ಸಂಬಳ ಸಿಗದೇ ಸಾವಿಗೆ ಶರಣಾದ ಶಿಕ್ಷಕ ➤ “ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯ ಉಜ್ವಲವಾಗಿರಲಿ” ಎಂದು ಬೋರ್ಡ್ ನಲ್ಲಿ ಬರೆದು ಶಿಕ್ಷಕ
(ನ್ಯೂಸ್ ಕಡಬ) newskadaba.com ಚಿಕ್ಕಬಳ್ಳಾಪುರ, ಡಿ. 05: ಕೊರೊನಾದಿಂದಾಗಿ ವೇತನವಿಲ್ಲದೆ ಜೀವನ ನಿರ್ವಹಣೆಗೆ ಆರ್ಥಿಕ ಸಂಕಷ್ಟಕ್ಕೆ ನಲುಗಿದ ಖಾಸಗಿ ಶಾಲಾ ಶಿಕ್ಷಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವುದು ಶಿಕ್ಷಕ ವೃಂದದಲ್ಲಿ ಆಘಾತ ಉಂಟುಮಾಡಿದೆ.ಮಂಚೇನಹಳ್ಳಿಯ ಕನಗಾನಕೊಪ್ಪದ ಕೃಷ್ಣಪ್ಪ ಎಂಬುವವರ ಏಕೈಕ ಪುತ್ರ ಚಂದ್ರಶೇಖರ್ (35) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಎಂಎ ಇಂಗ್ಲಿಷ್ ಪದವಿ ವ್ಯಾಸಂಗ ಮಾಡಿದ್ದ ಚಂದ್ರಶೇಖರ್ ಅವರು ಮಂಚೇನಹಳ್ಳಿಯ ಖಾಸಗಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ಮಾಡುತ್ತಿದ್ದರು. ಜತೆಗೆ ಟ್ಯುಟೋರಿಯಲ್ ನಡೆಸುತ್ತ ಜೀವನಕ್ಕೆ ಆಸರೆಯಾಗಿ ಮಾಡಿಕೊಂಡು ನೆಮ್ಮದಿ ಬದುಕು ಸಾಗಿಸುತ್ತಿದ್ದರು. ಒಂದೆಡೆ ಹಲವು […]










