ಕಡಬ ನ್ಯೂಸ್

23 ದಿನದ ಕೂಸನ್ನು ಸುಟ್ಟು ಹಾಕಿದ ಕ್ರೂರಿ ತಾಯಿ

(ನ್ಯೂಸ್ ಕಡಬ) newskadaba.com ಕಡೂರು ಅ. 27: ಹೆತ್ತ ತಾಯಿಯೇ ತನ್ನ ಮಗುವನ್ನು ನೀರೊಲೆಯಲ್ಲಿ ಹಾಕಿ ಸುಟ್ಟ ಘಟನೆ ಕಡೂರು ತಾಲೂಕಿನ ದೊಡ್ಡಹಟ್ಟಿ ಗ್ರಾಮದಲ್ಲಿ ನಡೆದಿದೆ‌. ಮಗುವನ್ನು ಸುಟ್ಟು ಕೊಂದ ಆ ಮಹಾತಾಯಿ ಅದೇ ಗ್ರಾಮದ ಸಂಗೀತಾಎಂಬಾಕೆ. ಕೇವಲ 23 ದಿನದ ಹಸುಗೂಸು ಇದಾಗಿದ್ದು ಮಗುವಿನ ದೇಹ ಸುಟ್ಟ ವಾಸನೆ ನೆರೆಹೊರೆಯವರಿಗೆ ತಿಳಿದಾಗ ಘಟನೆ ಬೆಳಕಿಗೆ ಬಂದಿದೆ‌.   26 ವರ್ಷ ವಯಸ್ಸಿನ ಸಂಗೀತಾ 2 ವರ್ಷಗಳ ಹಿಂದೆ ಉತ್ತರ ಪ್ರದೇಶ ಮೂಲದ ಅಮಿತ್ ಎಂಬ ಯುವಕನನ್ನು ಪ್ರೇಮಿಸಿ […]

23 ದಿನದ ಕೂಸನ್ನು ಸುಟ್ಟು ಹಾಕಿದ ಕ್ರೂರಿ ತಾಯಿ Read More »

ಕ್ರೈಮ್ ನ್ಯೂಸ್

ಭಟ್ಕಳ ತಾಲೂಕಿನ ವಿವಿದೆಡೆ ಕಳ್ಳತನ.!

(ನ್ಯೂಸ್ ಕಡಬ) newskadaba.com ಭಟ್ಕಳ ಅ. 27:  ತಾಲೂಕಿನಾದ್ಯಂತ ಕಳ್ಳರ ಹಾವಳಿ ಹೆಚ್ಚಾಗಿದೆ. ಕಿದ್ವಾಯಿ ರೋಡ್, ಫಿರ್ದೋಸ್ ನಗರ, ಹೆಬಳೆ ರೋಡ್ ಸೇರಿದಂತೆ ವಿವಿದೆಡೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಭಟ್ಕಳ ಗ್ರಾಮೀಣ ಮತ್ತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಕಿದ್ವಾಯಿ ರಸ್ತೆಯ ಮಸೀದಿ ಸಮೀಪ ಅಲ್ಹಿಜಾಜ್ ಅವರ ಅದ್ವಾನ್ ರುಕ್ಕುದ್ದೀನ ಮನೆಯ ಬಚ್ಚಲು ಮನೆಯ ಕಿಟಕಿ ಮುರಿದು ಒಳ ಪ್ರವೇಶಿಸಿದ ಕಳ್ಳರು 1 ಲಕ್ಷ ರೂ ನಗದು ಹಣವನ್ನು ಕದ್ದೊಯ್ದಿದ್ದಾರೆ.     ಮನೆಯಲ್ಲಿ

ಭಟ್ಕಳ ತಾಲೂಕಿನ ವಿವಿದೆಡೆ ಕಳ್ಳತನ.! Read More »

ಕರಾವಳಿ, ಕ್ರೈಮ್ ನ್ಯೂಸ್

ಕೊಕ್ಕಡ : ಭಿಕ್ಷುಕನ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮರೆದ ಜನತೆ

(ನ್ಯೂಸ್ ಕಡಬ) newskadaba.com ಕೊಕ್ಕಡ ಅ. 27: ದಕ್ಷಿಣಕನ್ನಡ ಜಿಲ್ಲೆಯ ನೆಲ್ಯಾಡಿ ,ಕೊಕ್ಕಡ ಪರಿಸರದಲ್ಲಿ ಭಿಕ್ಷೆ  ಬೇಡಿ ಅಲೆಮಾರಿಯಂತೆ ತಿರುಗುತ್ತಿದ್ದ ಭಿಕ್ಷುಕರೋರ್ವರು ಕಳೆದ ದಿನ ನಿಧನರಾಗಿದ್ದಾರೆ. ಸೆಲೆಬ್ರಿಟಿಗೆ ಗಳಿಗೆ ಸಲ್ಲುವಂತಹ ಗೌರವವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ ಇಪ್ಪತೈದು ವರ್ಷಗಳ ಹಿಂದೆ ನೆಲ್ಯಾಡಿ ಹಾಗೂ ಕೊಕ್ಕಡ ಪರಿಸರದಲ್ಲಿ ದಿಢೀರನೆ ಪ್ರತ್ಯಕ್ಷನಾಗಿದ್ದ ಇವರಿಗೆ ಮೊದ ಮೊದಲು ಯಾವುದೋ ಪ್ರಕರಣ ಛೇಧಿಸಲು ಬಂದಿರುವ ಸಿ.ಐ.ಡಿ ಯೇ ಇರಬೇಕೆಂದು ಊಹಿಸಿದ್ದರು. ಯಾರಲ್ಲೂ ಮಾತನಾಡದೆ, ತನ್ನ ಪಾಡಿಗೆ ತಾನು ಇರುತ್ತಿದ್ದ ಈತನನ್ನು ನೆಲ್ಯಾಡಿ ಭಾಗದ ಜನ

ಕೊಕ್ಕಡ : ಭಿಕ್ಷುಕನ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮರೆದ ಜನತೆ Read More »

ಕರಾವಳಿ

ಬಿಜೆಪಿ ಸೇರಿದ್ದ ಖ್ಯಾತ ನಟಿ ಖುಷ್ಬೂ ಸುಂದರ್ ಅರೆಸ್ಟ್.!

(ನ್ಯೂಸ್ ಕಡಬ) newskadaba.com ಚೆನ್ನೈ  ಅ. 27 :ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ಖ್ಯಾತ ನಟಿ ಖುಷ್ಬೂ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನೆಯೊಂದಕ್ಕೆ ತೆರಳಿದ್ದ ಖುಷ್ಬೂ ಮತ್ತು ಕೆಲವು ಬಿಜೆಪಿ ನಾಯಕರನ್ನು ಬಂಧಿಸಲಾಗಿದೆ. ಮಹಿಳೆಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಥೋಲ್ ತಿರುಮಾವಾಲವನ್ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಖುಷ್ಬೂ ಚಿದಂಬರಂಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಚೆನ್ನೈ ಹೊರವಲಯದಲ್ಲಿರುವ ಮುತ್ತಕಾಡು ಎಂಬಲ್ಲಿ ಅವರನ್ನು ತಡೆದ ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿ ಸೇರಿದ್ದ ಖ್ಯಾತ ನಟಿ ಖುಷ್ಬೂ ಸುಂದರ್ ಅರೆಸ್ಟ್.! Read More »

ರಾಷ್ಟ್ರೀಯ ನ್ಯೂಸ್

ಸುಳ್ಯ: ಕಾರಿಗೆ ಬೈಕ್‌ ಢಿಕ್ಕಿ

(ನ್ಯೂಸ್ ಕಡಬ) newskadaba.com ಸುಳ್ಯ, ಅ. 27. ಸುಳ್ಯ ಶ್ರೀ ರಾಂಪೇಟೆಯಲ್ಲಿ ಸ್ವಿಫ್ಟ್‌ ಡಿಝೈರ್‌ ಕಾರಿಗೆ ಹೀರೊ ಸ್ಪ್ಲೆಂಡರ್‌ ಬೈಕ್‌ ಡಿಕ್ಕಿಯಾದ ಘಟನೆ ಸಂಭವಿಸಿದೆ.     ಬೈಕ್‌ ಸವಾರ ಗಾಯಗೊಂಡಿದ್ದು, ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸುವುದಾಗಿ ತಿಳಿದು ಬಂದಿದೆ.  

ಸುಳ್ಯ: ಕಾರಿಗೆ ಬೈಕ್‌ ಢಿಕ್ಕಿ Read More »

ಕರಾವಳಿ

ಕಾಸರಗೋಡು: ವಿಷ ಸೇವಿಸಿ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಅ. 27. ಕುತ್ತಿಗೋಲ್‌ ನಲ್ಲಿ ವಿಷ ಸೇವಿಸಿ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಕುತ್ತಿಗೋಲು ಪಂಚಾಯತ್‌ ಸದಸ್ಯ ಜೋಸ್‌ ರವರ ಪತ್ನಿ ಜಿನೋ (35 ವ.) ಎಂದು ಗುರುತಿಸಲಾಗಿದೆ.     ನಾಲ್ಕು ದಿನಗಳ ಹಿಂದೆ ವಿಷ ಸೇವಿಸಿದ್ದ ಜಿನೋ ರವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಇವರ ಸಾವಿನ ಕೃತ್ಯಕ್ಕೆ ಪತಿ ಹಾಗೂ ಪತಿಯ ಮನೆಯವರು ಕಿರುಕುಳದಿಂದ ಬೇಸತ್ತು ವಿಷ ಸೇವನೆ ಮಾಡಿದ್ದಾಗಿ

ಕಾಸರಗೋಡು: ವಿಷ ಸೇವಿಸಿ ಮಹಿಳೆ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ:‌ ವರ್ತಕರಿಗೆ ಉಚಿತ ಕೋವಿಡ್‌ ಟೆಸ್ಟ್

(ನ್ಯೂಸ್ ಕಡಬ) newskadaba.com ಕಡಬ, ಅ. 27. ಇಲ್ಲಿನ ವರ್ತಕರಿಗೆ ಉಚಿತ ಕೋವಿಡ್‌ ತಪಾಸಣೆ ಕಡಬ ಅಂಬೇಡ್ಕರ್‌ ಭವನದಲ್ಲಿ ಇಂದು ನಡೆಯಿತು.     ವರ್ತಕರು ಹಾಗೂ ವಾಹನ ಚಾಲಕರು ಕಡ್ಡಾಯವಾಗಿ ಕೊರೋನಾ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ನೋಟಿಸು ನೀಡಿದ್ದರು. ಈ ಹಿನ್ನಲೆಯಲ್ಲಿ ಬಹುತೇಕ ವರ್ತಕರು ಕೊರೋನಾ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ.  

ಕಡಬ:‌ ವರ್ತಕರಿಗೆ ಉಚಿತ ಕೋವಿಡ್‌ ಟೆಸ್ಟ್ Read More »

ಕರಾವಳಿ

ಕೊಂಬೆಟ್ಟು: ಅಪಾಯಕಾರಿ ಸ್ಥಿತಿಯಲ್ಲಿದ್ದ ಮರಗಳ ಗೆಲ್ಲುಗಳ ತೆರವು

(ನ್ಯೂಸ್ ಕಡಬ) newskadaba.com ಪುತ್ತೂರು, ಅ. 27. ಶಾಸಕ ಸಂಜೀವ ಮಠಂದೂರು ಅವರ ಸೂಚನೆಯಂತೆ ಕೊಂಬೆಟ್ಟು ಬಳಿ ವಿದ್ಯುತ್‌ ತಂತಿಗಳಿಗೆ ಬಾಗಿಕೊಂಡು ಅಪಾಯಕಾರಿ ಸ್ಥಿತಿಯಲ್ಲಿದ್ದ ಮರಗಳ ಗೆಲ್ಲುಗಳನ್ನು ಇಂದು ನಗರ ಸಭೆ ಸ್ಥಳೀಯ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್‌ ಅವರ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.     ಮೆಸ್ಕಾಂ ಮತ್ತು ಅರಣ್ಯ ಇಲಾಖೆ ಜಂಟಿ ಆಶ್ರಯದಲ್ಲಿ ಕಾರ್ಯಚರಣೆ ಮಾಡಲಾಯಿತು. ನಗರಸಭೆ ಮತ್ತು ಸಂಚಾರ ಪೊಲೀಸ್‌ ಠಾಣೆ ಸಹಕಾರ ನೀಡಿದರು.    

ಕೊಂಬೆಟ್ಟು: ಅಪಾಯಕಾರಿ ಸ್ಥಿತಿಯಲ್ಲಿದ್ದ ಮರಗಳ ಗೆಲ್ಲುಗಳ ತೆರವು Read More »

ಕರಾವಳಿ

ನಾಡಹಬ್ಬ ದಸರಾ ಮಹೋತ್ಸವದ ಯಶಸ್ವಿಗಾಗಿ ಹರಕೆ ➤ ಚಾಮುಂಡಿಯ ಪಲ್ಲಕ್ಕಿ ರಥ ಎಳೆದು ಹರಕೆ ತೀರಿಸಿದ ಡಿಸಿ ರೋಹಿಣಿ

(ನ್ಯೂಸ್ ಕಡಬ) newskadaba.com ಮೈಸೂರು ಅ. 27: ನಾಡಹಬ್ಬ ದಸರಾ ಮಹೋತ್ಸವದ ಯಶಸ್ವಿಗಾಗಿ ಹರಕೆ ಹೊತ್ತಿದ್ದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕುಟುಂಬ ಮಂಗಳವಾರ ಚಾಮುಂಡಿ ಬೆಟ್ಟದಲ್ಲಿ ಹರಕೆ ತೀರಿಸಿದರು. ತಂದೆ, ತಾಯಿ, ಪತಿ ಹಾಗೂ ಮಗುವಿನೊಂದಿಗೆ ಚಾಮುಂಡಿಯ ಪಲ್ಲಕ್ಕಿ ರಥ ಎಳೆದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೈಸೂರು ನಗರದ ಅಧಿದೇವತೆ ಚಾಮುಂಡೇಶ್ವರಿಗೆ ಹರಕೆ ತೀರಿಸಿದರು.ರೋಹಿಣಿ ಸಿಂಧೂರಿ ಅವರು ಮೈಸೂರು ದಸರಾ ಮಹೋತ್ಸವ ಕೆಲವೇ ದಿನಗಳಿರುವಾಗ ಮೈಸೂರು ಜಿಲ್ಲಾಧಿಕಾರಿಯಾಗಿ ಬಂದಿದ್ದರು.ಮೈಸೂರು ದಸರಾ ಉತ್ಸವ ಸುಸೂತ್ರವಾಗಿ ನಡೆಯುವಂತೆ ಆಶಿಸಿ ಹರಕೆ

ನಾಡಹಬ್ಬ ದಸರಾ ಮಹೋತ್ಸವದ ಯಶಸ್ವಿಗಾಗಿ ಹರಕೆ ➤ ಚಾಮುಂಡಿಯ ಪಲ್ಲಕ್ಕಿ ರಥ ಎಳೆದು ಹರಕೆ ತೀರಿಸಿದ ಡಿಸಿ ರೋಹಿಣಿ Read More »

ಕರ್ನಾಟಕ

ಕುಕ್ಕೆ ಸುಬ್ರಹ್ಮಣ್ಯ : ರಾತ್ರಿ ಅನ್ನದಾನ ಸೇವೆಯ ವ್ಯವಸ್ಥೆ ಆರಂಭ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ ಅ. 27: ಕೋವಿಡ್ ಹಿನ್ನೆಲೆಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈಗಾಗಲೇ ನಿಧಾನಗತಿಯಲ್ಲಿ ದೇವರ ಸೇವೆಗಳು ದಿನಕ್ಕಿಷ್ಟು ಎಂಬಂತೆ ಆರಂಭಗೊಂಡಿದೆ. ಭಕ್ತರ ಸಂಖ್ಯೆಯು ಹೆಚ್ಚುತ್ತಿದೆ. ಆದರೆ ಅನ್ನದಾನ ಸೇವೆ ಸ್ಥಗಿತಗೊಳಿಸಲಾಗಿತ್ತು. ಈಗ ಅನ್ಲಾ ಕ್ ಪ್ರಕ್ತಿಯೆಗಳು ಆರಂಭಗೊಂಡಿದ್ದು, ಮತ್ತೆ ರಾತ್ರಿ ವೇಳೆಯ ಅನ್ನದಾನ ವ್ಯವಸ್ಥೆ ಆರಂಭವಾಗಿದೆ.ದೇವಳದಲ್ಲಿ ರಾತ್ರಿ ಅನ್ನದಾನ ಸೇವೆ ಇಲ್ಲದೆ ಭಕ್ತರು ಪರದಾಡುವಂತಾಗಿತ್ತು. ಇದರಿಂದಾಗಿ ಹಲವು ಚರ್ಚೆಗಳು ನಡೆದಿತ್ತು. ಆದ್ದರಿಂದ ದೇವಳದ ಆಡಳಿತ ಅಧಿಕಾರಿಯವರ ಸೂಚನೆಯೊಂದಿಗೆ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಭಾನುವಾರದಿಂದ ರಾತ್ರಿ

ಕುಕ್ಕೆ ಸುಬ್ರಹ್ಮಣ್ಯ : ರಾತ್ರಿ ಅನ್ನದಾನ ಸೇವೆಯ ವ್ಯವಸ್ಥೆ ಆರಂಭ Read More »

ಕರಾವಳಿ
Scroll to Top