ಕಡಬ ನ್ಯೂಸ್

ಜೀವ ರಕ್ಷಣೆಗಾಗಿ ದಾರಿ ಬಿಡಿ ಸಾರ್ವಜನಿಕರ ತುರ್ತು ಗಮನಕ್ಕೆ ➤ ಪುತ್ತೂರಿನಿಂದ ಬೆಂಗಳೂರಿಗೆ ಅಂಬುಲೆನ್ಸ್ ಎಮರ್ಜೆನ್ಸಿ ಅಲರ್ಟ್

(ನ್ಯೂಸ್ ಕಡಬ) newskadaba.com ಪುತ್ತೂರು ಡಿ. 02: ಶ್ವಾಸಕೋಶದ ತುರ್ತು ಶಸ್ತ್ರಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯಿಂದ ಸುಹಾನ ಎಂಬ 22 ವರ್ಷದ ರೋಗಿಯನ್ನು ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ಇಂದು ಬೆಳಿಗ್ಗೆ 11 ಘಂಟೆಗೆ ಬೆಂಗಳೂರು ಕೆಎಂಸಿಸಿ ಆಂಬುಲೆನ್ಸ್ ನಲ್ಲಿ ಎಮರ್ಜೆನ್ಸಿ ಅಲರ್ಟ್ ಮೂಲಕ ಕರೆ ತರಲಾಗುತ್ತಿದೆ ಆದ್ದರಿಂದ ಈ ರಸ್ತೆಯ ಮೂಲಕ ಹಾದು ಹೋಗುವ ಎಲ್ಲಾ ವಾಹನ ಚಾಲಕರು ಹಾಗೂ ಸಾರ್ವಜನಿಕರ ಸಹಾಯ ಬೇಡಿಕೊಳ್ಳುತ್ತಿದ್ದೇವೆ  ಜನ ಸ್ನೇಹಿಗಳು ಅಂಬುಲೆನ್ಸ್ ಹಾದು ಹೋಗುವಾಗ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿ ವಿನಂತಿಸಿಕೊಂಡಿದ್ದಾರೆ. […]

ಜೀವ ರಕ್ಷಣೆಗಾಗಿ ದಾರಿ ಬಿಡಿ ಸಾರ್ವಜನಿಕರ ತುರ್ತು ಗಮನಕ್ಕೆ ➤ ಪುತ್ತೂರಿನಿಂದ ಬೆಂಗಳೂರಿಗೆ ಅಂಬುಲೆನ್ಸ್ ಎಮರ್ಜೆನ್ಸಿ ಅಲರ್ಟ್ Read More »

ಕರಾವಳಿ

ಉಡುಪಿ: ಇಬ್ಬರು ಪುತ್ರಿಯರಿಗೆ ಲೈಂಗಿಕ ಹಲ್ಲೆ ಪ್ರಕರಣ ➤ ತಂದೆಗೆ ಜೀವಾವಧಿ ಜೈಲು ಶಿಕ್ಷೆ

(ನ್ಯೂಸ್ ಕಡಬ) newskadaba.com ಉಡುಪಿ ಡಿ. 01: ಪುತ್ರಿಯರಿಬ್ಬರ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಆರೋಪ ಹೊತ್ತಿದ್ದ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿ ಉಡುಪಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ. ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ (FTSC-1) ನ್ಯಾಯಾಧೀಶರಾದ ಯಾದವ್ ವನಮಾಲಾ ಆನಂದರಾವ್ ಈ ಆದೇಶ ಹೊರಡಿಸಿದ್ದಾರೆ. ಆರೋಪಿಯ ಪತ್ನಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಕಿರಿಯ ಮಗಳಿಗೆ ಲೈಂಗಿಕ ಹಲ್ಲೆ ನಡೆಸುತ್ತಿದ್ದ. ಹಿರಿಯ ಮಗಳು ಇದಕ್ಕೆ ವಿರೋಧಿಸಿದ್ದಳು. ನಂತರದಲ್ಲಿ ಪತ್ನಿ

ಉಡುಪಿ: ಇಬ್ಬರು ಪುತ್ರಿಯರಿಗೆ ಲೈಂಗಿಕ ಹಲ್ಲೆ ಪ್ರಕರಣ ➤ ತಂದೆಗೆ ಜೀವಾವಧಿ ಜೈಲು ಶಿಕ್ಷೆ Read More »

ಕರಾವಳಿ, ಕ್ರೈಮ್ ನ್ಯೂಸ್

” ಶ್ರೀ ಕೃಷ್ಣ ಮಠ ನಾಮಫಲಕದಲ್ಲಿ ಕನ್ನಡ ಹೊರಗಿಟ್ಟದ್ದು ಅಪರಾಧ” ➤ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ

(ನ್ಯೂಸ್ ಕಡಬ) newskadaba.com ಉಡುಪಿ ಡಿ. 01: ಶ್ರೀ ಕೃಷ್ಣ ಮಠದ ನಾಮಫಲಕದಲ್ಲಿ ಕನ್ನಡವನ್ನು ತೆಗೆದು ಹಾಕಿದ್ದು ಸೂಕ್ತ ಕ್ರಮವಲ್ಲ. ಕನ್ನಡ ಸಾಹಿತ್ಯ ಪರಿಷತ್ ಇದನ್ನು ಉಗ್ರವಾಗಿ ಖಂಡಿಸುತ್ತದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಿಳಿಸಿದ್ದಾರೆ. ಕನ್ನಡ ನಾಡಿನಲ್ಲಿ ಮೊದಲು ಕನ್ನಡಕ್ಕೆ ಆದ್ಯತೆ. ನಾಮಫಲಕ ದಲ್ಲಿ ಮೊದಲು ಕನ್ನಡ ಇರಬೇಕು. ಅನಂತರ ಇತರ ಭಾಷೆ, ಒಂದು ಧಾರ್ಮಿಕ ಸಂಸ್ಥೆಯು ಭಾಷೆಗಳ ನಡುವೆ ಕಂದಕ ಸೃಷ್ಟಿಸುವುದು ಸರಿಯಲ್ಲ. ನಾಮ ಫಲಕದ ಈ

” ಶ್ರೀ ಕೃಷ್ಣ ಮಠ ನಾಮಫಲಕದಲ್ಲಿ ಕನ್ನಡ ಹೊರಗಿಟ್ಟದ್ದು ಅಪರಾಧ” ➤ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ Read More »

ಕರಾವಳಿ

ನಗರದಲ್ಲಿ ಗೋಡೆ ಬರಹ ಹಿಂದಿನ ಷಡ್ಯಂತರ ಬಯಲಿಗೆಳೆಯಲು SDPI ಆಗ್ರಹ

(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 01: ಇತ್ತೀಚೆಗೆ ನಗರದಲ್ಲಿ ದುಷ್ಕರ್ಮಿಗಳು ಲಷ್ಕರ್ ಉಗ್ರರ ಪರ ಮತ್ತು ವಿವಾದಾತ್ಮಕ ಗೋಡೆ ಬರಹಗಳನ್ನು ಬರೆದ ಘೋರ ಕೃತ್ಯವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ತೀವ್ರವಾಗಿ ಖಂಡಿಸುತ್ತದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ. ಅವರು ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಈ ವಿಷಯ ತಿಳಿಸಿದರು. ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ ಬಳಿಕ ರಸ್ತೆಯ ಗೋಡೆಯೊಂದರಲ್ಲಿ ಮೊದಲಿಗೆ ಉಗ್ರರ ಪರ ಬರಹ ಕಂಡು ಬಂದಿತ್ತು.

ನಗರದಲ್ಲಿ ಗೋಡೆ ಬರಹ ಹಿಂದಿನ ಷಡ್ಯಂತರ ಬಯಲಿಗೆಳೆಯಲು SDPI ಆಗ್ರಹ Read More »

ಕರಾವಳಿ

ಪಣಂಬೂರು ಕಡಲತೀರದಲ್ಲಿ ಸ್ವಚ್ಛತಾ ಅಭಿಯಾನ

(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 01: ಜಿಲ್ಲಾ ಗೃಹರಕ್ಷಕ ದಳ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರ ರರಕ್ಷಣಾ ತಂಡದ ವತಿಯಿಂದ ನವೆಂಬರ್ 29ರಂದು ಕಡಲ ತೀರ ಸ್ವಚ್ಛತಾ ಅಭಿಯಾನವು ಪಣಂಬೂರು ಬೀಚ್‍ನಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿ ಗೋಪಾಲಕೃಷ್ಣ ದೇಲಂಪಾಡಿ ಮಾತನಾಡಿ ಕೋವಿಡ್-19 ರೋಗ ಹರಡುವ ಸಂದರ್ಭ ಕೆಲಸ ನಿರ್ವಹಿಸುವ ಗೃಹರಕ್ಷಕರಿಗೆ ಆರೋಗ್ಯದೃಷ್ಟಿಯಿಂದ ಈ ಶಿಬಿರ ಹೆಚ್ಚು ಉಪಯುಕ್ತ ಮತ್ತು ಗೃಹರಕ್ಷಕರ ರಕ್ಷಣಾ ವ್ಯವಸ್ಥೆಯನ್ನು ವೃದ್ಧಿಸಿ, ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದರು.  ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗಳಾದ ಸುನಿಲ್

ಪಣಂಬೂರು ಕಡಲತೀರದಲ್ಲಿ ಸ್ವಚ್ಛತಾ ಅಭಿಯಾನ Read More »

ಕರಾವಳಿ

ವಿಟ್ಲ: ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com ವಿಟ್ಲ, ಡಿ. 01: ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ಸಮೀಪದ ಪರ್ಲೊಟ್ಟು ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿ ಪರಾರಿಯಾದ ಘಟನೆ ಇಂದು ಬೆಳಕಿಗೆ ಬಂದಿದೆ.     ಉಮ್ಮಾರು ಫಾರುಕ್ ರವರ ಮನೆಯಲ್ಲಿ ಈ ಕಳ್ಳತನ ಪ್ರಕರಣ ನಡೆದಿರುವುದಾಗಿ ಮನೆ ಮಂದಿ ತಿಳಿಸಿದ್ದಾರೆ. ಉಮಾರು ಫಾರುಕ್ ರವರು ಮಲಗಿದ್ದ ಕೋಣೆಗೆ ಪ್ರವೇಶಿಸಿದ ಕಳ್ಳರು ಅಲ್ಲಿದ್ದ ಕಪಾಟಿನಲ್ಲಿರಿಸಲಾಗಿದ್ದ ಚಿನ್ನಾಭರಣವನ್ನು ದೋಚಿ ಹಿಂಭಾಗಿಲ ಮೂಲಕ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸ್

ವಿಟ್ಲ: ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು Read More »

ಕರಾವಳಿ

ಎಲಿಮಲೆ: ಗೋ ಹತ್ಯೆ ನಿಷೇದ ಜಾರಿಗೆ ಒತ್ತಾಯಿಸಿ ಸಿಎಂವರಿಗೆ ಪಂಚಾಯತ್ ಮೂಲಕ ಮನವಿ

(ನ್ಯೂಸ್ ಕಡಬ) newskadaba.com ಎಲಿಮಲೆ, ಡಿ. 01: ವಿಶ್ವ ಹಿಂದೂ ಪರಿಷತ್ ಭಜರಂಗದಳ ಅಯೋಧ್ಯೆ ಶಾಖೆ ಎಲಿಮಲೆ ಇದರ ವತಿಯಿಂದ ಗೋ ಹತ್ಯೆ ನಿಷೇಧ ಜಾರಿಗೆ ಒತ್ತಾಯಿಸಿ ಮುಖ್ಯಮಂತ್ರಿಯವರಿಗೆ ಪಂಚಾಯತ್ ಮೂಲಕ ಮನವಿ ಸಲ್ಲಿಸಲಾಯಿತು.   ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪುರುಷೋತ್ತಮ್ಮ ಚಿತ್ತಡ್ಕ, ಕಿರಣ್ ಗುಡ್ಡೆಮನೆ, ಭಜರಂಗದಳ ಗೋ ರಕ್ಷಾ ಪ್ರಮುಖ್ ನಾಗರಾಜ್ ಕೇಪಳಕಜೆ, ಸತೀಶ್ ಗುಡ್ಡನಮನೆ, ಧರ್ಮಪಾಲ ಸುಳ್ಳಿ, ಓಂ ಪ್ರಸಾದ್ ಕಜೆ, ದೀಕ್ಷಿತ್ ಚಿತ್ತಡ್ಕ, ನಿತಿನ್ ಗಟ್ಟಿಗಾರು, ತನುಷ್ ಕುಕ್ಕೇಟಿ, ಕಾರ್ಯಕರ್ತರು ಹಾಗೂ ಸದಸ್ಯರು

ಎಲಿಮಲೆ: ಗೋ ಹತ್ಯೆ ನಿಷೇದ ಜಾರಿಗೆ ಒತ್ತಾಯಿಸಿ ಸಿಎಂವರಿಗೆ ಪಂಚಾಯತ್ ಮೂಲಕ ಮನವಿ Read More »

ಕರಾವಳಿ

ಕಡಬ ಪುತ್ತೂರು ತಾಲೂಕಿನಲ್ಲಿ ಇಂದು 4 ಮಂದಿಯಲ್ಲಿ ಕೊರೋನಾ ದೃಢ

(ನ್ಯೂಸ್ ಕಡಬ) newskadaba.com ಕಡಬ, ಡಿ. 01: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಇಂದು 4 ಮಂದಿಯಲ್ಲಿ ಕರೋನಾ ದೃಢಪಟ್ಟಿದೆ.     ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ 63 ವರ್ಷದ ಮಹಿಳೆಯಲ್ಲಿ ಕೊರೋನ ದೃಢಪಟ್ಟಿದೆ. ಇನ್ನು ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ 33 ವರ್ಷದ ವ್ಯಕ್ತಿ, 56 ವರ್ಷದ ಮಹಿಳೆ, ನೆಟ್ಟಣಿಗೆ ಮುಡ್ನೂರಿನ 29 ವರ್ಷದ ಯುವಕನಲ್ಲಿ ಕೊರೋನಾ ಪತ್ತೆಯಾಗಿದೆ.  

ಕಡಬ ಪುತ್ತೂರು ತಾಲೂಕಿನಲ್ಲಿ ಇಂದು 4 ಮಂದಿಯಲ್ಲಿ ಕೊರೋನಾ ದೃಢ Read More »

ಕರಾವಳಿ

ಮಂಗಳೂರು :ಮೀನುಗಾರಿಕಾ ಬೋಟು ದುರಂತ ➤ ಇಬ್ಬರ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 01: ಉಳ್ಳಾಲದ ಪಶ್ಚಿಮ ಭಾಗದ ಸಮುದ್ರದಲ್ಲಿ ಸೋಮವಾರ ಸಂಜೆ ಸಂಭವಿಸಿದ ಬೋಟ್ ದುರಂತದ ವೇಳೆ ನಾಪತ್ತೆಯಾಗಿದ್ದ ಆರು ಮಂದಿ ಮೀನುಗಾರರ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿದೆ. ತೀವ್ರ ರಕ್ಷಣಾ ಕಾರ್ಯಾಚರಣೆಯ ಬಳಿಕ ಇಬ್ಬರ ಮೃತದೇಹವನ್ನು ಇಂದು ಮಧ್ಯಾಹ್ನದ ವೇಳೆ ಮೇಲೆತ್ತಲಾಗಿದೆ. ಮೃತದೇಹವನ್ನು ಮಂಗಳೂರಿನ ದಕ್ಕೆಗೆ ತರಲಾಗಿದೆ. ಮಂಗಳೂರಿನಲ್ಲಿ ಮೀನುಗಾರಿಕೆಗೆ ಹೋಗಿ ವಾಪಸ್ ಆಗುತ್ತಿದ್ದ ವೇಳೆ ದೋಣಿ ಮಗುಚಿದೆ. ಪರಿಣಾಮ 6 ಮಂದಿ ನಾಪತ್ತೆಯಾಗಿದ್ದರು. ಅವರಲ್ಲಿ ಇಬ್ಬರ ಮೃತ ದೇಹಗಳು ಪತ್ತೆಯಾಗಿದೆ.ಈ ಘಟನೆ

ಮಂಗಳೂರು :ಮೀನುಗಾರಿಕಾ ಬೋಟು ದುರಂತ ➤ ಇಬ್ಬರ ಮೃತದೇಹ ಪತ್ತೆ Read More »

ಕರಾವಳಿ

‘ಸ್ಯಾಂಡ್ ಬಜಾರ್ ಆ್ಯಪ್’ ನಲ್ಲಿ ಮರಳು ಬುಕ್ಕಿಂಗ್

(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 01: ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ ಮೀನುಗಾರಿಕಾ ದೋಣಿಗಳ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುವ, 13 ಮರಳು ದಿಬ್ಬಗಳನ್ನು ತೆರವುಗೊಳಿಸಿ ಇದುವರೆಗೆ 80 ಮಂದಿಗೆ ತಾತ್ಕಾಲಿಕ ಪರವಾನಿಗೆಯನ್ನು ವಿತರಿಸಲಾಗಿದ್ದು ತೆರವುಗೊಳಿಸಿದ ಮರಳನ್ನು ‘ಸ್ಯಾಂಡ್ ಬಜಾರ್ ಆ್ಯಪ್’ ಮೂಲಕ ಜಿಲ್ಲೆಯ ಪರಿಮಿತಿಯೊಳಗೆ ಸಾರ್ವಜನಿಕರಿಗೆ ಹಾಗೂ ಸರ್ಕಾರಿ ಮತ್ತು ಇತರೆ ಕಾಮಗಾರಿಗಳಿಗೆ ಮರಳನ್ನು ಪೂರೈಸಲು ನವೆಂಬರ್ 27 ರಿಂದ ಚಾಲನೆ ನೀಡಲಾಗಿದ್ದು, ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರು, ಗ್ರಾಹಕರು ‘ಸ್ಯಾಂಡ್

‘ಸ್ಯಾಂಡ್ ಬಜಾರ್ ಆ್ಯಪ್’ ನಲ್ಲಿ ಮರಳು ಬುಕ್ಕಿಂಗ್ Read More »

ಕರಾವಳಿ
Scroll to Top