ಕಡಬ ನ್ಯೂಸ್

ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಿ ಮೋದಿ

 (ನ್ಯೂಸ್ ಕಡಬ) newskadaba.com ದೆಹಲಿ,  ನ. 01: ಇಂದು ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಈ ಶುಭ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದ ಜನತೆಗೆ ಶುಭ ಕೋರಿದ್ದು, ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ.   “ಕರ್ನಾಟಕವು ಪ್ರಗತಿಯ ಉತ್ತುಂಗಕ್ಕೇರುತ್ತಿದೆ. ಕರ್ನಾಟಕದ ಜನತೆಯ ಸಂತಸ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ಕರ್ನಾಟಕದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡಿಗರ ಜನ ಶಕ್ತಿ ಮತ್ತು […]

ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಿ ಮೋದಿ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣ ➤ 9 ಮಂದಿ ಆರೋಪಿಗಳ ಅರೇಸ್ಟ್

 (ನ್ಯೂಸ್ ಕಡಬ) newskadaba.com ಬಂಟ್ವಾಳ ನ. 01: ತುಳು ಚಿತ್ರನಟ ಸುರೇಂದ್ರ ಬಂಟ್ವಾಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಟ್ವಾಳ ಭಂಡಾರಿಬೆಟ್ಟುವಿನ ಭಂಡಾರಿಬೆಟ್ಟುವಿನ ವಸತಿ ಸಂಕೀರ್ಣದಲ್ಲಿ ಅಕ್ಟೋಬರ್ 20 ರಂದು ಸುರೇಂದ್ರ ಬಂಟ್ವಾಳ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಅಜೆಕಲ ನಿವಾಸಿ ಸತೀಶ್ ಕುಲಾಲ್ , ನೀರುಮಾರ್ಗ ಬೊಂಡಂತಿಲ ನಿವಾಸಿ ಗಿರೀಶ್ ಯಾನೆ ಗಿರಿ, ಬಂಟ್ವಾಳ ಕಬ್ಬಿನಹಿತ್ಲು ನಿವಾಸಿ ಪ್ರದೀಪ್ ಕುಮಾರ್ ಯಾನೆ ಪಪ್ಪು,ಬಂಟ್ವಾಳ

ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣ ➤ 9 ಮಂದಿ ಆರೋಪಿಗಳ ಅರೇಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯದಲ್ಲಿ ಬಸ್‌ ನಿರ್ವಾಹಕನ ದುರ್ವತನೆ ➤ ಸಮಸ್ಯೆ ಬಗೆಹರಿಸಿದ KSRTC ಯ ಸಹಾಯವಾಣಿ

(ನ್ಯೂಸ್ ಕಡಬ) newskadaba.com ಸುಳ್ಯ ಅ. 31: ಕೆಎಸ್‌ಆರ್‌ಟಿಸಿ ಬಸ್‌ ಕಂಡಕ್ಟರ್‌ ತೋರಿಸಿದ ಅತಿಯಾದ ವರ್ತನೆ ವಿಷಯದಲ್ಲಿ ಇಬ್ಬರು ಮಕ್ಕಳು ಸಹಾಯವಾಣಿ ಸಂಪರ್ಕಿಸಿ ಸ್ಥಳದಲ್ಲೇ ಸಮಸ್ಯೆ ಪರಿಹರಿಸಿದ ಘಟನೆ ನಡೆದಿದೆ.   ಮಡಪ್ಪಾಡಿಯ ಕಡ್ಯಾದ ರೇಷ್ಮಾ ಹಾಗೂ ಯತೀಶ್‌ ದಂಪತಿಯ ನಾಲ್ಕನೇ ತರಗತಿಯ ಪುತ್ರ ಆರ್ಯ ಕಡ್ಯಾ ಹಾಗೂ ಪವಿತ್ರಾ ಹಾಗೂ ಮಹೇಶ್‌ ದಂಪತಿಯ ಎಂಟನೇ ತರಗತಿಯ ಪುತ್ರ ಹೃತಿಕ್‌ ಸುಳ್ಯ-ಗುತ್ತಿಗಾರು ಮಾರ್ಗವಾಗಿ ಸಂಚರಿಸುವ ಬಸ್‌‌ಗೆ ಹತ್ತಿದ್ದರು. ಈ ವೇಳೆ ನಿರ್ವಾಹಕ ಆರ್ಯಾಗೆ ಪೂರ್ಣ ಟಿಕೇಟ್‌ ನೀಡಿದ್ದಾರೆ.

ಸುಳ್ಯದಲ್ಲಿ ಬಸ್‌ ನಿರ್ವಾಹಕನ ದುರ್ವತನೆ ➤ ಸಮಸ್ಯೆ ಬಗೆಹರಿಸಿದ KSRTC ಯ ಸಹಾಯವಾಣಿ Read More »

ಕರಾವಳಿ, ಕರ್ನಾಟಕ

ನಿರ್ಮಾಪಕ ದಿನೇಶ್ ಗಾಂಧಿ ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ) newskadaba.com ಬೆಂಗಳೂರು ಅ. 31: ನಿರ್ಮಾಪಕ ದಿನೇಶ್ ಗಾಂಧಿ ಇಂದು ಮುಂಜಾನೆ ಹೃದಯಾಘಾತದಿಂದ ಅಸುನೀಗಿದ್ದಾರೆ. 52 ವರ್ಷದ ನಿರ್ಮಾಪಕ ಹಾಗೂ ನಿರ್ದೇಶಕ ಪತ್ನಿ ಪುತ್ರರನ್ನ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸುದೀಪ್ ಅಭಿನಯದ ವೀರ ಮದಕರಿ , ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಮಲ್ಲಿಕಾರ್ಜುನ ಹಾಗೂ ಹೂ ಚಿತ್ರವನ್ನು ನಿರ್ಮಿಸಿದ ಈ ನಿರ್ಮಾಪಕ , ನಟ ಸಿದ್ಧಾಂತ ಅಭಿನಯದ ಛತ್ರಪತಿ ಚಿತ್ರವನ್ನ ನಿರ್ದೇಶನ ಮಾಡಿದ್ದು , ಈಗ ಮತ್ತೊಂದು ಮಕ್ಕಳ ಚಿತ್ರ ನಿರ್ದೇಶನ ಮಾಡಲು ಕೂಡ

ನಿರ್ಮಾಪಕ ದಿನೇಶ್ ಗಾಂಧಿ ಹೃದಯಾಘಾತದಿಂದ ನಿಧನ Read More »

ಕರ್ನಾಟಕ

ಶಿರ್ವ: ಕಲ್ಲು ಸಾಗಾಟದ ಟೆಂಪೋ ಪಲ್ಟಿ

(ನ್ಯೂಸ್ ಕಡಬ) newskadaba.com ಶಿರ್ವ  ಅ. 31: ಸೈಂಟ್ ಮೇರಿಸ್ ಶಾಲೆ ಸಮೀಪ ಕಲ್ಲು ಸಾಗಾಟದ ಟೆಂಪೋವೊಂದು ಪಲ್ಟಿಯಾಗಿ ಚಾಲಕ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.   ಶಿರ್ವ ಕಡೆಯಿಂದ ಕಟಪಾಡಿ ಕಡೆಗೆ ಬರುತ್ತಿದ್ದ ಟೆಂಪೋ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದರಿಂದ ಟೆಂಪೋ ಚಾಲಕ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನಾ  ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.    

ಶಿರ್ವ: ಕಲ್ಲು ಸಾಗಾಟದ ಟೆಂಪೋ ಪಲ್ಟಿ Read More »

ಕರಾವಳಿ

ಕನ್ನಡ ರಾಜ್ಯೋತ್ಸವ ಆಚರಣೆಗೆ ಹೊಸ ಮಾರ್ಗಸೂಚಿ ಪ್ರಕಟ

(ನ್ಯೂಸ್ ಕಡಬ) newskadaba.com ಬೆಂಗಳೂರು ಅ. 31: ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ 100 ಜನಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ ಹಾಗೂ ಯಾವುದೇ ಮೆರವಣಿಗೆ ನಡೆಸುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೊರೊನಾ ಮಾರ್ಗ ಸೂಚಿ ಅನ್ವಯ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ರಾಜ್ಯೋತ್ಸವ ಆಚರಣೆಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದ್ದಾರೆ.     ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ. ಹಾಗಾಗಿ ನವೆಂಬರ್ 1 ರಂದು

ಕನ್ನಡ ರಾಜ್ಯೋತ್ಸವ ಆಚರಣೆಗೆ ಹೊಸ ಮಾರ್ಗಸೂಚಿ ಪ್ರಕಟ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಮಾಜಿ ಪ್ರಧಾನಿ ಇಂದಿರಾ ಗಾಂಧಿ 36ನೇ ಪುಣ್ಯತಿಥಿ ➤ ಪ್ರಿಯಾಂಕ ಗಾಂಧಿ, ರಾಹುಲ್‌ ಗಾಂಧಿ ಸ್ಮರಣೆ

(ನ್ಯೂಸ್ ಕಡಬ) newskadaba.com ವಿಟ್ಲ ಅ. 31: ದೇಶದ ಪ್ರಥಮ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರ 36ನೇ ಪುಣ್ಯ ತಿಥಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅವರು ಇಂದಿರಾ ಅವರನ್ನು ಸ್ಮರಿಸಿದ್ದಾರೆ.     1984ರ ಅಕ್ಟೋಬರ್‌ 31ರಂದು ತಮ್ಮ ಅಂಗ ರಕ್ಷಕರಿಂದಲೇ ಇಂದಿರಾ ಅವರು ಹತ್ಯೆಯಾಗಿದ್ದರು. ‘ಸುಳ್ಳಿನಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಸಾವಿನಿಂದ ಬದುಕಿನೆಡೆಗೆ..ಈ ಮಾತುಗಳ ಪ್ರಕಾರ ಬದುಕುವುದರ

ಮಾಜಿ ಪ್ರಧಾನಿ ಇಂದಿರಾ ಗಾಂಧಿ 36ನೇ ಪುಣ್ಯತಿಥಿ ➤ ಪ್ರಿಯಾಂಕ ಗಾಂಧಿ, ರಾಹುಲ್‌ ಗಾಂಧಿ ಸ್ಮರಣೆ Read More »

ರಾಷ್ಟ್ರೀಯ ನ್ಯೂಸ್

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯತಿಥಿ ➤ ಪ್ರಧಾನಿ ಮೋದಿ ಸ್ಮರಣೆ

(ನ್ಯೂಸ್ ಕಡಬ) newskadaba.com ನವದೆಹಲಿ ಅ. 31: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 36ನೇ ಪುಣ್ಯತಿಥಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದ್ದಾರೆ. ‘ನಮ್ಮ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜೀ ಅವರ ಪುಣ್ಯತಿಥಿ ಅಂಗವಾಗಿ ಅವರಿಗೆ ಗೌರವ ನಮನಗಳು.’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.   ಕಳೆದ ಭಾನುವಾರ ಆಕಾಶವಾಣಿಯ ಮಾಸಿಕ ‘ಮನ್‍ ಕೀ ಬಾತ್‍’ ಕಾರ್ಯಕ್ರಮದಲ್ಲಿ ನರೇಂದ್ರಮೋದಿ, ಇಂದಿರಾಗಾಂಧಿಯವರಿಗೆ ಗೌರವ ಸಲ್ಲಿಸಿದ್ದರು. ‘ಅಕ್ಟೋಬರ್ 31 ರಂದು ನಾವು ಭಾರತದ ಮಾಜಿ ಪ್ರಧಾನಿ

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯತಿಥಿ ➤ ಪ್ರಧಾನಿ ಮೋದಿ ಸ್ಮರಣೆ Read More »

ರಾಷ್ಟ್ರೀಯ ನ್ಯೂಸ್

ಅ.31ರ ಇಂದು ರಾತ್ರಿ ಅಪರೂಪದ ಬ್ಲೂ ಮೂನ್‌ ➤ ತಿಂಗಳಲ್ಲಿ ಎರಡು ಹುಣ್ಣಿಮೆ.

(ನ್ಯೂಸ್ ಕಡಬ) newskadaba.com ಮಂಗಳೂರು ಅ. 31:  ಖಗೋಳ ಕೌತುಕಗಳಲ್ಲಿ ಒಂದಾದ ಬ್ಲ್ಯೂಮೂನ್‌ ಅ.31ರ ಇಂದು ಸಂಭವಿಸಲಿದೆ. ಅಂದರೆ ಇದು ಈ ತಿಂಗಳಲ್ಲಿ ಬರುವ ಎರಡನೇ ಹುಣ್ಣಿಮೆ.ಮೊದಲ ಹುಣ್ಣಿಮೆ ಅ.1ರಂದು ಸಂಭವಿಸಿತ್ತು. ಗ್ರೆಗೋರಿಯನ್‌ ಕ್ಯಾಲೆಂಡರ್‌ ಪ್ರಕಾರ ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆ (ಲೂನಾರ್‌ ಮಂಥ್‌) ನಡುವಿನ ಅವಧಿ 29ದಿನ, 44 ನಿಮಿಷ 38 ಸೆಕೆಂಡ್‌ ಆಗಿರುತ್ತದೆ. ಇದರಲ್ಲಿ 30 ದಿನ ತುಂಬಲು ಬಾಕಿ ಉಳಿದ ಸಮಯ ಸೇರಿ ಸೇರಿ ಕೊನೆಗೊಂದು ತಿಂಗಳಲ್ಲಿ ಎರಡು ಹುಣ್ಣಿಮೆ ಸಂಭವಿಸುತ್ತದೆ. ಇದನ್ನೇ

ಅ.31ರ ಇಂದು ರಾತ್ರಿ ಅಪರೂಪದ ಬ್ಲೂ ಮೂನ್‌ ➤ ತಿಂಗಳಲ್ಲಿ ಎರಡು ಹುಣ್ಣಿಮೆ. Read More »

ಕರಾವಳಿ, ಕರ್ನಾಟಕ

ಉಚ್ಚಿಲ ಕಡಲತೀರದಲ್ಲಿ ಮಹಿಳೆ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಉಚ್ಚಿಲ ಅ. 31: ಸೋಮೇಶ್ವರ ಸಮೀಪದ ಉಚ್ಚಿಲ ಕಡಲತೀರದಲ್ಲಿ ಶುಕ್ರವಾರ ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ಸೋಮೇಶ್ವರದ ಸಂಕೋಳಿಗೆ ನಿವಾಸಿ ಉಷಾ(60)ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಮಹಿಳೆ ಕಳೆದ ಕೆಲ ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದಳೆನ್ನಲಾಗಿದೆ.   ಮಾನಸಿಕವಾಗಿ ಜರ್ಜರಿತಗೊಂಡು ಅತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಉಳ್ಳಾಲ ಪೊಲೀಸರು ಮೃತದೇಹದ ಪರಿಶೀಲನೆ ನಡೆಸಿದ್ದಾರೆ.  

ಉಚ್ಚಿಲ ಕಡಲತೀರದಲ್ಲಿ ಮಹಿಳೆ ಮೃತದೇಹ ಪತ್ತೆ Read More »

ಕರಾವಳಿ
Scroll to Top