ಭಾರತದ ಮೊದಲ ಹೈ-ವೋಲ್ಟೇಜ್ ಇವಿ ಮೋಟಾರ್ ಸೈಕಲ್ ಬಿಡುಗಡೆ..!

(ನ್ಯೂಸ್ ಕಡಬ) newskadaba.com ಅ. 15. ಚೆನ್ನೈ ಮೂಲದ ಹೊಸ EV ಸ್ಟಾರ್ಟ್‌ ಅಪ್ ಕಂಪನಿಯಾದ ರಾಪ್ಟೀ.ಎಚ್‌ವಿ (Raptee.HV) ಇಂದು ಭಾರತದ ಮೊದಲ ಹೈ-ವೋಲ್ಟೇಜ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಇದನ್ನು ವಿಶ್ವದಾದ್ಯಂತ ಇಲೆಕ್ಟ್ರಿಕ್ ಕಾರುಗಳಲ್ಲಿ ಬಳಸಲಾಗುವ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಇದು ಗಮನಾರ್ಹವಾಗಿ ಕಡಿಮೆ ಶಾಖದೊಂದಿಗೆ 250-300cc ಸಾಮರ್ಥ್ಯದ ಇಂಧನ ಚಾಲಿತ ಮೋಟಾರ್‌ಸೈಕಲ್‌ಗಳಷ್ಟು ಪರ್ಫಾಮೆನ್ಸ್ ನೀಡುವಂತಹ ಮೋಟಾರ್‌ಸೈಕಲ್ ಆಗಿದೆ ಎಂದು ಕಂಪನಿ ತಿಳಿಸಿದೆ. Raptee.HV ಮೋಟಾರ್‌ ಸೈಕಲ್‌ಗಳು, ಎಲೆಕ್ಟ್ರಿಕ್ ಕಾರುಗಳು ಬಳಸುವ ಚಾರ್ಜಿಂಗ್ ಮಾನದಂಡಗಳು ಹಾಗೂ […]

ಭಾರತದ ಮೊದಲ ಹೈ-ವೋಲ್ಟೇಜ್ ಇವಿ ಮೋಟಾರ್ ಸೈಕಲ್ ಬಿಡುಗಡೆ..! Read More »

ತಂತ್ರಜ್ಞಾನ

ಕೋವಿಡ್‌ ಲಸಿಕೆ ಅಡ್ಡಪರಿಣಾಮಗಳ ತನಿಖೆಗೆ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ

(ನ್ಯೂಸ್ ಕಡಬ) newskadaba.com ನವದೆಹಲಿ, ಅ. 15. ಕೋವಿಡ್ ಲಸಿಕೆಗಳಿಂದ ಆರೋಗ್ಯದ ದುಷ್ಪರಿಣಾಮಗಳ ಕುರಿತು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಲಸಿಕೆಗಳು ರಕ್ತ ಹೆಪ್ಪುಗಟ್ಟುವಿಕೆಯಂತಹ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದರು. ಯುನೈಟೆಡ್ ಕಿಂಗ್‌ಡಮ್‌ ನಂತಹ ವಿದೇಶಗಳಲ್ಲಿ ಅದೇ ಕಾಳಜಿಯ ಮೇಲೆ ಕ್ಲಾಸ್ ಆಕ್ಷನ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದರು. ಆರಂಭದಲ್ಲಿ, ಸಾಂಕ್ರಾಮಿಕ ಬಿಕ್ಕಟ್ಟನ್ನು ನಿವಾರಿಸಲು ಲಸಿಕೆಗಳು ಜಾಗತಿಕವಾಗಿ ನೆರವು ನೀಡಿವೆ. ಈಗ ಅಂತಹ ಅರ್ಜಿಗಳನ್ನು ಸಲ್ಲಿಸುವುದು

ಕೋವಿಡ್‌ ಲಸಿಕೆ ಅಡ್ಡಪರಿಣಾಮಗಳ ತನಿಖೆಗೆ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ Read More »

ರಾಷ್ಟ್ರೀಯ ನ್ಯೂಸ್

ಚಂದ್ರಯಾನ-3 ಯಶಸ್ವಿ – ಇಸ್ರೋ ಅಧ್ಯಕ್ಷರಿಗೆ ವಿಶ್ವ ಬಾಹ್ಯಾಕಾಶ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಅ. 15. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 ಯಶಸ್ವಿ ಹಿನ್ನೆಲೆ ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ ಅಂತಾರಾಷ್ಟ್ರೀಯ ಖಗೋಳ ಶಾಸ್ತ್ರೀಯ ಒಕ್ಕೂಟವು (ಐಎಎಫ್) ವಿಶ್ವ ಬಾಹ್ಯಾಕಾಶ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಇಸ್ರೋ ಹೇಳಿದೆ. ಚಂದ್ರಯಾನ-3, ಕಡಿಮೆ ಖರ್ಚಿನ ತಂತ್ರಜ್ಞಾನ ಸದ್ಬಳಕೆ, ಈ ಹಿಂದೆ ಯಾರೂ ಇಳಿಯದ ಚಂದ್ರನ ದಕ್ಷಿಣ ಭಾಗಕ್ಕೆ ಚಂದ್ರಯಾನ ಇಳಿದಿರುವುದು ನಾವೀನ್ಯತೆಗೆ ಜಾಗತಿಕ ಪುರಾವೆಯಾಗಿದೆ. ಹೀಗಾಗಿ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಅವರಿಗೆ ವಿಶ್ವ ಬಾಹ್ಯಾಕಾಶ ಪ್ರಶಸ್ತಿಯನ್ನು

ಚಂದ್ರಯಾನ-3 ಯಶಸ್ವಿ – ಇಸ್ರೋ ಅಧ್ಯಕ್ಷರಿಗೆ ವಿಶ್ವ ಬಾಹ್ಯಾಕಾಶ ಪ್ರಶಸ್ತಿ Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

ಕುತ್ತಾರಿನ ಕೊರಗಜ್ಜ ದೈವದ ದರ್ಶನ ಪಡೆದ ನಟ ಶಿವರಾಜ್‌ಕುಮಾರ್‌ ದಂಪತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 15. ತುಳುನಾಡಿನ ಕಾರ್ಣಿಕ ಶಕ್ತಿ ಕೊರಗಜ್ಜ ದೈವದ ಆದಿಸ್ಥಳ ಕುತ್ತಾರ್‌ಗೆ ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಅವರು ಸೋಮವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಕರಾವಳಿಯಲ್ಲಿ ಹಲವಾರು ಪುಣ್ಯ ಕ್ಷೇತ್ರಗಳಿವೆ. ಆದರೆ ಇಲ್ಲಿಗೆ ಭೇಟಿ ನೀಡಿದಾಗ ಏನೋ ಒಂದು ನೆಮ್ಮದಿ ಸಿಗುತ್ತದೆ. ಕೊರಗಜ್ಜ ದೈವದ ಮೇಲೆ ನಂಬಿಕೆ ಇದೆ. ಜನರು ಕೂಡ ಈ ದೈವದ ಮೇಲೆ ಅಪಾರ ನಂಬಿಕೆ

ಕುತ್ತಾರಿನ ಕೊರಗಜ್ಜ ದೈವದ ದರ್ಶನ ಪಡೆದ ನಟ ಶಿವರಾಜ್‌ಕುಮಾರ್‌ ದಂಪತಿ Read More »

ಕರಾವಳಿ, ಸಿನಿಮಾ

ದೇಶದಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚಳ- ವರದಿ

(ನ್ಯೂಸ್ ಕಡಬ) newskadaba.com ಅ. 15. ಭಾರತದಲ್ಲಿ ಕ್ಯಾನ್ಸರ್‌ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಪುರುಷರಲ್ಲಿ ಬಾಯಿ ಮತ್ತು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.   ಈ ಕುರಿತಂತೆ ಭಾರತ, ಬ್ರೆಜಿಲ್‌, ರಷ್ಯಾ, ಚೀನ ಮತ್ತು ದ.ಆಫ್ರಿಕಾಗಳಿರುವ ಬ್ರಿಕ್ಸ್‌ ರಾಷ್ಟ್ರಗಳಲ್ಲಿ ಕ್ಯಾನ್ಸರ್‌ ಪ್ರಕರಣಗಳ ಕುರಿತು ನಡೆದಿರುವ ತುಲನಾತ್ಮಕ ಅಧ್ಯಯನದ ವರದಿ ಇಕ್ಯಾನ್ಸರ್‌ ಜರ್ನಲ್‌ ನಲ್ಲಿ ಪ್ರಕಟವಾಗಿದೆ. ವಿಶ್ವದ 42 ಪ್ರತಿಶತ ಕ್ಯಾನ್ಸರ್‌ ಸಾವುಗಳು ಬ್ರಿಕ್ಸ್‌

ದೇಶದಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚಳ- ವರದಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆ್ಯಸಿಡ್ ಸೇವಿಸಿದ್ದ ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಅ. 15. ರಬ್ಬರ್‌ ಆ್ಯಸಿಡ್‌ ಸೇವಿಸಿ ಅಸೌಖ್ಯಕ್ಕೊಳಗಾಗಿದ್ದ ಮರ್ಕಂಜ ಗ್ರಾಮದ ಗೋಳಿಯಡ್ಕ ಶೇಷಪ್ಪ ಗೌಡ ಪಾಲ್ತಾಡು ಎಂಬವರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಶೇಷಪ್ಪ ಗೌಡರು ನಾಲ್ಕು ದಿನಗಳ ಹಿಂದೆ ರಬ್ಬರ್‌ ಆ್ಯಸಿಡ್‌ ಸೇವಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅಲ್ಲಿಂದ ಸುಳ್ಯ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ. ಮೃತರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಆ್ಯಸಿಡ್ ಸೇವಿಸಿದ್ದ ವ್ಯಕ್ತಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಮುನಿರತ್ನ ಕೇಸ್- ಮೂವರಿಗೆ ನಿರೀಕ್ಷಣಾ ಜಾಮೀನು

(ನ್ಯೂಸ್ ಕಡಬ) newskadaba.com ಅ. 15. ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ಮೂವರು ಆರೋಪಿಗಳಿಗೆ 82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. 4ನೇ ಆರೋಪಿಯಾಗಿರುವ ಕಿರಣ್‌ ಕುಮಾರ್‌, ಆತನ ಸ್ನೇಹಿತರಾದ ಎ5 ಲೋಹಿತ್‌ ಕುಮಾರ್‌, ಎ6 ಮಂಜುನಾಥ್‌ಗೆ ಜಾಮೀನು ಮಂಜೂರಾಗಿರುವುದಾಗಿ ತಿಳಿದುಬಂದಿದೆ. ಜೊತೆಗೆ ತನಿಖೆಗೆ ಸಹಕಾರ ನೀಡಬೇಕು ಎಂದು ಕೋರ್ಟ್‌ ಷರತ್ತು ವಿಧಿಸಿದೆ. ಆರೋಪಿ ಕಿರಣ್‌ ಕುಮಾರ್‌ ತನ್ನನ್ನು ಮುನಿರತ್ನ ಸಂಬಂಧಿ ಎಂದು ಸಂತ್ರಸೆಗೆ ಪರಿಚಯಿಸಿಕೊಂಡಿದ್ದಾನೆ. ಬಳಿಕ ಸ್ನೇಹಿತರಾದ ಲೋಹಿತ್‌

ಮುನಿರತ್ನ ಕೇಸ್- ಮೂವರಿಗೆ ನಿರೀಕ್ಷಣಾ ಜಾಮೀನು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಗ್ರಾಮಾಡಳಿತಾಧಿಕಾರಿ- ಕನ್ನಡ ಕಡ್ಡಾಯ ಫಲಿತಾಂಶ ಪ್ರಕಟ

(ನ್ಯೂಸ್ ಕಡಬ) newskadaba.com ಅ. 15. ಗ್ರಾಮ ಆಡಳಿತಾಧಿಕಾರಿ (ವಿಎ) ಹಾಗೂ ಜಿಟಿಟಿಸಿಯ ವಿವಿಧ ಹುದ್ದೆಗಳ ನೇಮಕಾತಿಗೆ ಸೆ. 29ರಂದು ನಡೆಸಿದ್ದ ಕನ್ನಡ ಕಡ್ಡಾಯ ಪರೀಕ್ಷೆಯ ತಾತ್ಕಾಲಿಕ ಫ‌ಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೋಮವಾರದಂದು ಪ್ರಕಟಿಸಿದೆ. ಅಭ್ಯರ್ಥಿಗಳು ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ಕೆಇಎ ವೆಬ್‌ ಸೈಟ್‌ ನ ಲಿಂಕ್‌ ನಲ್ಲಿ ನಮೂದಿಸಿ ಫ‌ಲಿತಾಂಶವನ್ನು ಪಡೆಯಬಹುದು. ಒಟ್ಟು 150 ಅಂಕಗಳ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದವರು ಮಾತ್ರ ಅಕ್ಟೋಬರ್‌ 27ರಂದು ನಡೆಯುವ ಗ್ರಾಮ ಆಡಳಿತಾಧಿಕಾರಿ

ಗ್ರಾಮಾಡಳಿತಾಧಿಕಾರಿ- ಕನ್ನಡ ಕಡ್ಡಾಯ ಫಲಿತಾಂಶ ಪ್ರಕಟ Read More »

ಉದ್ಯೋಗ

ಇಂದು ಪ್ರಧಾನಿ ಮೋದಿಯಿಂದ ಟೆಲಿಕಾಂ ಸ್ಟ್ಯಾಂಡರ್ಡ್‌ ಸಮ್ಮೇಳನ ಉದ್ಘಾಟನೆ

(ನ್ಯೂಸ್ ಕಡಬ) newskadaba.com ನವದೆಹಲಿ, ಅ. 15. ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಇಂಟರ್ ನ್ಯಾಷನಲ್ ಟೆಲಿಕಮ್ಯುನಿಕೇಶನ್ ಯೂನಿಯನ್ – ವರ್ಲ್ಡ್ ಟೆಲಿಕಮ್ಯುನಿಕೇಶನ್ ಸ್ಟ್ಯಾಂಡರ್ಡೈಸೇಶನ್ ಅಸೆಂಬ್ಲಿಯನ್ನು ಉದ್ಘಾಟಿಸಲಿದ್ದಾರೆ. ಇದಕ್ಕೂ ಮುನ್ನ ಅವರು ಭಾರತ್‌ ಮಂಟಪಕ್ಕೆ ಭೇಟಿ ನೀಡಿ ವಸ್ತು ಪ್ರದರ್ಶನವನ್ನು ಪರಿಶೀಲಿಸಿದರು ಈ ವೇಳೆ ಕೇಂದ್ರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಇದ್ದರು. ಇಂಟರ್ ನ್ಯಾಷನಲ್ ಟೆಲಿಕಮ್ಯುನಿಕೇಶನ್ ಯೂನಿಯನ್-ವರ್ಲ್ಡ್ ಟೆಲಿಕಮ್ಯುನಿಕೇಶನ್ ಸ್ಟ್ಯಾಂಡರ್ಡೈಸೇಶನ್ ಅಸೆಂಬ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಅಂತರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ಆಡಳಿತ

ಇಂದು ಪ್ರಧಾನಿ ಮೋದಿಯಿಂದ ಟೆಲಿಕಾಂ ಸ್ಟ್ಯಾಂಡರ್ಡ್‌ ಸಮ್ಮೇಳನ ಉದ್ಘಾಟನೆ Read More »

ರಾಷ್ಟ್ರೀಯ ನ್ಯೂಸ್
Crime

ನೇಣುಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಕೊಳೆತ ಮೃತದೇಹ ಪತ್ತೆ..!

(ನ್ಯೂಸ್ ಕಡಬ) newskadaba.com ಅ. 15. ನೇಣುಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಕುರಿತು ಪಚ್ಚನಾಡಿ ಸಂತೋಷ್‌ ನಗರ ಮೈದಾನದ ಬಳಿ ಪತ್ತೆಯಾಗಿದೆ. ಸ್ಥಳೀಯ ವ್ಯಕ್ತಿ ರಿತೇಶ್‌ ಎಂಬವರು ಈ ಪ್ರದೇಶದಲ್ಲಿ ಸಾಗುತ್ತಿದ್ದ ವೇಳೆ ವಾಸನೆ ಬರುತ್ತಿದ್ದುದನ್ನು ಕಂಡು ಪರಿಶೀಲಿಸಿದಾಗ ಸುಮಾರು 35–45 ವರ್ಷದೊಳಗಿನ ಅಪರಿಚಿತ ವ್ಯಕ್ತಿಯೊಬ್ಬರು ಮರದ ಕೊಂಬೆಗೆ ಎರಡು ಬೈರಾಸುಗಳನ್ನು ಜೋಡಿಸಿ ಅದರಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿರುವುದು ಪತ್ತೆಯಾಗಿದೆ. ದೇಹದ ಭಾರದಿಂದ ಶವ ಕುಳಿತ ಸ್ಥಿತಿಯಲ್ಲಿತ್ತು. ದೇಹವು ಸಂಪೂರ್ಣವಾಗಿ

ನೇಣುಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಕೊಳೆತ ಮೃತದೇಹ ಪತ್ತೆ..! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top