ಹಿಂದುಳಿದ ವರ್ಗಗಳ ಹಾಸ್ಟೆಲ್ ಪ್ರವೇಶ: ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಜೂ. 30. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ (ಸಾಮಾನ್ಯ ಪದವಿ ಕೋರ್ಸಿನ ವಿದ್ಯಾರ್ಥಿಗಳಿಗೆ) ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾತಿ/ಪ.ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ 2026-27ನೇ ಸಾಲಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಮಿತಿ ಪ್ರವರ್ಗ-1, ಎಸ್.ಸಿ ಮತ್ತು ಎಸ್.ಟಿ ರೂ. 2.50 ಲಕ್ಷ, ಪ್ರವರ್ಗ-2ಎ, 2ಬಿ, 3ಎ, […]

ಹಿಂದುಳಿದ ವರ್ಗಗಳ ಹಾಸ್ಟೆಲ್ ಪ್ರವೇಶ: ಅರ್ಜಿ ಆಹ್ವಾನ Read More »

ಕರ್ನಾಟಕ

ಪೆರ್ನಾಜೆ ಶಾಲೆಯಲ್ಲಿ ಮಕ್ಕಳ ದಾಖಲಾತಿಗೆ ಅವಕಾಶವಿಲ್ಲ

(ನ್ಯೂಸ್ ಕಡಬ) newskadaba.com ಜೂ. 30. ಪುತ್ತೂರು ತಾಲೂಕಿನ ಪೆರ್ನಾಜೆ ಶ್ರೀ ಸೀತಾ ರಾಘವ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ) ಶಾಲೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಶೂನ್ಯ ದಾಖಲಾತಿ ಇರುವ ಕಾರಣದಿಂದ ಹಾಗೂ ಅನುದಾನ ಸಂಹಿತೆ ನಿಯಮದಂತೆ ಒಂದು ಬಾರಿಗೆ ಮಾತ್ರ ದಾಖಲಾತಿ ಮನ್ನಾ ಮಾಡಲು ಅವಕಾಶವಿದೆ.   ಶಾಲೆಯಲ್ಲಿ ಹಿಂದಿನ ಎರಡು ಶೈಕ್ಷಣಿಕ ವರ್ಷಗಳಲ್ಲಿ ನಿಗದಿತ ದಾಖಲಾತಿ-ಹಾಜರಾತಿ ಇಲ್ಲದ ಪ್ರಯುಕ್ತ ಶಾಲೆಯ ಮಾನ್ಯತೆಯನ್ನು ಕರ್ನಾಟಕ ಶಿಕ್ಷಣ ಕಾಯ್ದೆ ಅನ್ವಯ ಷರತ್ತುಗಳಪಡಿಸಿ, ರದ್ದುಪಡಿಸಲಾಗಿದೆ. ಪ್ರಸ್ತುತ

ಪೆರ್ನಾಜೆ ಶಾಲೆಯಲ್ಲಿ ಮಕ್ಕಳ ದಾಖಲಾತಿಗೆ ಅವಕಾಶವಿಲ್ಲ Read More »

ಕರಾವಳಿ

ಬೋಳೂರು ಚಿತಾಗಾರ ದುರಸ್ಥಿ

(ನ್ಯೂಸ್ ಕಡಬ) newskadaba.com ಜೂ. 30. ಬೋಳೂರು ವಿದ್ಯುತ್ ಚಿತಾಗಾರವು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಶವ ಸಂಸ್ಕಾರಕ್ಕೆ ಬಳಕೆಯಲ್ಲಿರುವ ಪ್ರಮುಖ ವಿದ್ಯುತ್ ಚಿತಾಗಾರವಾಗಿದೆ. ವಿದ್ಯುತ್ ಚಿತಾಗಾರದ ಚಿಮಣಿಯು ಇತ್ತೀಚಿಗೆ ಬಿದ್ದ ಮಳೆ ಮತ್ತು ಗಾಳಿಗೆ ಮುರಿದು ಬಿದ್ದಿರುವುದರಿಂದ ಚಿತಾಗಾರವನ್ನು ಶವ ಸಂಸ್ಕಾರಕ್ಕೆ ಸ್ಥಗಿತಗೊಳಿಸಲಾಗಿದ್ದು, ಹೊಸದಾಗಿ ಅಳವಡಿಸಿ ಕಾರ್ಯಚರಣೆಗೆ ಸಿದ್ಧವಾಗುವವರೆಗೆ ಸುರತ್ಕಲ್ ವಿದ್ಯುತ್ ಚಿತಾಗಾರದಲ್ಲಿ ಶವ ಸಂಸ್ಕಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9880250617, 9743145481 ಸಂಪರ್ಕಿಸಬಹುದು ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೋಳೂರು ಚಿತಾಗಾರ ದುರಸ್ಥಿ Read More »

ಕರಾವಳಿ, ಕರ್ನಾಟಕ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್ಐಆರ್ ಪ್ರಕ್ರಿಯೆಗೆ ಚಾಲನೆ- ಮತಗಟ್ಟೆಗಳಿಗೆ ಡಿಸಿ ಭೇಟಿ

(ನ್ಯೂಸ್ ಕಡಬ) newskadaba.com ಜೂ. 30. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ  (ಎಸ್.ಐ.ಆರ್) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಆರಂಭಗೊಂಡಿತು. ಇದರ ಮೊದಲ ಹಂತವಾಗಿ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಲು ಚಾಲನೆ ನೀಡಿದರು. ಜಿಲ್ಲೆಯ 1876 ಮತಗಟ್ಟೆಗಳಲ್ಲಿ ಬಿ.ಎಲ್.ಒ.ಗಳು ಮತದಾರರ ಮನೆ ಬಾಗಿಲಿಗೆ ತೆರಳಿ ಗಣತಿ ನಮೂನೆ (Enumeration Form) ಗಳನ್ನು ಮತದಾರರಿಗೆ ನೀಡುವ ಪ್ರಕ್ರಿಯೆಯನ್ನು ಆರಂಭಿಸಿದರು. ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅವರು ಮಂಗಳವಾರ ಮಂಗಳೂರು ನಗರದ  ಕೆಲವು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್ಐಆರ್ ಪ್ರಕ್ರಿಯೆಗೆ ಚಾಲನೆ- ಮತಗಟ್ಟೆಗಳಿಗೆ ಡಿಸಿ ಭೇಟಿ Read More »

ಕರಾವಳಿ

ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರವೇಶೋತ್ಸವ “ಆಗತ- ಸ್ವಾಗತ” ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಜೂ. 30. ತಾಲೂಕಿನ ಸರಸ್ವತೀ ಆಂಗ್ಲ ಮಾಧ್ಯಮ ಶಾಲೆ ಹನುಮಾನ್ ನಗರದಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಮಕ್ಕಳ ಪ್ರವೇಶೋತ್ಸವ ಕಾರ್ಯಕ್ರಮವು ಜರಗಿತು. ಪ್ರಸಕ್ತ ಸಾಲಿನಲ್ಲಿ ಸಂಸ್ಥೆಗೆ ದಾಖಲಾದ ಮಕ್ಕಳಿಗೆ ಮಾತಾಜಿಯವರಿಂದ ಆರತಿ, ಮಕ್ಕಳಿಂದ ಘೃತಾಹುತಿ, ಭಾರತಮಾತೆಗೆ ಪುಷ್ಪಾರ್ಚನೆ ಮತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದ ಹಿರಿಯರಿಂದ ತಿಲಕಧಾರಣೆ, ಸಿಹಿ ನೀಡುವುದರ ಮೂಲಕ ಪ್ರೀತಿಪೂರ್ವಕವಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಯು.ಆರ್. ಪ್ರೋಪರ್ಟಿಸ್ ಪುತ್ತೂರು ಇದರ ಸಂಸ್ಥಾಪಕರಾದ ಶ್ರೀ ಉಜ್ವಲ್ ಪ್ರಭು

ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರವೇಶೋತ್ಸವ “ಆಗತ- ಸ್ವಾಗತ” ಕಾರ್ಯಕ್ರಮ Read More »

ಕರಾವಳಿ

“ಮಹಿಳೆಯರನ್ನು ಪುರುಷರೇ ಸಾಕಬೇಕೆಂಬ ನಿಯಮವಿಲ್ಲ”: ಕಣ್ಣುಮುಚ್ಚಿ ಜೀವನಾಂಶ ನೀಡದಂತೆ ಹೈಕೋರ್ಟ್ ಸ್ಪಷ್ಟನೆ

(ನ್ಯೂಸ್‌ ಕಡಬ) newskadaba.com, ಜೂ. 30: ಪತಿಗಿಂತ ಹೆಚ್ಚಿನ ಆದಾಯ ಹೊಂದಿರುವ ಮತ್ತು ಯಾವುದೇ ಇತರ ಕೌಟುಂಬಿಕ ಜವಾಬ್ದಾರಿಗಳಿಲ್ಲದ ಆರ್ಥಿಕವಾಗಿ ಸಬಲಳಾದ ಪತ್ನಿಗೆ ಪತಿ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. 2024ರಲ್ಲಿ ವಿವಾಹವಾಗಿದ್ದ ದಂಪತಿ ಕೆಲವೇ ತಿಂಗಳುಗಳಲ್ಲಿ ಪ್ರತ್ಯೇಕವಾಗಿದ್ದರು. ಪತಿಯ ಮಾಸಿಕ ಸಂಬಳ 60,646 ರೂ. ಆಗಿದ್ದರೆ, ಪತ್ನಿಯ ಸಂಬಳ 1 ಲಕ್ಷ ರೂ. ಆಗಿತ್ತು. ಆದಾಗ್ಯೂ, ವಿಚಾರಣಾ ನ್ಯಾಯಾಲಯವು ಪತ್ನಿಗೆ ಪ್ರತಿ ತಿಂಗಳು 20 ಸಾವಿರ ರೂ. ಜೀವನಾಂಶ ನೀಡುವಂತೆ ಆದೇಶಿಸಿತ್ತು.ವಿಚಾರಣಾ

“ಮಹಿಳೆಯರನ್ನು ಪುರುಷರೇ ಸಾಕಬೇಕೆಂಬ ನಿಯಮವಿಲ್ಲ”: ಕಣ್ಣುಮುಚ್ಚಿ ಜೀವನಾಂಶ ನೀಡದಂತೆ ಹೈಕೋರ್ಟ್ ಸ್ಪಷ್ಟನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹೈವೇಗಳಲ್ಲಿ ಸ್ಪೀಡ್ ರಾಡಾರ್ ಕ್ಯಾಮೆರಾ ಎಫೆಕ್ಟ್; ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಭಾರಿ ಇಳಿಕೆ!

(ನ್ಯೂಸ್‌ ಕಡಬ) newskadaba.com, ಜೂ. 30: ಜಿಲ್ಲೆಯ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಪ್ರಮುಖ 6 ಸ್ಥಳಗಳಲ್ಲಿ ಸ್ಪೀಡ್ ರಾಡಾರ್ ಕ್ಯಾಮೆರಾಗಳನ್ನು ಅಳವಡಿಸಿದ ಬೆನ್ನಲ್ಲೇ, ಅತಿವೇಗ ಹಾಗೂ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಭಾರಿ ಇಳಿಕೆ ಕಂಡುಬಂದಿದೆ.ನಿಗದಿತ ವೇಗ ಮಿತಿ ಮೀರಿದ ಲಘು ವಾಹನಗಳಿಗೆ ₹1,000 ಹಾಗೂ ಭಾರಿ ವಾಹನಗಳಿಗೆ ₹2,000 ದಂಡ ವಿಧಿಸಲಾಗುತ್ತಿದೆ. 2024 ರಿಂದ ಮೇ 2026 ರವರೆಗೆ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 635 ಜನರು ಮೃತಪಟ್ಟಿದ್ದು, 3,257 ಜನರು ಗಾಯಗೊಂಡಿದ್ದಾರೆ. ಈ

ಹೈವೇಗಳಲ್ಲಿ ಸ್ಪೀಡ್ ರಾಡಾರ್ ಕ್ಯಾಮೆರಾ ಎಫೆಕ್ಟ್; ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಭಾರಿ ಇಳಿಕೆ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಗನಿಗೆ ರೀ-ಎಂಟ್ರಿ ನಿರಾಕರಿಸಿದ ಶಾಲೆ: ಮನನೊಂದ ತಾಯಿಯಿಂದ ಶಾಲಾ ಶೌಚಾಲಯದಲ್ಲೇ ವಿಷಸೇವನೆ, ಸ್ಥಿತಿ ಗಂಭೀರ

(ನ್ಯೂಸ್‌ ಕಡಬ) newskadaba.com, ಜೂ. 30: 10ನೇ ತರಗತಿ ವಿದ್ಯಾರ್ಥಿಯ ಅಮಾನತು ಆದೇಶ ಹಿಂಪಡೆಯಲು ಹಾಗೂ ಮರುಪ್ರವೇಶ ನೀಡಲು ಶಾಲೆ ನಿರಾಕರಿಸಿದ್ದರಿಂದ ಮನನೊಂದ ತಾಯಿಯೊಬ್ಬರು ಶಾಲೆಯ ಶೌಚಾಲಯದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಸಂತ್ರಸ್ತ ತಾಯಿ ಸುಮಿತ್ರಾ ಅವರನ್ನು ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ದಿನಗಳ ಹಿಂದೆ 10ನೇ ಮತ್ತು 9ನೇ ತರಗತಿ ವಿದ್ಯಾರ್ಥಿಗಳ ನಡುವೆ ಶಾಲೆಯ ಹೊರಗೆ ಗಲಾಟೆ

ಮಗನಿಗೆ ರೀ-ಎಂಟ್ರಿ ನಿರಾಕರಿಸಿದ ಶಾಲೆ: ಮನನೊಂದ ತಾಯಿಯಿಂದ ಶಾಲಾ ಶೌಚಾಲಯದಲ್ಲೇ ವಿಷಸೇವನೆ, ಸ್ಥಿತಿ ಗಂಭೀರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಾಟ್ಸಾಪ್‌ನಿಂದ ಹೊಸ ‘ಯೂಸರ್ ನೇಮ್’ ವೈಶಿಷ್ಟ್ಯ ಪ್ರಕಟ

(ನ್ಯೂಸ್‌ ಕಡಬ) newskadaba.com, ಜೂ.30 :ಮೆಟಾ ಮಾಲೀಕತ್ವದ ಜಗತ್ತಿನ ಪ್ರಮುಖ ಮೆಸೇಜಿಂಗ್ ಆ್ಯಪ್ ‘ವಾಟ್ಸಾಪ್’ ತನ್ನ ಬಳಕೆದಾರರ ಸುರಕ್ಷತೆಗಾಗಿ ಮಹತ್ವದ ‘ಯೂಸರ್ ನೇಮ್’ ವೈಶಿಷ್ಟ್ಯವನ್ನು ಅಧಿಕೃತವಾಗಿ ಘೋಷಿಸಿದೆ. ಇನ್ಮುಂದೆ ಬಳಕೆದಾರರು ಇತರರೊಂದಿಗೆ ಚಾಟ್ ಮಾಡಲು ತಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳುವ ಅಗತ್ಯವಿರುವುದಿಲ್ಲ. ಬದಲಿಗೆ ತಮ್ಮದೇ ಆದ ವಿಶಿಷ್ಟ ಯೂಸರ್ ನೇಮ್ ಬಳಸಬಹುದು.ದೊಡ್ಡ ಗ್ರೂಪ್‌ಗಳಿಗೆ ಸೇರಿದಾಗ ಅಥವಾ ಅಪರಿಚಿತರಿಗೆ ಮೊದಲ ಬಾರಿಗೆ ಸಂದೇಶ ಕಳುಹಿಸುವಾಗ ಫೋನ್ ಸಂಖ್ಯೆಗಳು ಸ್ವಯಂಚಾಲಿತವಾಗಿ ಹೈಡ್ ಆಗಲಿವೆ. ಇನ್‌ಸ್ಟಾಗ್ರಾಮ್ ಮಾದರಿಯಲ್ಲಿ ವಾಟ್ಸಾಪ್‌ನಲ್ಲಿ ಯಾರನ್ನಾದರೂ

ವಾಟ್ಸಾಪ್‌ನಿಂದ ಹೊಸ ‘ಯೂಸರ್ ನೇಮ್’ ವೈಶಿಷ್ಟ್ಯ ಪ್ರಕಟ Read More »

ಕರಾವಳಿ, ಕರ್ನಾಟಕ, ತಂತ್ರಜ್ಞಾನ, ಬ್ರೇಕಿಂಗ್ ನ್ಯೂಸ್

ದೇಶದಲ್ಲಿ ಇಂಧನ ಕೊರತೆ ಭೀತಿ ಮುಕ್ತಾಯ; ತುರ್ತು ನಿಯಂತ್ರಣ ಕ್ರಮಗಳ ಆದೇಶ ವಾಪಸ್

(ನ್ಯೂಸ್‌ ಕಡಬ) newskadaba.com, ಜೂ.30 ದೇಶದಲ್ಲಿ ಇಂಧನ ಪೂರೈಕೆ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಿರುವುದನ್ನು ಪರಿಗಣಿಸಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಜೂನ್ 29 ರಂದು ಹೊಸ ಆದೇಶವೊಂದನ್ನು ಹೊರಡಿಸಿದೆ. ಜೂನ್ 12 ರಂದು ಇಂಧನ ಕೊರತೆ ಮತ್ತು ಕಾಳಸಂತೆಯನ್ನು ತಡೆಯುವ ಉದ್ದೇಶದಿಂದ ಹೇರಲಾಗಿದ್ದ ತುರ್ತು ನಿಯಂತ್ರಣ ಕ್ರಮಗಳು ಹಾಗೂ ವಾಣಿಜ್ಯ ಗ್ರಾಹಕರ ಮೇಲಿನ ಇಂಧನ ಖರೀದಿ ಮಿತಿಗಳು  ಸಾರ್ವಜನಿಕ ಹಿತದೃಷ್ಟಿಯಿಂದ ಇನ್ನು ಮುಂದೆ ಅಗತ್ಯವಿಲ್ಲ ಎಂದು ಸಚಿವಾಲಯವು ಸ್ಪಷ್ಟಪಡಿಸಿದೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಸಗಟು

ದೇಶದಲ್ಲಿ ಇಂಧನ ಕೊರತೆ ಭೀತಿ ಮುಕ್ತಾಯ; ತುರ್ತು ನಿಯಂತ್ರಣ ಕ್ರಮಗಳ ಆದೇಶ ವಾಪಸ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top