(ನ್ಯೂಸ್ ಕಡಬ) newskadaba.com ಜು. 04. 2025-26ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಯು.ಪಿ.ಎಸ್.ಸಿ ನಾಗರಿಕ ಸೇವಾ ಪರೀಕ್ಷೆ / ಕೆ.ಎ.ಎಸ್ ಗೆಜೆಟೆಡ್ ಪ್ರೋಬೇಷನರ್ ಹಾಸ್ಟೆಲ್ ಸಹಿತ ಪರೀಕ್ಷಾ ಪೂರ್ವ ತರಬೇತಿಯನ್ನು ಬೆಂಗಳೂರಿನ ಹಜ್ ಭವನದಲ್ಲಿ ನೀಡಲಾಗುತ್ತಿದೆ. ಕೆ.ಪಿ.ಎಸ್.ಸಿ ಗ್ರೂಪ್ ಸಿ, ಆರ್.ಆರ್.ಬಿ ಮತ್ತು ಎಸ್.ಎಸ್.ಸಿ ಹಾಸ್ಟೆಲ್ ರಹಿತ ಪರೀಕ್ಷಾ ಪೂರ್ವ ತರಬೇತಿಯನ್ನು ಪ್ರತಿಷ್ಟಿತ ಸಂಸ್ಥೆಗಳ ಮೂಲಕ ನೀಡಲಾಗುತ್ತಿದ್ದು, ತರಬೇತಿಗೆ ಅರ್ಹ ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಆಗಸ್ಟ್ 2 ಕೊನೆಯ ದಿನ. ಅಭ್ಯರ್ಥಿಗಳು https://sevasindhu.karnataka.gov.in ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ ಮತ್ತು ಮಾರ್ಗಸೂಚಿಗಳ ಹೆಚ್ಚಿನ ಮಾಹಿತಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ವೆಬ್ ಸೈಟ್ https://dom.karnataka.gov.in ನಲ್ಲಿ ವೀಕ್ಷಿಸಿ ಹಾಗೂ ಹತ್ತಿರದ ಜಿಲ್ಲಾ ಮತ್ತು ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಪಸಂಖ್ಯಾತರಿಗೆ ಪರೀಕ್ಷಾ ಪೂರ್ವ ತರಬೇತಿ: ಅರ್ಜಿ ಆಹ್ವಾನ









