ನೇಣುಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಕೊಳೆತ ಮೃತದೇಹ ಪತ್ತೆ..!

Crime

(ನ್ಯೂಸ್ ಕಡಬ) newskadaba.com ಅ. 15. ನೇಣುಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಕುರಿತು ಪಚ್ಚನಾಡಿ ಸಂತೋಷ್‌ ನಗರ ಮೈದಾನದ ಬಳಿ ಪತ್ತೆಯಾಗಿದೆ.


ಸ್ಥಳೀಯ ವ್ಯಕ್ತಿ ರಿತೇಶ್‌ ಎಂಬವರು ಈ ಪ್ರದೇಶದಲ್ಲಿ ಸಾಗುತ್ತಿದ್ದ ವೇಳೆ ವಾಸನೆ ಬರುತ್ತಿದ್ದುದನ್ನು ಕಂಡು ಪರಿಶೀಲಿಸಿದಾಗ ಸುಮಾರು 35–45 ವರ್ಷದೊಳಗಿನ ಅಪರಿಚಿತ ವ್ಯಕ್ತಿಯೊಬ್ಬರು ಮರದ ಕೊಂಬೆಗೆ ಎರಡು ಬೈರಾಸುಗಳನ್ನು ಜೋಡಿಸಿ ಅದರಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿರುವುದು ಪತ್ತೆಯಾಗಿದೆ. ದೇಹದ ಭಾರದಿಂದ ಶವ ಕುಳಿತ ಸ್ಥಿತಿಯಲ್ಲಿತ್ತು. ದೇಹವು ಸಂಪೂರ್ಣವಾಗಿ ಕೊಳೆತಿದ್ದು, ಮುಖ ಗುರುತು ಸಿಗದಷ್ಟು ಕೊಳೆತು ಹೋಗಿತ್ತು ಎನ್ನಲಾಗಿದೆ. ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top