ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಜಪಾನ್: ಪ್ರಧಾನಿ ಶಿಗೆರು ಇಶಿಬಾ ರಾಜೀನಾಮೆ – News Kadaba

ಜಪಾನ್: ಪ್ರಧಾನಿ ಶಿಗೆರು ಇಶಿಬಾ ರಾಜೀನಾಮೆ

(ನ್ಯೂಸ್‌ ಕಡಬ) newskadaba.com,  ಸೆ.08 : ಜಪಾನಿನ ರಾಜಕೀಯ ಗೊಂದಲದ ಮಧ್ಯೆ ಪ್ರಧಾನಿ ಶಿಗೆರು ಇಶಿಬಾ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವುದು ದೇಶದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷ ಆಂತರಿಕ ಅಸಮಾಧಾನವನ್ನು ನಿಭಾಯಿಸಲು ಹಾಗೂ ಪಕ್ಷದಲ್ಲಿ ಉಂಟಾದ ವಿಭಜನೆ ತಡೆಗಟ್ಟುವ ಉದ್ದೇಶದಿಂದ ಇಶಿಬಾ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಜುಲೈನಲ್ಲಿ ನಡೆದ ಮೇಲ್ಮನೆಯ (ಉಚ್ಚಸಭೆ) ಚುನಾವಣೆಯಲ್ಲಿ ಎಲ್ಡಿಪಿ ನೇತೃತ್ವದ ಒಕ್ಕೂಟವು ಬಹುಮತವನ್ನು ಕಳೆದುಕೊಂಡಿತ್ತು. ಇದರ ಫಲವಾಗಿ ಇಶಿಬಾ ವಿರುದ್ಧ ಪಕ್ಷದೊಳಗಿನ ಟೀಕೆಗಳು ಮತ್ತಷ್ಟು ಗಂಭೀರವಾಗಿದ್ದವು. ಪಕ್ಷದ ಬಲಪಂಥೀಯ ಬಣದಿಂದ ಆಗುತ್ತಿರುವ ನಿರಂತರ ಒತ್ತಡದ ಮಧ್ಯೆ, ಅವರು ಒಂದು ತಿಂಗಳ ಕಾಲ ಈ ಒತ್ತಡವನ್ನು ಎದುರಿಸಿದರೂ, ಇದೀಗ ರಾಜೀನಾಮೆ ಮೂಲಕ ರಾಜಕೀಯ ಜವಾಬ್ದಾರಿಯನ್ನು ಸ್ವೀಕರಿಸಿರುವುದು ತೀವ್ರ ರಾಜಕೀಯ ಎಚ್ಚರಿಕೆಗೆ ಕಾರಣವಾಗಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಶಿಗೆರು ಇಶಿಬಾ ಪ್ರಧಾನಿ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಕೇವಲ ಒಂದು ವರ್ಷಕ್ಕೂ ಮುಂಚೆ ಜುಲೈನಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿಯೇ ಅವರ ಪಕ್ಷ ಹೀನಾಯ ಸೋಲನ್ನು ಅನುಭವಿಸಿತು. 248 ಸ್ಥಾನಗಳ ಮೇಲ್ಮನೆಯಲ್ಲಿ ಬಹುಮತ ಪಡೆಯಲು ವಿಫಲವಾದ ನಂತರ, ಇಶಿಬಾ ನೇತೃತ್ವದ ಸರಕಾರದ ಸ್ಥಿರತೆಗೆ ಪ್ರಶ್ನೆ ಮೂಡಿದವು. ಪಕ್ಷದ ಬಲಪಂಥೀಯ ಬಣ ಇಶಿಬಾ ಅವರ ಶೈಲಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾಗ, ನಾಯಕತ್ವದ ಬದಲಾವಣೆಯ ನಿರ್ಣಯವೂ ಅನಿವಾರ್ಯವಾಗಿತ್ತು.

ಸೋಮವಾರ ನಡೆಯಬೇಕಿರುವ ಈ ನಾಯಕತ್ವ ಮತದಾನದಲ್ಲಿ, ಪಕ್ಷದ ಸದಸ್ಯರು ಹೊಸ ನಾಯಕರನ್ನು ಆಯ್ಕೆ ಮಾಡುವ ನಿರೀಕ್ಷೆಯಿದೆ. ಈ ಪ್ರಸ್ತಾಪ ತಾವು ಸೋಲಬಹುದು ಎಂಬ ಆತಂಕದಿಂದಾಗಿ, ಇಶಿಬಾ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜೀನಾಮೆಯ ಮಾರ್ಗವನ್ನು ಆರಿಸಿಕೊಂಡಿದ್ದಾರೆ.

Scroll to Top