ಪುತ್ತೂರು : ಸಹೋದರಿ ಮನೆಯಲ್ಲಿದ್ದ ಅವಿವಾಹಿತೆ ನಾಪತ್ತೆ
(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.09: ಅವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ. ನಗರದ ಪರ್ಲಡ್ಕ ಎಂಬಲ್ಲಿನ ನಿವಾಸಿ ಶಾರದಾ (55) ನಾಪತ್ತೆಯಾದವರು. ಶಾರದಾ ಅವರು ಅವಿವಾಹಿತೆಯಾಗಿದ್ದು, ಕಳೆದ ಕೆಲ ಸಮಯಗಳಿಂದ ಸಾಲ್ಮರದಲ್ಲಿರುವ ಸಹೋದರಿ ಪುಷ್ಪಲತಾ ಎಂಬವರೊಂದಿಗೆ ವಾಸವಾಗಿದ್ದರು. ಸೋಮವಾರ ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದ ಅವರು, ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪುತ್ತೂರು : ಸಹೋದರಿ ಮನೆಯಲ್ಲಿದ್ದ ಅವಿವಾಹಿತೆ ನಾಪತ್ತೆ Read More »
ಕರಾವಳಿ









