ಕಡಬದ 108 ಆಂಬ್ಯುಲೆನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ



(ನ್ಯೂಸ್ ಕಡಬ) newskadaba.com ಕಡಬ, ಡಿ.19. ಹೆರಿಗೆ ನೋವಿನಿಂದ ಆಸ್ಪತ್ರೆಗೆ ತೆರಳುವ ಹಾದಿ ಮಧ್ಯೆ ಕಡಬದ 108 ಆಂಬ್ಯುಲೆನ್ಸ್ ನಲ್ಲಿ ಮಹಿಳೆಯೋರ್ವರು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಮಂಗಳವಾರದಂದು ಮುಂಜಾನೆ 4.45ರ ಸುಮಾರಿಗೆ ನಡೆದಿದೆ.







ಹೆರಿಗೆ ನೋವೆಂದು ಕಡಬದ 108 ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ಆಲಂಕಾರು ಸಮೀಪದ ನಡುಗುಡ್ಡೆ ನಿವಾಸಿ ಲಲಿತಾ(38) ಪುತ್ತೂರು ಕೋಡಿಯಾಡಿ ಮಾರ್ಗ ಮಧ್ಯೆ ಗಂಡು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ‌. ಇದೀಗ ತಾಯಿ-ಮಗು ಆರೋಗ್ಯದಿಂದಿದ್ದು, ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.






ಸುಸೂತ್ರ ಹೆರಿಗೆ ಮಾಡಿಸುವಲ್ಲಿ ಇಎಂಟಿ ಚಂದ್ರಶೇಖರ ಎನ್. ರವರಿಗೆ ಪೈಲಟ್ ಗಳಾದ ರಮೇಶ್ ಹಾಗೂ ರಿಯಾಝ್ ಸಹಕರಿಸಿದರು. ಈ ಹಿಂದೆಯೂ ಕಡಬದ 108 ಆಂಬ್ಯುಲೆನ್ಸ್ ನಲ್ಲಿ ಕೆಲವು ಹೆರಿಗೆಗಳು ನಡೆದಿತ್ತು.

error: Content is protected !!
Scroll to Top