ಕಡಬ ನ್ಯೂಸ್

ಶಿವಮೊಗ್ಗ: ಅಡಿಕೆಯಿಂದ ತಯಾರಾಯ್ತು ಶಾಂಪೂ….!

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಅ.14: ಅಡಕೆ ಟೀ ತಯಾರಿಸುವ ಮೂಲಕ ದೇಶದ ಗಮನ ಸೆಳೆದಿದ್ದ ಶಿವಮೊಗ್ಗ ಜಿಲ್ಲೆ ಇದೀಗ ಅಡಿಕೆಯಿಂದ ಶಾಂಪೂ ತಯಾರಾಗಿದೆ.     ಶಿವಮೊಗ್ಗ ಜಿಲ್ಲೆಯ ಮಂಡಗದ್ದೆಯ ಯುವ ಉದ್ಯಮಿ ನಿವೇದನ್‌ ನೆಂಪೆ ರವರು ಈಗ ಅಡಕೆ ಶಾಂಪೂ ಸಂಶೋಧಿಸುವ ಹೊಸ ಪ್ರಯೋಗವನ್ನು ಮಾಡಿದ್ದಾರೆ. ಚಾಲಿ ಅಡಿಕೆಯಲ್ಲಿ ಪ್ರೊಲೀನ್‌ ಎಂಬ ಆಂಟಿ ಏಜೆಂಗ್‌ ಇದ್ದು, ಇದು ದೇಹದಲ್ಲಿನ ಸುಕ್ಕವನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ ಗ್ಯಾಲಿಕ್‌ ಆಸಿಡ್‌ ಎಂಬ ಆಂಟಿ ಫಂಗಲ್‌ ಇದ್ದು, […]

ಶಿವಮೊಗ್ಗ: ಅಡಿಕೆಯಿಂದ ತಯಾರಾಯ್ತು ಶಾಂಪೂ….! Read More »

ಕರ್ನಾಟಕ

ವಳಲಂಬೆ: ಕರೆಂಟ್‌ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

(ನ್ಯೂಸ್ ಕಡಬ) newskadaba.com ಗುತ್ತಿಗಾರು, ಅ.14: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕರೆಂಟ್‌ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಗುತ್ತಿಗಾರಿನ ವಳಲಂಬೆಯಲ್ಲಿ ಇಂದು ನಡೆದಿದೆ.     ಕೊಲ್ಲಮೊಗ್ರದ ಹಿತೇಶ್‌ ಎಂಬವರು ಕಾರಿನಲ್ಲಿ ತಾಯಿಯೊಂದಿಗೆ ದೊಡ್ಡತೋಟಕ್ಕೆ ತೆರಳಿದ್ದು, ಇಂದು ಗುತ್ತಿಗಾರಿಗೆ ಹಿಂತಿರುಗುತ್ತಿದ್ದಾಗ ವಳಲಂಬೆ ಬಳಿ ಅಪಘಾತ ಸಂಭವಿಸಿದೆ. ಕರೆಂಟ್‌ ಕಂಬ ಮುರಿದು ಬಿದ್ದಿದ್ದು, ಆ ವೇಳೆ ಕರೆಂಟ್‌ ಟ್ರಿಪ್‌ ಆಗಿರುವ ಕಾರಣ ಯಾವುದೇ ತೊಂದರೆ ಉಂಟಾಗಿಲ್ಲ. ಪರಿಣಾಮ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರು ಅದೃಷ್ಟವಶಾತ್‌ ಪರಾಗಿದ್ದಾರೆ.    

ವಳಲಂಬೆ: ಕರೆಂಟ್‌ ಕಂಬಕ್ಕೆ ಢಿಕ್ಕಿ ಹೊಡೆದ ಕಾರು Read More »

ಕರಾವಳಿ, ಕ್ರೈಮ್ ನ್ಯೂಸ್

ಮುಂದುವರಿದ ಮಳೆಯ ಅಬ್ಬರ ➤ ಆಂಧ್ರಪ್ರದೇಶ,ತೆಲಂಗಾಣದಲ್ಲಿ ಜನಜೀವನ ಅಸ್ಥವ್ಯಸ್ಥ

(ನ್ಯೂಸ್ ಕಡಬ) newskadaba.com ಹೈದರಾಬಾದ್ ಅ. 14: ಧಾರಾಕಾರವಾಗಿ ಸುರಿದ ಭಾರೀ ಮಳೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯ ತತ್ತರಿಸಿ ಹೋಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಎರಡು ರಾಜ್ಯಗಳಲ್ಲಿನ ತಗ್ಗು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಹಲವಾರು ವಸ್ತುಗಳನ್ನು ಕೊಚ್ಚಿಕೊಂಡು ಹೋಗಿರುವುದಾಗಿ ವರದಿ ತಿಳಿಸಿದೆ. ತೆಲಂಗಾಣದಲ್ಲಿ ಮಳೆಗೆ ಸಂಬಂಧಿಸಿದಂತೆ ಸಂಭವಿಸಿದ ಘಟನೆಯಲ್ಲಿ ಈವರೆಗೆ 18 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಿಂದಾಗಿ ಜನರು ತತ್ತರಿಸಿ ಹೋಗಿರುವುದಾಗಿ ವರದಿ ವಿವರಿಸಿದೆ. ಆಂಧ್ರಪ್ರದೇಶದಲ್ಲಿ ನಾಲ್ವರು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದುವರಿದ ಮಳೆಯ ಅಬ್ಬರ ➤ ಆಂಧ್ರಪ್ರದೇಶ,ತೆಲಂಗಾಣದಲ್ಲಿ ಜನಜೀವನ ಅಸ್ಥವ್ಯಸ್ಥ Read More »

ರಾಷ್ಟ್ರೀಯ ನ್ಯೂಸ್

ಅಣ್ಣನನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ತಮ್ಮ.!!

(ನ್ಯೂಸ್ ಕಡಬ) newskadaba.com ಹಾವೇರಿ ಅ. 14: ತಮ್ಮನೇ ಅಣ್ಣನನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹಲ್ಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬುಡಪನಹಳ್ಳಿ ಗ್ರಾಮದಲ್ಲಿ ನಡೆದಿದೆ.   ನಾಗರಾಜ ಗೊರವರ(22) ಹತ್ಯೆಯಾದ ಅಣ್ಣ. ಈತನನ್ನು ತಮ್ಮ ದಿಳ್ಳೆಪ್ಪ ಗೊರವರ (20) ಕೊಲೆ ಮಾಡಿದ್ದಾನೆ. ನಾಗರಾಜ ದಿನನಿತ್ಯ ಕುಡಿದು ಬಂದು ತಂದೆ-ತಾಯಿ ಜೊತೆ ಜಗಳವಾಡ್ತಿದ್ದ. ಹೆತ್ತವರಿಗೆ ನೀಡ್ತಿದ್ದ ಅಣ್ಣನ ಕಿರಿಕಿರಿಯಿಂದ ಬೇಸತ್ತು ಕೊಡಲಿಯಿಂದ ಕೊಚ್ಚಿ ತಮ್ಮ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಅಣ್ಣನ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಅಣ್ಣನನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ತಮ್ಮ.!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಅ. 14ರಿಂದ ಅ.18ರ ಮಧ್ಯರಾತ್ರಿಯವರೆಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧ

(ನ್ಯೂಸ್ ಕಡಬ) newskadaba.com ಮೈಸೂರು, ಅ.14: ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆ ಜೋರಾಗಿ ನಡೆಯುತ್ತಿದ್ದು, ಅ. 17ರಿಂದ ಮೈಸೂರಿನಲ್ಲಿ ದಸರಾ ಉತ್ಸವದ ಕಳೆ ತುಂಬಲಿದೆ. ಈಗಾಗಲೇ ಅಂಬಾರಿ ಹೊರುವ ಗಜಪಡೆಗೆ ಎಲ್ಲ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ.     ದಸರಾ ಉತ್ಸವದಲ್ಲಿ ಚಾಮುಂಡಿ ಬೆಟ್ಟದಲ್ಲೂ ಸಾಕಷ್ಟು ಸಾಂಪ್ರದಾಯಿಕ ಪೂಜೆಗಳು ನಡೆಯುವುದರಿಂದ ಇಂದು ಮಧ್ಯರಾತ್ರಿಯಿಂದ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಅ. 14ರ ಮಧ್ಯರಾತ್ರಿಯಿಂದ ಅ.18ರ ಮಧ್ಯರಾತ್ರಿಯವರೆಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ

ಅ. 14ರಿಂದ ಅ.18ರ ಮಧ್ಯರಾತ್ರಿಯವರೆಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧ Read More »

ಕರ್ನಾಟಕ

ಮಂಗಳೂರು: ಮಹಿಳೆಯೋರ್ವರ ಹತ್ಯೆ ಪ್ರಕರಣ ➤ ಆರೋಪಿ ಖಾಕಿ ಬಲೆಗೆ

(ನ್ಯೂಸ್ ಕಡಬ) newskadaba.com ಬಂಟ್ವಾಳ , ಅ.14: ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಬೆಳ್ಳೇರಿ ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದು, ವಿಚಾರಣೆಯ ಸಂದರ್ಭ ಬಂಧಿತ ಆರೋಪಿ ಚಿನ್ನಾಭರಣ ದೋಚಲು ಬಂದು ಅತ್ಯಾಚಾರ ಗೈದು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.     ಬಂಧಿತ ಆರೋಪಿಯನ್ನು ಸಕಲೇಶಪುರದ ನಿವಾಸಿ ಪಾತೂರು ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮಹಮ್ಮದ್‌ ಅಶ್ರಫ್‌ (28) ಎಂದು ಗುರುತಿಸಲಾಗಿದೆ. ಕುಸುಮಾ ಅವರ ನಿವಾಸದ ಎದುರು ವಾಸಿಸುವ ಗಿರೀಶ್ ಅವರ

ಮಂಗಳೂರು: ಮಹಿಳೆಯೋರ್ವರ ಹತ್ಯೆ ಪ್ರಕರಣ ➤ ಆರೋಪಿ ಖಾಕಿ ಬಲೆಗೆ Read More »

ಕರಾವಳಿ, ಕ್ರೈಮ್ ನ್ಯೂಸ್

ಉಪ್ಪಿನಂಗಡಿ: ಅಕ್ರಮ ಮರ ಸಾಗಾಟ ➤ ವಾಹನ ಸಹಿತ ಆರೋಪಿ ವಶಕ್ಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.14: ರಾಷ್ಟೀಯ ಹೆದ್ದಾರಿ 75 ರಲ್ಲಿ ಮಠ ಎಂಬಲ್ಲಿ ನದಿ ಬದಿಯಲ್ಲಿದ್ದ ಜಾಗದಿಂದ ಅಕ್ರಮವಾಗಿ ಮರಗಳನ್ನು ಕಡಿದು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.     ಉಪ್ಪಿನಂಗಡಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆಗೆ ಒಳಪಡಿಸಿದಾಗ ಯಾವುದೇ ದಾಖಲೆ ಪತ್ರವಿಲ್ಲದೆ ಮರಗಳನ್ನು ಕಡಿದು ಹಾಕಿ ದಿಮ್ಮಿಗಳನ್ನಾಗಿ ಮಾಡಿ ಸಾಗಾಟ ಮಾಡುತ್ತಿದ್ದು, ಲಾರಿ ಚಾಲಕ ಅಬೂಬಕ್ಕರ್‌ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ವಾಹನವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.  

ಉಪ್ಪಿನಂಗಡಿ: ಅಕ್ರಮ ಮರ ಸಾಗಾಟ ➤ ವಾಹನ ಸಹಿತ ಆರೋಪಿ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಳ್ಳಂಬೆಳಗ್ಗೆ ಕಾವೂರು ಮಾರುಕಟ್ಟೆಗೆ ಮಹಾನಗರ ಮೇಯರ್ ದಾಳಿ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.14: ಇಂದು ಬೆಳ್ಳಂಬೆಳಗ್ಗೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್‌ ದಿವಾಕರ್ ಪಾಂಡೇಶ್ವರ್ ಅವರು ಕಾವೂರು ಮಾರುಕಟ್ಟೆಗೆ ದಾಳಿ ನಡೆಸಿದ್ದಾರೆ.     ಕಾವೂರಿನಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ನಡೆಸದಂತೆ ಹಲವು ಬಾರಿ ಮಂಗಳೂರು ಮಹಾನಗರ ಪಾಲಿಕೆಯು ಬೀದಿ ಬದಿ ವ್ಯಾಪಾರಸ್ಥರಿಗೆ ಸೂಚನೆ ನೀಡಿದ್ದು, ವ್ಯಾಪಾರಸ್ಥರು ವ್ಯಾಪಾರ ನಡೆಸುತ್ತಲ್ಲೇ ಇದ್ದರು. ಮಹಾನಗರ ಪಾಲಿಕೆಯು ಈ ಹಿಂದೆ ಕಾವೂರಿನಲ್ಲಿ ಬೀದಿ ಬದಿ ವ್ಯಾಪಾರಸ್ಥರನ್ನು ಸ್ಥಳದಿಂದ ತೆರವುಗೊಳಿಸಿದ್ದು ತಂತಿ ಬೇಲಿ ಅಳವಡಿಸಿದ್ದರು. ಆದರೆ ಪಾಲಿಕೆಯ ಸೂಚನೆಗೆ

ಬೆಳ್ಳಂಬೆಳಗ್ಗೆ ಕಾವೂರು ಮಾರುಕಟ್ಟೆಗೆ ಮಹಾನಗರ ಮೇಯರ್ ದಾಳಿ Read More »

ಕರಾವಳಿ

ಬಂಟ್ವಾಳ :ಶ್ರೀ ಕ್ಷೇತ್ರ ಕಾರಿಂಜ ದೇವಸ್ಥಾನದಲ್ಲಿ ಬಂಡೆ ಕುಸಿತ

(ನ್ಯೂಸ್ ಕಡಬ) newskadaba.com ಬಂಟ್ವಾಳ ಅ. 14: ಕರಾವಳಿಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ, ನಾಲ್ಕು ಯುಗಗಳ ಪುರಾಣ ಇತಿಹಾಸ ಹೊಂದಿರುವ ಶ್ರೀ ಕ್ಷೇತ್ರ ಕಾರಿಂಜ ದೇವಸ್ಥಾನದ ಎಡ ಪಾಶ್ರ್ವದ ಬದಿಗೆ ಕಟ್ಟಿದ್ದ ಕಲ್ಲಿನ ತಡೆಗೋಡೆ ಕುಸಿದು ಬಿದ್ದಿದೆ.     ಈ ಅಂಗಣವನ್ನು ವಾನರಗಳಿಗೆ ನೈವೇದ್ಯ ಹಾಕಲು ಬಳಸಲಾಗುತ್ತಿತ್ತು. ಆದರೆ ಇದೀಗಾ ಭಾರಿ ಮಳೆಗೆ ಇಂಟರ್ ಲಾಕ್ ಕಿತ್ತುಹೋಗಿದೆ.ಕುಸಿದ ಭಾಗದ ಕೆಳಭಾಗದಲ್ಲಿ ಕಲ್ಲು, ಮಣ್ಣಿನ ದಿಬ್ಬವಿದ್ದು, ಯಾವುದೇ ಹಾನಿಯಾಗಿಲ್ಲ, ತಜ್ಞನಪರಿಶೀಲನೆ ಬಳಿಕ ಪರಿಹಾರೋಪಾಯ ನಡೆಸಬೇಕಾಗಿದೆ ಎಂದು

ಬಂಟ್ವಾಳ :ಶ್ರೀ ಕ್ಷೇತ್ರ ಕಾರಿಂಜ ದೇವಸ್ಥಾನದಲ್ಲಿ ಬಂಡೆ ಕುಸಿತ Read More »

ಕರಾವಳಿ, ಕರ್ನಾಟಕ

14 ತಿಂಗಳ ಬಳಿಕ ಮೆಹಬೂಬಾ ಮುಫ್ತಿ ಬಿಡುಗಡೆ.!

(ನ್ಯೂಸ್ ಕಡಬ) newskadaba.com  ಶ್ರೀನಗರ,ಅ. 14:ಜಮ್ಮು ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ಮುಖ್ಯಸ್ಥೆ, ಮಾಜಿ ಸಿಎಂ ಮೆಹಬೂಬಾ ಮುಫ್ತಿಯರನ್ನು ಗೃಹಬಂಧನದಿಂದ ಬಿಡುಗಡೆ ಮಾಡಲಾಗಿದೆ.ಕಣಿವೆ ರಾಜ್ಯದಲ್ಲಿ ಗೃಹ ಬಂಧನಕ್ಕೀಡಾದ ಮೊದಲ ರಾಜಕೀಯ ನಾಯಕಿ ಇವರಾಗಿದ್ದರು. ಆಗಸ್ಟ್ 5ರಂದು 370ನೇ ವಿಧಿ ರದ್ದುಪಡಿಸಿದ ಬಳಿಕ ಮುಫ್ತಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು.ಬಿಡುಗಡೆಯಾಗುತ್ತಿದ್ದಂತೆ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ನಿರ್ಧಾರದ ಕುರಿತು ಮೆಹಬೂಬಾ ಮುಫ್ತಿ ಕಿಡಿ ಕಾರಿದ್ದಾರೆ. ಪಿಡಿಪಿ ಮುಖ್ಯಸ್ಥೆ ಮುಫ್ತಿಯವರು ಬಿಡುಗಡೆಯಾಗಿರುವ ಕುರಿತು ಜಮ್ಮು ಕಾಶ್ಮೀರ ಸರ್ಕಾರದ ವಕ್ತಾರ ರೋಹಿತ್

14 ತಿಂಗಳ ಬಳಿಕ ಮೆಹಬೂಬಾ ಮುಫ್ತಿ ಬಿಡುಗಡೆ.! Read More »

ರಾಷ್ಟ್ರೀಯ ನ್ಯೂಸ್
Scroll to Top