ಬಂಟ್ವಾಳ ತಾಲೂಕಿನ ನೂತನ ತಹಶಿಲ್ದಾರ್ ಆಗಿ ಮಂಜುನಾಥ್ ಅಧಿಕಾರ ಸ್ವೀಕಾರ

(ನ್ಯೂಸ್‌ ಕಡಬ) newskadaba.com,  ಸೆ.09 ಬಂಟ್ವಾಳ : ತಾಲೂಕಿನ ನೂತನ ತಹಶಿಲ್ದಾರ್ ಆಗಿ ಮಂಜುನಾಥ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಬಂಟ್ವಾಳ ತಹಶಿಲ್ದಾರ್ ಆಗಿದ್ದ ಅರ್ಚನಾ ಭಟ್ ಅವರು ವರ್ಗಾವಣೆಗೊಂಡ ಬಳಿಕ ತೆರವಾದ ಬಂಟ್ವಾಳ ತಹಶಿಲ್ದಾರ್ ಹುದ್ದೆಗೆ ಕನಕಪುರ ತಾಲೂಕಿನಲ್ಲಿ ತಹಶಿಲ್ದಾರ್ ಅಗಿ ಕರ್ತವ್ಯದಲ್ಲಿದ್ದ ಮಂಜುನಾಥ್ ಅವರನ್ನು ಬಂಟ್ವಾಳಕ್ಕೆ ವರ್ಗಾವಣೆಗೊಳಿಸಿ ಸರಕಾರ ಅದೇಶ ಹೊರಡಿಸಿತ್ತು. ತಿಂಗಳ ಬಳಿಕ ಅಧಿಕೃತವಾಗಿ ಅವರು ಚಾರ್ಜ್ ತೆಗೆದುಕೊಂಡಿದ್ದಾರೆ..

ಬಂಟ್ವಾಳ ತಾಲೂಕಿನ ನೂತನ ತಹಶಿಲ್ದಾರ್ ಆಗಿ ಮಂಜುನಾಥ್ ಅಧಿಕಾರ ಸ್ವೀಕಾರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಾಳೆ ಉಪರಾಷ್ಟ್ರಪತಿ ಚುನಾವಣೆ

(ನ್ಯೂಸ್‌ ಕಡಬ) newskadaba.com,  ಸೆ.08 :  ಮುಂದಿನ ಉಪರಾಷ್ಟ್ರಪತಿ ಯಾರಾಗುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಗೆಲ್ಲುವ ನಿರೀಕ್ಷೆ ಇದ್ದರೂ ಗೆಲುವಿನ ಅಂತರ ಕಡಿಮೆಯಾಗಬಹುದು ಎನ್ನಲಾಗುತ್ತಿದೆ. ಹೀಗಾಗಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿ ಕೂಟ ಪ್ರತಿ ಮತವನ್ನು ಕೂಡ ಲೆಕ್ಕ ಹಾಕುತ್ತಿದೆ. ಉಪರಾಷ್ಟ್ರಪತಿ ಚುನಾವಣೆಯು ರಹಸ್ಯ ಮತದಾನದ ಮೂಲಕ ನಡೆಯುತ್ತದೆ. ಹೀಗಾಗಿ ಎಲ್ಲ ಸಂಸದರು ತಮ್ಮ ಇಚ್ಛೆಯಂತೆ ಮತ ಚಲಾಯಿಸುತ್ತಾರೆ. ಹೀಗಾಗಿ ಇದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ.

ನಾಳೆ ಉಪರಾಷ್ಟ್ರಪತಿ ಚುನಾವಣೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸುಬ್ರಹ್ಮಣ್ಯ: ಕಸ ಬಿಸಾಡಿದವರಿಗೆ ದಂಡ – ಪೊಲೀಸ್ ಇಲಾಖೆಯ ಸಹಕಾರ

(ನ್ಯೂಸ್‌ ಕಡಬ) newskadaba.com,  ಸೆ.08 : ಸುಬ್ರಹ್ಮಣ್ಯದಲ್ಲಿ ನೈರ್ಮಲ್ಯ ಕಾಪಾಡುವ ಪ್ರಯತ್ನಕ್ಕೆ ಪೂರಕವಾಗಿ, ಕಸ ಬಿಸಾಡಿದ ವ್ಯಕ್ತಿಗೆ ದಂಡ ವಿಧಿಸಿರುವ ಘಟನೆ ವರದಿಯಾಗಿದೆ.   ಸೆಪ್ಟೆಂಬರ್ 8ರಂದು ಕುಮಾರಧಾರ ನದಿಯ ಸೇತುವೆ ಮೇಲಿಂದ ಕಾರ್ಕಳದ ವೇದವ್ಯಾಸ ತಂತ್ರಿ ಎಂಬವರು ಕಸ ಬಿಸಾಡಿದ ದೃಶ್ಯವನ್ನು ಸ್ಥಳೀಯ ಯುವಕರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದರು. ಈ ಮಾಹಿತಿ ತಕ್ಷಣವೇ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ನೀಡಲಾಗಿತ್ತು.   ಗ್ರಾಮ ಪಂಚಾಯತ್ ಅಧಿಕಾರಿಗಳು ಈ ಕುರಿತು ವಾಹನದ ವಿವರವನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ

ಸುಬ್ರಹ್ಮಣ್ಯ: ಕಸ ಬಿಸಾಡಿದವರಿಗೆ ದಂಡ – ಪೊಲೀಸ್ ಇಲಾಖೆಯ ಸಹಕಾರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜಪಾನ್: ಪ್ರಧಾನಿ ಶಿಗೆರು ಇಶಿಬಾ ರಾಜೀನಾಮೆ

(ನ್ಯೂಸ್‌ ಕಡಬ) newskadaba.com,  ಸೆ.08 : ಜಪಾನಿನ ರಾಜಕೀಯ ಗೊಂದಲದ ಮಧ್ಯೆ ಪ್ರಧಾನಿ ಶಿಗೆರು ಇಶಿಬಾ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವುದು ದೇಶದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷ ಆಂತರಿಕ ಅಸಮಾಧಾನವನ್ನು ನಿಭಾಯಿಸಲು ಹಾಗೂ ಪಕ್ಷದಲ್ಲಿ ಉಂಟಾದ ವಿಭಜನೆ ತಡೆಗಟ್ಟುವ ಉದ್ದೇಶದಿಂದ ಇಶಿಬಾ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಜುಲೈನಲ್ಲಿ ನಡೆದ ಮೇಲ್ಮನೆಯ (ಉಚ್ಚಸಭೆ) ಚುನಾವಣೆಯಲ್ಲಿ ಎಲ್ಡಿಪಿ ನೇತೃತ್ವದ ಒಕ್ಕೂಟವು ಬಹುಮತವನ್ನು ಕಳೆದುಕೊಂಡಿತ್ತು. ಇದರ ಫಲವಾಗಿ ಇಶಿಬಾ ವಿರುದ್ಧ ಪಕ್ಷದೊಳಗಿನ ಟೀಕೆಗಳು ಮತ್ತಷ್ಟು

ಜಪಾನ್: ಪ್ರಧಾನಿ ಶಿಗೆರು ಇಶಿಬಾ ರಾಜೀನಾಮೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ನೇಪಾಳದಲ್ಲಿ ಫೇಸ್‌ಬುಕ್, ಎಕ್ಸ್, ಯೂಟ್ಯೂಬ್ ಬ್ಯಾನ್; ಸರ್ಕಾರದ ಕ್ರಮಕ್ಕೆ ಸಾರ್ವಜನಿಕರ ಆಕ್ರೋಶ

(ನ್ಯೂಸ್‌ ಕಡಬ) newskadaba.com,  ಸೆ.08 : ಫೇಸ್‌ಬುಕ್, ಯೂಟ್ಯೂಬ್, ಎಕ್ಸ್ ಸೇರಿದಂತೆ 26 ಸಾಮಾಜಿಕ ಮಾಧ್ಯಮಗಳನ್ನು ನಿಷೇಧ ಮಾಡಿದ ಹಿನ್ನೆಲೆ ಸರ್ಕಾರದ ವಿರುದ್ಧ ನೇಪಾಳದ ಜನತೆ ಸಿಡಿದೆದ್ದಿದ್ದು, ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಾಕಾರರು ಬೀದಿಗಿಳಿದಾಗ ಹಿಂಸಾತ್ಮಕ ಘರ್ಷಣೆಗಳು ನಡೆದಿದ್ದು, ಕನಿಷ್ಠ 8 ಮಂದಿ ಮೃತಪಟ್ಟಿದ್ದು, 100ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಕೋಪಗೊಂಡ ಪ್ರತಿಭಟನಾಕಾರರು ಕರ್ಫ್ಯೂ ನಿರ್ಬಂಧಗಳನ್ನು ಮುರಿದು ಸಂಸತ್ತಿನ ಬಳಿಯ ನಿರ್ಬಂಧಿತ ವಲಯಗಳನ್ನು ಪ್ರವೇಶಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ, ನೇಪಾಳ ರಾಜಧಾನಿಯಲ್ಲಿ ಸೈನ್ಯವನ್ನು ನಿಯೋಜಿಸಲಾಗಿದೆ. ಪ್ರತಿಭಟನಾಕಾರರು ಮರದ ಕೊಂಬೆಗಳು ಮತ್ತು

ನೇಪಾಳದಲ್ಲಿ ಫೇಸ್‌ಬುಕ್, ಎಕ್ಸ್, ಯೂಟ್ಯೂಬ್ ಬ್ಯಾನ್; ಸರ್ಕಾರದ ಕ್ರಮಕ್ಕೆ ಸಾರ್ವಜನಿಕರ ಆಕ್ರೋಶ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಆಸ್ಟ್ರೇಲಿಯಾಗೆ ಮಲ್ಲಿಗೆ ಹೂವು ತೆಗೆದುಕೊಂಡು ಹೋಗಿದ್ದಕ್ಕೆ ಖ್ಯಾತ ನಟಿ ನವ್ಯಾ ನಾಯರ್ ಗೆ ಬಿತ್ತು ಭಾರೀ ದಂಡ!

  (ನ್ಯೂಸ್‌ ಕಡಬ) newskadaba.com,  ಸೆ.08 ಮುಂಬೈ : ಖ್ಯಾತ ನಟಿ ನವ್ಯಾ ನಾಯರ್ ಗೆ ಆಸ್ಟ್ರೇಲಿಯಾದ  ಮೆಲ್ಬೋರ್ನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೂ.1.1 ಲಕ್ಷ ದಂಡ ಹಾಕಲಾಗಿದೆ. ಕಾರಣ ಕೇಳಿದ್ರೆ ಅಚ್ಚರಿ ಎನಿಸುವುದಂತೂ ಸುಳ್ಳಲ್ಲ. ಮಲ್ಲಿಗೆ ಹೂಗಳನ್ನು ಕೊಂಡೊಯ್ದಿದ್ದಕ್ಕಾಗಿ ನಟಿ ನವ್ಯಾ ನಾಯರ್ ಅವರಿಗೆ ಸುಮಾರು 1.14 ಲಕ್ಷ (AUD 1,980) ದಂಡ ವಿಧಿಸಲಾಗಿದೆ. ವಿಕ್ಟೋರಿಯಾದಲ್ಲಿ ಮಲಯಾಳಿ ಅಸೋಸಿಯೇಷನ್‌ನ ಓಣಂ ಆಚರಣೆಯಲ್ಲಿ ಭಾಗವಹಿಸಿದ್ದಾಗ ಈ ಘಟನೆ ನಡೆದಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಕೇರಳದ ಕೊಚ್ಚಿಯಿಂದ ನಟಿ ನವ್ಯಾ ನಾಯರ್ ಆಸ್ಟ್ರೇಲಿಯಾಗೆ ಓಣಂಗೆಂದು

ಆಸ್ಟ್ರೇಲಿಯಾಗೆ ಮಲ್ಲಿಗೆ ಹೂವು ತೆಗೆದುಕೊಂಡು ಹೋಗಿದ್ದಕ್ಕೆ ಖ್ಯಾತ ನಟಿ ನವ್ಯಾ ನಾಯರ್ ಗೆ ಬಿತ್ತು ಭಾರೀ ದಂಡ! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್, ಸಿನಿಮಾ

ದಟ್ಟವಾದ ಮೋಡ ಕವಿದ ವಾತಾವರಣ: ಇಂಡಿಗೋ ವಿಮಾನ ಮಂಗಳೂರಿನಿಂದ ಬೆಂಗಳೂರಿಗೆ ವಾಪಸ್!

  (ನ್ಯೂಸ್‌ ಕಡಬ) newskadaba.com,  ಸೆ.08 ಬೆಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೋಚರತೆ ಕಡಿಮೆಯಾದ ಕಾರಣ, ಸೋಮವಾರ ಬೆಳಿಗ್ಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನ ಬೆಂಗಳೂರಿಗೆ ವಾಪಸ್ ಆಗಬೇಕಾಯಿತು. ಇದರಿಂದಾಗಿ ಇಂಡಿಗೋ ವಿಮಾನ 6E 6858 ರಲ್ಲಿದ್ದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಮಂಗಳೂರಿನಲ್ಲಿ ಹವಾಮಾನ ವೈಪರೀತ್ಯತೆಯಿಂದಾಗಿ ಗೋಚರತೆ ಕಡಿಮೆಯಾಗಿದೆ ಎಂಬ ಮಾಹಿತಿ ಕ್ಯಾಪ್ಟನ್‌ಗೆ ಬಂದ ನಂತರ ಬೆಳಿಗ್ಗೆ 5.45 ಕ್ಕೆ ಹೊರಡಬೇಕಿದ್ದ ವಿಮಾನವು ಸುಮಾರು 45 ನಿಮಿಷಗಳ ಕಾಲ ವಿಳಂಬವಾಯಿತು. ವಿಮಾನ

ದಟ್ಟವಾದ ಮೋಡ ಕವಿದ ವಾತಾವರಣ: ಇಂಡಿಗೋ ವಿಮಾನ ಮಂಗಳೂರಿನಿಂದ ಬೆಂಗಳೂರಿಗೆ ವಾಪಸ್! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕುಲಶೇಖರ ಕೋರ್ಡೆಲ್ ಚರ್ಚ್‌ನಲ್ಲಿ ಮೊಂತಿ ಹಬ್ಬ ಆಚರಣೆ

  (ನ್ಯೂಸ್‌ ಕಡಬ) newskadaba.com,  ಸೆ.08  ಮಂಗಳೂರು : ಕುಲಶೇಖರದ ಕೋರ್ಡೆಲ್ ಹೋಲಿ ಕ್ರಾಸ್ ಚರ್ಚ್ ನಲ್ಲಿ ಸಂಭ್ರಮದ ಮೋಂತಿ ಹಬ್ಬವನ್ನು ಆಚರಿಸಲಾಯಿತು. ಬಲಿಪೂಜೆಯಲ್ಲಿ ಫಾ ಕ್ಲಿಪರ್ಡ್ ಫೆರ್ನಾಂಡಿಸ್, ಫಾದರ್ ವಿಜಯ್ ಮೊಂತೆರೋ, ಫಾದರ್ ಡೆಂಜಿಲ್ ಲೋಬೊ, ಫಾದರ್ ರೋನ್ಸನ್ ಪಿಂಟೋ, ಅಜ್ಮಿರ್ ಡಯಸಿಸ್ ನ ಫಾದರ್ ಹೆನ್ರಿ ಮೋರಸ್, ಪಾಲಾನಾ ಸಮಿತಿಯ ಉಪಾಧ್ಯಕ್ಷ ರೂತ್ ಕಾಸ್ತೇಲಿನೋ ಮತ್ತು ಕಾರ್ಯದರ್ಶಿ ಆನಿಲ್ ಡೇಸಾ ಮತ್ತು ಭಕ್ತಾದಿ ಗಳು ಮಾತೆ ಮಾರಿಯಮ್ಮನಿಗೆ ಹೂ ಗಳನ್ನು ಅರ್ಪಿ ಸಿ ಹೊಸ

ಕುಲಶೇಖರ ಕೋರ್ಡೆಲ್ ಚರ್ಚ್‌ನಲ್ಲಿ ಮೊಂತಿ ಹಬ್ಬ ಆಚರಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪತ್ರಕರ್ತರ ತರಬೇತಿಗಾಗಿ ಇನ್‌ಫೋಸಿಸ್‌ ಸ್ಪ್ರಿಂಗ್‌ಬೋರ್ಡ್‌ – ಕರ್ನಾಟಕ ಮಾಧ್ಯಮ ಅಕಾಡೆಮಿ ಒಡಂಬಡಿಕೆ

  (ನ್ಯೂಸ್‌ ಕಡಬ) newskadaba.com,  ಸೆ.08  ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಇನ್‌ಫೋಸಿಸ್‌ನ ಸ್ಪ್ರಿಂಗ್‌ಬೋರ್ಡ್‌ ಸಿಎಸ್‌ಆರ್‌ ಕಾರ್ಯಕ್ರಮದಡಿ ಸಹಭಾಗಿತ್ವಕ್ಕಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿಯು ಪತ್ರಕರ್ತರ ತರಬೇತಿಗಾಗಿ ಒಡಂಬಡಿಕೆ ಮಾಡಿಕೊಂಡಿದೆ. ಪತ್ರಕರ್ತರ ಸಾಫ್ಟ್‌ಸ್ಕಿಲ್‌ ತರಬೇತಿಯ ಉದ್ದೇಶಕ್ಕಾಗಿ ಮಾಡಿಕೊಳ್ಳುತ್ತಿರುವ ಈ ಒಡಂಬಡಿಕೆಯು ಸಿ.ಎಸ್.ಆರ್.‌ ಅಡಿ ಕರ್ನಾಟಕ ಮಾಧ್ಯಮ ಅಕಾಡೆಮಿ ಕೈಗೆತ್ತಿಕೊಂಡ ಮೊದಲ ಕಾರ್ಯಕ್ರಮವಾಗಿದೆ. ಇನ್ಫೋಸಿಸ್ CSR ಯೋಜನೆಯ “ಸ್ಪ್ರಿಂಗ್‌ಬೋರ್ಡ್” ಪ್ಲಾಟ್‌ಫಾರ್ಮ್ ಮೂಲಕ ಪತ್ರಕರ್ತರ ಡಿಜಿಟಲ್ ಶಿಕ್ಷಣ,

ಪತ್ರಕರ್ತರ ತರಬೇತಿಗಾಗಿ ಇನ್‌ಫೋಸಿಸ್‌ ಸ್ಪ್ರಿಂಗ್‌ಬೋರ್ಡ್‌ – ಕರ್ನಾಟಕ ಮಾಧ್ಯಮ ಅಕಾಡೆಮಿ ಒಡಂಬಡಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ ಐಐಸಿಟಿ ವಿದ್ಯಾಸಂಸ್ಥೆಯಲ್ಲಿ ಮೊಂಟೇಸರಿ ವಿದ್ಯಾರ್ಥಿಗಳಿಂದ ಶಿಕ್ಷಕರ ದಿನ, ಈದ್ ಮಿಲಾದ್ ಮತ್ತು ಓಣಂ ಹಬ್ಬ ಆಚರಣೆ

  (ನ್ಯೂಸ್‌ ಕಡಬ) newskadaba.com,  ಸೆ.08  ಕಡಬ : ಕಡಬ ಐಐಸಿಟಿ  ವಿದ್ಯಾಸಂಸ್ಥೆಯಲ್ಲಿ ಮೊಂಟೇಸರಿ ಪ್ರಶಿಕ್ಷಣಾರ್ಥಿಗಳಿಂದ ಶಿಕ್ಷಕರ ದಿನಾಚರಣೆ, ಈದ್ ಮಿಲಾದ್ ಹಾಗೂ ಓಣಂ ಆಚರಣೆ  ಕಾರ್ಯಕ್ರಮವು  ಅದ್ದೂರಿಯಾಗಿ ಭಾನುವಾರ ಆಚರಿಸಲಾಯಿತು.   ಪ್ರಶಿಕ್ಷಣಾರ್ಥಿ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಡುಬೆಟ್ಟು ಶಾಲೆಯ ದೈಹಿಕ ಶಿಕ್ಷಕಿ ಕಮಲಾಕ್ಷಿ ಅವರು ಮಾತನಾಡಿ ಮನುಷ್ಯನ ಮನಸ್ಸು ಮರ್ಕಟಗಳಂತೆ ಆಗಬಾರದು, ಪ್ರಪ್ರತಿಯೊಬ್ಬರಿಗೂ ತಾಯಿಯೇ ಮೊದಲ ಗುರು, ಬಳಿಕ ಶಾಲಾ ಶಿಕ್ಷಕರೇ ದಾರಿದೀಪರು. ಗುರುಗೆ ಸಮಾಜದಲ್ಲಿ ಪವಿತ್ರ

ಕಡಬ ಐಐಸಿಟಿ ವಿದ್ಯಾಸಂಸ್ಥೆಯಲ್ಲಿ ಮೊಂಟೇಸರಿ ವಿದ್ಯಾರ್ಥಿಗಳಿಂದ ಶಿಕ್ಷಕರ ದಿನ, ಈದ್ ಮಿಲಾದ್ ಮತ್ತು ಓಣಂ ಹಬ್ಬ ಆಚರಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top