ಕಡಬ ನ್ಯೂಸ್

ಬೆಳ್ಳಾರೆ : ಚುನಾವಣಾ ಬಹಿಷ್ಕಾರದ ಬ್ಯಾನರ್ ಹಾಕಿದ ಸ್ಥಳೀಯರು

(ನ್ಯೂಸ್ ಕಡಬ) newskadaba.com ಬೆಳ್ಳಾರೆ ಡಿ. 02 : ರಾಜ್ಯದಲ್ಲಿ ಎರಡು ಹಂತದ ಗ್ರಾಮ ಪಂಚಾಯತ್​ ಚುನಾವಣೆ ಘೋಷಣೆ ಆಗಿದೆ. ಈ ಹಿನ್ನೆಲೆ ಮೂಲ ಸೌಕರ್ಯ ಮರೀಚಿಕೆ ಆಗಿರುವ ಗ್ರಾಮಗಳು ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿವೆ. ಸುಳ್ಯ ತಾಲೂಕಿನ ಬೆಳ್ಳಾರೆಯ ತಡಗಜೆಯಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿ ಓಟ್​ ಕೇಳಲು ಬರುವವರಿಗೆ ಪರೋಕ್ಷವಾಗಿ ಅಣುಕಿಸುವಂತೆ ಮಾಡಿದ್ದಾರೆ.ಕಳೆದ 25 ವರ್ಷಗಳಿಂದ ಬೆಳ್ಳಾರೆ ಗ್ರಾಮದ 3ನೇ ವಾರ್ಡ್​​ನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಬೀದಿ […]

ಬೆಳ್ಳಾರೆ : ಚುನಾವಣಾ ಬಹಿಷ್ಕಾರದ ಬ್ಯಾನರ್ ಹಾಕಿದ ಸ್ಥಳೀಯರು Read More »

ಕರಾವಳಿ

ಕಡಬದಲ್ಲಿ ಇಂದು ಶೂನ್ಯ ಕೊರೋನಾ

(ನ್ಯೂಸ್ ಕಡಬ) newskadaba.com ಕಡಬ, ಡಿ. 02: ಕಡಬ ತಾಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯಂತೆ ಇಂದು ಶೂನ್ಯ ಕೊರೋನಾ.     ಆದರೇ ಪುತ್ತೂರು ತಾಲೂಕಿನಲ್ಲಿ ಇಂದು 2 ಮಂದಿಗೆ ಕೊರೋನಾ ಪತ್ತೆಯಾಗಿದೆ. ಬನ್ನೂರಿನ 43 ವರ್ಷದ ವ್ಯಕ್ತಿ, ಬೆಟ್ಟಂಪಾಡಿಯ 32 ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢಪಟ್ಟಿದೆ.  

ಕಡಬದಲ್ಲಿ ಇಂದು ಶೂನ್ಯ ಕೊರೋನಾ Read More »

ಕರಾವಳಿ

ಮಂಗಳೂರು ಬೋಟ್ ದುರಂತ: ಉಳಿದ ಮೂವರ ಶವವೂ ಪತ್ತೆ ➤ ಸಚಿವರಿಂದ ಮೃತದೇಹಗಳ ಅಂತಿಮ ದರ್ಶನ

(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 02 : ಇಂದು ಮತ್ತೆ ಕಾರ್ಯಾಚರಣೆ ಪ್ರಾರಂಬಿಸಿದ ಬಳಿಕ ಬೆಳಗ್ಗೆ ಚಿಂತನ್ ಮತ್ತು ಅನ್ಸಾರ್ ರ ಶವವು ಪತ್ತೆಯಾಗಿತ್ತು. ಮಧ್ತಾಹ್ನ ದ ವೇಳೆಗೆ ಜಿಯಾವುಲ್ಲಾ ಮತ್ತು ಹಸೈನಾರ್ ರವರ ಶವ ಪತ್ತೆಯಾಗಿದೆ. ಈ ಮೂಲಕ ಕೋಸ್ಟ್ ಗಾರ್ಡ್ ಹಾಗೂ ಮೀನುಗಾರಿಕಾ ಇಲಾಖೆಯ ಜಂಟಿ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ಮೃತರೆಲ್ಲರೂ ಬೊಕ್ಕಪಟ್ಟ ಹಾಗೂ ಬೋಳಾರು ನಿವಾಸಿಗಳಾಗಿದ್ದು, ಇದೀಗಾ ಶವಗಳನ್ನು ವೆನ್ ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ‘ಶ್ರೀರಕ್ಷಾ’ ಹೆಸರಿನ

ಮಂಗಳೂರು ಬೋಟ್ ದುರಂತ: ಉಳಿದ ಮೂವರ ಶವವೂ ಪತ್ತೆ ➤ ಸಚಿವರಿಂದ ಮೃತದೇಹಗಳ ಅಂತಿಮ ದರ್ಶನ Read More »

ಕರಾವಳಿ

ಮೀನುಗಾರಿಕಾ ದೋಣಿ ದುರಂತ ➤ ಶಾಸಕ ವೇದವ್ಯಾಸ್ ಕಾಮತ್ ಸಾಂತ್ವನ

(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 02 : ಧಕ್ಕೆಯ ಅಳಿವೆ ಬಾಗಿಲಿನಲ್ಲಿ ಸಂಭವಿಸಿದ ಮೀನುಗಾರಿಕಾ ದೋಣಿ ದುರಂತದಿಂದ ಮೃತಪಟ್ಟವರಿಗೆ ಸರಕಾರದಿಂದ ಪರಿಹಾರ ಧನ ಘೋಷಿಸುವ ಕುರಿತು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.   ಬಂದರಿಗೆ ಭೇಟಿ ನೀಡಿದ ವೇಳೆ ಮಾತನಾಡಿದ‌ ಶಾಸಕ ಕಾಮತ್, ಬೋಟ್ ದುರಂತಕ್ಕೀಡಾಗಿರುವ‌ ವಿಚಾರ ತಿಳಿದು ಮನಸ್ಸಿಗೆ ಅತೀವ ನೋವಾಗಿದೆ. ವಿಚಾರ ತಿಳಿದ ತಕ್ಷಣವೇ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಇಬ್ಬರ ಮೃತ ದೇಹ ಪತ್ತೆಯಾಗಿದ್ದು

ಮೀನುಗಾರಿಕಾ ದೋಣಿ ದುರಂತ ➤ ಶಾಸಕ ವೇದವ್ಯಾಸ್ ಕಾಮತ್ ಸಾಂತ್ವನ Read More »

ಕರಾವಳಿ

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಡಿ. 02: ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ 2019-20 ನೇ ಸಾಲಿನ ಸಾಧನೆಗೆ ಉತ್ತಮ ಸಹಕಾರ ಸಂಘ ಪ್ರಶಸ್ತಿಯು ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಲಭಿಸಿದೆ.   ನ.27 ರಮದು ಮಂಗಳೂರಿನಲ್ಲಿ ನಡೆದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷ ಎನ್.ಎಂ. ರಾಜೇಂದ್ರ ಕುಮಾರ್ ರವರು ಸಂಘದ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಆಳ್ವರವರನ್ನು ಪ್ರಶಸ್ತಿ

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ Read More »

ಕರಾವಳಿ

ಐತ್ತೂರು :ಅರಣ್ಯ ಪ್ರದೇಶದಲ್ಲಿ ಹುಲ್ಲು ಹೆರೆಯುತ್ತಿದ್ದವರ ವಾಹನ ಕೊಂಡೊಯ್ದ ಅರಣ್ಯಾಧಿಕಾರಿಗಳು.!

(ನ್ಯೂಸ್ ಕಡಬ) newskadaba.com ಐತ್ತೂರು, ಡಿ. 02: ಅರಣ್ಯ ಪ್ರದೇಶದ ಬದಿಯಲ್ಲಿ ದೀಕ್ಷಿತಾ ಎಂಬವರು ಹುಲ್ಲು ಹೆರೆಯುತ್ತಿದ್ದ ವೇಳೆ ಐತ್ತೂರು ಗ್ರಾಮದ ಮೂಜೂರುಕಟ್ಟೆ ಎಂಬಲ್ಲಿಗೆ ಆಗಮಿಸಿದ ಅರಣ್ಯಧಿಕಾರಿಗಳು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ 800 ಕಾರನ್ನು ವಶಕ್ಕೆ ಪಡೆದುಕೊಂಡು ಅರಣ್ಯಧಿಕಾರಿಗಳ ಕಛೇರಿಗೆ ತಂದಿರಿಸಿದ್ದಾರೆ.     ಈ ಬಗ್ಗೆ ನ್ಯಾಯಕ್ಕಾಗಿ ಆಗ್ರಹಿಸಿ ಸ್ಥಳೀಯರು ಅರಣ್ಯ ಅಧಿಕಾರಿಗಳ ಕಛೇರಿಯ ಎದುರು ದಿಡೀರ್ ಪ್ರತಿಭಟನೆ ಆರಂಭಿಸಿದ್ದಾರೆ .  

ಐತ್ತೂರು :ಅರಣ್ಯ ಪ್ರದೇಶದಲ್ಲಿ ಹುಲ್ಲು ಹೆರೆಯುತ್ತಿದ್ದವರ ವಾಹನ ಕೊಂಡೊಯ್ದ ಅರಣ್ಯಾಧಿಕಾರಿಗಳು.! Read More »

ಕರಾವಳಿ

ತೊಡಿಕಾನ: ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಗುದ್ದಲಿ ಪೂಜೆ

(ನ್ಯೂಸ್ ಕಡಬ) newskadaba.com ತೊಡಿಕಾನ, ಡಿ. 02: ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ ಮತ್ಸ್ಯ ತೀರ್ಥ ನದಿ ತಡೆಗೋಡೆಗೆ ಗುದ್ದಲಿ ಪೂಜೆ ನ.27 ರಂದು ನಡೆಯಿತು.     ಕಾರ್ಯಕ್ರಮದಲ್ಲಿ ಶಾಸಕ ಎಸ್.ಅಂಗಾರ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಯ.ಎಂ. ಹರೀಶ್ ಕಂಜಿಪಿಲಿ, ತಾ.ಪಂ. ಸದಸ್ಯೆ ಶ್ರೀಮತಿ ಪುಷ್ಪಾ ಮೇದಪ್ಪ. ದೀಪಕ್ ಕುತ್ತಮೊಟ್ಟೆ, ಸಂತೋಷ್ ಕುತ್ತಮೊಟ್ಟೆ, ಆನಂದ ಕಲ್ಲಗದ್ದೆ, ಕೇಶವ ಕೊಳಲುಮೂಲೆ, ಉಮಾಶಂಕರ, ಜನಾರ್ದನ, ಕೆ.ಕೆ ನಾರಾಯಣ, ಬಾಳಕೃಷ್ಣ ಕೆ.ಕೆ. ಮೊದಲಾದವರು ಉಪಸ್ಥಿತರಿದ್ದರು.  

ತೊಡಿಕಾನ: ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಗುದ್ದಲಿ ಪೂಜೆ Read More »

ಕರಾವಳಿ

ಕುಲ್ಕುಂದ: ಸಾಂಕೇತಿಕ ಜಾನುವಾರು ಜಾತ್ರೆ ಆಚರಣೆ

(ನ್ಯೂಸ್ ಕಡಬ) newskadaba.com ಕುಲ್ಕುಂದ, ಡಿ. 02: ಕುಲ್ಕುಂದ ಜಾನುವಾರು ಜಾತ್ರೆಯನ್ನು ಸಾಂಕೇತಿಕವಾಗಿ ಕುಲ್ಕುಂದ ಬಸವನಮೂಲೆಯ ಬಸವೇಶ್ವರ ದೇವಸ್ಥಾನದಲ್ಲಿ ನ.30 ರಂದು ಆಚರಿಸಲಾಯಿತು.     ಬೆಳಿಗ್ಗೆ ಗೋ ಪೂಜೆ ಕಾರ್ಯಕ್ರಮ ನಡೆಸಲಾಯಿತು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯವರು, ಬಸವೇಶ್ವರ ದೇವಸ್ಥಾನದ ಆಡಳಿತ ಮಮಡಳಿ ಅಧ್ಯಕ್ಷ ಗಿರಿಧರ ಸ್ಕಂದ, ಸದಸ್ಯರಾದ ರಾಜೇಶ್ ಕುಲ್ಕುಂದ, ಚಂದ್ರಶೇಖರ ಬಸವನ ಮೂಲೆ, ಬಾಲಕೃಷ್ಣ, ರವೀಂದ್ರ ಕುಮಾರ್ ರುದ್ರಪ್ಪಾದ ಹರೀಶ್ ಇಂಜಾಡಿ. ರವಿಕಕ್ಕೆಪದವು, ರಿಕೇಶ್, ಗೋಪಾಲ ಎಣ್ಣೆಮಜಲು ಮತ್ತಿತರರು ಉಪಸ್ಥಿರತರಿದ್ದರು. ಪೂಜ ಕಾರ್ಯಕ್ರಮವನ್ನು

ಕುಲ್ಕುಂದ: ಸಾಂಕೇತಿಕ ಜಾನುವಾರು ಜಾತ್ರೆ ಆಚರಣೆ Read More »

ಕರಾವಳಿ

ಕುಕ್ಕೆ ಸುಬ್ರಹ್ಮಣ್ಯ :ಈ ಬಾರಿ ಕುಕ್ಕೆ ಸುಬ್ರಹ್ಮಣ್ಯನ ಬ್ರಹ್ಮರಥ ಎಳೆಯಲು ಭಕ್ತರಿಗಿಲ್ಲ ಅವಕಾಶ

(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 02 : ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ಬಾರಿ ರಥೋತ್ಸವದಲ್ಲಿ ಭಕ್ತರ ಪಾಲ್ಗೊಳ್ಳುವಿಕೆಗೆ ನಿಷೇಧ ಹೇರಲಾಗಿದೆ. ಪ್ರತೀ ವರ್ಷ ಚಂಪಾಷಷ್ಠಿಯಂದು ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯುತ್ತಿದ್ದು, ಈ ರಥೋತ್ಸವದಲ್ಲಿ ರಥ ಎಳೆಯಲು ಭಕ್ತರಿಗೂ ಅವಕಾಶವನ್ನು ಕಲ್ಪಿಸಲಾಗುತ್ತಿತ್ತು. ಆದರೆ, ಈ ಬಾರಿ ಕೋವಿಡ್-19 ಹಿನ್ನಲೆಯಲ್ಲಿ ಭಕ್ತರಿಗೆ ರಥ ಎಳೆಯುವ ಅವಕಾಶವನ್ನು ನಿರಾಕರಿಸಲಾಗಿದೆ. ಕ್ಷೇತ್ರದ ಸಂಪ್ರದಾಯಕ್ಕೆ ಯಾವುದೇ ರೀತಿಯ ಧಕ್ಕೆ ಬಾರದ ರೀತಿಯಲ್ಲಿ ಈ ಬಾರಿ ಚಂಪಾಷಷ್ಠಿ ಮಹೋತ್ಸವ ನಡೆಸಲು

ಕುಕ್ಕೆ ಸುಬ್ರಹ್ಮಣ್ಯ :ಈ ಬಾರಿ ಕುಕ್ಕೆ ಸುಬ್ರಹ್ಮಣ್ಯನ ಬ್ರಹ್ಮರಥ ಎಳೆಯಲು ಭಕ್ತರಿಗಿಲ್ಲ ಅವಕಾಶ Read More »

ಕರಾವಳಿ

ಬೀದಿ ಬದಿ ವ್ಯಾಪಾರಿಗಳು ಸ್ವಾವಲಂಬಿಗಳಾಗಿ ಅಭಿವೃದ್ಧಿಯ ಜೀವನ ನಡೆಸಿ ➤ ನಳಿನ್ ಕುಮಾರ್ ಕಟೀಲ್

(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 02 : ಕೋವಿಡ್‍ನಿಂದ ದೇಶದಾದ್ಯಾಂತ ಲಾಕ್‍ಡೌನ್ ಜಾರಿ ಮಾಡಿದ ಹಿನ್ನಲೆ ವ್ಯಾಪಾರಿಗಳು ಉದ್ಯೋಗವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಮತ್ತೆ ವ್ಯಾಪಾರ ಕೈಗೊಳ್ಳಲು ತುರ್ತು ಆರ್ಥಿಕ ಬಂಡವಾಳವನ್ನು ಕಿರುಸಾಲ ರೂಪದಲ್ಲಿ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ದ.ಕ ಜಿಲ್ಲಾ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ತಿಳಿಸಿದರು. ಅವರು ಇಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ದ.ಕ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ , ನಗರಸಭೆ, ಪುರಸಭೆ ಮತ್ತು ಪಟ್ಟಣ

ಬೀದಿ ಬದಿ ವ್ಯಾಪಾರಿಗಳು ಸ್ವಾವಲಂಬಿಗಳಾಗಿ ಅಭಿವೃದ್ಧಿಯ ಜೀವನ ನಡೆಸಿ ➤ ನಳಿನ್ ಕುಮಾರ್ ಕಟೀಲ್ Read More »

ಕರ್ನಾಟಕ
Scroll to Top