ಯಾವುದೇ ಕಾರಣಕ್ಕೂ ಬರೀ ಹೊಟ್ಟೆಯಲ್ಲಿ ಕೆಲವು ಆಹಾರಗಳನ್ನು ಸೇವಿಸಬೇಡಿ ► ಯಾವ್ಯಾವ ಆಹಾರ ತಿಂದರೆ ಏನೇನಾಗುತ್ತದೆ ಎಂದು ತಿಳಯಬೇಕೇ…?

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಆ.28. ನಾವು ತಿನ್ನುವ ಆಹಾರದ ಬಗ್ಗೆ ಹೆಚ್ಚಿನ ಗಮನಹರಿಸುವುದಿಲ್ಲ. ಆದರೆ ಕೆಲವೊಂದು ಆಹಾರಗಳನ್ನು ತಿಂದರೆ ವಿವಿಧ ರೋಗಗಳು ಸೇರಿದಂತೆ ಆಯಾಸಗಳು ನಮ್ಮನ್ನು ಸುತ್ತಿಕೊಳ್ಳುತ್ತದೆ‌. ತುಂಬಾನೇ ಹಾಸಿದು ಬರೀ ಹೊಟ್ಟೆಯಲ್ಲಿ ಕೆಲವು ಆಹಾರಗಳನ್ನು ತಿಂದರೆ ಆ್ಯಸಿಡಿಟಿ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಇಂಥ ಕೆಲ ಪ್ರಮುಖ ಆಹಾರಗಳ ಪಟ್ಟಿಯನ್ನು ನೀಡಲಾಗಿದೆ. ‘ನ್ಯೂಸ್ ಕಡಬ’ದ ಓದುಗರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. 1) ಬಾಳೆಹಣ್ಣು: ಸೂಪರ್ ಫುಡ್ ಎನ್ನಲಾಗುವ ಇದು ಜೀರ್ಣಕ್ರಿಯೆಗೆ ಸಹಕಾರಿ. […]

ಯಾವುದೇ ಕಾರಣಕ್ಕೂ ಬರೀ ಹೊಟ್ಟೆಯಲ್ಲಿ ಕೆಲವು ಆಹಾರಗಳನ್ನು ಸೇವಿಸಬೇಡಿ ► ಯಾವ್ಯಾವ ಆಹಾರ ತಿಂದರೆ ಏನೇನಾಗುತ್ತದೆ ಎಂದು ತಿಳಯಬೇಕೇ…? Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ಗಡಿಯಾರ: ಹೋಂಡಾ ಆಕ್ಟಿವಾ – ಬ್ರೆಝಾ ಕಾರು ಢಿಕ್ಕಿ ► ಇಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಮಾಣಿ, ಆ‌.27. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗಡಿಯಾರ ಎಂಬಲ್ಲಿ ಮಾರುತಿ ಬ್ರೆಝಾ ಕಾರು ಮತ್ತು ಆಕ್ಟಿವಾ ನಡುವೆ ಢಿಕ್ಕಿ ಸಂಭವಿಸಿ ಸವಾರರಿಬ್ಬರು ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ. ಗಾಯಗೊಂಡ ಆಕ್ಟಿವಾ ಸವಾರರನ್ನು ಗಡಿಯಾರದ ನಿವಾಸಿಗಳಾದ ಮೋನು ಕರಾಯ ಮತ್ತು ಅವರ ಪುತ್ರಿ ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೋನುರವರು ತನ್ನ ಮಗಳೊಂದಿಗೆ ಮನೆ ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಗಡಿಯಾರ: ಹೋಂಡಾ ಆಕ್ಟಿವಾ – ಬ್ರೆಝಾ ಕಾರು ಢಿಕ್ಕಿ ► ಇಬ್ಬರು ಗಂಭೀರ Read More »

ಕರಾವಳಿ

ಕಡಬ: ವಿಜೃಂಭಣೆಯಿಂದ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವ ► ಕಡಬದಿಂದ ಹೊಸ್ಮಠ ವರೆಗೆ ಮೆರವಣಿಗೆಯಲ್ಲಿ ಸಾಗಿ ವಿಸರ್ಜನೆ

(ನ್ಯೂಸ್ ಕಡಬ) newskadaba.com ಕಡಬ, ಆ.27. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 44 ನೇ ವರ್ಷದ ಕಡಬ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.25 ರಿಂದ 27 ರವರೆಗೆ ಬಹಳ ವಿಜೃಂಭಣೆಯಿಂದ ನಡೆಯಿತು. ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ಆಗಸ್ಟ್ 25 ಶುಕ್ರವಾರದಂದು ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿ, ಆಗಸ್ಟ್ 27 ನೇ ಭಾನುವಾರ ಸಂಜೆ ಕಡಬ ಪೇಟೆಯಿಂದ ಬಹಳ ವಿಜೃಂಭಣೆಯಿಂದ ಮೆರವಣಿಗೆ ಮೂಲಕ ಹೊಸ್ಮಠ ಕ್ಕೆ ತೆರಳಿ ಸೇತುವೆಯ ಕೆಳಭಾಗದಲ್ಲಿ ವಿಸರ್ಜಿಸಲಾಯಿತು. ಧಾರ್ಮಿಕ ಮುಖಂಡರು,

ಕಡಬ: ವಿಜೃಂಭಣೆಯಿಂದ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವ ► ಕಡಬದಿಂದ ಹೊಸ್ಮಠ ವರೆಗೆ ಮೆರವಣಿಗೆಯಲ್ಲಿ ಸಾಗಿ ವಿಸರ್ಜನೆ Read More »

ಕರಾವಳಿ

ಕೋಡಿಂಬಾಳ: ಅಕ್ರಮ ಜುಗಾರಿ ಅಡ್ಡೆಗೆ ದಾಳಿ ► ಹತ್ತು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಆ.27. ಠಾಣಾ ವ್ಯಾಪ್ತಿಯ 102 ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳೂರು ಎಂಬಲ್ಲಿ ಗೇರಬೀಜ ತೋಟವೊಂದರಲ್ಲಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆಗೆ ದಾಳಿ ನಡೆಸಿರುವ ಕಡಬ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಬಂಧಿಸಿದ್ದಾರೆ. ಇಸ್ಪೀಟು ಆಟದಲ್ಲಿ ನಿರತರಾಗಿದ್ದ ವೇಳೆ ಖಚಿತ ಮಾಹಿತಿಯನ್ವಯ ದಾಳಿ ನಡೆಸಿರುವ ಕಡಬ ಪೊಲೀಸರು ದಾಳಿ ನಡೆಸಿ ಆರೋಪಿಗಳಾದ ರೆಂಜಿಲಾಡಿಯ ಜಗದೀಶ್, ಬಾಬು ಕುದ್ಮಾರು, ಅಶ್ರಫ್ ಕಳಾರ, ಹಮೀದ್ ಕಳಾರ, ಸುಂದರ ಆಲಂಕಾರು, ರಾಮ ಮರ್ಕಂಜ ಸುಳ್ಯ, ಕೊರಗು ಗೋಳಿಯಡ್ಕ, ಆನಂದ

ಕೋಡಿಂಬಾಳ: ಅಕ್ರಮ ಜುಗಾರಿ ಅಡ್ಡೆಗೆ ದಾಳಿ ► ಹತ್ತು ಮಂದಿಯ ಬಂಧನ Read More »

ಕರಾವಳಿ

ಬಿಳಿನೆಲೆ: ಮರದಿಂದ ಬಿದ್ದು ವ್ಯಕ್ತಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಆ.27. ತೆಂಗಿನಕಾಯಿಯ ಕೀಳಲೆಂದು ತೆಂಗಿನಮರ ಏರಿದ್ದ ವ್ಯಕ್ತಿಯೋರ್ವರು ಕೆಳಗಡೆ ಬಿದ್ದು ಗಾಯಗೊಂಡ ಘಟನೆ ಭಾನುವಾರದಂದು ಪುತ್ತೂರು ತಾಲೂಕಿನ ಬಿಳಿನೆಲೆ ಗ್ರಾಮದ ನೆಟ್ಟಣ ಎಂಬಲ್ಲಿ ನಡೆದಿದೆ.   ಗಾಯಾಳುವನ್ನು ಬಿಳಿನೆಲೆ ಗ್ರಾಮದ ನೆಟ್ಟಣ ಚೆಂಡೆಹಿತ್ಲು ನಿವಾಸಿ ಸುರೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಇವರು ತೆಂಗಿನಕಾಯಿ ಕೀಳಲು ತನ್ನ ಮನೆಯ ಸಮೀಪದ ತೆಂಗಿನ ಮರಕ್ಕೆ ಏರಿದ್ದ ಸಂದರ್ಭದಲ್ಲಿ ಆಯತಪ್ಪಿ ಕೆಳಗಡೆ ಬಿದ್ದರೆನ್ನಲಾಗಿದೆ. ತಕ್ಷಣವೇ ಅವರಿಗೆ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಪುತ್ತೂರಿನ

ಬಿಳಿನೆಲೆ: ಮರದಿಂದ ಬಿದ್ದು ವ್ಯಕ್ತಿಗೆ ಗಾಯ Read More »

ಕರಾವಳಿ

ಇಂದು ಕಡಬದಲ್ಲಿ ಬುರ್ಖಾ ಪ್ಯಾಲೇಸ್ ಶುಭಾರಂಭ ► ವಿವಿಧ ವಿನ್ಯಾಸದ ಬುರ್ಖಾಗಳ ಸುಸಜ್ಜಿತ ಮಳಿಗೆ

(ನ್ಯೂಸ್ ಕಡಬ) newskadaba.com ಕಡಬ, ಆ.27. ಮುಸಲ್ಮಾನ ಮಹಿಳೆಯರು ಧರಿಸುವಂತಹ ವಿವಿಧ ವಿನ್ಯಾಸದ ರೆಡಿಮೇಡ್ ಹಾಗೂ ಸ್ಟಿಚಿಂಗ್ ಬುರ್ಖಾಗಳ ಸುಸಜ್ಜಿತ ಮಳಿಗೆ ‘ಬುರ್ಖಾ ಪ್ಯಾಲೇಸ್’ ಇಲ್ಲಿನ ಮುಖ್ಯಪೇಟೆಯ ಅನುಗ್ರಹ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಆದಿತ್ಯವಾರದಂದು ಶುಭಾರಂಭಗೊಳ್ಳಲಿದೆ‌. ಅರೇಬಿಕ್ ವಿನ್ಯಾಸಗಳಾದ ಅಬಯ, ನಿಕಾಬ್, ಬುರ್ಖಾ, ಪರ್ಷಿಯನ್ ಚಾದರ್, ದುಪಟ್ಟಾ, ಸಲ್ವಾರ್ ಕಮೀಝ್ ಗಳಲ್ಲದೆ ನವನವೀನ ವಿನ್ಯಾಸಗಳ ಉತ್ತಮ ಗುಣಮಟ್ಟದ ಬುರ್ಖಾಗಳ ಹೊಲಿಗೆಯನ್ನು ಮಾಡಲಾಗುತ್ತದೆ ಎಂದು ಸಂಸ್ಥೆಯ ಪಾಲುದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9663189916 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಇಂದು ಕಡಬದಲ್ಲಿ ಬುರ್ಖಾ ಪ್ಯಾಲೇಸ್ ಶುಭಾರಂಭ ► ವಿವಿಧ ವಿನ್ಯಾಸದ ಬುರ್ಖಾಗಳ ಸುಸಜ್ಜಿತ ಮಳಿಗೆ Read More »

ಕರಾವಳಿ

ಶಿರ್ವ: ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಬಸ್

(ನ್ಯೂಸ್ ಕಡಬ) newskadaba.com ಉಡುಪಿ, ಆ.26. ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ತಂಗುದಾಣದಲ್ಲಿದ್ದ ಅಂಗಡಿಗೆ ನುಗ್ಗಿದ ಘಟನೆ ಶನಿವಾರ ಸಂಜೆ ಉಡುಪಿ ಜಿಲ್ಲೆಯ ಶಿರ್ವದಲ್ಲಿ ನಡೆದಿದೆ. ಬೆಳ್ಮಣ್ ನಿಂದ ಉಡುಪಿಗೆ ತೆರಳುತ್ತಿದ್ದ ಖಾಸಗಿ ಬಸ್ ಶಿರ್ವ ನಿಲ್ದಾಣಕ್ಕೆ ಬರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ನಿಲ್ದಾಣದಲ್ಲಿರುವ ಅಂಗಡಿಗೆ ನುಗ್ಗಿದೆ. ಈ ಸಂದರ್ಭದಲ್ಲಿ ಬಸ್ ನಿಲ್ದಾಣದ ಬಳಿ ಪ್ರಯಾಣಿಕರು ಇಲ್ಲದ ಕಾರಣ ಬಹುದೊಡ್ಡ ಅನಾಹುತವೊಂದು ತಪ್ಪಿದೆ. ಅವಘಡ ನಡೆಯುವ ಸಂದರ್ಭ ಅಂಗಡಿಯ ಮಾಲಕ ಕೇಶವ ಪೈ ಅಂಗಡಿಯ

ಶಿರ್ವ: ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಬಸ್ Read More »

ಕರಾವಳಿ

ಶೀಘ್ರದಲ್ಲೇ ಏರಿಕೆ ಆಗಲಿದೆ ಅಕ್ಕಿಯ ಬೆಲೆ ► ಕಾರಣವೇನೆಂದು ತಿಳಿಯಬೇಕೇ…??

(ನ್ಯೂಸ್ ಕಡಬ) newskadaba.com ಬಳ್ಳಾರಿ, ಆ.26. ದಿನಬಳಕೆ ವಸ್ತುಗಳ ಬೆಲೆಯು ದಿನೇ ದಿನೇ ಗಗನಕ್ಕೇರುತ್ತಿದ್ದು, ಮುಂದಿನ ದಿನಗಳಲ್ಲಿ ಅಕ್ಕಿಯ ಬೆಲೆಯೂ ಏರಿಕೆಯಾಗುವ ಭೀತಿ ಶುರುವಾಗಿದೆ. ಭತ್ತದ ನಾಡು ಎಂದು ಪ್ರಸಿದ್ಧಿ ಪಡೆದಿರುವ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ತುಂಗಭದ್ರಾ ಜಲಾಶಯದಿಂದ ಭತ್ತದ ಬೆಳೆಗೆ ನೀರು ಸಿಗದ ಪರಿಣಾಮ ಸಾವಿರ ಕೋಟಿ ರೂಪಾಯಿಗೂ ಅಧಿಕ ವಹಿವಾಟಿನ ಭತ್ತದ ಇಳುವರಿ ಕುಂಠಿತಗೊಂಡಿದ್ದು, ಭತ್ತದ ಬೆಳೆಗೆ ಬರ ಬಂದಿದೆ. ಪ್ರಸಕ್ತ ವರ್ಷದ ಬರಗಾಲ ಮತ್ತು ತುಂಗಭದ್ರಾ ಜಲಾಶಯದಿಂದ ರೈತರಿಗೆ ನೀರು ಸಿಗದ

ಶೀಘ್ರದಲ್ಲೇ ಏರಿಕೆ ಆಗಲಿದೆ ಅಕ್ಕಿಯ ಬೆಲೆ ► ಕಾರಣವೇನೆಂದು ತಿಳಿಯಬೇಕೇ…?? Read More »

ಕರ್ನಾಟಕ

ಸಾರ್ವಜನಿಕ ಗಣೇಶೋತ್ಸವದಲ್ಲಿ ಭಾಗವಹಿಸಿದ ಮುಸ್ಲಿಂ ಮುಖಂಡರು ► ಸೌಹಾರ್ದತೆಗೆ ಸಾಕ್ಷಿಯಾದ ಗ್ರಾಮೀಣ ಪ್ರದೇಶವಾದ ಮರ್ಧಾಳ

(ನ್ಯೂಸ್ ಕಡಬ) newskadaba.com ಕಡಬ, ಆ.26. ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಆಶ್ರಯದಲ್ಲಿ ಮರ್ಧಾಳ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆದ 18ನೇ ವರ್ಷದ ಸಾರ್ವಜನಿಕ ಶ್ರೀ ಗಣೆಶೋತ್ಸವದಲ್ಲಿ ಮುಸ್ಲಿಂ ಮುಖಂಡರು ಭಾಗವಹಿಸಿ ಸೌಹಾರ್ದತೆ ಮೆರೆದರು.   ಶುಕ್ರವಾರದಂದು ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮರ್ಧಾಳ ತಕ್ವೀಯತ್ತುಲ್ ಇಸ್ಲಾಂ ಮಸೀದಿಯ ಆಡಳಿತ ಸಮಿತಿಯ ಉಪಾಧ್ಯಕ್ಷರಾದ ಇಬ್ರಾಹಿಂ ಮುಸ್ಲಿಯಾರ್, ಕಾರ್ಯದರ್ಶಿ ಹನೀಫ್, ಸದಸ್ಯರಾದ ಮಹಮ್ಮದ್ ಕೆ., ಅಬ್ದುಲ್ ರಹಿಮಾನ್, ಲತೀಫ್ ಕೆಜಿಎನ್, ಯೂನುಸ್ ಕೋಡಿಕಂಡ, ಸತ್ತಾರ್ ಪನ್ಯ, ಬಶೀರ್ ಮರ್ಧಾಳ,

ಸಾರ್ವಜನಿಕ ಗಣೇಶೋತ್ಸವದಲ್ಲಿ ಭಾಗವಹಿಸಿದ ಮುಸ್ಲಿಂ ಮುಖಂಡರು ► ಸೌಹಾರ್ದತೆಗೆ ಸಾಕ್ಷಿಯಾದ ಗ್ರಾಮೀಣ ಪ್ರದೇಶವಾದ ಮರ್ಧಾಳ Read More »

ಕರಾವಳಿ
Scroll to Top