ಕಡಬ ನ್ಯೂಸ್

ಬೆಳ್ತಂಗಡಿ : ಲಾರಿ ಮತ್ತು ಪಿಕ್ ಅಪ್ ವಾಹನದ ನಡುವೆ ಅಪಘಾತ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ.11. ಲಾರಿ ಮತ್ತು ಪಿಕ್ ಅಪ್ ವಾಹನದ ಮಧ್ಯೆ ಭಾರಿ ಅಪಘಾತವೊಂದು ಧರ್ಮಸ್ಥಳ ಸಮೀಪ ಬೊಳಿಯಾರು ಎಂಬಲ್ಲಿ ನಡೆದಿದೆ. ಪಿಕ್ ಅಪ್ ಚಾಲಕನ ತಲೆಗೆ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.  

ಬೆಳ್ತಂಗಡಿ : ಲಾರಿ ಮತ್ತು ಪಿಕ್ ಅಪ್ ವಾಹನದ ನಡುವೆ ಅಪಘಾತ Read More »

ಕರಾವಳಿ, ಕರ್ನಾಟಕ

ಭಟ್ಕಳ: ಸಮುದ್ರದಲ್ಲಿ ಸಿಲುಕಿದ್ದ ಬೋಟ್ ನ 24 ಮೀನುಗಾರರ ಜೀವ ರಕ್ಷಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.11: ಭಟ್ಕಳ ಸಮುದ್ರ‌ತೀರದಿಂದ 17 ನಾಟಿಕಲ್ ಮೈಲಿ ದೂರದಲ್ಲಿ ಸಮುದ್ರದಲ್ಲಿ ಸಿಲುಕಿದ್ದ ಬೋಟ್ ನ 24 ಮೀನುಗಾರರನ್ನು ಶುಕ್ರವಾರ ರಕ್ಷಣೆ ಮಾಡಲಾಗಿದೆ. ಕರಾವಳಿ ಕಾವಲು ಪಡೆಯ ಕಸ್ತೂರಬಾ ಗಾಂಧಿ ಹಡಗಿನ ಮೂಲಕ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ತಂಡ ಎಲ್ಲರನ್ನು ಸುರಕ್ಷಿತವಾಗಿ ಭಟ್ಕಳ ಸಮುದ್ರ ತೀರಕ್ಕೆ ಕರೆತಂದಿದ್ದಾರೆ.     ಮೀನುಗಾರಿಕೆಗೆ ತೆರಳಿದ್ದ ಖಮರುಲ್ ಬಹಾರ್ ಹೆಸರಿನ ಬೋಟ್, ಎಂಜಿನ್ ವೈಫಲ್ಯದಿಂದ ಸಮುದ್ರದಲ್ಲಿ ಸಿಲುಕಿತ್ತು. ಬೋಟ್ ಮಾಲೀಕರು ಮೀನುಗಾರಿಕೆ ಇಲಾಖೆಗೆ ಮಾಹಿತಿ ನೀಡಿ,

ಭಟ್ಕಳ: ಸಮುದ್ರದಲ್ಲಿ ಸಿಲುಕಿದ್ದ ಬೋಟ್ ನ 24 ಮೀನುಗಾರರ ಜೀವ ರಕ್ಷಣೆ Read More »

ಕರಾವಳಿ, ಕರ್ನಾಟಕ

ಜಂಬೂಸವಾರಿ: ಸರಳ ದಸರಾಗೆ ಅರಣ್ಯ ಇಲಾಖೆಯಿಂದ ಐದು ಆನೆಗಳ ಪಟ್ಟಿ ಸಿದ್ದ

(ನ್ಯೂಸ್ ಕಡಬ) newskadaba.com ಮೈಸೂರು, ಸೆ.11: ನಾಡ ಹಬ್ಬ ದಸರಾವನ್ನು ಈ ಬಾರಿ ಅತ್ಯಂತವಾಗಿ ಅರಮನೆಗೆ ಸೀಮಿತವಾಗಿ ಆಚರಿಸಲು ಮುಖ್ಯ ಮಂತ್ರಿ ಬಿ ಎಸ್‌ ಯಡಿಯೂರಪ್ಪ ನೇತೃತ್ವದ ಉನ್ನತ ಮಟ್ಟದ ಸಮಿತಿಯು ತೀರ್ಮಾನಿಸಿದೆ. ಅಲ್ಲದೆ ದಸರಾದಲ್ಲಿ ಭಾಗವಹಿಸುವ ಆನೆಗಳ ಸಂಖ್ಯೆಯನ್ನೂ 5 ಕ್ಕೆ ಮಿತಿ ಗೊಳಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಐದು ಆನೆಗಳ ಪಟ್ಟಿಯನ್ನು ಸಿದ್ದಪಡಿಸಿದ್ದಾರೆ. ಅರ್ಜುನನಿಗೆ 60 ವರ್ಷ ಮೀರಿರುವ ಹಿನ್ನೆಲೆಯಲ್ಲಿ ಈ ಬಾರಿ ಅಭಿಮನ್ಯು ಆನೆ ಅಂಬಾರಿ ಹೊರುವುದು ಬಹುತೇಕ ಖಚಿತವಾಗಿದೆ.  

ಜಂಬೂಸವಾರಿ: ಸರಳ ದಸರಾಗೆ ಅರಣ್ಯ ಇಲಾಖೆಯಿಂದ ಐದು ಆನೆಗಳ ಪಟ್ಟಿ ಸಿದ್ದ Read More »

ಕರಾವಳಿ, ಕರ್ನಾಟಕ

ಕಡಬ: ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆ ➤ಮಾನವೀಯತೆ ಮೆರೆದ ಪೊಲೀಸರು ಹಾಗೂ ಪತ್ರಕರ್ತರು

(ನ್ಯೂಸ್ ಕಡಬ) newskadaba.com ಕಡಬ, ಸೆ.11: ಅನಾರೋಗ್ಯ ಪೀಡಿತರಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಕಡಬದ ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ಸೇರಿಸಲು ಕಡಬ ಪೊಲೀಸರು ಮತ್ತು ಪತ್ರಕರ್ತರೊಬ್ಬರು ತುರ್ತು ಸ್ಪಂದಿಸಿ ಮಾನವೀಯ ನೆರವು ನೀಡಿದ್ದಾರೆ.     ಕಡಬ ಸಮೀಪದ ಮಜ್ಜಗುಡ್ಡೆ ನಿವಾಸಿ ತೀರಾ ಬಡತನದಲ್ಲಿರುವ ಮಹಿಳೆಯೊಬ್ಬರು ಕಳೆದ ದಿನದಂದು ತೀರಾ ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ವಿಚಾರವನ್ನು ಸ್ಥಳೀಯರು ಪತ್ರಕರ್ತ ನಾಗರಾಗ್‌ ಎನ್.ಕೆ ಅವರ ಗಮನಕ್ಕೆ ತಂದಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪತ್ರಕರ್ತರು ತಮ್ಮ ಆಪ್ತ ವಲಯದವರಿಗೆ ಮಾಹಿತಿ ನೀಡಿ, ಠಾಣೆಗೂ ಕರೆ

ಕಡಬ: ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆ ➤ಮಾನವೀಯತೆ ಮೆರೆದ ಪೊಲೀಸರು ಹಾಗೂ ಪತ್ರಕರ್ತರು Read More »

ಕರಾವಳಿ, ಕರ್ನಾಟಕ

ಅತಿವೃಷ್ಟಿ/ಪ್ರವಾಹ ಪೀಡಿತ ಪ್ರದೇಶವಾಗಿ ಕಡಬ ಸೇರಿದಂತೆ ಜಿಲ್ಲೆಯ 6 ತಾಲೂಕುಗಳ ಘೋಷಣೆ

(ನ್ಯೂಸ್ ಕಡಬ) newskadaba.com ಪುತ್ತೂರು ,ಸೆ.11: 2020 ನೇ ಸಾಲಿನ ಮುಂಗಾರು ಋತುವಿನ ಆಗಸ್ಟ್‌ ಮಾಹೆಯಲ್ಲಿ ರಾಜ್ಯದ 23 ಜಿಲ್ಲೆಯಲ್ಲಿ 120 ತಾಲೂಕುಗಳನ್ನು ಅತಿವೃಷ್ಟಿ/ಪ್ರವಾಹ ಪೀಡಿತ ತಾಲೂಕುಗಳನ್ನಾಗಿ ಘೋಷಣೆ ಮಾಡಿದ್ದು, ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತೂರು ಮತ್ತು ಕಡಬ ತಾಲೂಕು ಸೇರಿದಂತೆ 6 ತಾಲೂಕುಗಳನ್ನು ಅತಿವೃಷ್ಟಿ/ಪ್ರವಾಹ ಪೀಡಿತ ತಾಲೂಕುಗಳನ್ನಾಗಿ ರಾಜ್ಯಪಾಲರ ಆದೇಶಾನುಸಾರ ವಿಪತ್ತು ನಿರ್ವಹಣೆ ವಿಭಾಗದ ಕಂದಾಯ ಇಲಾಖೆ ಸರಕಾರದ ಜಂಟಿಕಾರ್ಯದರ್ಶಿ ಅವರು ಘೋಷಣಾ ಆದೇಶವನ್ನು ಹೊರಡಿಸಿದ್ದಾರೆ.     2020 ರ ಮುಂಗಾರು

ಅತಿವೃಷ್ಟಿ/ಪ್ರವಾಹ ಪೀಡಿತ ಪ್ರದೇಶವಾಗಿ ಕಡಬ ಸೇರಿದಂತೆ ಜಿಲ್ಲೆಯ 6 ತಾಲೂಕುಗಳ ಘೋಷಣೆ Read More »

ಕರಾವಳಿ, ಕರ್ನಾಟಕ

ಶ್ರೀಕೃಷ್ಣ ಮಠದಲ್ಲಿ ಸರಳ ಕೃಷ್ಣಾಷ್ಟಮಿ ➤ ಮಧ್ಯರಾತ್ರಿ ಕೃಷ್ಣನಿಗೆ ಅರ್ಘ್ಯ ಸಮರ್ಪಣೆ

(ನ್ಯೂಸ್ ಕಡಬ) newskadaba.com ಉಡುಪಿ, ಸೆ.11. ಕೃಷ್ಣಮಠದಲ್ಲಿ ಕೃಷ್ಣ ಜನ್ಮಾಷ್ಟಮಿಯ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿದ್ದು, ಮಧ್ಯರಾತ್ರಿ 12:16ಕ್ಕೆ ಕೃಷ್ಣನಿಗೆ ಅರ್ಘ್ಯ ಸಮರ್ಪಿಸಲಾಯಿತು. ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ರಾತ್ರಿ ತುಳಸಿ ಅರ್ಚನೆ ಹಾಗೂ ಮಹಾಪೂಜೆ ನೆರವೇರಿಸಿ ಗರ್ಭಗುಡಿಯಲ್ಲಿ ಕೃಷ್ಣದೇವರಿಗೆ ಅರ್ಘ್ಯ ಅರ್ಪಿಸಿದರು. ಬಳಿಕ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರತೀರ್ಥರು, ಅದಮಾರು ಮಠಾಧೀಶರಾದ ವಿಶ್ವಪ್ರಿಯತೀರ್ಥರು, ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭತೀರ್ಥರು ಕೃಷ್ಣನಿಗೆ ಹಾಗೂ ಚಂದ್ರೋದಯ ಸಮಯದಲ್ಲಿ ತುಳಸೀಕಟ್ಟೆಯಲ್ಲಿ ಚಂದ್ರನಿಗೆ ಅರ್ಘ್ಯ ಸಮರ್ಪಿಸಿದರು. ಕೃಷ್ಣ ಜನ್ಮಾಷ್ಟಮಿಯ ಪ್ರಮುಖ ಧಾರ್ಮಿಕ ವಿಧಿವಿಧಾನಗಳಲ್ಲಿ

ಶ್ರೀಕೃಷ್ಣ ಮಠದಲ್ಲಿ ಸರಳ ಕೃಷ್ಣಾಷ್ಟಮಿ ➤ ಮಧ್ಯರಾತ್ರಿ ಕೃಷ್ಣನಿಗೆ ಅರ್ಘ್ಯ ಸಮರ್ಪಣೆ Read More »

ಕರಾವಳಿ, ಕರ್ನಾಟಕ

ದೇವಸ್ಥಾನದಲ್ಲೇ ಮೂವರ ಹತ್ಯೆ ➤ ಹುಂಡಿ ದೋಚಿ ಪರಾರಿಯಾದ ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ಮಂಡ್ಯ, ಸೆ.11.  ಮೂವರ ಹತ್ಯೆ ಮಾಡಿ ದುಷ್ಕರ್ಮಿಗಳು ದೇವಾಲಯದ ಹುಂಡಿಯಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಮಂಡ್ಯ ನಗರದ ಗುತ್ತಲಿನಲ್ಲಿರುವ ಅರ್ಕೇಶ್ವರ ದೇವಾಲಯದಲ್ಲಿ ನಡೆದಿದೆ. ಗಣೇಶ, ಪ್ರಕಾಶ, ಆನಂದ ಕೊಲೆಯಾದವರು, ಇವರಲ್ಲಿ ಇಬ್ಬರು ಅರ್ಚಕರು, ಒಬ್ಬ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಮೂವರ ಮೇಲೆ ದೇವಾಲಯದ ಆವರಣದಲ್ಲೇ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಗುರುವಾರ ತಡರಾತ್ರಿ ದೇವಾಲಯಕ್ಕೆ ನುಗ್ಗಿದ ದುಷ್ಕರ್ಮಿಗಳು ಮೂವರನ್ನು ಕೊಲೆ ನಂತರ ಹುಂಡಿಯಲ್ಲಿನ ಹಣ

ದೇವಸ್ಥಾನದಲ್ಲೇ ಮೂವರ ಹತ್ಯೆ ➤ ಹುಂಡಿ ದೋಚಿ ಪರಾರಿಯಾದ ದುಷ್ಕರ್ಮಿಗಳು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಟಾಲಿವುಡ್ ನ ಹಿರಿಯ ನಟ ಜಯಪ್ರಕಾಶ್ ರೆಡ್ಡಿ ವಿಧಿವಶ..!!

(ನ್ಯೂಸ್ ಕಡಬ) newskadaba.com ಹೈದರಬಾದ್  ,ಸೆ.08:  ಟಾಲಿವುಡ್ ನ ಹಿರಿಯ ನಟ ಜಯಪ್ರಕಾಶ್ ರೆಡ್ಡಿ ವಿಧಿವಶರಾಗಿದ್ದಾರೆ. ಅವರು ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಹೃದಯಾಘಾತದಿಂದ ನಿಧನರಾದರು.   ಬಾತ್ ರೂಮ್ ನಲ್ಲಿ ಕುಸಿದು ಬಿದ್ದ ಅವರನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ ಕೆಲವೇ ಕ್ಷಣಗಳಲ್ಲಿ ಅವರು ಮೃತಪಟ್ಟರು. ಲಾಕ್ ಡೌನ್ ನಿಂದ ಸಿನಿಮಾ ಶೂಟಿಂಗ್ ಇಲ್ಲದ ಕಾರಣ ಅವರು ಗುಂಟೂರಿನಲ್ಲಿ ಇದ್ದರು.ಸಮರಸಿಂಹ ರೆಡ್ಡಿ, ಪ್ರೇಮಿಚುಕುಂಡಮ್ ರಾ, ನರಸಿಂಹ ನಾಯ್ಡು, ನೂವೊಸ್ತಾನಂತೆ ನೇನೊದ್ದಂತನಾ, ಜುಲಾಯಿ, ರೆಡಿ, ಕಿಕ್,

ಟಾಲಿವುಡ್ ನ ಹಿರಿಯ ನಟ ಜಯಪ್ರಕಾಶ್ ರೆಡ್ಡಿ ವಿಧಿವಶ..!! Read More »

ರಾಷ್ಟ್ರೀಯ ನ್ಯೂಸ್

ಹಿರಿಯ ನಟ ಸಿದ್ದರಾಜ್ ಕಲ್ಯಾಣಕರ್ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಬೆಂಗಳೂರು ,ಸೆ.08: ಸ್ಯಾಂಡಲ್ ವುಡ್ ಹಿರಿಯ ನಟ ಸಿದ್ದರಾಜ್ ಕಲ್ಯಾಣಕರ್ (60) ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.   ಶ್ರೀಮಂಜುನಾಥ, ಸೂಪರ್, ಬುದ್ಧಿವಂತ ಸೇರಿದಂತೆ ಸುಮಾರು 70 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಸಿದ್ದರಾಜ್ ಕಲ್ಯಾಣಕರ್, ಅವರು ಯಾರೇ ನೀ ಅಭಿಮಾನಿ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ್ದರು. ನಿನ್ನೆಯಷ್ಟೇ 60 ನೇ ಜನ್ಮದಿನವನ್ನು ಪ್ರೇಮಲೋಕ ಧಾರವಾಹಿ ಸೆಟ್ ನಲ್ಲಿ ಆಚರಿಸಿಕೊಂಡಿದ್ದ ಅವರು, ತಡರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.  

ಹಿರಿಯ ನಟ ಸಿದ್ದರಾಜ್ ಕಲ್ಯಾಣಕರ್ ಇನ್ನಿಲ್ಲ Read More »

ಕರ್ನಾಟಕ

ತಾಯಿ – ಮಗಳ ಹತ್ಯೆಗೆ ಯತ್ನ ➤ ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬರ್ಬರ ದೃಶ್ಯ

(ನ್ಯೂಸ್ ಕಡಬ) newskadaba.com ಬೆಂಗಳೂರು ,ಸೆ.07:  ತಾಯಿ-ಮಗಳನ್ನು ಹತ್ಯೆ ಮಾಡಲು ಯತ್ನಿಸಿದ ಬೆಚ್ಚಿಬೀಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೆಪ್ಟೆಂಬರ್​ 4ರಂದು ಸಂಜೆ 7.40ರ ಹೊತ್ತಿಗೆ ಘಟನೆ ನಡೆದಿದೆ. ತಾಯಿ ದೀಪಾ ಶ್ರೀಕುಮಾರ್ ಮತ್ತು ಮಗಳು ಹಿಷಿತಾ ದ್ವಿಚಕ್ರವಾಹನದಲ್ಲಿ ವಿದ್ಯಾಪೀಠ ರಸ್ತೆಯಲ್ಲಿ ತೆರಳುತ್ತಿದ್ದರು.     ಇನ್ನೊಂದು ಬೈಕ್​​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ದೀಪಾ ಮೇಲೆ ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ತಡೆಯಲು ಹೋದ ಹಿಷಿತಾ ಮೇಲೆ ಕೂಡ ದಾಳಿ ಮಾಡಿದ್ದಾರೆ. ಅಷ್ಟರಲ್ಲಿ ಸಾರ್ವಜನಿಕರು ಸೇರಿದ್ದರಿಂದ ಕೂಡಲೇ ಅಲ್ಲಿಂದ

ತಾಯಿ – ಮಗಳ ಹತ್ಯೆಗೆ ಯತ್ನ ➤ ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬರ್ಬರ ದೃಶ್ಯ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top