ್ಟಿದ್ದಾನೆ. ಗುರುವಾರ ಮಧ್ಯಾಹ್ನ 2 […]

ಕಡಬ: ಯುವಕ ನಾಪತ್ತೆ – ದೂರು Read More »

ಕರಾವಳಿ

ಇಚಿಲಂಪಾಡಿ: ಚರ್ಚಿಗೆ ನುಗ್ಗಿದ ಕಳ್ಳರು

(ನ್ಯೂಸ್ ಕಡಬ) newskadaba.com ಕಡಬ, ಜೂ.16. ಠಾಣಾ ವ್ಯಾಪ್ತಿಯ ಇಚಿಲಂಪಾಡಿ ಸೈಂಟ್ ಜಾರ್ಜ್ ಸಿರಿಯನ್ ಜಾಕೋಬೈಟ್ ಚರ್ಚಿಗೆ ನುಗಿರುವ ಕಳ್ಳರು ಚಿಲ್ಲರೆ ಹಣದೊಂದಿಗೆ ಶಿಲುಬೆಯನ್ನು ಹೊತ್ತೊಯ್ದ ಘಟನೆ ಶುಕ್ರವಾರದಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಚರ್ಚಿನ ಶಿಲುಬೆ ಗೋಪುರದ ಬೀಗ ಒಡೆದು ಕಾಣಿಕೆ ಹುಂಡಿಯಲ್ಲಿದ್ದ ಚಿಲ್ಲರೆ ಹಣವನ್ನು ದೋಚಿದ್ದಾರೆ.

ಇಚಿಲಂಪಾಡಿ: ಚರ್ಚಿಗೆ ನುಗ್ಗಿದ ಕಳ್ಳರು Read More »

ಕರಾವಳಿ

ಗುತ್ತಿಗಾರು: ನೀರಿನ ಟ್ಯಾಂಕಿಗೆ ಬಿದ್ದು ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ.15. ಮನೆಯ ಪಕ್ಕದಲ್ಲಿದ್ದ ನೀರಿನ ಟ್ಯಾಂಕಿಗೆ ನೀರು ನೋಡಲು ಹೋದ ಸಮಯದಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಬಳ್ಳಕ ಎಂಬಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ. ಮೃತ ದುರ್ದೈವಿಯನ್ನು ನಿವೃತ್ತ ಯೋಧ ಹಾಗೂ ಸುಬ್ರಹ್ಮಣ್ಯ ಕಾರ್ಪೋರೇಷನ್ ಬ್ಯಾಂಕಿನ ಉದ್ಯೋಗಿ ಚೆನ್ನಪ್ಪ ಗೌಡರ ಪತ್ನಿ ಯಮುನಾವತಿ(44) ಎಂದು ಗುರುತಿಸಲಾಗಿದೆ. ಟ್ಯಾಂಕಿಗೆ ಪ್ರತಿನಿತ್ಯ ನೀರು ತಮ್ಮ ಮನೆಯ ಬೋರ್ವೆಲ್ ನಿಂದ ಪಂಪ್ ಮೂಲಕ ಹಾಯಿಸಲಾಗುತ್ತಿತ್ತು. ಗುರುವಾರ ಬೆಳಗಿನ ಜಾವ ಯಮುನಾವತಿ ಪಂಪ್ ಚಾಲನೆ ಮಾಡಿ

ಗುತ್ತಿಗಾರು: ನೀರಿನ ಟ್ಯಾಂಕಿಗೆ ಬಿದ್ದು ಮಹಿಳೆ ಮೃತ್ಯು Read More »

ಕರಾವಳಿ

ಪ್ರಾಣಿ ಎಂದು ತಿಳಿದು ಗುಂಡು ಹಾರಾಟ: ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಾರ್ಕಳ, ಜೂ.15. ಶಿಕಾರಿಗೆ ತೆರಳಿದ ವೇಳೆ ಪ್ರಾಣಿ ಎಂದು ತಿಳಿದು ಮರ ಕಡಿಯುತ್ತಿದ್ದ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ ಪರಿಣಾಮ ಹಾರಿಸಿದ ಗುಂಡು ಮರ ಕಡಿಯುತ್ತಿದ್ದ ವ್ಯಕ್ತಿಗೆ ತಗುಲಿ ಸಾವನ್ನಪ್ಪಿದ ‌ಘಟನೆ ತಡರಾತ್ರಿ ಕಾಕ೯ಳ ತಾಲೂಕಿನ ಕಡ್ತಲ ಮೀಸಲು ಅರಣ್ಯದಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಐದು ಜನರನ್ನೊಳಗೊಂಡ ತಂಡವೊಂದು ಕಡ್ತಲ ಮೀಸಲು ಅರಣ್ಯದಲ್ಲಿ ಶಿಕಾರಿಗೆಂದು ತೆರಳಿದ್ದರು. ಇದೇ ವೇಳೆ ರವಿ ಎಂಬಾತ ಮರಕಳ್ಳತನ ನಡೆಸಲು‌‌ ಬಂದಿದ್ದ ಎನ್ನಲಾಗಿದೆ. ರವಿ ಮರಕಡಿಯುತ್ತಿದ್ದು ಶಿಕಾರಿಗೆ ಬಂದ ತಂಡವನ್ನು

ಪ್ರಾಣಿ ಎಂದು ತಿಳಿದು ಗುಂಡು ಹಾರಾಟ: ವ್ಯಕ್ತಿ ಮೃತ್ಯು Read More »

ಕರ್ನಾಟಕ

ಪ್ರವಾಸಿ ಸ್ವಯಂ ಉದ್ಯೋಗ ಯೋಜನೆಗೆ (ಕೇರಳ ಮಾದರಿ) ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.14.  ಗಲ್ಫ್  ರಾಷ್ಟ್ರಗಳಲ್ಲಿ ಉದ್ಯೋಗಕ್ಕೆ ತೆರಳಿ  ನಂತರ ಹಿಂತಿರುಗಿ ಬರುವ ಉದ್ಯೋಗಾವಕಾಶ ವಂಚಿತರಾದ ಅಲ್ಪಸಂಖ್ಯಾತ ಸಮುದಾಯದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಹಾಗೂ ಆರ್ಥಿಕ ಸ್ಥಿತಿ ಉತ್ತಮ ಪಡಿಸಲು ರೂ. 10 ಲಕ್ಷಗಳ ಸಾಲವನ್ನು ಶೇ. 5 ರ ಬಡ್ಡಿ ದರದಲ್ಲಿ ಕೊಲೈಟರಲ್ ಭದ್ರತೆಯೊಂದಿಗೆ ನಿಗಮದಿಂದ ಸಾಲ ಸೌಲಭ್ಯ ನೀಡಲಾಗುವುದು. ನಿಗಮದಿಂದ ನೀಡಲಾಗಿರುವ ಸಾಲವನ್ನು 7 ವರ್ಷಗಳೊಳಗೆ ಮರುಪಾವತಿಸತಕ್ಕದ್ದು. ಒಮ್ಮೆ ಸಾಲ ಪಡೆದ ಫಲಾನುಭವಿಗಳು ಪುನಃ ಸಾಲ ಪಡೆಯಲು ಅವಕಾಶ ಇರುವುದಿಲ್ಲ. ಒಂದು

ಪ್ರವಾಸಿ ಸ್ವಯಂ ಉದ್ಯೋಗ ಯೋಜನೆಗೆ (ಕೇರಳ ಮಾದರಿ) ಅರ್ಜಿ ಆಹ್ವಾನ Read More »

ಕರಾವಳಿ

ಗೋಳಿಯಡ್ಕ ಶಿಲುಬೆ ಗೋಪುರದಲ್ಲಿ ಸಂತ ಅಂತೋನಿಯವರ ವಾರ್ಷಿಕ ಹಬ್ಬ

(ನ್ಯೂಸ್ ಕಡಬ) newskadaba.com ಕಡಬ, ಜೂ.13. ನೂಜಿಬಾಳ್ತಿಲ ಬೆಥನಿ ಸೈಂಟ್ ಮೇರಿಸ್ ಪ್ರೋ ಕತೀಡ್ರಲ್ ಚರ್ಚ್ ವತಿಯಿಂದ ಗೋಳಿಯಡ್ಕ ಸಂತ ಅಂತೋನಿಯವರ ಶಿಲುಬೆ ಗೋಪುರದಲ್ಲಿ ಜೂ.3 ರಿಂದ 11 ರವರೆಗೆ ನವ ದಿನಗಳಲ್ಲಿ ಪವಾಡ ಪುರುಷ ಅಂತೋನಿಯವರ ವಾರ್ಷಿಕ ಹಬ್ಬ ನಡೆಯಿತು. ಪ್ರತಿದಿನಗಳಲ್ಲಿ ವಿವಿಧ ದೇವಾಲಯಗಳ ಧರ್ಮಗುರುಗಳಿಂದ ದಿವ್ಯ ಬಲಿಪುಜೆ ಹಾಗೂ ನೊವೆನೋ ಕಾರ್ಯಕ್ರಮ ನಡೆಯಿತು. ಜೂ.11 ರಂದು ಪುತ್ತೂರು ಧರ್ಮಪ್ರಾಂತ್ಯದ ಆಡಳಿತಾಧಿಕಾರಿ ವಂದನೀಯ ರೆ|ಫಾ| ಜಾರ್ಜ್ ಕಾಳಾಯಿಲ್ ಪ್ರಾರ್ಥನೆಯೊಂದಿಗೆ ಪವಿತ್ರ ಸಮೂಹ ದಿವ್ಯ ಬಲಿ ಪುಜೆ ನೆರವೇರಿಸಿ

ಗೋಳಿಯಡ್ಕ ಶಿಲುಬೆ ಗೋಪುರದಲ್ಲಿ ಸಂತ ಅಂತೋನಿಯವರ ವಾರ್ಷಿಕ ಹಬ್ಬ Read More »

ಕರಾವಳಿ

ಬಾವಿಗೆ ಹಾರಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜೂ.14.  ಇಲ್ಲಿಗೆ ಸಮೀಪದ ಕೋಣಾಲು ಗ್ರಾಮದ ಮುಡಿಪಿನಡ್ಕ ಎಂಬಲ್ಲಿ ವೃದ್ದರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆಗೈದ ಘಟನೆ ಬುಧವಾರದಂದು ನಡೆದಿದೆ. ಮುಡಿಪಿನಡ್ಕ ನಿವಾಸಿ ಕರಿಯಪ್ಪ ಗೌಡ (80) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ವೃದ್ಧ. ಇಂದು ಬೆಳಗ್ಗೆ ಮನೆಯಿಂದ ನಾಪತ್ತೆಯಾಗಿದ್ದ ಇವರನ್ನು ಹುಡುಕಿದಾಗ ಮನೆ ಸಮೀಪದ ಬಾವಿಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಮದ್ಯವ್ಯಸನಿಯಾಗಿದ್ದ ಇವರು ಅದೇ ಕಾರಣಕ್ಕೆ ಕರುಳ ಬೇನೆಗೆ ಸಿಲುಕಿದ್ದರು. ಇದರಿಂದಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು

ಬಾವಿಗೆ ಹಾರಿ ಆತ್ಮಹತ್ಯೆ Read More »

ಕರಾವಳಿ

ಜಿಲ್ಲೆಯಾದ್ಯಂತ ಜೂ.21 ರವರೆಗೆ ನಿಷೇಧಾಜ್ಞೆ ಮುಂದುವರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.14. ಕಳೆದ ಹಲವಾರು ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಕಲ್ಲಡ್ಕ ಪರಿಸರದಲ್ಲಿ ಮಂಗಳವಾರದಂದು ಸಂಜೆ ನಡೆದ ಗಲಭೆ ಹಿನ್ನೆಲೆಯಲ್ಲಿ ಕಮಿಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜೂ.13 ನೇ ಮಂಗಳವಾರ ಮಧ್ಯರಾತ್ರಿಯಿಂದ ಜೂ.14 ನೇ ಬುಧವಾರ ಮಧ್ಯರಾತ್ರಿ 12.00 ಗಂಟೆಯವರೆಗೆ 144 ಸೆಕ್ಷನ್ ಜಾರಿಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆಯವರ ಪ್ರಸ್ತಾವನೆಯಂತೆ ಅಪರ ಜಿಲ್ಲಾಧಿಕಾರಿ ಕುಮಾರ್ ಆದೇಶಿಸಿದ್ದರು. ಜಿಲ್ಲೆಯಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಜೂ.21 ರವೆರೆಗೆ

ಜಿಲ್ಲೆಯಾದ್ಯಂತ ಜೂ.21 ರವರೆಗೆ ನಿಷೇಧಾಜ್ಞೆ ಮುಂದುವರಿಕೆ Read More »

ಕರಾವಳಿ

ಕೆಸರು ಗದ್ದೆಯಾದ ಮರ್ಧಾಳ-ಕೆರ್ಮಾಯಿ ರಸ್ತೆ

(ನ್ಯೂಸ್ ಕಡಬ) newskadaba.com ಕಡಬ, ಜೂ.14. ಇಲ್ಲಿನ ಮರ್ಧಾಳದಿಂದ ಬಜಕೆರೆಯ ಮೂಲಕ ಕೋಡಿಂಬಾಳವನ್ನು ಸಂಪರ್ಕಿಸುವ ಜಿಲ್ಲಾ ಪಂಚಾಯತ್ ರಸ್ತೆಯು ಸಂಪುರ್ಣ ಕೆಸರುಗದ್ದೆಯಂತಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಬಂಟ್ರ, 102 ನೆಕ್ಕಿಲಾಡಿ ಮತ್ತು ಐತ್ತೂರು ಸೇರಿದಂತೆ 3 ಗ್ರಾಮಗಳ ಸಂಪರ್ಕ ಕೊಂಡಿಯಾಗಿರುವ ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ಜನರು ಸಂಚರಿಸುತ್ತಿದ್ದಾರೆ. ಸುಮಾರು 1000 ಮನೆಗಳಿಗೆ ಸಂಪರ್ಕವಿರುವ ಈ ರಸ್ತೆಯಲ್ಲಿ ಬಜಕೆರೆ ರೈಲ್ವೇ ಸ್ಟೇಷನ್, ಕೆರ್ಮಾಯಿ ಸರಕಾರಿ ಪ್ರಾಥಮಿಕ ಶಾಲೆ, ಗುಡ್ ಶೆಫರ್ಡ್ ಆಂಗ್ಲ ಮಾಧ್ಯಮ ಶಾಲೆ, 4 ಚರ್ಚುಗಳು, 1

ಕೆಸರು ಗದ್ದೆಯಾದ ಮರ್ಧಾಳ-ಕೆರ್ಮಾಯಿ ರಸ್ತೆ Read More »

ಕರಾವಳಿ

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮ0ಗಳೂರು, ಜೂ.14. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ 2017-18ರ ಸಾಲಿಗೆ ಸ್ವಉದ್ಯೋಗಕ್ಕಾಗಿ ವಿವಿಧ ಯೋಜನೆಗಳಲ್ಲಿ ಅಲ್ಪಸಂಖ್ಯಾತ ವರ್ಗಗಳ ಹಾಗೂ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ಯೋಜನೆಯಡಿ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಈ ಯೋಜನೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗೆ ಶೇಕಡಾ 33%ರಷ್ಟು ಮತ್ತು ಅಂಗವಿಕಲರಿಗೆ ಹಾಗೂ ಮಾಜಿ ಸೈನಿಕರಿಗೆ ಶೇಕಡಾ 3%ರಷ್ಟು ಆದ್ಯತೆ ಮೀಸಲಿರಿಸಲಾಗಿದೆ.    ಅರ್ಜಿದಾರರು ಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಶ್ಚಿಯನ್, ಜೈನ್ಸ್, ಪಾರ್ಸಿ, ಸಿಖ್ಖರು, ಬೌದ್ಧ) ವರ್ಗಕ್ಕೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ Read More »

ಕರಾವಳಿ
Scroll to Top