ಪ್ರೌಢಶಾಲಾ ಶಿಕ್ಷಕರಿಗೆ ರಾಜ್ಯ ಸರಕಾರದಿಂದ ‘ಭಡ್ತಿ ಭಾಗ್ಯ’ ► ಮುಂದಿನ ವರ್ಷ ಕೆಪಿಎಸ್ಸಿ ಮಾದರಿಯಲ್ಲಿ 10 ಸಾವಿರ ಶಿಕ್ಷಕರ ನೇಮಕಾತಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.20. ರಾಜ್ಯದ ಸುಮಾರು 379 ಪ್ರೌಢಶಾಲಾ ಶಿಕ್ಷಕರಿಗೆ ಅರ್ಹತೆಯ ಆಧಾರದಲ್ಲಿ ಭಡ್ತಿ ಭಾಗ್ಯ ನೀಡಲು ಸರಕಾರ ಮುಂದಾಗಿದೆ. ಬುಧವಾರದಂದು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿ ವರೆಗೆ ವಿದ್ಯಾಭ್ಯಾಸ ಮತ್ತು ಹೋಬಳಿ ಮಟ್ಟದ ಶಾಲೆಗಳಲ್ಲಿ 1 ರಿಂದ 12 ನೇ ತರಗತಿಯವರೆಗೆ ವಿದ್ಯಾಭ್ಯಾಸ ನೀಡಲು ಸರಕಾರ ಮುಂದಾಗಿದೆ ಎಂದರು. ಅಲ್ಲದೆ ಕೆಪಿಎಸ್ಸಿ ಮಾದರಿಯಲ್ಲಿ 10 ಸಾವಿರ […]

ಪ್ರೌಢಶಾಲಾ ಶಿಕ್ಷಕರಿಗೆ ರಾಜ್ಯ ಸರಕಾರದಿಂದ ‘ಭಡ್ತಿ ಭಾಗ್ಯ’ ► ಮುಂದಿನ ವರ್ಷ ಕೆಪಿಎಸ್ಸಿ ಮಾದರಿಯಲ್ಲಿ 10 ಸಾವಿರ ಶಿಕ್ಷಕರ ನೇಮಕಾತಿ Read More »

ಕರ್ನಾಟಕ

ಕೇಪು ಶಾಲೆಯಲ್ಲಿ ವಾರ್ಷಿಕೋತ್ಸವ ಪ್ರಯುಕ್ತ ಕ್ರೀಡಾಕೂಟ

(ನ್ಯೂಸ್ ಕಡಬ) newskadaba.com ಕಡಬ, ಡಿ.20. ಕುಟ್ರುಪ್ಪಾಡಿ ಗ್ರಾಮದ ಕೇಪು ಸರಕಾರಿ ಹಿ.ಪ್ರಾ.ಶಾಲೆಯ ವಾರ್ಷಿಕೋತ್ಸವ ಪೂರ್ವಭಾವಿಯಾಗಿ ಶಾಲಾ ಹಿರಿಯ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿಗಳ ಪೋಷಕರಿಗೆ ಹಾಗೂ ಊರವರಿಗೆ ಆಯೋಜಿಸಲಾಗಿದ್ದ  ಕ್ರೀಡಾಕೂಟವು ಇತ್ತೀಚೆಗೆ ಶಾಲಾ ಮೈದಾನದಲ್ಲಿ ಜರಗಿತು. ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್.ಕೆ. ದೀಪ ಬೆಳಗಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಸುತ್ತದೆ. ಗ್ರಾಮದ ಎಲ್ಲರೂ ಸೇರಿಕೊಂಡು ಕಾರ್ಯಕ್ರಮಗಳನ್ನು ನಡೆಸಿದಾಗ ಗ್ರಾಮದೊಳಿಗನ ಬಾಂಧವ್ಯವೂ ವೃದ್ಧಿಸುತ್ತದೆ ಎಂದರು. ಕ್ರೀಡಾಕೂಟಕ್ಕೆ  ತೆಂಗಿನಕಾಯಿ ಒಡೆದು

ಕೇಪು ಶಾಲೆಯಲ್ಲಿ ವಾರ್ಷಿಕೋತ್ಸವ ಪ್ರಯುಕ್ತ ಕ್ರೀಡಾಕೂಟ Read More »

ಕರಾವಳಿ

ಕೊಯಿಲ: ಗ್ರಾ.ಪಂ. ಉಪ ಚುನಾವಣೆ ► ಬಿಜೆಪಿ ಬೆಂಬಲಿತ ಅಭ್ಯರ್ಥಿ ಲಿಂಗಪ್ಪ ಕುಂಬಾರ ಗೆಲುವು

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.20. ಸದಸ್ಯರೋರ್ವರ ನಿಧನದಿಂದ ತೆರವುಗೊಂಡಿದ್ದ ಕೊಯಿಲ ಗ್ರಾಮ ಪಂಚಾಯತ್‌ನ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಲಿಂಗಪ್ಪ ಕುಂಬಾರ ಗೆಲುವು ಸಾಧಿಸಿದ್ದಾರೆ. ಹಿಂದುಳಿದ ವರ್ಗ ‘ಎ’ ಗೆ ಮೀಸಲಾಗಿದ್ದ 4ನೇ ವಾರ್ಡ್‌ನಲ್ಲಿ ಪ್ರತಿನಿಧಿಸಿದ್ದ ಬಿಜೆಪಿ ಬೆಂಬಲಿತ ಸದಸ್ಯ ನಾಗೇಶ ಕುಂಬಾರರವರ ನಿಧನದ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಲಿಂಗಪ್ಪ ಕುಂಬಾರರು ಕಾಂಗ್ರೆಸ್ ಅಭ್ಯರ್ಥಿ ದಯಾನಂದ ಸಾಲಿಯಾನ್‌ರವರನ್ನು 95 ಮತಗಳ ಅಂತರದಿಂದ ಸೋಲಿಸಿದರು.

ಕೊಯಿಲ: ಗ್ರಾ.ಪಂ. ಉಪ ಚುನಾವಣೆ ► ಬಿಜೆಪಿ ಬೆಂಬಲಿತ ಅಭ್ಯರ್ಥಿ ಲಿಂಗಪ್ಪ ಕುಂಬಾರ ಗೆಲುವು Read More »

ಕರಾವಳಿ

ಕಳಾರ – ಅಡ್ಕಾಡಿ ರಸ್ತೆ ಅಭಿವೃದ್ಧಿಗೆ ಶಾಸಕ ಅಂಗಾರ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಡಿ.20. ಸರಕಾರದ ಅನುದಾನದಲ್ಲಿ ನಡೆಯುವ ಕಾಮಗಾರಿಗಳು ಸುಸೂತ್ರವಾಗಿ ಮತ್ತು ಗುಣಮಟ್ಟದ ಕೊರತೆಯಾಗದಂತೆ ನಡೆಯಲು ಸ್ಥಳೀಯ ಜನರು ಹಾಗೂ ಜನಪ್ರತಿನಿಧಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸುಳ್ಯ ಶಾಸಕ ಎಸ್.ಅಂಗಾರ ಅವರು ನುಡಿದರು. ಅವರು ಕರ್ನಾಟಕ ಅಲ್ಪಸಂಖ್ಯಾತ ಕಾಲನಿಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿ ಯೋಜನೆಯಡಿಯಲ್ಲಿ 08 ಲಕ್ಷ ರೂ. ಅನುದಾನದಲ್ಲಿ  ನಡೆಯಲಿರುವ ಕುಟ್ರುಪ್ಪಾಡಿ ಗ್ರಾಮದ ಕಳಾರ-ಅಡ್ಕಾಡಿ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಕಾಮಗಾರಿ ನಡೆಯುವ ವೇಳೆ ಸ್ಥಳೀಯವಾಗಿ ಎದುರಾಗುವ

ಕಳಾರ – ಅಡ್ಕಾಡಿ ರಸ್ತೆ ಅಭಿವೃದ್ಧಿಗೆ ಶಾಸಕ ಅಂಗಾರ ಚಾಲನೆ Read More »

ಕರಾವಳಿ

ನಿಮ್ಮ ಮೊಬೈಲ್ ಬ್ಯಾಟರಿ ಹೆಚ್ಚು ಬಾಳಿಕೆ ಬರಬೇಕೆ…? ► ಹಾಗಾದರೆ ಈ ಕೆಲವೊಂದು ಮಾಹಿತಿಗಳನ್ನು ಗಮನಿಸಿ

(ನ್ಯೂಸ್ ಕಡಬ) newskadaba.com ತಂತ್ರಜ್ಞಾನ, ಡಿ.20. ನಾವು ಪ್ರತೀದಿನ ಉಪಯೋಗಿಸುವ ಮೊಬೈಲ್ ಫೋನ್‌ಗಳಲ್ಲಿ ಬ್ಯಾಟರಿ ಚಾರ್ಜ್ ಕಡಿಮೆಯಾಗುತ್ತಿರುವುದು ನಮಗೆ ಪ್ರಮುಖ ಸಮಸ್ಯೆಯಾಗಿದೆ. ಮೊಬೈಲ್ ಫೋನ್ ನಲ್ಲಿನ ಬ್ಯಾಟರಿಯ ಸುದೀರ್ಘ ಬಾಳ್ವಿಕೆಗಾಗಿ ನಾವು ಕೆಲವೊಂದು ಮಾಹಿತಿಗಳನ್ನು ನಮ್ಮ ‘ನ್ಯೂಸ್ ಕಡಬ’ದ ಓದುಗರಿಗಾಗಿ ಹಂಚಿಕೊಳ್ಳುತ್ತಿದ್ದೇವೆ. 1) ಮೊಬೈಲ್ ಚಾರ್ಜಿಂಗ್ ಗಾಗಿ ಅಗ್ಗದ ಮತ್ತು ನಕಲಿ ಚಾರ್ಜರ್ ಅನ್ನು ಬಳಸಬಾರದು. 2) ಸ್ಮಾರ್ಟ್ ಫೋನ್ ಗಳನ್ನು ಚಾರ್ಜ್ ಮಾಡುವಾಗ ಯಾವಾಗಲೂ ಮೂಲ ಚಾರ್ಜರನ್ನು ಬಳಸಿ. 3) ನಕಲಿ ಚಾರ್ಜರನ್ನು ಬಳಸಿದರೆ ಬ್ಯಾಟರಿಯ

ನಿಮ್ಮ ಮೊಬೈಲ್ ಬ್ಯಾಟರಿ ಹೆಚ್ಚು ಬಾಳಿಕೆ ಬರಬೇಕೆ…? ► ಹಾಗಾದರೆ ಈ ಕೆಲವೊಂದು ಮಾಹಿತಿಗಳನ್ನು ಗಮನಿಸಿ Read More »

ತಂತ್ರಜ್ಞಾನ

ಪದವು: ಬೈಕ್ ಗಳ ಮಧ್ಯೆ ಢಿಕ್ಕಿ ► ಸವಾರರಿಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಡಿ.19. ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರು ಪದವು ಎಂಬಲ್ಲಿ ಬೈಕ್ ಮಧ್ಯೆ ಅಪಘಾತ ಉಂಟಾಗಿ ಎರಡೂ ಬೈಕಿನ ಸವಾರರೂ ಗಂಭೀರ ಗಾಯಗೊಂಡ ಘಟನೆ ಮಂಗಳವಾರದಂದು ನಡೆದಿದೆ. ಗಾಯಗೊಂಡವರನ್ನು ಪುತ್ತೂರು ಒಕ್ಕಲಿಗ ಗೌಡ ಸಹಕಾರಿ ಸಂಘದ ಕಡಬ ಶಾಖೆಯ ಪಿಗ್ಮಿ ಸಂಗ್ರಾಹಕ ಪುತ್ತೂರು ತಾಲೂಕಿನ ಕೊಂಬಾರು ಗ್ರಾಮದ ಆರ್ದೇಲ್ ನಿವಾಸಿ ಈಶ್ವರ ಗೌಡರ ಪುತ್ರ ಬೆಳಿಯಪ್ಪ ಗೌಡ(32) ಎಂದು ಗುರುತಿಸಲಾಗಿದೆ. ಇನ್ನೊಂದು ಬೈಕಿನ ಸವಾರ ಪೆರಾಬೆ ನಿವಾಸಿ ಭುವನ್(22) ಎಂದು

ಪದವು: ಬೈಕ್ ಗಳ ಮಧ್ಯೆ ಢಿಕ್ಕಿ ► ಸವಾರರಿಬ್ಬರು ಗಂಭೀರ Read More »

ಕರಾವಳಿ

ಮಂಗಳೂರಿನಲ್ಲಿ ಕೇವಲ ಎರಡು ಗಂಟೆ ನಿದ್ದೆ ಮಾಡಿದ ಪ್ರಧಾನಿ ಮೋದಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.19. ಲಕ್ಷದ್ವೀಪಕ್ಕೆ ತೆರಳುವುದಕ್ಕಾಗಿ ಕರಾವಳಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ರಾತ್ರಿ ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಕೇವಲ ಎರಡು ಗಂಟೆ ಮಾತ್ರ ನಿದ್ದೆ ಮಾಡಿದರು.   ಸೋಮವಾರ ರಾತ್ರಿ ಸುಮಾರು 12:05ರ ವೇಳೆಗೆ ವಾಯುಪಡೆಯ ವಿಶೇಷ ವಿಮಾನದಲ್ಲಿ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಕಾರ್ಯಕರ್ತರೊಂದಿಗೆ 3-4 ನಿಮಿಷ ಬೆರೆತು ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿನ ಗೆಲುವಿಗೆ ಸಂಭ್ರಮಾಚರಿಸಿದರು. ಬಳಿಕ ಬಜ್ಪೆ ವಿಮಾನ ನಿಲ್ದಾಣದಿಂದ

ಮಂಗಳೂರಿನಲ್ಲಿ ಕೇವಲ ಎರಡು ಗಂಟೆ ನಿದ್ದೆ ಮಾಡಿದ ಪ್ರಧಾನಿ ಮೋದಿ Read More »

ರಾಷ್ಟ್ರೀಯ ನ್ಯೂಸ್

ಮಕ್ಕಳನ್ನು ಸಮಾಜಕ್ಕೆ ಪೂರಕವಾಗಿ ರೂಪಿಸುವ ಶಿಕ್ಷಣ ಬೇಕಾಗಿದೆ: ಸುಬ್ರಹ್ಮಣ್ಯಶ್ರೀ

(ನ್ಯೂಸ್ ಕಡಬ) newskadaba.com ಕಡಬ, ಡಿ.19. ಶಿಕ್ಷಣವೆಂಬುದು ಕೇವಲ ಬದುಕಿಗೋಸ್ಕರ ಎನ್ನುವ ಧೋರಣೆಯನ್ನು ಅಳಿಸಿ ಹಾಕಿ ಮಕ್ಕಳು ಸಮಾಜಕ್ಕೆ ಪೂರಕವಾಗಿ ರೂಪುಗೊಳ್ಳುವ ಶಿಕ್ಷಣವನ್ನು ನೀಡಬೇಕು ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು. ಅವರು ಸೋಮವಾರ ರಾಮಕುಂಜದ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜು ಮತ್ತು ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಕಲೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಇಂದು ಸಮಾಜದ ತುಂಬಾ ಕ್ರೌರ್ಯದಿಂದ ಖುಷಿ ಅನುಭವಿಸುವ ಮನಸ್ಸುಗಳು ಹೆಚ್ಚಾಗಿವೆ. ಆದುದರಿಂದ ಶಿಕ್ಷಣವು

ಮಕ್ಕಳನ್ನು ಸಮಾಜಕ್ಕೆ ಪೂರಕವಾಗಿ ರೂಪಿಸುವ ಶಿಕ್ಷಣ ಬೇಕಾಗಿದೆ: ಸುಬ್ರಹ್ಮಣ್ಯಶ್ರೀ Read More »

ಕರಾವಳಿ

ಕಡಬದ 108 ಆಂಬ್ಯುಲೆನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

(ನ್ಯೂಸ್ ಕಡಬ) newskadaba.com ಕಡಬ, ಡಿ.19. ಹೆರಿಗೆ ನೋವಿನಿಂದ ಆಸ್ಪತ್ರೆಗೆ ತೆರಳುವ ಹಾದಿ ಮಧ್ಯೆ ಕಡಬದ 108 ಆಂಬ್ಯುಲೆನ್ಸ್ ನಲ್ಲಿ ಮಹಿಳೆಯೋರ್ವರು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಮಂಗಳವಾರದಂದು ಮುಂಜಾನೆ 4.45ರ ಸುಮಾರಿಗೆ ನಡೆದಿದೆ. ಹೆರಿಗೆ ನೋವೆಂದು ಕಡಬದ 108 ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ಆಲಂಕಾರು ಸಮೀಪದ ನಡುಗುಡ್ಡೆ ನಿವಾಸಿ ಲಲಿತಾ(38) ಪುತ್ತೂರು ಕೋಡಿಯಾಡಿ ಮಾರ್ಗ ಮಧ್ಯೆ ಗಂಡು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ‌. ಇದೀಗ ತಾಯಿ-ಮಗು ಆರೋಗ್ಯದಿಂದಿದ್ದು, ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಸೂತ್ರ

ಕಡಬದ 108 ಆಂಬ್ಯುಲೆನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ Read More »

ಕರಾವಳಿ

ಮಂಗಳೂರಿನಲ್ಲಿ ತಂಗಿದ ಪ್ರಧಾನಿ ಮೋದಿ ► ಬಿಜೆಪಿ ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.19. ಲಕ್ಷದ್ವೀಪ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ರಾತ್ರಿ ವಾಯುಪಡೆಯ ವಿಶೇಷ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ರಾತ್ರಿ ಬಂದಿಳಿದರು. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದರಿಂದ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿನಲ್ಲಿ ಸಂಭ್ರಮಾಚರಿಸಿದರು. ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಪಿ.ರಾಧಾಕೃಷ್ಣನ್, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಸಂಸದ ನಳಿನ್ ಕುಮಾರ್

ಮಂಗಳೂರಿನಲ್ಲಿ ತಂಗಿದ ಪ್ರಧಾನಿ ಮೋದಿ ► ಬಿಜೆಪಿ ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆ Read More »

ರಾಷ್ಟ್ರೀಯ ನ್ಯೂಸ್
Scroll to Top