ರಸ್ತೆ ಅಪಘಾತ- ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ದುರ್ಮರಣ

(ನ್ಯೂಸ್ ಕಡಬ) newskadaba.com ಜೂ. 30. ಲಾರಿ ಮತ್ತು ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಂಟ್ವಾಳದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮೃತಪಟ್ಟ ಘಟನೆ ಬಿ.ಸಿ.ರೋಡಿನ ಅಜ್ಜಿಬೆಟ್ಟು ಕ್ರಾಸ್‌ ಬಳಿ ನಡೆದಿದೆ.   ಮೃತರನ್ನು ಶಂಭೂರು ಕೊಪ್ಪಳ ನಿವಾಸಿ ಚಿದಾನಂದ (50) ಎಂದು ಗುರುತಿಸಲಾಗಿದೆ. ಇವರು ತನ್ನ ದ್ವಿಚಕ್ರ ವಾಹನದಲ್ಲಿ ಬಿ.ಸಿ.ರೋಡ್‌ ಪೇಟೆಯಿಂದ ಅಜ್ಜಿಬೆಟ್ಟು ಕ್ರಾಸ್‌ ಕಡೆಗೆ ದಾಟುವ ಸಂದರ್ಭ ಮಂಗಳೂರು ಕಡೆಗೆ ಸಾಗುತ್ತಿದ್ದ ಟ್ಯಾಂಕರ್‌ ಲಾರಿ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಚಿದಾನಂದರು ಚಕ್ರದಡಿಗೆ […]

ರಸ್ತೆ ಅಪಘಾತ- ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ದುರ್ಮರಣ Read More »

ಕರಾವಳಿ, ಕ್ರೈಮ್ ನ್ಯೂಸ್

ದಕ್ಷಿಣ ಕನ್ನಡ: ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ದೃಷ್ಟಿದೋಷ ಪ್ರಕರಣ

(ನ್ಯೂಸ್ ಕಡಬ) newskadaba.com ಜೂ. 30. ದ.ಕ. ಜಿಲ್ಲೆಯ ಶಾಲಾ ಮಕ್ಕಳಲ್ಲಿ ದೃಷ್ಟಿದೋಷ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಆಘಾತಕಾರಿ ಅಂಶ ವರದಿಯಾಗಿದೆ. ಜಿಲ್ಲೆಯ ಸುಮಾರು ಆರು ಸಾವಿರ ಮಕ್ಕಳಲ್ಲಿ ದೃಷ್ಟಿ ಸಮಸ್ಯೆ ಕಂಡು ಬಂದಿದ್ದು, ಅಂದಾಜು ಐದು ಸಾವಿರ ಮಕ್ಕಳಿಗೆ ಕನ್ನಡಕದ ಅನಿವಾರ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮಕ್ಕಳಲ್ಲಿ ಅತಿಯಾದ ಮೊಬೈಲ್ ಫೋನ್ ಬಳಕೆಯೇ ಇದಕ್ಕೆ ಕಾರಣ ಎಂದು ಆರೋಗ್ಯ ಇಲಾಖೆ ಅಭಿಪ್ರಾಯಪಟ್ಟಿದೆ.   ಅಂದಾಜು 6ರಿಂದ 16 ವರ್ಷ ವಯಸ್ಸಿನ ಮಕ್ಕಳಲ್ಲಿ ದೃಷ್ಟಿ ದೋಷ ಪ್ರಕರಣ

ದಕ್ಷಿಣ ಕನ್ನಡ: ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ದೃಷ್ಟಿದೋಷ ಪ್ರಕರಣ Read More »

ಕರಾವಳಿ

ಜುಲೈ 1ರಿಂದ ರೈಲು ಹೊರಡುವ 8 ಗಂಟೆ ಮೊದಲು ರಿಸರ್ವೇಷನ್ ಚಾರ್ಟ್ ಬಿಡುಗಡೆ

(ನ್ಯೂಸ್ ಕಡಬ) newskadaba.com ಜೂ. 30. ಜುಲೈ 1ರಿಂದ ರೈಲು ಹೊರಡುವ 8 ಗಂಟೆಯ ಮೊದಲು ರಿಸರ್ವೇಷನ್‌ ಚಾರ್ಟ್ ಬಿಡುಗಡೆ ಮಾಡಲಾಗುತ್ತದೆ ಎಂದು ಭಾರತೀಯ ರೈಲ್ವೇ ಇಲಾಖೆ ತಿಳಿಸಿದೆ.   ಸದ್ಯ 4 ಗಂಟೆಯ ಮೊದಲೇ ರಿಸರ್ವೇಷನ್ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು ಆದರೆ ಜುಲೈ 1 ರಿಂದ ಐಆರ್‌ಸಿಟಿಸಿ ವೆಬ್‌ ಸೈಟ್‌ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಪರಿಶೀಲಿಸಿದ ಬಳಕೆದಾರರಿಗೆ ಮಾತ್ರ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಅನುಮತಿ ನೀಡಲಾಗುವುದು ಎಂದು ಭಾರತೀಯ ರೈಲ್ವೆ ಹೇಳಿದೆ.  

ಜುಲೈ 1ರಿಂದ ರೈಲು ಹೊರಡುವ 8 ಗಂಟೆ ಮೊದಲು ರಿಸರ್ವೇಷನ್ ಚಾರ್ಟ್ ಬಿಡುಗಡೆ Read More »

ಕರ್ನಾಟಕ

ಜಿಲ್ಲಾ ಕಾರಾಗೃಹದಲ್ಲಿ ಮೊಬೈಲ್ ಪತ್ತೆ..!

(ನ್ಯೂಸ್ ಕಡಬ) newskadaba.com ಜೂ. 30. ನಗರದ ಕೊಡಿಯಾಲ್‌ ಬೈಲಿನ ಜಿಲ್ಲಾ ಕಾರಾಗೃಹದಲ್ಲಿ ಪೊಲೀಸ್ ತಪಾಸಣೆಯ ವೇಳೆ 1 ಕೀಪ್ಯಾಡ್ ಮೊಬೈಲ್ ಮತ್ತು 2 ಟಚ್ ಸ್ಕ್ರೀನ್ ಮೊಬೈಲ್ ಫೋನ್ ಹಾಗೂ ಎರಡು ಬಂಡಲ್ ಬೀಡಿಗಳು ಪತ್ತೆಯಾಗಿರುವ ಕುರಿತು ವರದಿಯಾಗಿದೆ.   ಜೈಲಿನಲ್ಲಿ ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣದ ಬಳಿಕ ಕೇಂದ್ರ ಉಪ ವಿಭಾಗದ ಎಸಿಪಿ ಪ್ರತಾಪ್ ಸಿಂಗ್ ಥೋರಟ್ ಜೈಲಿನ ಸುರಕ್ಷತೆಯ ದೃಷ್ಟಿಯಿಂದ ಶೋಧ ಕೈಗೊಂಡಿದ್ದರು. ಈ ವೇಳೆ ಇವೆಲ್ಲ ಪತ್ತೆಯಾಗಿದೆ.   ಮಹಜರು ನಡೆಸಿ

ಜಿಲ್ಲಾ ಕಾರಾಗೃಹದಲ್ಲಿ ಮೊಬೈಲ್ ಪತ್ತೆ..! Read More »

ಕರಾವಳಿ, ಕ್ರೈಮ್ ನ್ಯೂಸ್

“ಅದೊಂದಿತ್ತು ಕಾಲ”- ಶಾಲಾ ಹುಡುಗನ ಪಾತ್ರದಲ್ಲಿ ವಿನಯ್ ರಾಜ್ ಕುಮಾರ್

(ನ್ಯೂಸ್ ಕಡಬ) newskadaba.com ಜೂ. 30. ನಟ ವಿನಯ್ ರಾಜ್‌ಕುಮಾರ್ ಅವರು ‘ಅಂದೊಂದಿತ್ತು ಕಾಲ’ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ಅವರು ಶಾಲಾ ಹುಡುಗನ ಪಾತ್ರಕ್ಕಾಗಿ ದೇಹದ ತೂಕ ಕಡಿಮೆ ಮಾಡಿಕೊಂಡಿದ್ದರು.   ಈ ಕುರಿತು ಮಾತನಾಡಿರುವ ಅವರು, ‘ಈ ಸಿನಿಮಾದಲ್ಲಿ ನಾನು 16 ವರ್ಷದ ಹುಡುಗನ ಗೆಟಪ್‌ ನಲ್ಲಿ ಕಾಣಿಸಿಕೊಳ್ಳುವುದು ಚಾಲೆಂಜಿಂಗ್ ಆಗಿತ್ತು. ಒಂದಷ್ಟು ತೂಕ ಕಡಿಮೆ ಮಾಡಿಕೊಂಡೆ. ಚಿಕ್ಕ ಹುಡುಗನ ಮುಗ್ಧತೆ ತೋರಿಸಬೇಕಿತ್ತು. ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು ಕಷ್ಟವಾಗಿತ್ತು” ಎಂದಿದ್ದಾರೆ.   16ನೇ

“ಅದೊಂದಿತ್ತು ಕಾಲ”- ಶಾಲಾ ಹುಡುಗನ ಪಾತ್ರದಲ್ಲಿ ವಿನಯ್ ರಾಜ್ ಕುಮಾರ್ Read More »

ಸಿನಿಮಾ

ಸೌಂದರ್ಯವರ್ಧಕ ಉತ್ಪನ್ನಗಳ ಮೇಲೆ ಸಮರಕ್ಕೆ ಮುಂದಾದ ಔಷಧ ಇಲಾಖೆ- ಎಲ್ಲಾ ಕಾಸ್ಮೆಟಿಕ್ಸ್ ಗಳ ಪರೀಕ್ಷೆಗೆ ಸೂಚನೆ

(ನ್ಯೂಸ್ ಕಡಬ) newskadaba.com ಜೂ. 30. ಇತ್ತೀಚಿನ ದಿನಗಳಲ್ಲಿ ಕಾಸ್ಮೆಟಿಕ್ ಗಳು ಆರೋಗ್ಯಕ್ಕೆ ಹಾನಿಕಾರಕವಾಗುತ್ತಿದ್ದು, ಯುವಕ-ಯುವತಿಯರಂತೂ ತಕ್ಷಣಕ್ಕೆ ಮುಖ ಹೊಳಪು ಬರಬೇಕು ಅಂತಾ ಹಿಂದೆ ಮುಂದೆ ನೋಡದೆ ಸ್ಟೀರಾಯ್ಡ್ ಬೇಸ್ ಕ್ರೀಮ್‌ ಗಳನ್ನ ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ.   ಕಳೆದ ವಾರವಷ್ಟೇ ಕುಂಕುಮ, ಪ್ಯಾರಸಿಟಮೋಲ್ ಸೇರಿ 15 ಔಷಧಗಳನ್ನು ನಿರ್ಬಂಧ ಮಾಡಿ ಸರಕಾರ ಆದೇಶಿಸಿತ್ತು. ಇದೀಗ ಅನೇಕ ಕಾಸ್ಮೆಟಿಕ್ಸ್‌ ಗಳ ಮೇಲೆ ಕಣ್ಣಿಟ್ಟಿರುವ ಔಷಧ ನಿಯಂತ್ರಣ ಇಲಾಖೆ, ಮತಷ್ಟು ಸೌಂದರ್ಯ ವರ್ಧಕಗಳ ಸ್ಯಾಂಪಲ್ಸ್ ಗೆ ಮುಂದಾಗಿದೆ.  

ಸೌಂದರ್ಯವರ್ಧಕ ಉತ್ಪನ್ನಗಳ ಮೇಲೆ ಸಮರಕ್ಕೆ ಮುಂದಾದ ಔಷಧ ಇಲಾಖೆ- ಎಲ್ಲಾ ಕಾಸ್ಮೆಟಿಕ್ಸ್ ಗಳ ಪರೀಕ್ಷೆಗೆ ಸೂಚನೆ Read More »

ಕರ್ನಾಟಕ

ಕೆಂಪುಕಲ್ಲು ಪಾಯ ಬಂದ್- ಲಾರಿ ಮಾಲಕರಿಂದ ಬೃಹತ್ ಪ್ರತಿಭಟನೆಗೆ ನಿರ್ಧಾರ

(ನ್ಯೂಸ್ ಕಡಬ) newskadaba.com ಜೂ. 30. ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮದಿಂದಾಗಿ ದ.ಕ. ಜಿಲ್ಲೆಯಲ್ಲಿ ಕೆಂಪುಕಲ್ಲು ಪಾಯಗಳು ಬಂದ್ ಆಗಿದ್ದು, ಇದಕ್ಕೆ ಪರಿಹಾರ ಕಲ್ಪಿಸದಿದ್ದಲ್ಲಿ ಜುಲೈ 3ರಂದು ಬೃಹತ್ ಪ್ರತಿಭಟನೆ ನಡೆಸಲು ದ.ಕ ಜಿಲ್ಲಾ ಕೆಂಪುಕಲ್ಲು ಪಾಯ ಹಾಗೂ ಲಾರಿ ಮಾಲಕರ ಒಕ್ಕೂಟ ನಿರ್ಧರಿಸಿದೆ.   ಈ ಬಗ್ಗೆ ಒಕ್ಕೂಟವು ಬಿಸಿರೋಡಿನ ಖಾಸಗಿ ಸಭಾಂಗಣವೊಂದರಲ್ಲಿ ಸಭೆ ನಡೆಸಿ ಚರ್ಚಿಸಿದ್ದು, ಜೂನ್ 30(ಇಂದು) ನಡೆಯಲಿರುವ ಸಭೆಯಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಮುಂದಕ್ಕೆ ರಾಜಕೀಯ ರಹಿತವಾಗಿ ಹೋರಾಟ ನಡೆಸಲು

ಕೆಂಪುಕಲ್ಲು ಪಾಯ ಬಂದ್- ಲಾರಿ ಮಾಲಕರಿಂದ ಬೃಹತ್ ಪ್ರತಿಭಟನೆಗೆ ನಿರ್ಧಾರ Read More »

ಕರಾವಳಿ

ಪುತ್ತೂರು ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಆಶಾಜ್ಯೋತಿ ಪುತ್ತೂರಾಯ ವರ್ಗಾವಣೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 30. ವಿವಿಧ ಸಂಘ ಸಂಸ್ಥೆಗಳ ಮೂಲಕ ಸರಕಾರಿ ಆಸ್ಪತ್ರೆಗೆ ಹಲವು ಸೌಲಭ್ಯಗಳನ್ನು ನೀಡುವ ಮೂಲಕ ಜನಪ್ರಿಯತೆ ಗಳಿಸಿದ್ದ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಆಶಾಜ್ಯೋತಿ ಪುತ್ತೂರಾಯ ಅವರು ಮಡಿಕೇರಿ ಜಿಲ್ಲಾಸ್ಪತ್ರೆಗೆ  ವರ್ಗಾವಣೆಗೊಳ್ಳಲಿದ್ದಾರೆ. ಇದರ ಜೊತೆಗೆ ಅರಿವಳಿಕೆ ತಜ್ಞೆ ಡಾ.ಜಯಕುಮಾರಿ ಅವರು ತುಮಕೂರು ಜಿಲ್ಲಾಸ್ಪತ್ರೆಗೆ, ದಂತ ತಜ್ಞ ಡಾ.ಜೈದೀಪ್ ಅವರು ಸಕಲೇಶಪುರ ತಾಲೂಕು ಆಸ್ಪತ್ರೆಗೆ ಹಾಗೂ ಅರಿವಳಿಕೆ ತಜ್ಞೆ ಡಾ.ಶ್ವೇತಾ ಸುಳ್ಯ ಸರಕಾರಿ ಆಸ್ಪತ್ರೆಗೆ ವರ್ಗಾವಣೆಗೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ವೈದ್ಯರುಗಳ ಕುರಿತು ಕೌನ್ಸಿಲ್

ಪುತ್ತೂರು ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಆಶಾಜ್ಯೋತಿ ಪುತ್ತೂರಾಯ ವರ್ಗಾವಣೆ Read More »

ಕರಾವಳಿ

88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್ ಆಯ್ಕೆ..!

(ನ್ಯೂಸ್ ಕಡಬ) newskadaba.com ಜೂ. 30. ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಸಾಹಿತಿ ಬಾನು ಮುಷ್ತಾಕ್ ಅವರು 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.   ಕಸಾಪ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ ನೇತೃತ್ವದಲ್ಲಿ ಬಳ್ಳಾರಿಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಎಲ್ಲಾ ಪದಾಧಿಕಾರಿಗಳು ಸರ್ವಾನುಮತದಿಂದ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ್ದಾರೆ.   ಬಾನು ಮುಷ್ತಾಕ್ ಅವರು ಬರೆದ ‘ಹಸೀನಾ ಮತ್ತು ಇತರ ಕತೆಗಳು’

88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್ ಆಯ್ಕೆ..! Read More »

ಕರ್ನಾಟಕ

ಮಂಗಳೂರು ಸೇರಿದಂತೆ ರಾಜ್ಯದ 4 ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 30. ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ರಾಜ್ಯದ 4 ವಿಮಾನ ನಿಲ್ದಾಣಗಳ ನಿರ್ದೇಶಕರಿಗೆ ಬಾಂಬ್ ಸ್ಫೋಟಿಸುವ ಕುರಿತು ರವಿವಾರ ಬೆಳಗ್ಗೆ ಇಮೇಲ್ ಮೂಲಕ ಬೆದರಿಕೆಯ ಸಂದೇಶ ಬಂದಿರುವುದಾಗಿ ವರದಿಯಾಗಿದೆ.   ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಿಗೆ ಇಮೇಲ್ ಮೂಲಕ ಬೆದರಿಕೆಯ ಸಂದೇಶ ಬಂದಿದೆ. ಮುಂಜಾಗ್ರತಾ ಕ್ರಮವಾಗಿ ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಹೆಚ್ಚಿಸಲಾಗಿದ್ದು, ಬಜ್ಪೆಯ ಮಂಗಳೂರು ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಮೇಲ್ ಮೂಲಕ ಬೆದರಿಕೆ

ಮಂಗಳೂರು ಸೇರಿದಂತೆ ರಾಜ್ಯದ 4 ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top