ಕಡಬ ನ್ಯೂಸ್

➤ಕರ್ನಾಟಕ ರಾಜ್ಯ ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆ ಇಲಾಖೆ ನೇಮಕಾತಿ 2023

(ನ್ಯೂಸ್ ಕಡಬ) newskadaba.com. ಮಂಗಳೂರು, ಫೆ.17.  ಕರ್ನಾಟಕ ರಾಜ್ಯ ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆ ಇಲಾಖೆ ನೇಮಕಾತಿ 2023 ಒಟ್ಟು ಹುದ್ದೆಗಳು :- 2000 ವಿದ್ಯಾರ್ಹತೆ:- ಪಿ.ಯು.ಸಿ(ವಿಜ್ಞಾನ ವಿಬಾಗ), ಬಿಇ(ಸಿವಿಲ್) ವಯಸ್ಸಿನ ಮಿತಿ:- 18 ರಿಂದ 65 ವರ್ಷ ನೇಮಕಾತಿ ವಿಧಾನ:- ಸ್ಪರ್ಧಾತ್ಮಕ ಪರೀಕ್ಷೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲಾತಿಗಳು :- ಫೋಟೋ,ಮೂಲ ಅಂಕಪಟ್ಟಿಗಳು, ಆಧಾರ್ ಕಾರ್ಡ್,ಜಾತಿ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ಪ್ರಮಾಣ ಪತ್ರ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- […]

➤ಕರ್ನಾಟಕ ರಾಜ್ಯ ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆ ಇಲಾಖೆ ನೇಮಕಾತಿ 2023 Read More »

ಉದ್ಯೋಗ, ಕರ್ನಾಟಕ

➤ ಯು ಟ್ಯೂಬ್ ಸಿಇಒ ಆಗಿ ಭಾರತೀಯ ಮೂಲದ ನೀಲ್ ಮೋಹನ್

(ನ್ಯೂಸ್ ಕಡಬ) newskadaba.com. ವಾಷಿಂಗ್ಟನ್, ಫೆ.17. ಯು ಟ್ಯೂಬ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಯಿಂದ ಸುಸಾನ್ ವೊಜಿಸಿಕಿ ಕೆಳಗಿಳಿದಿದ್ದು, ಯು ಟ್ಯೂಬ್ ನ ಮುಖ್ಯ ಉತ್ಪನ್ನ ಅಧಿಕಾರಿ ಭಾರತೀಯ ಮೂಲದ ನೀಲ್  ಮೋಹನ್ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ಸುಸಾನ್ ಒಂಬತ್ತು ವರ್ಷ ಈ ಹುದ್ದೆಯಲ್ಲಿದ್ದು, ಕುಟುಂಬ, ಆರೋಗ್ಯ ಮತ್ತು ತಮ್ಮ ಇಷ್ಟದ ವೈಯಕ್ತಿಕ ಯೋಜನೆಗಳಿಗೆ ಗಮನ ಹರಿಸಬೇಕಾಗಿರುವ ಹಿನ್ನೆಲೆಯಲ್ಲಿ ಹುದ್ದೆಯನ್ನು ತೆರವುಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ.

➤ ಯು ಟ್ಯೂಬ್ ಸಿಇಒ ಆಗಿ ಭಾರತೀಯ ಮೂಲದ ನೀಲ್ ಮೋಹನ್ Read More »

ಅಂತರ್ರಾಷ್ಟ್ರೀಯ ನ್ಯೂಸ್

ಅಕ್ರಮ ಮರಳು ಸಾಗಾಟ ಪ್ರಕರಣ➤ ಆರೋಪಿ ಸೆರೆ

(ನ್ಯೂಸ್ ಕಡಬ) newskadaba.com. ಹಾವೇರಿ, ಫೆ.17. ಅಕ್ರಮ ಮರಳು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ,  ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ. ಕೇರಳದ ಕೊಯಿಲಾಂಡಿ ನಿವಾಸಿ ಸುರೇಶ್ ಬಾಬು ಯಾನೆ ಸೂರಿ ಬಂಧಿತ ಆರೋಪಿಯಾಗಿದ್ದಾನೆ. ಈ ಅಕ್ರಮ ಮರಳು ಸಾಗಾಟದ ಪ್ರಮುಖ ಆರೋಪಿಯಾಗಿದ್ದ ಈತ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತನ ಪತ್ತೆಗೆ ವಾರೆಂಟ್ ಜಾರಿಯಾಗಿತ್ತು. ಇದೀಗ ಆರೋಪಿಯನ್ನು ವಿಟ್ಲ ಠಾಣೆ ಎಸ್ಸೈ ಜಯರಾಮ್ ಕೇರಳದ ಕೊಯಿಲಾಂಡಿಯ ವಾರಾಂಗೀಲ್ ಎಂಬಲ್ಲಿ ಬಂಧಿಸಿದ್ದಾರೆ.

ಅಕ್ರಮ ಮರಳು ಸಾಗಾಟ ಪ್ರಕರಣ➤ ಆರೋಪಿ ಸೆರೆ Read More »

ಕರಾವಳಿ, ಕ್ರೈಮ್ ನ್ಯೂಸ್

➤ ಕರ್ನಾಟಕದಲ್ಲಿ ಹೊಸ ಪ್ರಭೇದ 2 ಏಡಿ ಪತ್ತೆ!

(ನ್ಯೂಸ್ ಕಡಬ) newskadaba.com. ಕಾರವಾರ, ಫೆ.15.  ಭಾರತದ ಜೈವಿಕ ವೈವಿಧ್ಯತೆಯ ಪಟ್ಟಿಗೆ ಹೊಸ ಜಾತಿಯ 2 ಏಡಿಗಳು ಸೇರ್ಪಡೆಯಾಗಿದೆ.  ಕರ್ನಾಟಕದಲ್ಲಿ 2 ಹೊಸ ಏಡಿ ಪ್ರಭೇದ ಪತ್ತೆಯಾಗಿದ್ದು, ಆ ಮೂಲಕ ಭಾರತದಲ್ಲಿನ ಏಡಿ ಪ್ರಭೇದಗಳ ಸಂಖ್ಯೆ 75ಕ್ಕೇರಿಕೆಯಾಗಿದೆ. ಭಾರತದ ಜೈವಿಕ ವೈವಿಧ್ಯತೆಯ ಪಟ್ಟಿಗೆ ಹೊಸ ಜಾತಿಯ ಏಡಿಗಳು ಸೇರ್ಪಡೆಯಾಗುತ್ತಿದ್ದು, ಪಶ್ಚಿಮ ಕರಾವಳಿಗೆ ಸಂಪೂರ್ಣವಾಗಿ ಹೊಸದಾದ ಸಿಹಿನೀರಿನ ಏಡಿ ಮತ್ತು ಸಮುದ್ರದ ಏಡಿ ಎಂಬ ಎರಡು ಜಾತಿಯ ಏಡಿಗಳು ನಮ್ಮ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗಿವೆ.

➤ ಕರ್ನಾಟಕದಲ್ಲಿ ಹೊಸ ಪ್ರಭೇದ 2 ಏಡಿ ಪತ್ತೆ! Read More »

ಕರ್ನಾಟಕ

ಅಡಿಕೆ ಆಮದಿನ ಕನಿಷ್ಠ ಬೆಲೆ ಹೆಚ್ಚಳ ➤ ಕೇಂದ್ರದ ನಿರ್ಧಾರಕ್ಕೆ CAMPCO ಸ್ವಾಗತ

(ನ್ಯೂಸ್ ಕಡಬ) newskadaba.com. ಮಂಗಳೂರು, ಫೆ.15.  ಮಂಗಳೂರು ಮೂಲದ ಸೆಂಟ್ರಲ್ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋಆಪರೇಟಿವ್ ಲಿಮಿಟೆಡ್ (CAMPCO) ಅಡಿಕೆ ಆಮದು ಕನಿಷ್ಠ ಬೆಲೆಯನ್ನು ಎಂಐಪಿ ಪ್ರತಿ ಕೆ.ಜಿ.ಗೆ ₹251ಯಿಂದ ₹351ಕ್ಕೆ ಹೆಚ್ಚಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದೆ. ಬುಧವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ CAMPCO ಅಧ್ಯಕ್ಷ ಎ ಕಿಶೋರ್ ಕುಮಾರ್ ಕೊಡ್ಗಿ, ಈ ನಿರ್ಧಾರಕ್ಕಾಗಿ ಇಡೀ ಅಡಿಕೆ ಬಂಧುಗಳು ಕೇಂದ್ರಕ್ಕೆ ಕೃತಜ್ಞರಾಗಿದ್ದಾರೆ ಎಂದರು.

ಅಡಿಕೆ ಆಮದಿನ ಕನಿಷ್ಠ ಬೆಲೆ ಹೆಚ್ಚಳ ➤ ಕೇಂದ್ರದ ನಿರ್ಧಾರಕ್ಕೆ CAMPCO ಸ್ವಾಗತ Read More »

ಕರ್ನಾಟಕ

ಕಲುಷಿತ ನೀರು ಸೇವಿಸಿ ಮಹಿಳೆ ಮೃತ್ಯು ➤ ಹಲವರು ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com. ಯಾದಗಿರಿ, ಫೆ.15.   ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೃತಪಟ್ಟಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಜಿಲ್ಲೆಯ ಗುರುಮಠಕಲ್‌ ತಾಲೂಕಿನ ಅನಪುರ ಗ್ರಾಮದ ನಿವಾಸಿ 35 ವರ್ಷದ ಸಾವಿತ್ರಮ್ಮ ಮೃತ ದುರ್ದೈವಿ. ಕಲುಷಿತ ನೀರು ಸೇವಿಸಿ ವಾಂತಿ, ಭೇದಿ ಉಲ್ಬಣ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ. ಗ್ರಾಮಕ್ಕೆ ನೀರು ಪೂರೈಸುವ ಪೈಪ್ ನಲ್ಲಿ ಚರಂಡಿ ನೀರು ಸೇರ್ಪಡೆಯಾಗಿದೆ. ಈ ಪರಿಣಾಮ ಕಲುಷಿತ ನೀರು ಸೇವನೆಯಿಂದ ಗ್ರಾಮದಲ್ಲಿ ವಾಂತಿ ಭೇದಿ ಉಲ್ಬಣವಾಗಿದೆ. 30 ಜನರಲ್ಲಿ

ಕಲುಷಿತ ನೀರು ಸೇವಿಸಿ ಮಹಿಳೆ ಮೃತ್ಯು ➤ ಹಲವರು ಆಸ್ಪತ್ರೆಗೆ ದಾಖಲು Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ಆರ್ ಸಿಬಿ ತಂಡಕ್ಕೆ ಸಾನಿಯಾ ಮಿರ್ಜಾ ಎಂಟ್ರಿ..!

(ನ್ಯೂಸ್ ಕಡಬ) newskadaba.com. ಮುಂಬೈ, ಫೆ.16. ಈಗಾಗಲೇ ಟೆನಿಸ್​ಗೆ ವಿದಾಯ ಹೇಳಿರುವ ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರನ್ನು ಆರ್​ಸಿಬಿ ತಂಡ ಮಹಿಳಾ ಪ್ರಿಮಿಯರ್​ ಲೀಗ್​ನ ಚೊಚ್ಚಲ ಆವೃತ್ತಿಗೆ ತನ್ನ ತಂಡದ ಮೆಂಟರ್ ಆಗಿ ನೇಮಿಸಿಕೊಂಡಿದೆ. 6 ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತೆ ಸಾನಿಯಾ ಇದೇ ತಿಂಗಳು ಕೊನೆಯ ಬಾರಿಗೆ ಟೆನಿಸ್ ಅಂಗಳಕ್ಕೆ ಕಾಲಿಡಲಿದ್ದಾರೆ. ಇದಾದ ನಂತರ ಐಪಿಎಲ್‌ನಲ್ಲಿ ಬ್ಯುಸಿಯಾಗಲಿರುವ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ. ಬುಧವಾರ ಸಾನಿಯಾ ಅವರನ್ನು ಆರ್‌ಸಿಬಿ

➤ಆರ್ ಸಿಬಿ ತಂಡಕ್ಕೆ ಸಾನಿಯಾ ಮಿರ್ಜಾ ಎಂಟ್ರಿ..! Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

➤ ನಿರ್ಮಾಣ ಹಂತದಲ್ಲಿರುವ ಕಟ್ಟಡದ 42ನೇ ಮಹಡಿಯಿಂದ ಕಲ್ಲು ಬಿದ್ದು, ಇಬ್ಬರು ಸಾವು!

(ನ್ಯೂಸ್ ಕಡಬ) newskadaba.com. ಮುಂಬೈ, ಫೆ.15. ನಿರ್ಮಾಣ ಹಂತದಲ್ಲಿರುವ ಕಟ್ಟಡದ 42ನೇ ಮಹಡಿಯಿಂದ ಬೃಹತ್ ಕಲ್ಲೊಂದು ಕೆಳಗೆ ಬಿದ್ದು, ಇಬ್ಬರು ಮೃತಪಟ್ಟಿರುವ ಘಟನೆ ಮುಂಬೈನ ವರ್ಲಿ ಪ್ರದೇಶದಲ್ಲಿ ಸಂಭವಿಸಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳು ಈ ದೊಡ್ಡ ಕಲ್ಲು ಬಿದ್ದು ಜಖಂಗೊಂಡಿದೆ. ಜನವರಿ 9 ರಂದು ವರ್ಲಿ ಪ್ರದೇಶದಲ್ಲಿ ಲಿಫ್ಟ್​ನಲ್ಲಿ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದರು. ಇನ್ನು ಬೆಂಗಳೂರಿನಲ್ಲು ಕೂಡ ಇಂಥದ್ದೇ ಘಟನೆ ವರದಿಯಾಗಿತ್ತು, ನಿರ್ಮಾಣ ಹಂತದಲ್ಲಿರುವ ಮೆಟ್ರೋ ಪಿಲ್ಲರ್ ಬಿದ್ದು, ತಾಯಿ ಮಗಳು ಸಾವನ್ನಪ್ಪಿದ್ದರು. ಮಹಾರಾಷ್ಟ್ರದ ಮುಂಬೈನಲ್ಲಿ

➤ ನಿರ್ಮಾಣ ಹಂತದಲ್ಲಿರುವ ಕಟ್ಟಡದ 42ನೇ ಮಹಡಿಯಿಂದ ಕಲ್ಲು ಬಿದ್ದು, ಇಬ್ಬರು ಸಾವು! Read More »

ಕರಾವಳಿ

(ಇಂದು) ಫೆ. 15ರಂದು ವಿದ್ಯುತ್  ವ್ಯತ್ಯಯ

(ನ್ಯೂಸ್ ಕಡಬ) newskadaba.com ಮಡಿಕೇರಿ, ಫೆ.15. ಮಡಿಕೇರಿ-ವಿರಾಜಪೇಟೆ 66 ಕೆವಿ ವಿದ್ಯುತ್ ಮಾರ್ಗದ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ಬೃಹತ್ ಕಾಮಗಾರಿ ವಿಭಾಗ ಕೊಡಗು ಜಿಲ್ಲೆ ಕ.ವಿ.ಪ್ರ.ನಿ.ನಿ. ಮೈಸೂರು ಅವರ ಕೋರಿಕೆಯಂತೆ ಫೆಬ್ರುವರಿ , 15 ರಂದು ಬೆಳಗ್ಗೆ 09 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 33 ಕೆವಿ ವಿರಾಜಪೇಟೆ-ಮೂರ್ನಾಡು ಮಾರ್ಗದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು ಎಂದು ವರದಿ ತಿಳಿಸಿದೆ. ಈ ಕುರಿತು ಪಾರಾಣೆ, ಮೂರ್ನಾಡು, ನಾಪೋಕ್ಲು, ಹೊದ್ದೂರು, ಮರಗೋಡು, ಬೇತು, ಕಕ್ಕಬೆ, ನೆಲಜಿ, ಹಾಕತ್ತೂರು, ಕಾಂತೂರು, ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ

(ಇಂದು) ಫೆ. 15ರಂದು ವಿದ್ಯುತ್  ವ್ಯತ್ಯಯ Read More »

ಕರ್ನಾಟಕ

➤ ಗುಬ್ಬಿ ಬಳಿ ಸಿಮೆಂಟ್‌ ಪೈಪ್‌ನಲ್ಲಿ ಹುಲಿಯೊಂದು ಅನುಮಾನಾಸ್ಪದ ಸಾವು

(ನ್ಯೂಸ್ ಕಡಬ) newskadaba.com. ತುಮಕೂರು, ಫೆ.14. ಅನುಮಾನಾಸ್ಪದ ರೀತಿಯಲ್ಲಿ ಹುಲಿ ಯೊಂದು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಅಂಕಸಂದ್ರ ಮೀಸಲು ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. ತುಮಕೂರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹುಲಿ ಸಾವನ್ನಪ್ಪಿರುವುದು ಪತ್ತೆಯಾಗಿದ್ದು, ಇದುವರೆಗೂ ಜಿಲ್ಲೆಯಲ್ಲಿ ಹುಲಿಯ ಸುಳಿವು ಇರಲಿಲ್ಲ. ಇದೀಗ ಹುಲಿಯ ಮೃತ ದೇಹ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಇಂದು ಮುಂಜಾನೆ ಚಿಕ್ಕಹೆಗಡೇಹಳ್ಳಿ ಗ್ರಾಮದ ವಾಸಿಯೊಬ್ಬರು ಬಹಿರ್ದೆಸೆಗೆ ಹೋಗಿದ್ದ, ಸಂದರ್ಭದಲ್ಲಿ ಹುಲಿ ಸಾವನಪ್ಪಿರುವುದು ಗೊತ್ತಾಗಿದೆ. ಕೂಡಲೇ

➤ ಗುಬ್ಬಿ ಬಳಿ ಸಿಮೆಂಟ್‌ ಪೈಪ್‌ನಲ್ಲಿ ಹುಲಿಯೊಂದು ಅನುಮಾನಾಸ್ಪದ ಸಾವು Read More »

ಕರ್ನಾಟಕ
Scroll to Top