ಬಂಟ್ವಾಳದಲ್ಲಿ ಅಪರೂಪದ ಚಿಪ್ಪುಹಂದಿ ಪತ್ತೆ…!

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 05: ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ಕೃಷ್ಣ ಕೋಡಿ ಎಂಬಲ್ಲಿ ಪುರುಷೋತ್ತಮ ಎಂಬವರ ಮನೆಯ ಪಕ್ಕದ ತೋಟದಲ್ಲಿ ಅಳಿವಿನಂಚಿರುವ ಚಿಪ್ಪುಹಂದಿ ಕಂಡು ಬಂದಿದೆ.

 

 

ಚಿಪ್ಪು ಹಂದಿ ಇರುವುದರ ಬಗ್ಗೆ ಬಂಟ್ವಾಳ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆಯ ಅಧಿಕಾರಿ ಸಹಿತ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಚಿಪ್ಪು ಹಂದಿಯನ್ನು ಸುರಕ್ಷಿತವಾಗಿ ಹಿಡಿದು ಬಳಿಕ ರಕ್ಷಿತಾರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಉಪವಲಯ ಅರಣ್ಯಾಧಿಕಾರಿ ಪ್ರೀತಂ ಎಸ್. ಯಶೋಧರ, ಅರಣ್ಯ ರಕ್ಷಕರಾದ ಜಿತೇಶ್ ಮತ್ತುರೇಖಾ ಅವರು ಚಿಪ್ಪು ಹಂದಿಯನ್ನು ರಕ್ಷಿಸುವಲ್ಲಿ ಭಾಗವಿಸಿದ್ದಾರೆ.

 

Scroll to Top