ಐಕ್ಯತೆ ಬಯಸಿ ಒಂದಾಗುವತ್ತ ಹೆಜ್ಜೆ ಹಾಕಿರುವ ಸುನ್ನೀ ಮುಸ್ಲಿಂ ಸಂಘಟನೆಗಳು ► SKSSF ಮತ್ತು SSF ಸಂಘಟನೆಗಳ ಪ್ರಮುಖರಿಂದ ಮಹತ್ವದ ಸಭೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.04. ಐಕ್ಯತೆ ಬಯಸಿ ಒಂದಾಗುವತ್ತ ಹೆಜ್ಜೆ ಹಾಕಿರುವ ಮುಸ್ಲಿಂ ಸುನ್ನೀ ಸಂಘಟನೆಗಳು ಇಂದು ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಿತು. ಒಂದೇ ತತ್ವಾದರ್ಶಗಳೊಂದಿಗೆ ಗುರುತಿಸಿಕೊಂಡಿರುವ ಮುಸ್ಲಿಂ ಸುನ್ನಿ ಸಂಘಟನೆಗಳಾದ SSF ಮತ್ತು SKSSF ಮುಖಂಡರ ಮಹತ್ವದ ಸಭೆಯಲ್ಲಿ ಸಮುದಾಯದ ಸಮಸ್ಯೆಗಳ ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಗಂಭೀರ ಚರ್ಚೆ ನಡೆದಿದೆಯೆನ್ನಲಾಗಿದ್ದು, ಈ ಸಭೆಯಲ್ಲಿ ಎಪಿ ಮತ್ತು ಇಕೆ ಬಣದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು. ಸಭೆಯ ಬಗ್ಗೆ ಗೌಪ್ಯತೆ ಕಾಪಾಡಿಕೊಂಡ ಉಭಯ ಸಂಘಟನೆಗಳ ನಾಯಕರು […]

ಐಕ್ಯತೆ ಬಯಸಿ ಒಂದಾಗುವತ್ತ ಹೆಜ್ಜೆ ಹಾಕಿರುವ ಸುನ್ನೀ ಮುಸ್ಲಿಂ ಸಂಘಟನೆಗಳು ► SKSSF ಮತ್ತು SSF ಸಂಘಟನೆಗಳ ಪ್ರಮುಖರಿಂದ ಮಹತ್ವದ ಸಭೆ Read More »

ರಾಷ್ಟ್ರೀಯ ನ್ಯೂಸ್

ಪುಷ್ಪಗಿರಿ ವನ್ಯಧಾಮ ಮತ್ತು ಆನೆ ಕಾರಿಡಾರ್ ಯೋಜನೆಗೆ ತೀವ್ರ ವಿರೋಧ ► ಕಡಬ ತಾಲೂಕು ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಡಿ.04. ಸರಕಾರವು ಜಾರಿಗೆ ತರಲು ಉದ್ದೇಶಿಸಿರುವ ಕಸ್ತೂರಿ ರಂಗನ್, ಗಾಡ್ಗಿಲ್ ವರದಿ, ವೈಲ್ಡ್ ಲೈಫ್, ಪುಷ್ಪಗಿರಿ ವನ್ಯಧಾಮ ಮತ್ತು ಆನೆ ಕಾರಿಡಾರ್ ಯೋಜನೆಗಳ ವಿರೋಧಿಸಿ ಕಡಬ ತಾಲೂಕು ಕಛೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಕಡಬ ತಾಲೂಕು ವ್ಯಾಪ್ತಿಯ ಬಲ್ಯ, ಕೌಕ್ರಾಡಿ, ಶಿರಾಡಿ, ಶಿಬಾಜೆ, ಕೊಂಬಾರು, ಬಿಳಿನೆಲೆ, ಸುಬ್ರಹ್ಮಣ್ಯ, ಐನೆಕಿದು, ಹರಿಹರ, ಕೊಲ್ಲಮೊಗ್ರು, ಏನೆಕಲ್, ಬಳ್ಪ, ಕೂತ್ಕುಂಜ ಸೇರಿದಂತೆ ಹಲವು ಗ್ರಾಮಗಳನ್ನು ಕಸ್ತೂರಿ ರಂಗನ್ ವರದಿಯಲ್ಲಿ ಉಲ್ಲೇಖಿಸಲಾಗಿದೆ ಮತ್ತು ಗಾಡ್ಗಿಲ್ ವರದಿಯಲ್ಲಿ

ಪುಷ್ಪಗಿರಿ ವನ್ಯಧಾಮ ಮತ್ತು ಆನೆ ಕಾರಿಡಾರ್ ಯೋಜನೆಗೆ ತೀವ್ರ ವಿರೋಧ ► ಕಡಬ ತಾಲೂಕು ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ Read More »

ಕರಾವಳಿ

ದತ್ತಪೀಠದಲ್ಲಿನ ಗೋರಿಗಳು ನಕಲಿಗಳೇ ಹೊರತು ಅಸಲಿಗಳಲ್ಲ ► ಚಿಕ್ಕಮಗಳೂರು ಶಾಸಕ‌ ಸಿ.ಟಿ.ರವಿ ಹೇಳಿಕೆ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಡಿ.04. ದತ್ತಪೀಠದಲ್ಲಿರುವುದು ಎಲ್ಲವೂ ನಕಲಿ ಗೋರಿಗಳಾಗಿದ್ದು, ಹಿಂದೆ ಅಲ್ಲಿ ಮುಸಲ್ಮಾನರು ಅಷ್ಟು ಜನ ಇರಲೇ ಇಲ್ಲ. ಹಾಗಿರುವಾಗ ಈ ಗೋರಿಗಳು ಎಲ್ಲಿಂದ ಬಂತು ಎಂದು ಪ್ರಶ್ನಿಸುವ ಮೂಲಕ ಸರ್ವಧರ್ಮದ ಭಾವೈಕ್ಯತಾ ಕೇಂದ್ರವಾಗಿರುವ ದತ್ತಾತ್ರೇಯ ಬಾಬಾ ಬುಡಾನ್ ಗಿರಿಯ ವಿವಾದಿತ ಸ್ಥಳದಲ್ಲಿ ಕೇಸರಿ ಧ್ವಜ ಹಾರಿಸಿ ಗೋರಿ ಧ್ವಂಸಕ್ಕೆ ಯತ್ನಿಸಿದ ಘಟನೆಯನ್ನು ಶಾಸಕ ಸಿ.ಟಿ.ರವಿ ಪರೋಕ್ಷವಾಗಿ ಸಮರ್ಥಿಸಿದ್ದಾರೆ. ದತ್ತಜಯಂತಿಯು ಶೇ.90 ಭಾಗ ಶಾಂತಿಯುತವಾಗಿ ನಡೆದಿದ್ದು, ಸಣ್ಣ ತಪ್ಪಿಗೆ ಹಿಂದೂಗಳ ಮೇಲೆ ಹಲ್ಲೆ ಮಾಡುವುದು

ದತ್ತಪೀಠದಲ್ಲಿನ ಗೋರಿಗಳು ನಕಲಿಗಳೇ ಹೊರತು ಅಸಲಿಗಳಲ್ಲ ► ಚಿಕ್ಕಮಗಳೂರು ಶಾಸಕ‌ ಸಿ.ಟಿ.ರವಿ ಹೇಳಿಕೆ Read More »

ಕರ್ನಾಟಕ

ಅಪ್ಪಾಜಿ ಕ್ಯಾಂಟೀನ್, ಇಂದಿರಾ ಕ್ಯಾಂಟೀನ್ ಆಯ್ತು.. ಇದೀಗ ರಮ್ಯಾ ಕ್ಯಾಂಟೀನ್ ► ಅಲ್ಲಲ್ಲಿ ತಲೆಯೆತ್ತುತ್ತಿರುವ ಅಗ್ಗದ ಬೆಲೆಯ ಕ್ಯಾಂಟೀನ್ ಗಳು

(ನ್ಯೂಸ್ ಕಡಬ) newskadaba.com ಮಂಡ್ಯ, ಡಿ.03. ರಾಜ್ಯ ಸರಕಾರದ ಬಹು ನಿರೀಕ್ಷಿತ ಇಂದಿರಾ ಕ್ಯಾಂಟೀನ್, ಅಪ್ಪಾಜಿ ಕ್ಯಾಂಟೀನ್, ಅಣ್ಣ ಕ್ಯಾಂಟೀನ್ ಮಾದರಿಯ ಕೆಲವು ಕ್ಯಾಂಟೀನ್‍ಗಳು ಬಡವರಿಗೆ ಕಡಿಮೆ ದರದಲ್ಲಿ ಹೊಟ್ಟೆ ತುಂಬಿಸುತ್ತಿವೆ. ಇದರ ಜೊತೆಗೆ ಇದೀಗ ಕಡಿಮೆ ದರದಲ್ಲಿ ಊಟ ತಿಂಡಿ ನೀಡುವ ‘ರಮ್ಯಾ ಕ್ಯಾಂಟೀನ್’ ಭಾನುವಾರದಿಂದ ಸೇರ್ಪಡೆಯಾಗಿದೆ. ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದ ಪಕ್ಕದ ರಸ್ತೆ ಬದಿಯಲ್ಲಿ ತಳ್ಳುಗಾಡಿಯಲ್ಲಿ ಹೊಟೇಲ್ ನಡೆಸುತ್ತಿದ್ದ ರಘು ಎಂಬವರು ಜಿಲ್ಲಾಸ್ಪತ್ರೆ ಸಮೀಪ ರಮ್ಯಾ ಕ್ಯಾಂಟೀನ್ ತೆರೆದಿದ್ದು, ಮಂಡ್ಯ ವಿಧಾನಸಭಾ ಚುನಾವಣೆಯಲ್ಲಿ ರಮ್ಯಾ

ಅಪ್ಪಾಜಿ ಕ್ಯಾಂಟೀನ್, ಇಂದಿರಾ ಕ್ಯಾಂಟೀನ್ ಆಯ್ತು.. ಇದೀಗ ರಮ್ಯಾ ಕ್ಯಾಂಟೀನ್ ► ಅಲ್ಲಲ್ಲಿ ತಲೆಯೆತ್ತುತ್ತಿರುವ ಅಗ್ಗದ ಬೆಲೆಯ ಕ್ಯಾಂಟೀನ್ ಗಳು Read More »

ಕರ್ನಾಟಕ

ಕೈಕಂಬ: ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ► ಪಾದಚಾರಿ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಡಿ.03. ಪಾದಚಾರಿ ವ್ಯಕ್ತಿಯೋರ್ವರಿಗೆ ಕೆಎಸ್ಸಾರ್ಟಿಸಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಗಂಭೀರ ಗಾಯಗೊಂಡ ಘಟನೆ ಭಾನುವಾರ ಸಂಜೆ ಕೈಕಂಬ ಎಂಬಲ್ಲಿ ನಡೆದಿದೆ. ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಕೈಕಂಬ ಸರಕಾರಿ ಶಾಲೆಯ ಬಳಿಯಿಂದ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಢಿಕ್ಕಿ ಹೊಡೆದಿದೆ. ತಕ್ಷಣವೇ ಗಾಯಾಳುವನ್ನು ಪಿಕಪ್ ವಾಹನದ ಮೂಲಕ ಕರೆದುಕೊಂಡು ಬಂದು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕರೆದುಕೊಂಡು

ಕೈಕಂಬ: ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ► ಪಾದಚಾರಿ ಗಂಭೀರ Read More »

ಕರಾವಳಿ

ಇಂದು ರಾತ್ರಿ ಕಡಬ ಟೌನ್‌ ಜುಮಾ ಮಸೀದಿಯಲ್ಲಿ ► ‘ಡ್ರೀಂ ಯೂತ್’ ಮಾದಕ‌ ವಸ್ತುಗಳ ಜಾಗೃತಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಡಿ.03. ದೇಶದ ಯುವ ಜನತೆಗೆ‌ ಮಾರಕವಾಗಿರುವ ಗಾಂಜಾ, ಅಫೀಮುಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ‘ಡ್ರೀಂ ಯೂತ್’ ಎಂಬ ವಿಷಯದಲ್ಲಿ ಕಡಬದಲ್ಲಿ ಇಂದು ರಾತ್ರಿ 7.30 ಗಂಟೆಗೆ ವಿಚಾರ ಸಂಕಿರಣ ನಡೆಯಲಿದೆ. ಕಡಬ ರಹ್ಮಾನಿಯಾ ಜುಮಾ‌‌ ಮಸೀದಿಯ ವಠಾರದಲ್ಲಿ ಕಡಬದ ಮುಈನುಲ್ ಇಸ್ಲಾಂ ಮದ್ರಸದ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನಡೆಯಲಿರುವ ಈ ವಿಚಾರಗೋಷ್ಠಿಯನ್ನು ಮಂಗಳೂರಿನ ಕೇಂದ್ರ ಮಸೀದಿಯ ಖತೀಬರಾದ ಸ್ವದಕತುಲ್ಲಾ ಫೈಝಿ ಮಂಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಇಂದು ರಾತ್ರಿ ಕಡಬ ಟೌನ್‌ ಜುಮಾ ಮಸೀದಿಯಲ್ಲಿ ► ‘ಡ್ರೀಂ ಯೂತ್’ ಮಾದಕ‌ ವಸ್ತುಗಳ ಜಾಗೃತಿ ಕಾರ್ಯಕ್ರಮ Read More »

ಕರಾವಳಿ

ಉಳ್ಳಾಲ: ಮುಂದುವರಿದ ಕಡಲ‌ಬ್ಬರ ► ರೆಸಾರ್ಟ್ ತಡೆಗೋಡೆ ಕುಸಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.03. ಓಖಿ ಚಂಡಮಾರುತದ ಪರಿಣಾಮದಿಂದಾಗಿ ಸೋಮೇಶ್ವರ, ಉಳ್ಳಾಲ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿಯಿಂದ ಎದ್ದಿರುವ ಸಮುದ್ರದ ಅಲೆಗಳ ಅಬ್ಬರವು ಭಾನುವಾರ ಬೆಳಗ್ಗೆಯೂ ಮುಂದುವರಿದಿದೆ. ಶನಿವಾರ ರಾತ್ರಿಯಿಂದ ಸಮುದ್ರದ ಬೃಹತ್ ಅಲೆಗಳು ಸೋಮೇಶ್ವರ, ಉಚ್ಚಿಲ ಪರಿಸರದ ಕೆಲವು ಮನೆಗಳಿಗೆ ಅಪ್ಪಳಿಸಿ ಸಮುದ್ರ ತೀರದ ನಿವಾಸಿಗಳನ್ನು ಆತಂಕಗೊಳಿಸಿತ್ತು. ಉಳ್ಳಾಲದ ರೆಸಾರ್ಟ್ ಒಂದರ ತಡೆಗೋಡೆಯು ಸಮುದ್ರದ ಅಲೆಗಳಿಗೆ ಸಿಲುಕಿ ಕುಸಿದಿತ್ತು. ಶನಿವಾರ ತಡರಾತ್ರಿಯಿಂದ ಸಮುದ್ರವು ಶಾಂತವಾಗತೊಡಗಿದ್ದು ಅಲೆಗಳ ಅಬ್ಬರ ಮಾತ್ರ ಮುಂದುವರಿದಿದೆ. ಮುಂಜಾಗ್ರತ ಕ್ರಮವಾಗಿ ಪರಿಸರದ ವಿವಿಧೆಡೆ

ಉಳ್ಳಾಲ: ಮುಂದುವರಿದ ಕಡಲ‌ಬ್ಬರ ► ರೆಸಾರ್ಟ್ ತಡೆಗೋಡೆ ಕುಸಿತ Read More »

ಕರಾವಳಿ

‘ಓಖೀ’ ಚಂಡಮಾರುತಕ್ಕೆ ಮಂಗಳೂರು ತತ್ತರ ► ಉಳ್ಳಾಲ ಪರಿಸರದಲ್ಲಿ ಮನೆಗೆ ನುಗ್ಗಿದ ಸಮುದ್ರದ ನೀರು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.02. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಸೃಷ್ಟಿಯಾಗಿರುವ ‘ಓಖೀ’ ಚಂಡಮಾರುತದ ಎಫೆಕ್ಟ್ ಕರಾವಳಿ ಭಾಗದಲ್ಲಿ ಕಾಣತೊಡಗಿದ್ದು, ಸಮುದ್ರದ ಭೋರ್ಗರೆತ ಹೆಚ್ಚಾಗುತ್ತಿದೆ. ಉಳ್ಳಾಲ – ಸೋಮೇಶ್ವರದಲ್ಲಿ ರಸ್ತೆಗೆ ಅಪ್ಪಳಿಸಿದ ಸಮುದ್ರದ ಅಲೆಗಳಿಂದಾಗಿ ರೆಸಾರ್ಟ್ ನ ತಡೆಗೋಡೆ ಕುಸಿದಿದ್ದು, ಅಲೆಯ ಅಬ್ಬರಕ್ಕೆ ರೆಸಾರ್ಟ್ ನಲ್ಲಿದ್ದ ಜನ ದಿಕ್ಕುಪಾಲಾಗಿ ಓಡಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಪರಿಸರದಲ್ಲಿ ಪೊಲೀಸರು ಮುನ್ನೆಚ್ಚರಿಕೆ ಘೋಷಿಸಿದ್ದಾರೆ. ಉಚ್ಚಿಲದಲ್ಲಿ ಮನೆಗೆ‌ ಸಮುದ್ರದ ನೀರು ಬಂದಿದೆ. ಇನ್ನುಳಿದಂತೆ ಪಣಂಬೂರು, ಪಡುಬಿದ್ರಿ, ಕಾಪು,

‘ಓಖೀ’ ಚಂಡಮಾರುತಕ್ಕೆ ಮಂಗಳೂರು ತತ್ತರ ► ಉಳ್ಳಾಲ ಪರಿಸರದಲ್ಲಿ ಮನೆಗೆ ನುಗ್ಗಿದ ಸಮುದ್ರದ ನೀರು Read More »

ಕರಾವಳಿ

ವಿಜಯಾ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನದ ವತಿಯಿಂದ ► ಆಲಂಕಾರು ಶ್ರೀ ದುರ್ಗಾಂಬ ಪದವಿ ಪೂರ್ವ ಕಾಲೇಜಿಗೆ ಪುಸ್ತಕ ಹಸ್ತಾಂತರ

(ನ್ಯೂಸ್ ಕಡಬ) newskadaba.com ಕಡಬ, ಡಿ.02. ಕನ್ನಡಿಗರಿಗೆ ಮೂಲ ಶಿಕ್ಷಣ ಕನ್ನಡದಲ್ಲೇ ಸಿಗುವಂತಾಗಬೇಕು ಎಂದು ಮಂಗಳೂರು ವಿಜಯಾ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಉದಯ ಹೆಗ್ಡೆ ಹೇಳಿದರು. ವಿಜಯಾ ಬ್ಯಾಂಕ್ ಆಶ್ರಯದಲ್ಲಿ ಆಲಂಕಾರು ಶ್ರೀ ದುರ್ಗಾಂಬ ಪದವಿ ಪುರ್ವ ಕಾಲೇಜಿನ ಗ್ರಂಥಾಲಯಕ್ಕೆ ಬುಧವಾರ ಸಾಯಂಕಾಲ ಪುಸ್ತಕಗಳನ್ನು ಹಸ್ತಾಂತರಿಸಿ ಅವರು ಮಾತನಾಡುತ್ತಿದ್ದರು. ಕನ್ನಡ ಮಾಧ್ಯಮದ ಹಿನ್ನೆಲೆ ತಿಳಿಯದ ಪೋಷಕರು ಆಂಗ್ಲ ಮಾಧ್ಯಮಕ್ಕೆ ಮಾರು ಹೋಗಿದ್ದಾರೆ. ಇದರಿಂದಾಗಿ ಕನ್ನಡ ಮಾಧ್ಯಮ ಶಾಲೆಗಳು ಅಪಾಯದ ಅಂಚಿನಲ್ಲಿದೆ. ಜ್ಞಾನ ಎಂಬ ಸಂಪತ್ತಿಗಿಂತ

ವಿಜಯಾ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನದ ವತಿಯಿಂದ ► ಆಲಂಕಾರು ಶ್ರೀ ದುರ್ಗಾಂಬ ಪದವಿ ಪೂರ್ವ ಕಾಲೇಜಿಗೆ ಪುಸ್ತಕ ಹಸ್ತಾಂತರ Read More »

ಕರಾವಳಿ

ಪುತ್ತೂರು: ಬೈಕ್ – ಬೈಕ್ ಢಿಕ್ಕಿ ► ಓರ್ವ ಮೃತ್ಯು, ಮೂವರು ಗಂಭೀರ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.02. ದ್ಚಿಚಕ್ರ ವಾಹನಗಳೆರಡರ ಮಧ್ಯೆ ಢಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆ ನರಿಮೊಗರು ಗ್ರಾಮದ ಕೊಡಿನೀರು ಎಂಬಲ್ಲಿ ಶನಿವಾರದಂದು ನಡೆದಿದೆ. ಮೃತನನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಥಮ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸವಣೂರು ಸಮೀಪದ ಅನ್ಯಾಡಿ ನಿವಾಸಿ ಸುಲೈಮಾನ್ ಎಂಬವರ ಪುತ್ರ ಮಹಮ್ಮದ್ ಅನಸ್ ಎಂದು ಗುರುತಿಸಲಾಗಿದೆ. ಟಿವಿಎಸ್ ಅಪಾಚಿ ಬೈಕ್ ಮತ್ತು ಬಜಾಜ್ ಪ್ಲಾಟಿನಾ ಬೈಕ್ ಮಧ್ಯೆ ಮುಖಾಮುಖಿ ಢಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.

ಪುತ್ತೂರು: ಬೈಕ್ – ಬೈಕ್ ಢಿಕ್ಕಿ ► ಓರ್ವ ಮೃತ್ಯು, ಮೂವರು ಗಂಭೀರ Read More »

ಕರಾವಳಿ
Scroll to Top