ಮನಪಾ ಅವ್ಯವಹಾರದ ಆರೋಪ ಲೋಕಾಯುಕ್ತ ದಿಢೀರ್ ದಾಳಿ

(ನ್ಯೂಸ್ ಕಡಬ) newskadaba.com ಜೂ. 22. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅವ್ಯವಹಾರ ಹಾಗೂ ಭ್ರಷ್ಟಾಚಾರದ ನಡೆದಿರುವ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆ ಲೋಕಾಯುಕ್ತ ದ.ಕ. ಜಿಲ್ಲಾ ಅಧೀಕ್ಷಕ (ಪ್ರಭಾರ) ಕುಮಾರಚಂದ್ರ ನೇತೃತ್ವದಲ್ಲಿ ದ.ಕ ಮತ್ತು ಉಡುಪಿ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಶನಿವಾರದಂದು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಆರೋಪಕ್ಕೆ ಸಂಬಂಧಪಟ್ಟ ಕೆಲವು ದಾಖಲೆ ಪತ್ರಗಳು ಲಭಿಸಿದೆ ಎನ್ನಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಏಜೆಂಟರ ಹಾವಳಿ ಹಾಗೂ ಭ್ರಷ್ಟಾಚಾರ ಮಿತಿ ಮೀರಿದ್ದು, ಸಾರ್ವಜನಿಕರು ಭಾರೀ ತೊಂದರೆ […]

ಮನಪಾ ಅವ್ಯವಹಾರದ ಆರೋಪ ಲೋಕಾಯುಕ್ತ ದಿಢೀರ್ ದಾಳಿ Read More »

ಕರಾವಳಿ

ಲಾರಿ ಢಿಕ್ಕಿ- ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 22. ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಫರಂಗಿಪೇಟೆ ಸಮೀಪದ ಹತ್ತನೇ ಮೈಲುಕಲ್ಲು ಎಂಬಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕಳೆಂಜಬೈಲು ನಿವಾಸಿ ಇಬ್ರಾಹಿಂ ಎನ್ ಎಂದು ಗುರುತಿಸಲಾಗಿದೆ.‌‌‌‌ ದ್ವಿಚಕ್ರ ವಾಹನ ಮಂಗಳೂರಿನಿಂದ ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದ ವೇಳೆ ಮಂಗಳೂರಿನಿಂದ ಬೆಂಗಳೂರು ‌ಕಡೆಗೆ ತೆರಳುತ್ತಿದ್ದ ಮೀನಿನ ಲಾರಿ ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆನ್ನಲಾಗಿದೆ.

ಲಾರಿ ಢಿಕ್ಕಿ- ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಟೀನೇಜ್ ನವರಿಗೆ ಇನ್ಸ್ಟಾಗ್ರಾಂ ನಲ್ಲಿ ಹೊಸ ಖಾತೆ ಪ್ರಾರಂಭಿಸಿದ ಮೆಟಾ..!

(ನ್ಯೂಸ್ ಕಡಬ) newskadaba.com ಜೂ. 22. ಹದಿಹರೆಯದವರ ಆನ್ ಲೈನ್ ಸುರಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಮೆಟಾ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಹೊಸ “ಟೀನ್ ಅಕೌಂಟ್ಸ್” ಅನ್ನು ಪರಿಚಯಿಸಿದೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರಿಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಈ ಖಾತೆಗಳು ಹೆಚ್ಚಿನ ಗೌಪ್ಯತೆ ಸೆಟ್ಟಿಂಗ್ ಮತ್ತು ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರುತ್ತವೆ. ಈ ಹೊಸ ಖಾತೆಗಳು ಗೌಪ್ಯತೆಗೆ ಒತ್ತು ನೀಡುತ್ತವೆ ಮತ್ತು ಹದಿಹರೆಯದವರು ವೀಕ್ಷಿಸಬಹುದಾದ ವಿಷಯವನ್ನು ನಿರ್ಬಂಧಿಸುತ್ತದೆ ಎನ್ನಲಾಗಿದೆ. ಅವರು ಪ್ಲಾಟ್ ಫಾರ್ಮ್ ನಲ್ಲಿ ಕಳೆಯುವ ಸಮಯ ಸೀಮಿತವಾಗಿರುತ್ತದೆ.

ಟೀನೇಜ್ ನವರಿಗೆ ಇನ್ಸ್ಟಾಗ್ರಾಂ ನಲ್ಲಿ ಹೊಸ ಖಾತೆ ಪ್ರಾರಂಭಿಸಿದ ಮೆಟಾ..! Read More »

ತಂತ್ರಜ್ಞಾನ

ರಾಜ್ಯದ ಸರಕಾರಿ ಶಾಲೆಗಳಲ್ಲಿ ‘AI’ ಹಾಜರಾತಿ ತಂತ್ರಜ್ಞಾನ ಬಳಕೆಗೆ ಮುಂದಾದ ಸರಕಾರ

(ನ್ಯೂಸ್ ಕಡಬ) newskadaba.com ಜೂ. 22. ಪ್ರಸಕ್ತ ವರ್ಷದಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹೆಸರು ಕೂಗಿ ಹಾಜರಾತಿ ಪಡೆಯುವುದಕ್ಕೆ ಬದಲಾಗಿ, ಶಿಕ್ಷಕರು ಮೊಬೈಲ್‌ನಲ್ಲೇ ವಿದ್ಯಾರ್ಥಿಗಳ ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಹಾಜರಾತಿ ದಾಖಲಿಸಿಕೊಳ್ಳಲಿದ್ದಾರೆ. ನಿರಂತರ’ ಯೋಜನೆಯಡಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು ಸೇರಿ 52,686 ಶಾಲೆಗಳ 52 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಾಜರಾತಿಯನ್ನು ಕೃತಕ ಬುದ್ಧಿಮತ್ತೆ ಚಾಲಿತ, ಮುಖ ಚಹರೆ ಗುರುತು ಆಧಾರಿತವಾಗಿ (ಎಐ ಫೇಶಿಯಲ್ ರಿಕಗ್ನಿಷನ್) ತೆಗೆದುಕೊಳ್ಳಲಾಗುತ್ತದೆ. ಈ ಯೋಜನೆಯು ಸುಮಾರು 5

ರಾಜ್ಯದ ಸರಕಾರಿ ಶಾಲೆಗಳಲ್ಲಿ ‘AI’ ಹಾಜರಾತಿ ತಂತ್ರಜ್ಞಾನ ಬಳಕೆಗೆ ಮುಂದಾದ ಸರಕಾರ Read More »

ಕರ್ನಾಟಕ

ಇಸ್ರೇಲ್- ಇರಾನ್ ಸಂಘರ್ಷಕ್ಕೆ ಅಮೇರಿಕಾ ಎಂಟ್ರಿ ಇರಾನ್ ನ ಪರಮಾಣು ಕೇಂದ್ರಕ್ಕೆ ಅಮೇರಿಕಾ ದಾಳಿ

(ನ್ಯೂಸ್ ಕಡಬ) newskadaba.com ಜೂ. 22. ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧಕ್ಕೆ ರಾ್ತರೋರಾತ್ರಿ ಅಮೆರಿಕ ಎಂಟ್ರಿ ಕೊಟ್ಟಿದ್ದು, ಇರಾನ್‌ನ ಮೂರು ಪರಮಾಣು ತಾಣಗಳಾದ ಫೋರ್ಡೋ, ನಟಾಂಜ್, ಎಸ್ಪಹಾನ್ ಮೇಲೆ ಅಮೆರಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಇರಾನ್‌ನ 3 ಪರಮಾಣು ನೆಲೆಗಳಾದ ಫೋರ್ಡೋ, ನಟಾಂಜ್ ಮತ್ತು ಇಸ್ಪಹಾನ್ ಮೇಲೆ ನಡೆಸಿರುವ ದಾಳಿ ಯಶಸ್ವಿಯಾಗಿದೆ. ಎಲ್ಲಾ ಯುದ್ಧ ವಿಮಾನಗಳು ಸುರಕ್ಷಿತವಾಗಿ ತಮ್ಮ ನೆಲೆಗೆ ಮರಳುತ್ತಿವೆ. ಈಗ

ಇಸ್ರೇಲ್- ಇರಾನ್ ಸಂಘರ್ಷಕ್ಕೆ ಅಮೇರಿಕಾ ಎಂಟ್ರಿ ಇರಾನ್ ನ ಪರಮಾಣು ಕೇಂದ್ರಕ್ಕೆ ಅಮೇರಿಕಾ ದಾಳಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 21. ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಆಚರಿಸಲಾಯಿತು.   ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆಪ್ತ ಸಮಾಲೋಚಕರಾದ ಡಾ. ಮಂಜುಳಾ ರಾವ್‍ರವರು ಆಗಮಿಸಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಕೇವಲ ಪರೀಕ್ಷೆಯ ಅಂಕಗಳಿಗೆ ಮಾತ್ರ ಪ್ರಾಮುಖ್ಯತೆ ನೀಡುತ್ತಿರುವ ಈ ಪ್ರಸ್ತುತ ಸಮಯದಲ್ಲಿ ಶಕ್ತಿ ಶಾಲೆಯು ಅಂಕದ ಜೊತೆಗೆ ಸಂಸ್ಕಾರ ಸಂಸ್ಕೃತಿಯನ್ನು ಕೂಡ ಮಕ್ಕಳಿಗೆ ಪರಿಚಯಿಸುತ್ತಿದೆ. ಇದು ತುಂಬಾ ಸಂತೋಷಕರವಾದ

ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ Read More »

ಕರಾವಳಿ

ಪೇದೆಗಳ ಟೋಪಿ ಬದಲಾವಣೆ ಇಲ್ಲ- ಸರಕಾರದಿಂದ ಮಹತ್ವದ ನಿರ್ಧಾರ

(ನ್ಯೂಸ್ ಕಡಬ) newskadaba.com ಜೂ. 21. ರಾಜ್ಯದಲ್ಲಿ ಹೆಡ್ ಕಾನ್ಸ್ಟೆಬಲ್ ಹಾಗೂ ಕಾನ್ ಸ್ಟೇಬಲ್ ಗಳು ಈಗಲೂ ಬ್ರಿಟಿಷ್ ಕಾಲದ ಟೋಪಿಯನ್ನು ಧರಿಸುತ್ತಿದ್ದು ಈ ಟೋಪಿ ಬದಲಾವಣೆಗೆ ಕೂಗು ಮೊದಲಿನಿಂದಲೂ ಕೇಳಿಬರುತ್ತಿತ್ತು. ಕೆಲವು ಸಮಯಗಳ ಹಿಂದೆ ಸರ್ಕಾರವು ಕೂಡ ಇದಕ್ಕೆ ಅಸ್ತು ಎಂದಿತ್ತು. ಆದರೆ ಇದೀಗ ಪೊಲೀಸ್ ಕಾನ್ಸ್ಟೇಬಲ್ ಟೋಪಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸರ್ಕಾರ ತಿಳಿಸಿದೆ.   ರಾಜ್ಯ ಪೊಲೀಸ್ ಇಲಾಖೆಯ ಹೆಡ್‌ ಕಾನ್‌ಸ್ಟೆಬಲ್ ಹಾಗೂ ಕಾನ್‌ಸ್ಟೆಬಲ್‌ಗಳು ಧರಿಸುವ ಸ್ಲೋಚ್‌ ಹ್ಯಾಟ್‌ ಬದಲಾವಣೆ ಮಾಡದಂತೆ

ಪೇದೆಗಳ ಟೋಪಿ ಬದಲಾವಣೆ ಇಲ್ಲ- ಸರಕಾರದಿಂದ ಮಹತ್ವದ ನಿರ್ಧಾರ Read More »

ಕರ್ನಾಟಕ

ಕಾಲ್ತುಳಿತ ಪ್ರಕರಣ- ವಿಚಾರಣೆಗೆ ಮಾಜಿ ಕಮಿಷನರ್ ದಯಾನಂದ್ ಗೈರು

(ನ್ಯೂಸ್ ಕಡಬ) newskadaba.com ಜೂ. 21. ಬೆಂಗಳೂರಿನ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ತನಿಖೆ ನಡೆಯುತ್ತಿದ್ದು, ಇದೀಗ ವಿಚಾರಣೆಗೆ ಹಾಜರಾಗುವಂತೆ ಜಿಲ್ಲಾಧಿಕಾರಿ ಬಿ.ದಯಾನಂದ್ ಗೆ ನೋಟಿಸ್ ನೀಡಿದ್ದಾರೆ.   ಆದರೆ ಮಾಜಿ ಕಮಿಷನರ್ ಬಿ ದಯಾನಂದ ಅವರು ವಿಚಾರಣೆಗೆ ಗೈರು ಹಾಜರಾಗಿದ್ದಾರೆ.   ಇತ್ತೀಚೆಗಷ್ಟೇ ಆರ್ ಸಿಬಿ ವಿಜಯೋತ್ಸವದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ತನಿಖೆ ನಡೆಸುತ್ತಿರುವ ವಿಚಾರಣಾ ಅಧಿಕಾರಿಯಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್

ಕಾಲ್ತುಳಿತ ಪ್ರಕರಣ- ವಿಚಾರಣೆಗೆ ಮಾಜಿ ಕಮಿಷನರ್ ದಯಾನಂದ್ ಗೈರು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆಸ್ತಿಗಳಿಗೆ ಇ-ಸ್ವತ್ತು ವಿತರಣೆಗೆ ಮಾರ್ಗಸೂಚಿ ಪ್ರಕಟ

(ನ್ಯೂಸ್ ಕಡಬ) newskadaba.com ಜೂ. 21. ಗ್ರಾಮೀಣ ಪ್ರದೇಶದ ಆಸ್ತಿಗಳಿಗೆ ಇ-ಸ್ವತ್ತು ನೀಡುವ ಕುರಿತು ಕರಡು ನಿಯಾಮವಳಿ ಜೂನ್‌ ಅಂತ್ಯಕ್ಕೆ ಸಿದ್ಧವಾಗಲಿದ್ದು, ಜುಲೈ 2ನೇ ವಾರದಲ್ಲಿ ಅಂತಿಮ ನಿಯಮಾವಳಿ ಪೂರ್ಣಗೊಳಿಸಿ ನಂತರ ಇ-ಸ್ವತ್ತು ವಿತರಣೆಗೆ ಮಾರ್ಗಸೂಚಿ ಪ್ರಕಟಿಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಮಾಹಿತಿ ನೀಡಿದ್ದಾರೆ.   ಈ ಕುರಿತು ಮಾತನಾಡಿದ ಅವರು, ವಿಧಾನಮಂಡಲ ಅಧಿವೇಶನದಲ್ಲಿ ಇ-ಸ್ವತ್ತು ವಿತರಣೆಗೆ ಅನುಕೂಲವಾಗುವ ರೀತಿಯಲ್ಲಿ 199-ಬಿ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಇದಕ್ಕೆ ಅನುಗುಣವಾಗಿ ಇ-ಸ್ವತ್ತು ವಿತರಣೆ ಸುಗಮ ಮಾಡಲು

ಆಸ್ತಿಗಳಿಗೆ ಇ-ಸ್ವತ್ತು ವಿತರಣೆಗೆ ಮಾರ್ಗಸೂಚಿ ಪ್ರಕಟ Read More »

ಕರ್ನಾಟಕ

ಶ್ರೀಗೋಪಾಲಕೃಷ್ಣ ವಿದ್ಯಾಲಯ ಬಿಳಿನೆಲೆ- ವಿವಿಧ ಸಂಘಗಳ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಜೂ. 21. ಮನುಷ್ಯನಲ್ಲಿ ದೇಶಪ್ರೇಮ ಬೆಳೆಸಲು ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಶಾಲಾ ಹಂತದಲ್ಲಿ ವಿವಿಧ ಸಂಘಗಳು ಸಹಕಾರಿಯಾಗಲಿವೆ ಎಂದು ಕುಮಾರಸ್ವಾಮಿ ವಿದ್ಯಾಲಯದ ಗಣಿತ ಶಿಕ್ಷಕರಾದ ಆನಂದರವರು ನುಡಿದರು.   ಶ್ರೀ ಗೋಪಾಲಕೃಷ್ಣ ವಿದ್ಯಾಲಯದ ವಿವಿಧ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಸ್ತು ಮತ್ತು ಸಾಮಾಜಿಕ ಪ್ರಜ್ಞೆ ಉತ್ತಮ ನಾಯಕತ್ವ ಬೆಳೆಸಲು ಸಂಘಗಳು ಸಹಾಯ ಮಾಡುತ್ತದೆ. ಇಂದು ವಿದ್ಯಾವಂತರಿಂದ ಸಮಾಜಘಾತುಕ ಕೆಲಸಗಳು ನಡೆಯುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ಇದಕ್ಕೆ ಅವಕಾಶ ಮಾಡಿಕೊಡದೇ ಉತ್ತಮ ಆಲೋಚನೆಯೊಂದಿಗೆ

ಶ್ರೀಗೋಪಾಲಕೃಷ್ಣ ವಿದ್ಯಾಲಯ ಬಿಳಿನೆಲೆ- ವಿವಿಧ ಸಂಘಗಳ ಉದ್ಘಾಟನೆ Read More »

ಕರಾವಳಿ
Scroll to Top