ಸರಸ್ವತಿ ವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಸೆ. 08. ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಸೆಪ್ಟೆಂಬರ್ 6ರಂದು ಆಚರಿಸಲಾಯಿತು. 10ನೇ ತರಗತಿಯ ವಿದ್ಯಾರ್ಥಿಗಳಾದ ಸಿಂಚನಾ ಕೆ.ಎಸ್ ಮತ್ತು ರಕ್ಷಾ ಎಂ.ಜೆ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜೀವನದ ಘಟನೆಗಳನ್ನು ಹೇಳುತ್ತಾ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಶ್ರೀಮತಿ ಶೈಲಾ ಶ್ರೀ ರೈ ಎಸ್. ಹಾಗೂ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಸರಸ್ವತಿ ವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ Read More »

ಕರಾವಳಿ

ಮಂಗಳೂರು : ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ಡ್ರೈನೇಜ್ ದುಸ್ಥಿತಿ

(ನ್ಯೂಸ್‌ ಕಡಬ) newskadaba.com,  ಸೆ.08 ಮಂಗಳೂರು: ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಅಭಿವೃದ್ದಿ ಹೊಂದುತ್ತಿರುವ ಮಂಗಳೂರು ನಗರದ ಕೆಲವು ರಸ್ತೆಗಳು ಯಾವ ದುಸ್ಥಿತಿಯಲ್ಲಿವೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಇದರ ಜೊತೆ ನಗರದ ಕೆಲವೆಡೆ ಡ್ರೈನೇಜ್ ಹೋಲ್ ಗಳು ಬಾಯ್ದೆರೆದು ಗಲೀಜು ನೀರು ರಸ್ತೆಯಲ್ಲಿ ಹರಿಯುತ್ತಿರುವ ಸನ್ನಿವೇಶಗಳು ಪದೇ ಪದೇ ಬೆಳಕಿಗೆ ಬರುತ್ತಿವೆ. ಇದೇ ರೀತಿಯ ಸಮಸ್ಯೆ ಮಂಗಳೂರಿನ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ಕಂಡು ಬಂದಿದೆ. ಈ ಭಾಗದಲ್ಲಿ ಕಾಪಿಕಾಡ್ ಗೆ ಹೋಗುವ

ಮಂಗಳೂರು : ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ಡ್ರೈನೇಜ್ ದುಸ್ಥಿತಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಶಿಕ್ಷಕಿಯರಿಗೆ ಶಿವಳ್ಳಿ ಸ್ಪಂದನ ಸನ್ಮಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 08. ಶಿವಳ್ಳಿ ಸ್ಪಂದನ ಕದ್ರಿವಲಯದ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ  ಶಿಕ್ಷಕಿಯರಾದ  ಅಹಲ್ಯ ವೆಂಕಟರಾಜ್ ಮತ್ತು  ಪದ್ಮನಯನ ಸಂಪತ್ ಕುಮಾರ್ ಅವರನ್ನು ಅವರ ಮನೆಯಲ್ಲಿ ಸನ್ಮಾನಿಸಲಾಯಿತು. ಮಂಗಳೂರು ಶಿವಳ್ಳಿ ಸ್ಪಂದನ ಉಪಾಧ್ಯಕ್ಷ ರಾಮಚಂದ್ರ ಭಟ್ ಎಲ್ಲೂರು, ದ.ಕ. ಜಿಲ್ಲಾ ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಶಿವಳ್ಳಿ ಸ್ಪಂದನ ಮಹಿಳಾ ಘಟಕದ ಅಧ್ಯಕ್ಷೆ ರಮಾಮಣಿ, ಶಿವಳ್ಳಿ ಸ್ಪಂದನ  ಕದ್ರಿವಲಯದ ಕಾರ್ಯದರ್ಶಿ ಶೀಲಾ ಜಯಪ್ರಕಾಶ, ಜೊತೆಕಾರ್ಯದರ್ಶಿ ವನಿತಾ ಎಲ್ಲೂರು, ಕೋಶಾಧಿಕಾರಿ ರವಿಕಾಂತ ಭಟ್,

ಶಿಕ್ಷಕಿಯರಿಗೆ ಶಿವಳ್ಳಿ ಸ್ಪಂದನ ಸನ್ಮಾನ Read More »

ಕರಾವಳಿ

ಬಂಟ್ವಾಳ: ಬ್ರಹ್ಮ ಶ್ರೀ ನಾರಾಯಣ ಗುರುಗಳ 171 ನೇ ಜನ್ಮ ದಿನಾಚರಣೆಯ ಅಂಗವಾಗಿ ಗುರು ಜಯಂತಿ ಆಚರಣೆ

(ನ್ಯೂಸ್‌ ಕಡಬ) newskadaba.com,  ಸೆ.08 ಬಂಟ್ವಾಳ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಬಂಟ್ವಾಳ ಇದರ ಆಶ್ರಯದಲ್ಲಿ ನಾರಾಯಣ ಗುರು ವಸತಿ ಶಾಲೆ ಪುಂಜಾಲಕಟ್ಟೆ, ಯುವವಾಹಿನಿ (ರಿ.) ಬಂಟ್ವಾಳ ತಾಲೂಕು ಘಟಕ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ (ರಿ.) ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಂಘ ಇದರ ಸಹಯೋಗದೊಂದಿಗೆ ಬ್ರಹ್ಮ ಶ್ರೀ ನಾರಾಯಣ ಗುರುಗಳ 171 ನೇ ಜನ್ಮದಿನಾಚರಣೆಯ ಅಂಗವಾಗಿ ತಾಲೂಕು ಮಟ್ಟದ ಗುರು ಜಯಂತಿ ಆಚರಣೆ ಬಿಸಿರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು

ಬಂಟ್ವಾಳ: ಬ್ರಹ್ಮ ಶ್ರೀ ನಾರಾಯಣ ಗುರುಗಳ 171 ನೇ ಜನ್ಮ ದಿನಾಚರಣೆಯ ಅಂಗವಾಗಿ ಗುರು ಜಯಂತಿ ಆಚರಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪೆಟ್ರೋಲ್‌, ಡೀಸೆಲ್‌ ಮದ್ಯವನ್ನು ಜಿಎಸ್‌‍ಟಿ ವ್ಯಾಪ್ತಿಗೆ ತರುವ ಯಾವುದೇ ಯೋಜನೆ ಇಲ್ಲ : ನಿರ್ಮಲಾ

(ನ್ಯೂಸ್‌ ಕಡಬ) newskadaba.com ಸೆ.06 : ಪೆಟ್ರೋಲ್‌‍, ಡೀಸೆಲ್‌ ಮತ್ತು ಆಲ್ಕೊಹಾಲ್‌‍ನಂತಹ ಉತ್ಪನ್ನಗಳನ್ನು ಸದ್ಯಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌‍ಟಿ) ವ್ಯಾಪ್ತಿಗೆ ತರುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರೀಯ ಸುದ್ದಿ ವಾಹಿನಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಇದನ್ನು ಖಚಿತಪಡಿಸಿದ್ದು, ಪೆಟ್ರೋಲ್‌‍, ಡೀಸೆಲ್‌ ಮತ್ತು ಆಲ್ಕೊಹಾಲಿಕ್‌ ಪಾನೀಯಗಳನ್ನು ಜಿಎಸ್‌‍ಟಿ ವ್ಯಾಪ್ತಿಗೆ ಒಳಪಡಿಸದಿರಲು ಕಾರಣವೇನೆಂದು ಪ್ರಶ್ನಿಸಿದಾಗ, ಸಚಿವೆ ಸೀತಾರಾಮನ್‌ ಪ್ರಸ್ತುತ ಯೋಜನೆಯಲ್ಲಿ ಇವುಗಳನ್ನು ಸೇರಿಸಿಕೊಳ್ಳುವ ಉದ್ದೇಶವಿಲ್ಲ ಎಂದು ಹೇಳಿದರು.

ಪೆಟ್ರೋಲ್‌, ಡೀಸೆಲ್‌ ಮದ್ಯವನ್ನು ಜಿಎಸ್‌‍ಟಿ ವ್ಯಾಪ್ತಿಗೆ ತರುವ ಯಾವುದೇ ಯೋಜನೆ ಇಲ್ಲ : ನಿರ್ಮಲಾ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸುಳ್ಯ-ಕಾಡಾನೆಗಳ ಹಿಂಡು ಲಗ್ಗೆ- ವಾಹನ ಸಂಚಾರಕ್ಕೆ ತಡೆ, ಕೃಷಿ ನಾಶ

(ನ್ಯೂಸ್‌ ಕಡಬ) newskadaba.com,  ಸೆ.06 ಸುಳ್ಯ:ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಪಾಲಡ್ಕ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸ್ಥಳೀಯರ ತೋಟಗಳಿಗೆ ನುಗ್ಗಿದ ಕಾಡಾನೆಗಳು ,ಅಡಿಕೆ,ತೆಂಗು,ಬಾಳೆ ಇತರ ಕೃಷಿಗಳನ್ನು ನಾಶ ಮಾಡಿದ ಪರಿಣಾಮ ರೈತರಿಗೆ ಅಪಾರ ಬೆಳೆ ನಷ್ಟವಾದ ಘಟನೆ ಉಂಟಾಗಿದೆ. ಬಳಿಕ ಸ್ಥಳೀಯರೆಲ್ಲ ಸೇರಿ ಆನೆಗಳನ್ನು ಕಾಡಿಗೆ ಅಟ್ಟಿದ್ದರು. ಪೂಮಲೆ ಕಾಡಿನಲ್ಲಿ ಕಾಡಾನೆಗಳು ಹಗಲು ಹೊತ್ತಿನಲ್ಲಿ ಬೀಡುಬಿಡುತ್ತಿದ್ದು, ಮತ್ತೆ ರಾತ್ರಿ ಸಮಯ ಕಾಡಾನೆಗಳು ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿರುವ ತೋಟಗಳಿಗೆ ನುಗ್ಗಿ ಬೆಳೆ ನಾಶ ಪಡಿಸುತ್ತಿವೆ. ಬೆಳೆ

ಸುಳ್ಯ-ಕಾಡಾನೆಗಳ ಹಿಂಡು ಲಗ್ಗೆ- ವಾಹನ ಸಂಚಾರಕ್ಕೆ ತಡೆ, ಕೃಷಿ ನಾಶ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಸೈಮಾ ಪ್ರಶಸ್ತಿ ಪ್ರಕಟ; ಸುದೀಪ್ ಅತ್ಯುತ್ತಮ ನಟ, ಉಪೇಂದ್ರ ಅತ್ಯುತ್ತಮ ನಿರ್ದೇಶಕ

(ನ್ಯೂಸ್‌ ಕಡಬ) newskadaba.com ಸೆ.06 : ದುಬೈ: ದಕ್ಷಿಣ ಭಾರತ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2025 (SIIMA 2025) ಕಾರ್ಯಕ್ರಮ ದುಬೈನಲ್ಲಿ ಅದ್ಧೂರಿಯಾಗಿ ನಡೆದಿದೆ. ಕನ್ನಡ ಚಿತ್ರರಂಗದಲ್ಲಿ ಮ್ಯಾಕ್ಸ್ ಸಿನಿಮಾ ನಟನೆಗೆ ಕಿಚ್ಚ ಸುದೀಪ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದ್ದು, ‘ಯುಐ’ ನಿರ್ದೇಶನಕ್ಕೆ ಉಪೇಂದ್ರ ಅವರಿಗೆ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ಸಿಕ್ಕಿದೆ. ಶುಕ್ರವಾರ ರಾತ್ರಿ ದುಬೈಯಲ್ಲಿ ಸೈಮಾ 2025 ಸಮಾರಂಭ ಆಯೋಜಿಸಲಾಗಿತ್ತು. 2024ರಲ್ಲಿ ಬಿಡುಗಡೆಯಾದ ಚಿತ್ರಗಳಿಗೆ ಪ್ರಶಸ್ತಿ ನೀಡಲಾಗಿದೆ. ‘ಮ್ಯಾಕ್ಸ್’ ಸಿನಿಮಾದಲ್ಲಿ ಸುದೀಪ್ ಅವರು ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದರು.

ಸೈಮಾ ಪ್ರಶಸ್ತಿ ಪ್ರಕಟ; ಸುದೀಪ್ ಅತ್ಯುತ್ತಮ ನಟ, ಉಪೇಂದ್ರ ಅತ್ಯುತ್ತಮ ನಿರ್ದೇಶಕ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ಸಿನಿಮಾ

7 ಬಾರಿ ಸಂಚಾರಿ ನಿಯಮ ಉಲ್ಲಂಘನೆ: ಕೊನೆಗೂ ದಂಡ ಪಾವತಿಸಿದ ಸಿಎಂ

(ನ್ಯೂಸ್‌ ಕಡಬ) newskadaba.com ಸೆ.06 : ಬೆಂಗಳೂರು: ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರ ಕಾರು ಕೂಡ ಬರೊಬ್ಬರಿ 7 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ಕಾರಣ ದಂಡ ಹೇರಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಸುವ ಇನೊವಾ ಕಾರು 2024ರಿಂದ ಈವರೆಗೆ ಏಳು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವುದು ಜಂಕ್ಷನ್‌ಗಳಲ್ಲಿ ಅಳವಡಿಸಿರುವ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಅದರಂತೆ ಸಿಎಂ ಸಿದ್ದರಾಮಯ್ಯ ಅವರ ಕಚೇರಿ 2,500 ಸಾವಿರ ರೂಗಳನ್ನು ದಂಡವಾಗಿ ಪಾವತಿಸಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೇ

7 ಬಾರಿ ಸಂಚಾರಿ ನಿಯಮ ಉಲ್ಲಂಘನೆ: ಕೊನೆಗೂ ದಂಡ ಪಾವತಿಸಿದ ಸಿಎಂ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಾಲಕಿಗೆ 40 ದಿನಗಳಲ್ಲಿ 13 ಬಾರಿ ಹಾವು ಕಡಿತ

(ನ್ಯೂಸ್‌ ಕಡಬ) newskadaba.com,  ಸೆ.06 ಲಖನೌ:  ಕಳೆದ 40 ದಿನಗಳ ಅವಧಿಯಲ್ಲಿ ಕಪ್ಪು ಬಣ್ಣದ ಹಾವೊಂದು ತನಗೆ 13 ಬಾರಿ ಕಚ್ಚಿದೆ ಎಂದು 15 ವರ್ಷದ ಬಾಲಕಿಯೊಬ್ಬಳು ದೂರು ನೀಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶ (Uttar Pradesh)ದ ಕೌಶಂಬಿ ಜಿಲ್ಲೆಯ ಬಸ್ತಿ ಭೈಸಾ ಎಂಬ ಸಣ್ಣ ಹಳ್ಳಿಯಲ್ಲಿ ನಡೆದಿದೆ. ಬಾಲಕಿಯ ಈ ಹೇಳಿಕೆಯಿಂದ ಗ್ರಾಮಸ್ಥರು ಭೀತಿಗೊಂಡಿದ್ದಾರೆ. ಅದೇ  ಒಂದು ಹಾವು  ತನಗೆ ಪದೇ ಪದೇ ಬಂದು ಕಚ್ಚುತ್ತಿದೆ ಎಂದು ಬಾಲಕಿ ಹೇಳಿದ್ದಾಳೆ. ಸುಮಾರು 300 ಜನರು

ಬಾಲಕಿಗೆ 40 ದಿನಗಳಲ್ಲಿ 13 ಬಾರಿ ಹಾವು ಕಡಿತ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ- ಮೃತರ ಸಂಖ್ಯೆ 2,200ಕ್ಕೆ ಏರಿಕೆ

(ನ್ಯೂಸ್‌ ಕಡಬ) newskadaba.com,  ಸೆ.06 ಕಾಬೂಲ್‌ : ವಾರಾಂತ್ಯದಲ್ಲಿ ಪೂರ್ವ ಅಫ್ಘಾನಿಸ್ತಾನಕ್ಕೆ ಅಪ್ಪಳಿಸಿದ ಪ್ರಬಲ ಭೂಕಂಪದಲ್ಲಿ 2,200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನದ ಗಡಿಯ ಸಮೀಪವಿರುವ ಪರ್ವತ ಕುನಾರ್ ಪ್ರಾಂತ್ಯದಲ್ಲಿ ಒಟ್ಟು 2,217 ಮಂದಿ ಮೃತಪಟ್ಟಿದ್ದಾರೆ. ಸುಮಾರು 4,000 ಮಂದಿ ಗಾಯಗೊಂಡಿದ್ದಾರೆ. ಭಾನುವಾರ ಮಧ್ಯರಾತ್ರಿಯ ಮೊದಲು ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಪಾಕಿಸ್ತಾನದ ಗಡಿಯಲ್ಲಿರುವ ಕುನಾರ್ ಪ್ರಾಂತ್ಯದಲ್ಲಿ ಅತ್ಯಂತ ಭೀಕರವಾದ ವಿನಾಶಕ್ಕೆ ಕಾರಣವಾಗಿದೆ. ನೂರಾರು ಜನರು ಹತ್ತಿರದ ಆಸ್ಪತ್ರೆಗಳಿಗೆ

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ- ಮೃತರ ಸಂಖ್ಯೆ 2,200ಕ್ಕೆ ಏರಿಕೆ Read More »

ಬ್ರೇಕಿಂಗ್ ನ್ಯೂಸ್
Scroll to Top