ಸಂಸದ ಪ್ರತಾಪ್ ಸಿಂಹ ‘ಪ್ರತಾಪ’ಕ್ಕೆ ಬಿಜೆಪಿಯಲ್ಲಿಯೇ ಅಸಮಾಧಾನ ► ಬಿಜೆಪಿ ಹೈಕಮಾಂಡ್ ಗೆ ರಾಜ್ಯ ಘಟಕದಿಂದ ದೂರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.06. ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ನಡವಳಿಕೆಯು ಬಿಜೆಪಿ ವಲಯದಲ್ಲೇ ಬೇಸರ ಸೃಷ್ಟಿಸಿದ್ದು, ಪಕ್ಷದ ಹೈಕಮಾಂಡ್‍ಗೆ ಅವರ ವಿರುದ್ಧ ರಾಜ್ಯ ಘಟಕದ ಕೆಲವರು ದೂರು ನೀಡಿದ್ದಾರೆ. ಯುವಮೋರ್ಚಾ ಕಾರ್ಯಕರ್ತರನ್ನು ಹುರಿದುಂಬಿಸಲು ಹೋಗಿ ಫೇಸ್‍ಬುಕ್‍ನಲ್ಲಿ ಲೈವ್ ಕೊಟ್ಟು ಪಕ್ಷದೊಳಗೆ ನಡೆದ ವಿಷಯಗಳನ್ನು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಹೆಸರನ್ನು ಅನಗತ್ಯವಾಗಿ ಎಳೆದು ತಂದು ಮುಜುಗರ ತಂದಿದ್ದಾರೆ ಅಲ್ಲದೇ ಪಕ್ಷಕ್ಕೆ ಮತ್ತಷ್ಟು ಇರಿಸು-ಮುರಿಸು ಉಂಟಾಗುವಂತೆ […]

ಸಂಸದ ಪ್ರತಾಪ್ ಸಿಂಹ ‘ಪ್ರತಾಪ’ಕ್ಕೆ ಬಿಜೆಪಿಯಲ್ಲಿಯೇ ಅಸಮಾಧಾನ ► ಬಿಜೆಪಿ ಹೈಕಮಾಂಡ್ ಗೆ ರಾಜ್ಯ ಘಟಕದಿಂದ ದೂರು Read More »

ಕರ್ನಾಟಕ

ಬಾಬರಿ ಮಸೀದಿ ಸಂಬಂಧ ಕರಾಳ‌ ದಿನ ಹಾಗೂ ವಿಜಯೋತ್ಸವ ಆಚರಣೆಗೆ ನಿಷೇಧ ► ಇಂದು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.06. ಡಿಸೆಂಬರ್ 6 ರಂದು ಬಾಬರಿ ಮಸೀದಿಯ ಕುರಿತಾದ ಕರಾಳ ದಿನ ಹಾಗೂ ವಿಜಯೋತ್ಸವ ಆಚರಣೆಗೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ಸಾರ್ವಜನಿಕ ಹಿತದೃಷ್ಟಿಯಿಂದ ಕರ್ನಾಟಕ ಪೊಲೀಸ್ ಕಾಯಿದೆ ಕಲಂ 35 ರಂತೆ ಡಿಸೆಂಬರ್ 6 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ

ಬಾಬರಿ ಮಸೀದಿ ಸಂಬಂಧ ಕರಾಳ‌ ದಿನ ಹಾಗೂ ವಿಜಯೋತ್ಸವ ಆಚರಣೆಗೆ ನಿಷೇಧ ► ಇಂದು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ Read More »

ರಾಷ್ಟ್ರೀಯ ನ್ಯೂಸ್

ಕಡಬದ ಸರಸ್ವತೀ ವಿದ್ಯಾಲಯದ ವತಿಯಿಂದ ► ಮನೆಮದ್ದು ಮಾಹಿತಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಡಿ.06. ಸರಸ್ವತೀ ವಿದ್ಯಾಲಯ ಪ್ರೌಢ ಮತ್ತು ಪದವಿಪೂರ್ವ ವಿಭಾಗದ ಬಂಟ್ರ ಗ್ರಾಮ ವಿಕಾಸ ಸಮಿತಿಯ ವತಿಯಿಂದ ಮರ್ಧಾಳ ಅಂಬೇಡ್ಕರ್ ಭವನದಲ್ಲಿ ಮನೆಮದ್ದು ಮಾಹಿತಿ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿದ್ದ ಉಷಾ ಮನೋಹರ್ ರೈ ಮಾತನಾಡಿ, ನಮ್ಮ ಮನೆ ಸುತ್ತಮುತ್ತಲಿನ ಪರಿಸರದಲ್ಲಿ  ಕೆಲವು ರೋಗಗಳ ಉಪಶಮನಕ್ಕೆ ಔಷಧ ದೊರೆಯುತ್ತದೆ. ಆದರೆ ಇದೆಲ್ಲವುಗಳ ಮಾಹಿತಿ ತಿಳಿಯದೆ ಆಸ್ಪತ್ರೆಯನ್ನೇ ಅವಲಂಬಿಸಿದ್ದೇವೆ. ಮನೆ ಮದ್ದಿನ ಮಾಹಿತಿ ಯುವ ಪೀಳಿಗೆಯ ಮೂಲಕ ಪಸರಿಬೇಕಾದಲ್ಲಿ ಮಾಹಿತಿ ಅಗತ್ಯ. ಸುಮಾರು 25 ರೋಗಗಳಿಗೆ

ಕಡಬದ ಸರಸ್ವತೀ ವಿದ್ಯಾಲಯದ ವತಿಯಿಂದ ► ಮನೆಮದ್ದು ಮಾಹಿತಿ ಕಾರ್ಯಕ್ರಮ Read More »

ಕರಾವಳಿ

ಕಡಬ ಠಾಣೆಯ ಸ್ವಾಧೀನದಲ್ಲಿರುವ ವಿವಿಧ ವಾಹನಗಳ ಮಾಲಕರಿಗೆ ಸೂಚನೆ ► ವಾರದೊಳಗೆ ವಾಹನಗಳನ್ನು ಬಿಡಿಸದಿದ್ದಲ್ಲಿ ಬಹಿರಂಗ ಹರಾಜಿಗೆ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಡಿ.05. ಠಾಣಾ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಲ್ಲಿ ಸ್ವಾಧೀನಪಡಿಸಿಕೊಂಡ ನೋಂದಣಿಯಾಗದ ಬೈಕ್ ಸೇರಿ 9 ಬೈಕುಗಳು ಹಾಗೂ ಸ್ವಿಫ್ಟ್ ಕಾರಿನ ಮಾಲಕರಿಗೆ ವಾಹನಗಳನ್ನು ಮಾನ್ಯ ನ್ಯಾಯಾಲಯದೊಂದಿಗೆ ವ್ಯವಹರಿಸಿ ಬಿಡುಗಡೆಗೊಳಿಸಿಕೊಳ್ಳುವಂತೆ ಸೂಚನೆ ನೀಡಲಾಗಿದ್ದರೂ ಇದುವರೆಗೂ ಯಾವುದೇ ವಾಹನಗಳನ್ನು ಬಿಡುಗಡೆಗೊಳಿಸಿರುವುದಿಲ್ಲ. ಈ ಪ್ರಕಟಣೆಯ ಒಂದು ವಾರದೊಳಗೆ ವಾಹನಗಳನ್ನು ಬಿಡುಗಡೆಗೊಳಿಸದೆ ಇದ್ದಲ್ಲಿ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಸದ್ರಿ ವಾಹನಗಳನ್ನು ಬಹಿರಂಗ ಹರಾಜು ಹಾಕಲಾಗುವುದು ಎಂದು ಕಡಬ ಠಾಣಾ ಉಪನಿರೀಕ್ಷಕರಾದ ಪ್ರಕಾಶ್ ದೇವಾಡಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಡಬ ಠಾಣೆಯ ಸ್ವಾಧೀನದಲ್ಲಿರುವ ವಿವಿಧ ವಾಹನಗಳ ಮಾಲಕರಿಗೆ ಸೂಚನೆ ► ವಾರದೊಳಗೆ ವಾಹನಗಳನ್ನು ಬಿಡಿಸದಿದ್ದಲ್ಲಿ ಬಹಿರಂಗ ಹರಾಜಿಗೆ ಚಾಲನೆ Read More »

ಕರಾವಳಿ

ಮರ್ಧಾಳ: ಕ್ಯಾನ್ಸರ್ ಪೀಡಿತ ಬಾಲಕನ ಚಿಕಿತ್ಸೆಗೆ ► ಬೇಕಾಗಿದೆ ದಾನಿಗಳ ಸಹಾಯಹಸ್ತ

(ನ್ಯೂಸ್ ಕಡಬ) newskadaba.com ಕಡಬ, ಡಿ.05. ಶಾಲೆಗೆ ಹೋಗಿ ಶಿಕ್ಷಣ ಕಲಿತು ಉನ್ನತ ಮಟ್ಟಕ್ಕೇರಬೇಕಿದ್ದ ಬಾಲಕನೋರ್ವ ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿ ಇದೀಗ ಆಸ್ಪತ್ರೆಯಲ್ಲಿ ದಿನದೂಡುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾನಿಗಳ ಸಹಾಯಹಸ್ತ ಬೇಕಾಗಿದೆ. ಪುತ್ತೂರು ತಾಲೂಕಿನ ಬಂಟ್ರ ಗ್ರಾಮದ ಕಂಪ ನಿವಾಸಿ ಸುರೇಶ್ ಗೌಡ ಹಾಗೂ ಲಲಿತಾ ದಂಪತಿಯ ಪ್ರಥಮ ಪುತ್ರ ಮರ್ಧಾಳ ಸೈಂಟ್ ಮೇರೀಸ್ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ರಾಜೇಶ್ ಕ್ಯಾನ್ಸರ್ ರೋಗಕ್ಕೀಡಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. 2014 ರಲ್ಲಿ ಮೈ

ಮರ್ಧಾಳ: ಕ್ಯಾನ್ಸರ್ ಪೀಡಿತ ಬಾಲಕನ ಚಿಕಿತ್ಸೆಗೆ ► ಬೇಕಾಗಿದೆ ದಾನಿಗಳ ಸಹಾಯಹಸ್ತ Read More »

ಕರಾವಳಿ

ಹಾಸನ: ಕೆಎಸ್ಸಾರ್ಟಿಸಿ ಬಸ್ – ಖಾಸಗಿ ಬಸ್ ಢಿಕ್ಕಿ ► ಮೂವರು ಮೃತ್ಯು, 25 ಕ್ಕೂ ಅಧಿಕ ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಹಾಸನ, ಡಿ.05. ಕೆಎಸ್ಸಾರ್ಟಿಸಿ ಬಸ್ ಹಾಗೂ ಖಾಸಗಿ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟು 25 ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಆಲೂರು ಠಾಣಾ ವ್ಯಾಪ್ತಿಯ ಯದ್ದುರ್ಗ ಎಂಬಲ್ಲಿ ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ. ಮೃತರನ್ನು ಫಾತಿಮಾ(27), ಅಬ್ದುಲ್ ಸಲಾಂ(54) ಎಂದು ಗುರುತಿಸಲಾಗಿದ್ದು, ಇನ್ನೊಬ್ಬರ ಹೆಸರು ತಿಳಿದುಬಂದಿಲ್ಲ. ನಸುಕಿನ ಜಾವ 2.30. ಗಂಟೆಯ ಸುಮಾರಿಗೆ ಕೆಎಸ್ಆರ್‌ಟಿಸಿ ಅಂಬಾರಿ ಸ್ಲೀಪರ್

ಹಾಸನ: ಕೆಎಸ್ಸಾರ್ಟಿಸಿ ಬಸ್ – ಖಾಸಗಿ ಬಸ್ ಢಿಕ್ಕಿ ► ಮೂವರು ಮೃತ್ಯು, 25 ಕ್ಕೂ ಅಧಿಕ ಮಂದಿಗೆ ಗಾಯ Read More »

ಕರ್ನಾಟಕ

ಗೇರುಕಟ್ಟೆ: ಪೂರ್ವದ್ವೇಷದ ಹಿನ್ನಲೆ ► ಮೂವರಿಗೆ ಚೂರಿ ಇರಿತ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ.04. ತಂಡವೊಂದು ಯುವಕರ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ ಪರಿಣಾಮ ಮೂವರು ಯುವಕರು ಗಾಯಗೊಂಡ ಘಟನೆ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಗೇರುಕಟ್ಟೆ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ. ಗಾಯಾಳುಗಳನ್ನು ಗೇರುಕಟ್ಟೆ ನಿವಾಸಿಗಳಾದ ತಸ್ಲೀಂ, ಅವರ ಸಹೋದರ ಹಾರಿಸ್ ಹಾಗೂ ಶಿಹಾಬ್ ಎಂದು ಗುರುತಿಸಲಾಗಿದ್ದು, ಇವರು ಸೋಮವಾರ ರಾತ್ರಿ ಗೇರುಕಟ್ಟೆ ಬಸ್ ತಂಗುದಾಣದ ಸಮೀಪದ ಅಂಗಡಿಯೊಂದರಲ್ಲಿ ಕುಳಿತಿದ್ದರೆನ್ನಲಾಗಿದೆ. ಅಲ್ಲಿಗೆ ಬಂದ ಸ್ಥಳೀಯ ನಿವಾಸಿಗಳಾದ ಯಾಕುಬ್, ಉಮರಬ್ಬ, ರವೂಫ್ ಹಾಗೂ ಇತರರ ತಂಡವೊಂದು ಮೂವರ

ಗೇರುಕಟ್ಟೆ: ಪೂರ್ವದ್ವೇಷದ ಹಿನ್ನಲೆ ► ಮೂವರಿಗೆ ಚೂರಿ ಇರಿತ Read More »

ಕರಾವಳಿ

ದತ್ತಜಯಂತಿ ಆಚರಣೆಯ‌‌ ನಂತರ ಪೆಟ್ರೋಲ್ ಬಾಂಬ್ ಪ್ರಯೋಗ ► 5 ಪೆಟ್ರೋಲ್ ಬಾಂಬ್ ಸಹಿತ 13 ಮಂದಿ ವಶಕ್ಕೆ: ಎಸ್ಪಿ ಅಣ್ಣಾಮಲೈ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಡಿ.4. ದತ್ತಜಯಂತಿಯ ಕೊನೆಯ ದಿನವಾದ ರವಿವಾರದಂದು ಅಹಿತಕರ ಘಟನೆಗಳು ನಡೆಯದಂತೆ ನಗರದಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರ ಮೇಲೆಯೇ ಪೆಟ್ರೋಲ್ ಬಾಂಬ್ ಪ್ರಯೋಗ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಎಸ್ಪಿ ಕೆ.ಅಣ್ಣಾಮಲೈ ತಿಳಿಸಿದ್ದಾರೆ. ಅವರು ಸೋಮವಾರ ನಗರ ಪೊಲೀಸ್ ಠಾಣೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಗರದ ತಮಿಳು ಕಾಲನಿಯ ಬಳಿಯ ಮಾರ್ಕೆಟ್ ರಸ್ತೆಯಲ್ಲಿ ಪೊಲೀಸರು ರಾತ್ರಿ ಸಮಯದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಕಿಡಿಗೇಡಿಗಳು

ದತ್ತಜಯಂತಿ ಆಚರಣೆಯ‌‌ ನಂತರ ಪೆಟ್ರೋಲ್ ಬಾಂಬ್ ಪ್ರಯೋಗ ► 5 ಪೆಟ್ರೋಲ್ ಬಾಂಬ್ ಸಹಿತ 13 ಮಂದಿ ವಶಕ್ಕೆ: ಎಸ್ಪಿ ಅಣ್ಣಾಮಲೈ Read More »

ಕರ್ನಾಟಕ

ಕಲ್ಲಾಜೆ: ಸವಾರನ ನಿಯಂತ್ರಣ ತಪ್ಪಿ ಸ್ಕಿಡ್ ಆದ ಬೈಕ್ ► ರಸ್ತೆಗೆಸೆಯಲ್ಪಟ್ಟ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಡಿ.04. ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡ ಘಟನೆ ಸೋಮವಾರದಂದು ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕಲ್ಲಾಜೆ ಎಂಬಲ್ಲಿ ನಡೆದಿದೆ. ಗಂಭೀರ ಗಾಯಗೊಂಡಿರುವ ಗಾಯಾಳುವನ್ನು ಕೊಂಬಾರು ನಿವಾಸಿ ಚಿದಾನಂದ (26) ಎಂದು ಗುರುತಿಸಲಾಗಿದೆ. ಈತ ಮರ್ಧಾಳದಿಂದ ತನ್ನ ಮನೆಯ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಸ್ಕಿಡ್ ಆಗಿ ನಿಯಂತ್ರಣ ತಪ್ಪಿದ ಬೈಕ್ ರಸ್ತೆಗೆ ಬಿದ್ದಿದ್ದು, ಚಿದಾನಂದದ ತಲೆಗೆ ಏಟಾಗಿದೆ. ತಕ್ಷಣವೇ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ

ಕಲ್ಲಾಜೆ: ಸವಾರನ ನಿಯಂತ್ರಣ ತಪ್ಪಿ ಸ್ಕಿಡ್ ಆದ ಬೈಕ್ ► ರಸ್ತೆಗೆಸೆಯಲ್ಪಟ್ಟ ಸವಾರ ಗಂಭೀರ Read More »

ಕರಾವಳಿ

ಕಡಬ: ಕಾರು ಢಿಕ್ಕಿ ► ಪಾದಚಾರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಡಿ.04. ಕಾರೊಂದು ಢಿಕ್ಕಿ ಹೊಡೆದು ಪಾದಚಾರಿಯೋರ್ವರು ಗಾಯಗೊಂಡ ಘಟನೆ ಇಲ್ಲಿನ ಮುಖ್ಯ ಪೇಟೆಯ ಗಣೇಶ್ ಬಿಲ್ಡಿಂಗ್ ಸಮೀಪ ಸೋಮವಾರ ರಾತ್ರಿ ನಡೆದಿದೆ. ಗಾಯಾಳುವನ್ನು ಕಡಬ ತಾಲೂಕು ಕಛೇರಿಯ ಮುಂಭಾಗದಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಆನಂದ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರು ರಸ್ತೆ ದಾಟುತ್ತಿದ್ದಾಗ ಕಾರು ಢಿಕ್ಕಿಯಾಗಿದ್ದು, ಇವರನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ನೀಡಲಾಯಿತು.

ಕಡಬ: ಕಾರು ಢಿಕ್ಕಿ ► ಪಾದಚಾರಿಗೆ ಗಾಯ Read More »

ಕರಾವಳಿ
Scroll to Top