ವಳಲಂಬೆ: ಕರೆಂಟ್‌ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

(ನ್ಯೂಸ್ ಕಡಬ) newskadaba.com ಗುತ್ತಿಗಾರು, ಅ.14: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕರೆಂಟ್‌ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಗುತ್ತಿಗಾರಿನ ವಳಲಂಬೆಯಲ್ಲಿ ಇಂದು ನಡೆದಿದೆ.

 

 

ಕೊಲ್ಲಮೊಗ್ರದ ಹಿತೇಶ್‌ ಎಂಬವರು ಕಾರಿನಲ್ಲಿ ತಾಯಿಯೊಂದಿಗೆ ದೊಡ್ಡತೋಟಕ್ಕೆ ತೆರಳಿದ್ದು, ಇಂದು ಗುತ್ತಿಗಾರಿಗೆ ಹಿಂತಿರುಗುತ್ತಿದ್ದಾಗ ವಳಲಂಬೆ ಬಳಿ ಅಪಘಾತ ಸಂಭವಿಸಿದೆ. ಕರೆಂಟ್‌ ಕಂಬ ಮುರಿದು ಬಿದ್ದಿದ್ದು, ಆ ವೇಳೆ ಕರೆಂಟ್‌ ಟ್ರಿಪ್‌ ಆಗಿರುವ ಕಾರಣ ಯಾವುದೇ ತೊಂದರೆ ಉಂಟಾಗಿಲ್ಲ. ಪರಿಣಾಮ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರು ಅದೃಷ್ಟವಶಾತ್‌ ಪರಾಗಿದ್ದಾರೆ.

 

 

Scroll to Top