ಮಂಗಳೂರು: ನೂತನ ಡಿಸಿ ದರ್ಶನ್ ಎಚ್.ವಿ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಜೂ. 19. ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ದರ್ಶನ್ ಎಚ್ ವಿ ಅವರು ಬುಧವಾರದಂದು ಸಂಜೆ ಅಧಿಕಾರ ಸ್ವೀಕರಿಸಿದರು. ನಿರ್ಗಮನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿದರು. ಮುಲ್ಲೈ ಮುಗಿಲನ್ ಅವರು 2023ರ ಜೂ.17ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ 2 ವರ್ಷ ಪುರ್ಣಗೊಳಿಸಿರುವ ಬೆನ್ನಲ್ಲೇ ಅವರಿಗೆ ವರ್ಗಾವಣೆಯಾಗಿದೆ. 2016ರ ಐಎಎಸ್‌ ಬ್ಯಾಚ್‌ನ ಅಧಿಕಾರಿಯಾಗಿರುವ ದರ್ಶನ್‌ ಎಚ್‌.ವಿ ಅವರು ವಾಣಿಜ್ಯ ತೆರಿಗೆಗಳ ಇಲಾಖೆಯ […]

ಮಂಗಳೂರು: ನೂತನ ಡಿಸಿ ದರ್ಶನ್ ಎಚ್.ವಿ ಅಧಿಕಾರ ಸ್ವೀಕಾರ Read More »

ಕರಾವಳಿ

ಬೈಕ್ ಸ್ಕಿಡ್ ಆಗಿ ಯುವಕರಿಬ್ಬರಿಗೆ ಗಾಯ..!

(ನ್ಯೂಸ್ ಕಡಬ) newskadaba.com ವಿಟ್ಲ, ಜೂ. 19. ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಯುವಕರಿಬ್ಬರು ಗಂಭೀರ ಗಾಯಗೊಂಡ ಘಟನೆ ಚಂದಳಿಕೆ ಸಮೀಪ ಕಲ್ಲಕಟ್ಟ ಎಂಬಲ್ಲಿ ನಡೆದಿದೆ. ಗಾಯಾಳುಗಳನ್ನು ಹರ್ಷ ಮತ್ತು ನಾಗೇಶ್ ಎಂದು ಗುರುತಿಸಲಾಗಿದ್ದು, ಸದ್ಯ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.

ಬೈಕ್ ಸ್ಕಿಡ್ ಆಗಿ ಯುವಕರಿಬ್ಬರಿಗೆ ಗಾಯ..! Read More »

ಕರಾವಳಿ, ಕ್ರೈಮ್ ನ್ಯೂಸ್

ನೇತ್ರಾವದಿ ನದಿ ದಡದಲ್ಲಿ ಮೊಸಳೆ ಪತ್ತೆ- ಆತಂಕದಲ್ಲಿ ಸ್ಥಳೀಯರು

(ನ್ಯೂಸ್ ಕಡಬ) newskadaba.com ಜೂ. 19. ಕುಮಾರಧಾರ ನದಿ ದಡದಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಹಾಗೆಂದು ಮೊಸಳೆ ನೋಡಲು ಹೋದ ಜನರನ್ನು ಕಂಡ ಮೊಸಳೆಯು ಬಾಯಗಳಿಸಿ ಆಕ್ರಮಣಕಾರಿ ರೀತಿಯಲ್ಲಿ ಜನರ ಕಡೆ ನೋಡಿ ನದಿ ನೀರಿಗೆ ಇಳಿದು ಹೋದ ಘಟನೆ ಬುಧವಾರ ಸಂಜೆ ಉಪ್ಪಿನಂಗಡಿಯಲ್ಲಿ ನಡೆದಿದೆ.   ಇಲ್ಲಿನ ಶೇಖಬ್ಬ ಹಾಜಿ ಎಂಬವರ ಮನೆಯ ಬಳಿ ಕುಮಾರಧಾರ ನದಿಗೆ ಇಳಿಯುವ ದಾರಿಯ ಬಳಿ ನದಿ ದಡದಲ್ಲಿ ಮೊಸಳೆಯು ವಿಶ್ರಾಂತಿ ಪಡೆಯುವುದನ್ನು ದೂರದಿಂದ ಗಮನಿಸಿದ ಮಕ್ಕಳು ಇದನ್ನು ಸ್ಥಳೀಯ ನಿವಾಸಿಗಳಾದ

ನೇತ್ರಾವದಿ ನದಿ ದಡದಲ್ಲಿ ಮೊಸಳೆ ಪತ್ತೆ- ಆತಂಕದಲ್ಲಿ ಸ್ಥಳೀಯರು Read More »

ಕರಾವಳಿ
crime, arrest, suspected

ಅಪಾಯಕಾರಿ ಬಸ್ ಚಾಲನೆ- ಚಾಲಕನ ಬಂಧನ

(ನ್ಯೂಸ್ ಕಡಬ) newskadaba.com ಜೂ. 19. ಬಸ್ ಚಾಲಕನೊಬ್ಬ ಅಪಾಯಕಾರಿ ಹಾಗೂ ಅಜಾಗರೂಕತೆಯ ಚಾಲನೆಯಿಂದ ವಾಹನ ಚಲಾಯಿಸಿ ಪ್ರಯಾಣಿಕರು ಮತ್ತು ಸಾರ್ವಜನಿಕರಲ್ಲಿ ಭಯ ಸೃಷ್ಟಿಸಿರುವ ವಿಡಿಯೋ ಜೂನ್ 17ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಉಡುಪಿ ಸಂಚಾರ ಪೊಲೀಸರು ತನಿಖೆ ನಡೆಸಿ ಆರೋಪಿ ಚಾಲಕ ದೇವರಾಜ್ ಎಂಬಾತನನ್ನು ಬಂಧಿಸಿದ್ದಾರೆ. ಇವರು ಶ್ರೀ ದುರ್ಗಾಂಬಾ ಬಸ್ ಅನ್ನು ಎನ್‌ಎಚ್ 169ಎ ಸಾರ್ವಜನಿಕ ರಸ್ತೆಯ

ಅಪಾಯಕಾರಿ ಬಸ್ ಚಾಲನೆ- ಚಾಲಕನ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ನಿವೃತ್ತ ಸೈನಿಕ ಹೃದಯಾಘಾತದಿಂದ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜೂ.18. ಭಾರತೀಯ ಸೇನೆಯಿಂದ ನಿವೃತ್ತಿ ಪಡೆದು ಊರಿನಲ್ಲಿ ನೆಲೆಸಿದ್ದ ಸೈನಿಕರೋರ್ವರು ಡಿಢೀರ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಘಟನೆ ಬುಧವಾರ ರಾತ್ರಿ ಕಡಬದಲ್ಲಿ ನಡೆದಿದೆ. ಮೃತರನ್ನು ಮೂಲತಃ ಕೊಂಬಾರು ನಿವಾಸಿ ಪ್ರಸ್ತುತ ಕಳಾರ ಸಮೀಪದ ಅಲಾರ್ಮೆಯಲ್ಲಿ ವಾಸವಾಗಿದ್ದ ರಂಗಸ್ವಾಮಿ ಎಂಬವರ ಪುತ್ರ ನಿವೃತ್ತ ಸೈನಿಕ ಪ್ರಭಾಕರನ್ ಎಂದು ಗುರುತಿಸಲಾಗಿದೆ. ಒಂದು ವರ್ಷದ ಹಿಂದಷ್ಟೇ ಸೇನೆಯಿಂದ ನಿವೃತ್ತಿ ಪಡೆದು ಊರಿಗೆ ಆಗಮಿಸಿದ್ದ ಅವರು ಹೆತ್ತವರೊಂದಿಗೆ ಕುಟುಂಬ ಸಮೇತರಾಗಿ ವಾಸವಿದ್ದರು. ರಂಗಸ್ವಾಮಿ ಮತ್ತು‌ ಸೆಲ್ಲಾಯಿ ದಂಪತಿಗಳಿಗೆ

ಕಡಬ: ನಿವೃತ್ತ ಸೈನಿಕ ಹೃದಯಾಘಾತದಿಂದ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಎಡಭಾಗಕ್ಕೆ ತಿರುಗಿ ಮಲಗುವುದರಿಂದಾಗುವ ಪ್ರಯೋಜನಗಳೇನು?

(ನ್ಯೂಸ್ ಕಡಬ) newskadaba.com ಜೂ. 19. ನಮ್ಮ ಹಿರಿಯರು ಈಗಿನ ವಿಜ್ಞಾನ ಬರುವ ಮುಂಚೆಯೇ ಒಂದಷ್ಟು ಆರೋಗ್ಯ ಸಂಬಂಧ ಕ್ರಮಗಳನ್ನು ಮಾಡಿದ್ದಾರೆ. ಅದಕ್ಕೆ ಹೇಳೋದು ಹಿರಿಯರು ಹೇಳಿದ್ದನ್ನು ಕೇಳಬೇಕು ಎಂದು. ಹೌದು, ಹಿರಿಯರು ಕೆಲವೊಂದು ನಿಯಮಗಳನ್ನು ಮಾಡಬೇಕು, ಕೆಲವೊಂದು ನಿಯಮಗಳನ್ನು ಮಾಡಬಾರದು ಎಂದು ಹೇಳುತ್ತಾರೆ. ಮಲಗುವಾಗ ಎಡಕ್ಕೆ ತಿರುಗಿ ಮಲಗಬೇಕು ಅಂತ ಹೇಳ್ತಾರೆ. ಅದನ್ನೇ ಈಗ ವೈದ್ಯರೂ ಹೌದೆಂದು ಪ್ರತಿಪಾದಿಸ್ತಾರೆ. ಯಾಕೆ ಎಡಮಗ್ಗುಲಲ್ಲೇ ಮಲಗಬೇಕು.. ಓದಿ ನೋಡಿ.. ಎಡ ಮಗ್ಗುಲಲ್ಲಿ ಮಲಗುವುದರಿಂದ ಹೃದಯದ ಮೇಲೆ ಒತ್ತಡ ಉಂಟಾಗುವುದಿಲ್ಲ.

ಎಡಭಾಗಕ್ಕೆ ತಿರುಗಿ ಮಲಗುವುದರಿಂದಾಗುವ ಪ್ರಯೋಜನಗಳೇನು? Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ಪ್ರಿಯಕರನೊಂದಿಗೆ ಹೋಟೆಲ್ ರೂಂ ನಲ್ಲಿ ಸಿಕ್ಕಿಬಿದ್ದ ಪತ್ನಿ..!

(ನ್ಯೂಸ್ ಕಡಬ) newskadaba.com ಜೂ. 19. ಯುವತಿಯೋರ್ವಳು ಪ್ರಿಯಕರನೊಂದಿಗೆ ಹೋಟೆಲ್‌ನ ರೂಂ ನಲ್ಲಿ ಮೋಜು ಮಾಡುತ್ತಿರುವ ವೇಳೆ ಸಡನ್‌ ಆಗಿ ಪತಿಯ ಆಗಮಿಸಿದ್ದು, ಆಘಾತಕ್ಕೊಳಗಾದ ಪತ್ನಿ ತಕ್ಷಣವೇ ಹೋಟೆಲ್‌ನ ಛಾವಣಿಯಿಂದ ಹಾರಿ ಅಲ್ಲಿಂದ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ನಡೆದಿದೆ. ಸದ್ಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿವಾಹಿತ ಮಹಿಳೆಯೋರ್ವಳು ತನ್ನ ಪ್ರಿಯಕರನೊಂದಿಗೆ ಮೋಜು ಮಾಡಲು ಹೋಟೆಲ್‌ ರೂಮ್ ಗೆ ತಲುಪಿದ್ದು, ಆದರೆ ಆಕೆಯ ಪತಿ ಪೊಲೀಸರೊಂದಿಗೆ ಆಕೆಯ ಹಿಂದಿನಿಂದ ಬರುತ್ತಿರುವುದು ಅವಳ

ಪ್ರಿಯಕರನೊಂದಿಗೆ ಹೋಟೆಲ್ ರೂಂ ನಲ್ಲಿ ಸಿಕ್ಕಿಬಿದ್ದ ಪತ್ನಿ..! Read More »

ರಾಷ್ಟ್ರೀಯ ನ್ಯೂಸ್

BPCL ನಲ್ಲಿ ಭರ್ಜರಿ ಉದ್ಯೋಗಾವಕಾಶ- ಆಸಕ್ತರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಜೂ. 19. ಉದ್ಯೋಗವಿಲ್ಲದೇ ಅಲೆದಾಡುತ್ತಿರುವವರಿಗೆ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ (BPCL) ನಲ್ಲಿ ಭರ್ಜರಿ ಉದ್ಯೋಗವಕಾಶಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಸರ್ಕಾರಿ ನೌಕರಿ ಬೇಕು ಎಂದು ಕಾಯುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಒಂದು ಸುವರ್ಣಾವಕಾಶ ನೀಡಿದಂತಾಗಿದೆ. BPCL ನ ವಿವಿಧ ವಿಭಾಗಗಳಲ್ಲಿ ಅನೇಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು

BPCL ನಲ್ಲಿ ಭರ್ಜರಿ ಉದ್ಯೋಗಾವಕಾಶ- ಆಸಕ್ತರಿಂದ ಅರ್ಜಿ ಆಹ್ವಾನ Read More »

ಉದ್ಯೋಗ

ವಿದ್ಯುತ್ ಪ್ರಸರಣ ಇಲಾಖೆಯಿಂದ 35 ಸಾವಿರ ಹುದ್ದೆ ಶೀಘ್ರ ಭರ್ತಿ- ಸಿಎಂ

(ನ್ಯೂಸ್ ಕಡಬ) newskadaba.com ಜೂ. 19. ವಿದ್ಯುತ್‌ ಪ್ರಸರಣ ಇಲಾಖೆಯಲ್ಲಿ ಖಾಲಿ ಇರುವ 35,000 ಸಾವಿರ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಮತ್ತು ಇಲಾಖೆಯ 532 ಮಂದಿ ಪೌರ ಕಾರ್ಮಿಕರ ಹುದ್ದೆಯನ್ನು ಕಾಯಂ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಅವರು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ನೌಕರರ ಸಂಘದ ವಜ್ರ ಮಹೋತ್ಸವವನ್ನು ಉದ್ಘಾಟಿಸಿ, ವಜ್ರಜ್ಯೋತಿ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿ ಮಾತನಾಡಿದರು.

ವಿದ್ಯುತ್ ಪ್ರಸರಣ ಇಲಾಖೆಯಿಂದ 35 ಸಾವಿರ ಹುದ್ದೆ ಶೀಘ್ರ ಭರ್ತಿ- ಸಿಎಂ Read More »

ಕರ್ನಾಟಕ

FASTag ಆಧಾರಿತ ವಾರ್ಷಿಕ ಪಾಸ್ ಘೋಷಿಸಿದ ಕೇಂದ್ರ ಸರಕಾರ ಆ.15ರಿಂದ ಜಾರಿಗೆ

(ನ್ಯೂಸ್ ಕಡಬ) newskadaba.com ಜೂ. 18. ಇನ್ನುಮುಂದೆ ಹೆದ್ದಾರಿಯಲ್ಲಿ ಯಾವುದೇ ತೊಂದರೆಯಿಲ್ಲದೇ ಪ್ರಯಾಣಕ್ಕೆ ಅನುಕೂಲವಾಗುವಂತೆ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಪರಿಚಯಿಸುತ್ತಿರುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬುಧವಾರದಂದು ಘೋಷಣೆ ಮಾಡಿದೆ. ಈ ಕುರಿತು X ನಲ್ಲಿ ಪೋಸ್ಟ್ ಮಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, 2025ರ ಆಗಸ್ಟ್ 15ರಿಂದ ಜಾರಿಗೆ ಬರುವಂತೆ ಒಂದು ವರ್ಷಕ್ಕೆ ಈ ಪಾಸ್‌ ನ ಬೆಲೆ 3,000 ರೂ.ಗಳಾಗಿರುತ್ತದೆ ಎಂದು ಹೇಳಿದ್ದಾರೆ. ಇತ್ತೀಚಿನ ಫಾಸ್ಟ್ಟ್ಯಾಗ್ ಪಾಸ್ ಕಾರುಗಳು, ಜೀಪ್

FASTag ಆಧಾರಿತ ವಾರ್ಷಿಕ ಪಾಸ್ ಘೋಷಿಸಿದ ಕೇಂದ್ರ ಸರಕಾರ ಆ.15ರಿಂದ ಜಾರಿಗೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top