ಕಡಬ ನ್ಯೂಸ್

ಕ್ರಿಕೆಟ್‌ಗೆ ವಿದಾಯ ಹೇಳಿದ ಪಾರ್ಥೀವ್ ಪಟೇಲ್.!

(ನ್ಯೂಸ್ ಕಡಬ) newskadaba.com ಮುಂಬೈ, ಡಿ.09: ಟೀಂ ಇಂಡಿಯಾ ಹಾಗೂ ಆರ್‍ಸಿಬಿ ತಂಡದ ವಿಕೆಟ್ ಕೀಪರ್ ಪಾರ್ಥೀವ್ ಪಟೇಲ್ ಅವರು ಇಂದು 17 ವರ್ಷಗಳ ಕ್ರಿಕೆಟ್ ಜೀವನಕ್ಕೆ ಗುಡ್‍ಬೈ ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ಮಂಡಳಿಗೆ ಅವರು ರಾಜೀನಾಮೆ ಪತ್ರ ನೀಡುವ ಮೂಲಕ ತಾವು ಇನ್ನು ಮುಂದೆ ಯಾವುದೇ ಮಾದರಿಯ ಕ್ರಿಕೆಟ್‍ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆರ್‍ಸಿಬಿ ತಂಡದ ಭರವಸೆಯ ಆಟಗಾರನಾಗಿದ್ದ ಪಾರ್ಥೀವ್ ಪಟೇಲ್‍ಗೆ 2013ರ ಐಪಿಎಲ್‍ನಲ್ಲಿ ಒಂದೇ ಒಂದು ಪಂದ್ಯ ಆಡಲು ಅವಕಾಶ ಸಿಕ್ಕಿರಲಿಲ್ಲ ಹಾಗೂ […]

ಕ್ರಿಕೆಟ್‌ಗೆ ವಿದಾಯ ಹೇಳಿದ ಪಾರ್ಥೀವ್ ಪಟೇಲ್.! Read More »

ರಾಷ್ಟ್ರೀಯ ನ್ಯೂಸ್

ಕುಕ್ಕೆ ಸುಬ್ರಹ್ಮಣ್ಯ :ಡಿ.11 ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯುವ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.09: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಮಹೋತ್ಸವ ಆರಂಭಗೊಂಡಿದೆ. ಹದಿನೈದು ದಿನಗಳ ಕಾಲ ನಡೆಯುವ ಈ ಮಹೋತ್ಸವದಲ್ಲಿ ಕ್ಷೇತ್ರದ ಅಧಿಪತಿಯಾದ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ರೀತಿಯ‌ ಸೇವೆಗಳೂ ನಡೆಯುತ್ತದೆ. ಇನ್ನು ಜಾತ್ರಾ ಮಹೋತ್ಸವ ಸಂಬಂಧ ಮೂಲಮೃತ್ತಿಕಾ ಪ್ರಸಾದ ತೆಗೆಯುವ ಕಾರ್ಯಕ್ರಮವೂ ಡಿ.11 ರಂದು ನಡೆಯಲಿದೆ. ಈ ಪ್ರಯುಕ್ತ ಭಕ್ತಾದಿಗಳ ಸೇವೆಗಳು ಮತ್ತು ದರ್ಶನ ಅಪರಾಹ್ನ ಗಂಟೆ 02 ರ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟನೆಯಲ್ಲಿ

ಕುಕ್ಕೆ ಸುಬ್ರಹ್ಮಣ್ಯ :ಡಿ.11 ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯುವ ಕಾರ್ಯಕ್ರಮ Read More »

ಕರಾವಳಿ

ಕುಸಿದು ಬಿದ್ದ ವೃಕ್ಷಗಳ ಮಾತೆ ಸಾಲುಮರದ ತಿಮ್ಮಕ್ಕ ➤ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಬೇಲೂರು, ಡಿ.09: ಪದ್ಮ ಶ್ರೀ ಪುರಸ್ಕ್ರತ, ವೃಕ್ಷಗಳ ಮಾತೆ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರು ಅನಾರೋಗ್ಯಕ್ಕೆ ಒಳಗಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇಲೂರಿನ ತಮ್ಮ ನಿವಾಸದಲ್ಲಿ ಕುಸಿದು ಬಿದ್ದ ತಿಮ್ಮಕ್ಕರವರಿಗೆ ಸೊಂಟದ ಮೂಳೆ ಮುರಿದಿದೆ ಎಂದು ಮೂಲಗಳು ತಿಳಿಸಿವೆ.ಡಿ.09 ರ ಇಂದು ಅಪರೇಷನ್ ನಡೆಸುವ ಸಾಧ್ಯತೆಯಿದೆ ಎಂದು ತಿಮ್ಮಕ್ಕರವರ ದತ್ತು ಪುತ್ರ ಉಮೇಶ್ ರವರು ಮಾಹಿತಿ ನೀಡಿದ್ದಾರೆ.    

ಕುಸಿದು ಬಿದ್ದ ವೃಕ್ಷಗಳ ಮಾತೆ ಸಾಲುಮರದ ತಿಮ್ಮಕ್ಕ ➤ ಆಸ್ಪತ್ರೆಗೆ ದಾಖಲು Read More »

ಕರ್ನಾಟಕ

ಉಡುಪಿ : ಒಂದೇ ಕಡೆ 4 ಭಾರೀ ಗಾತ್ರದ ಹೆಬ್ಬಾವುಗಳು ಪತ್ತೆ.!

(ನ್ಯೂಸ್ ಕಡಬ) newskadaba.com ಉಡುಪಿ, ಡಿ.09: ನಗರದ ಹೃದಯಭಾಗದಲ್ಲಿ ಮಂಗಳವಾರ ಒಂದೇ ಕಡೆಯಲ್ಲಿ 4 ಭಾರೀ ಗಾತ್ರದ ಹೆಬ್ಬಾವುಗಳು ಪತ್ತೆಯಾಗಿವೆ. ಅಲ್ಲದೇ ಈ ಹಾವು ಹಿಡಿಯಲೆತ್ನಿದ ಒಬ್ಬರಿಗೆ ಕಚ್ಚಿರುವ ಘಟನೆ ನಡೆದಿದೆ.     ನಗರದ ಪೂರ್ಣಪ್ರಜ್ಞಾ ಕಾಲೇಜಿನ ಬಳಿಯ ಖಾಲಿ ನಿವೇಶನದಲ್ಲಿ ಮಂಗಳವಾರ ಸಂಜೆ ಹಲ್ಲು ಕತ್ತರಿಸುವಾಗ ಒಂದು ಹೆಬ್ಬಾವು ಪತ್ತೆಯಾಗಿತ್ತು.ಬಳಿಕ ಅಲ್ಲಿಯೇ ಹುಲ್ಲು ಪೊದೆಯಲ್ಲಿ ಇನ್ನೊಂದು ಹೆಬ್ಬಾವು ಕಂಡುಬಂದಿದೆ.ವಿಷಯ ತಿಳಿದು ಸ್ಥಳಿಯ ಯುವಕರು ಸೇರಿ ಅವುಗಳನ್ನು ಹಿಡಿದು ಚೀಲದೊಳಗೆ ಹಾಕಿದರು.ಹುಲ್ಲಿನಲ್ಲಿ ಹುಡುಕಿದಾಗ ಇನ್ನೂ ಎರಡು

ಉಡುಪಿ : ಒಂದೇ ಕಡೆ 4 ಭಾರೀ ಗಾತ್ರದ ಹೆಬ್ಬಾವುಗಳು ಪತ್ತೆ.! Read More »

ಕರಾವಳಿ

ಶಬ್ದಕ್ಕಿಂತ ಹೆಚ್ಚು ವೇಗವಾಗಿ ವಿಮಾನ ಹಾರಾಟ ನಡೆಸಿದ್ದ ಪೈಲಟ್‌ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್, ಡಿ.09: ಶಬ್ದದ ವೇಗಕ್ಕಿಂತ ಅತೀ ವೇಗವಾಗಿ ವಿಮಾನ ಹಾರಾಟ ನಡೆಸಿದ್ದ ವಿಶ್ವದ ಮೊದಲ ಪೈಲಟ್‌ ಎಂಬ ಕೀರ್ತಿಗೆ ಭಾಜನರಾಗಿದ್ದ ಜನರಲ್‌ ಚುಕ್‌ ಯೀಗರ್‌(97) ಸೋಮವಾರ ಕೊನೆಯುಸೆರೆಳೆದಿದ್ದಾರೆ. ಅಮೆರಿಕ ವಾಯುಪಡೆಯಲ್ಲಿ ಪೈಲಟ್‌ ಆಗಿದ್ದ ವೇಳೆ ತಮ್ಮ 24ನೇ ವಯಸ್ಸಿನಲ್ಲಿ 1947ರ ಅಕ್ಟೋಬರ್‌ನಲ್ಲಿ ಕ್ಯಾಲಿಫೋರ್ನಿಯಾದ ವಾಯುನೆಲೆಯಲ್ಲಿ 43 ಸಾವಿರ ಎತ್ತರದಲ್ಲಿ ಬೆಲ್‌ ಎಕ್ಸ್‌-1 ವಿಮಾನದಲ್ಲಿ ಪ್ರತೀ ಗಂಟೆಗೆ 700 ಮೈಲುಗಳಷ್ಟುವೇಗವಾಗಿ ಹಾರಾಟ ನಡೆಸಿದ್ದರು. ಹೀಗಾಗಿ ಈ ವಿಮಾನಕ್ಕೆ ಅವರ ಮೊದಲ ಪತ್ನಿ ಗ್ಲಾಮರಸ್‌ ಗ್ಲೆನ್ನಿಸ್‌

ಶಬ್ದಕ್ಕಿಂತ ಹೆಚ್ಚು ವೇಗವಾಗಿ ವಿಮಾನ ಹಾರಾಟ ನಡೆಸಿದ್ದ ಪೈಲಟ್‌ ಇನ್ನಿಲ್ಲ Read More »

ರಾಷ್ಟ್ರೀಯ ನ್ಯೂಸ್

ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಭೆ ➤ ಕಸ್ತೂರಿ ರಂಗನ್ ವರದಿ ಬಾದಿತ ಗ್ರಾ. ಪಂ ಎದುರು ಧರಣಿ ಸತ್ಯಾಗ್ರಹ.!

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.09: ಕಸ್ತೂರಿ ರಂಗನ್ ವರದಿ ಅನುಷ್ಠಾನದ ವಿರುದ್ಧ ಈಗಾಗಲೇ ಹೋರಾಟ ನಡೆಯುತ್ತಿದೆ. ಕಸ್ತೂರಿ ರಂಗನ್ ವರದಿ ಜಾರಿಯಾಗುವುದರಿಂದ ಹಲವಾರು ರೈತರು ಸಂಕಷ್ಟ ಎದುರಿಸುವ ಪರಿಸ್ಥಿತಿ ಎದುರಾಗುತ್ತದೆ ಎಂದು ಹೋರಾಟ ನಡೆಯುತ್ತಿದೆ.  ಕರವಾಳಿಯದ್ಯಂತ ಸುಳ್ಯ, ಕಡಬ , ವೆಳ್ತಂಗಡಿ ತಾಲೂಕುಗಳ ಕಸ್ತೂರಿ ರಂಗನ್ ವರದಿ ಬಾದಿತ ಗ್ರಾಮಗಳ ಪಂಚಾಯತ್ ಎದುರು ಧರಣಿ ಸತ್ಯಾಗ್ರಹ ಕೈಗೊಳ್ಳುವುದು ಮತ್ತು ಸತ್ಯಾಗ್ರಹಕಕ್ಕೆ ಚುನಾವಣೆ ಸ್ಪರ್ಧಿಸುವ ವಿವಿಧ ಅಭ್ಯರ್ಥಿಗಳು ವರದಿ ಬಗ್ಗೆ ತಮ್ಮ ನಿಲುವು ವ್ಯಕ್ತಪಡಿಸಲು ಮಲೆನಾಡು ಜನಹಿತ

ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಭೆ ➤ ಕಸ್ತೂರಿ ರಂಗನ್ ವರದಿ ಬಾದಿತ ಗ್ರಾ. ಪಂ ಎದುರು ಧರಣಿ ಸತ್ಯಾಗ್ರಹ.! Read More »

ಕರಾವಳಿ

ರಫ್ತಾರ್ ಟರ್ಮಿನಲ್ ಪ್ರೈವೇಟ್ ಲಿಮಿಟೆಡ್‌ನ ಪೆಟ್ರೋಲಿಯಂ ತೈಲ ಘಟಕದಲ್ಲಿ ಆನ್‌ಸೈಟ್ ತುರ್ತು ಅಣುಕು ಕಾರ್ಯಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.09: ಮಂಗಳೂರಿನ ನಗರದ ಹೊರವಲಯದ ಪಣಂಬೂರಿನಲ್ಲಿ ಬೀಚಿನಲ್ಲಿ ಕೆ.ಐ.ಎ.ಡಿ.ಬಿಯಲ್ಲಿ ಕೈಗಾರಿಕಾ ರಾಸಾಯನಿಕ ತುರ್ತು ನಿವಾರಣಾ ಮಾಹೆಯ ಅಂಗವಾಗಿ ಪಣಂಬೂರು ಬೀಚಿನ ರಫ್ತರ್ ಟರ್ಮಿನಲ್ ಪ್ರೈವೇಟ್ ಲಿಮಿಟೆಡ್‌ನ ಪೆಟ್ರೋಲಿಯಂ ತೈಲ ಘಟಕದಲ್ಲಿ ಡೀಸೆಲ್‌ಗೆ ಬೆಂಕಿ ಬಿದ್ದಂತಹ ಸಂದರ್ಭದಲ್ಲಿ ತುರ್ತು ನಿರ್ವಹಣಾ ಅಣುಕು ಕಾರ್ಯಾಚರಣೆಯನ್ನು ಕೈಗೊಂಡು ಬೆಂಕಿ ನಂದಿಸಲಾಯಿತು. ಮಧ್ಯಾಹ್ನ 3.35 ರ ಸಮಯದಲ್ಲಿ ತೈಲವನ್ನು ಲಾರಿಗಳಿಗೆ ತುಂಬುವ ನಿಲ್ದಾಣದಲ್ಲಿ ಲಾರಿಯ ಟ್ಯಾಂಕಿನ ಕ್ಯಾಪ್‌ನ್ನು ತಿರುಗಿಸಿ ತೆರೆಯುವ ಸಂದರ್ಭದಲ್ಲಿ ಲಾರಿಯ ಒಳಗಿದ್ದ ಡೀಸೆಲ್ ಕ್ಯಾಪ್‌ನ

ರಫ್ತಾರ್ ಟರ್ಮಿನಲ್ ಪ್ರೈವೇಟ್ ಲಿಮಿಟೆಡ್‌ನ ಪೆಟ್ರೋಲಿಯಂ ತೈಲ ಘಟಕದಲ್ಲಿ ಆನ್‌ಸೈಟ್ ತುರ್ತು ಅಣುಕು ಕಾರ್ಯಾಚರಣೆ Read More »

ಕರಾವಳಿ, ಕರ್ನಾಟಕ

ಕರಾವಳಿಯಾದ್ಯಂತ ಇನ್ನೂ ಎರಡು ದಿನ ಧಾರಾಕಾರ ಮಳೆ ಸಾಧ್ಯತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.09: ಅರಬ್ಬಿ ಸಮುದ್ರದಲ್ಲಿ ಚಂಡ ಮಾರುತ ಕಂಡು ಬಂದಿರುವ ಹಿನ್ನೆಲೆಯಲ್ಲಿ ಕರಾವಳಿಯಾದ್ಯಂತ ಇನ್ನೂ ಎರಡು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.  ಕಡಬ ತಾಲೂಕು, ಸುಳ್ಯ ತಾಲೂಕು, ಪುತ್ತೂರು ತಾಲೂಕು ಸೇರಿದಂತೆ ಕರಾವಳಿಯಾದ್ಯಂತ ಕಳೆದ ದಿನ ಗುಡುಗು ಸಹಿತ ಭಾರೀ ಗಾಳಿ ಮಳೆಯಾಗಿದೆ.   ಚಂಡಮಾರುತ ಪರಿಚಲನೆ ಆಗ್ನೇಯ ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾ ಸಾಗರ ಸಮಭಾಜಕ ವೃತ್ತದ ಬಳಿ ಸಮುದ್ರ ಮಟ್ಟಕ್ಕಿಂತ 3.1

ಕರಾವಳಿಯಾದ್ಯಂತ ಇನ್ನೂ ಎರಡು ದಿನ ಧಾರಾಕಾರ ಮಳೆ ಸಾಧ್ಯತೆ Read More »

ಕರಾವಳಿ

ಕುಕ್ಕೆ ಸುಬ್ರಹ್ಮಣ್ಯ :ಹುಂಡಿ ಎಣಿಕೆ ವೇಳೆ ಹಣ ಎಗರಿಸಿದ ಮಹಿಳಾ ಸಿಬ್ಬಂದಿ

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ, ಡಿ.09: ಕಳೆದ ದಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹುಡಿ ಎಣಿಕೆ ಸಂದರ್ಭದಲ್ಲಿ ದೇಗುಲದ ಮಹಿಳಾ ನಿಬ್ಬಂದಿಯೋರ್ವರು ಹಣ ಎಗರಿಸಿ ಸಿಕ್ಕಿ ಬಿದ್ದ ಘಟನೆ ಡಿ.08 ರ ಮಂಗಳವಾರ ನಡೆದಿದೆ. ಪ್ರತಿ ಬಾರಿಯಂತೆ ಈ ಬಾರಿಯು ದೇವಸ್ಥಾನದ ಕೆಲ ಸಿಬ್ಬಂದಿ ಮತ್ತು ಕಾಲೇಜಿನ ವಿದ್ಯಾರ್ಥಿಗಳನ್ನು ದೇವರ ಕಾಣಿಕೆ ಹುಂಡಿ ಎಣಿಕೆಗೆ ನಿಯೋಜಿಸಲಾಗಿತ್ತು. ಅದರಂತೆ ದೇವಸ್ಥಾನದ ಗೌರಮ್ಮ ಎಂಬ ಮಹಿಳಾ ಸಿಬ್ಬಂದಿ ಹಣ ಕದ್ದು ಬಚ್ಚಿಟ್ಟುಕೊಳ್ಳುವಾಗ ಮತ್ತೊಬ್ಬ ಸಿಬ್ಬಂದಿಗೆ ಸಿಕ್ಕಿ ಬಿದ್ದಿದ್ದಾರೆ. ಈ

ಕುಕ್ಕೆ ಸುಬ್ರಹ್ಮಣ್ಯ :ಹುಂಡಿ ಎಣಿಕೆ ವೇಳೆ ಹಣ ಎಗರಿಸಿದ ಮಹಿಳಾ ಸಿಬ್ಬಂದಿ Read More »

ಕರಾವಳಿ, ಕ್ರೈಮ್ ನ್ಯೂಸ್

ಪಡೀಲ್‌ನಲ್ಲಿ ಭೀಕರ ಅಪಘಾತ ➤ ಬೈಕ್ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.09: ನಗರದ ಪಡೀಲ್ ಸಮೀಪ ಓಮ್ನಿ ಇಕೋ ಕಾರು ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.   ಚಿಕ್ಕಮಗಳೂರು ಮೂಲದ ಸುಮಂತ್ (21) ಮೃತ ಬೈಕ್ ಸವಾರ. ಸಹಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.  ಪಡೀಲ್ ಸಮೀಪದಲ್ಲಿ ಓಮ್ನಿ ಇಕೋ ಕಾರಿಗೆ ಸುಮಂತ್ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸುಮಂತ್ ಗಂಭೀರವಾಗಿ ಗಾಯಗೊಂಡಿದ್ದು, ರಸ್ತೆಗೆ ಎಸೆಯಲ್ಪಟ್ಟಿದ್ದರು.

ಪಡೀಲ್‌ನಲ್ಲಿ ಭೀಕರ ಅಪಘಾತ ➤ ಬೈಕ್ ಸವಾರ ಮೃತ್ಯು Read More »

ಕರಾವಳಿ
Scroll to Top