ವೃದ್ದರೊಬ್ಬರ ಅಸಹಾಯಕ ಕುಟುಂಬದ ಮೃತದೇಹವನ್ನು ಸಾಗಿಸಲು ತಾವೇ ಹೆಗಲುಗೊಟ್ಟ ಸಬ್ ಇನ್ಸ್‌ಪೆಕ್ಟರ್ ► ಕಡಬ ಪೊಲೀಸರ ಮಾನವೀಯತೆಗೆ ವ್ಯಕ್ತವಾಗುತ್ತಿದೆ ವ್ಯಾಪಕ ಪ್ರಶಂಸೆ

(ನ್ಯೂಸ್ ಕಡಬ) newskadaba.com ಕಡಬ, ಮಾ.03. ವೃದ್ಧರೋರ್ವರು ಗುಡ್ಡದ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟ ಘಟನೆ ಕೊಯಿಲ ಗ್ರಾಮದ ಗುಲ್ಗೋಡಿ ಎಂಬಲ್ಲಿ ಶನಿವಾರದಂದು ನಡೆದಿದೆ. ಮೃತರನ್ನು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಜಂಬದ ಹಳ್ಳಿ ನಿವಾಸಿ ಪಲನಿ ಸ್ವಾಮಿ ಎಂಬವರ ಪುತ್ರ ಅಸಲಪ್ಪ (80) ಎಂದು ಗುರುತಿಸಲಾಗಿದೆ. ಮೀನು ಹಿಡಿಯುವ ಕಾಯಕದ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಕಡಬ ತಾಲೂಕಿನ ಕೊಯಿಲಕ್ಕೆ ಆಗಮಿಸಿದ ಇವರ ಪುತ್ರ ಇಲ್ಲಿನ ಮಹಿಳೆಯೋರ್ವರನ್ನು ವಿವಾಹವಾಗಿದ್ದರೆನ್ನಲಾಗಿದೆ. ತನ್ನ […]

ವೃದ್ದರೊಬ್ಬರ ಅಸಹಾಯಕ ಕುಟುಂಬದ ಮೃತದೇಹವನ್ನು ಸಾಗಿಸಲು ತಾವೇ ಹೆಗಲುಗೊಟ್ಟ ಸಬ್ ಇನ್ಸ್‌ಪೆಕ್ಟರ್ ► ಕಡಬ ಪೊಲೀಸರ ಮಾನವೀಯತೆಗೆ ವ್ಯಕ್ತವಾಗುತ್ತಿದೆ ವ್ಯಾಪಕ ಪ್ರಶಂಸೆ Read More »

ಕರಾವಳಿ

ಮಂಗಳೂರು: ಸ್ಕ್ರೂ ಡ್ರೈವರ್ ನಿಂದ ಇರಿದು ಲಾರಿ ಚಾಲಕನ ಕೊಲೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.03. ಕ್ಷುಲ್ಲಕ ಕಾರಣಕ್ಕಾಗಿ ಸ್ಕ್ರೂಡ್ರೈವರ್ ನಿಂದ ಇರಿದು ಲಾರಿ ಚಾಲಕನೋರ್ವನನ್ನು ಕೊಲೆಗೈದ ಘಟನೆ ನಗರದ ಹೊರವಲಯದ ಪಡೀಲ್‌ನಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಮೃತ ಚಾಲಕನನ್ನು ತಮಿಳುನಾಡು ಮೂಲದ ಸೆಲ್ವಮಣಿ(38) ಎಂದು ಗುರುತಿಸಲಾಗಿದೆ. ಸೆಲ್ವಮಣಿ ಹಾಗೂ ಇನ್ನೊಂದು ಲಾರಿಯ ಚಾಲಕ ತಮಿಳುನಾಡು ಮೂಲದ ಸುರೇಶ್ ಕುಮಾರ್ ನಡುವೆ ಶುಕ್ರವಾರ ತಡರಾತ್ರಿ ಪಡೀಲ್‌ನ ನೂತನ ರೈಲ್ವೆ ಸೇತುವೆ ಸಮೀಪ ಕ್ಷುಲ್ಲಕ ಕಾರಣಕ್ಕಾಗಿ ಮಾತಿನ ಚಕಮಕಿ ನಡೆದಿದ್ದು, ಈ ಸಂದರ್ಭದಲ್ಲಿ ಆರೋಪಿಯು ಸ್ಕ್ರೂ ಡ್ರೈವರ್ ನಿಂದ

ಮಂಗಳೂರು: ಸ್ಕ್ರೂ ಡ್ರೈವರ್ ನಿಂದ ಇರಿದು ಲಾರಿ ಚಾಲಕನ ಕೊಲೆ Read More »

ಕರಾವಳಿ

ಮಾರ್ಚ್‌ 06 ರಂದು ಬಿಜೆಪಿ ವತಿಯಿಂದ ‘ಮಂಗಳೂರು ಚಲೋ’ ► ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳೂರಿಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.03. ಜಿಲ್ಲೆಯಲ್ಲಿ ಆಗಿರುವ ಬಿ.ಜೆ.ಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರ ಕೊಲೆ ಪ್ರಕರಣವನ್ನು ಸಿಬಿಐ ಗೆ ವಹಿಸಿಕೊಡಬೇಕು ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಮಾರ್ಚ್ 06 ರಂದು ನಡೆಯಲಿರುವ ‘ಮಂಗಳೂರು ಚಲೋ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ. ಇಂದು (ಮಾ.03) ಸಂಸದ ಪ್ರತಾಪಸಿಂಹ ಮತ್ತು ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಕುಶಾಲನಗರದಿಂದ ಹಾಗೂ ಕೇಂದ್ರ ಸಚಿವ ಡಿ.ವಿ ಸದಾನಂದ

ಮಾರ್ಚ್‌ 06 ರಂದು ಬಿಜೆಪಿ ವತಿಯಿಂದ ‘ಮಂಗಳೂರು ಚಲೋ’ ► ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳೂರಿಗೆ Read More »

ಕರಾವಳಿ

ಗುತ್ತಿಗಾರು: ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಪ್ರಧಾನ ಮಂತ್ರಿಗೆ ದೂರು ನೀಡಿದ ಯುವಕ ► ಪ್ರಧಾನ ಮಂತ್ರಿ ಕಛೇರಿಯಿಂದ ಕಾಮಗಾರಿ ಪರಿಶೀಲನೆಗೆ ಆದೇಶ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ.03. ಬಳ್ಪ-ಕಮಿಲ-ಗುತ್ತಿಗಾರು ರಸ್ತೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಮತ್ತು ಅವ್ಯವಹಾರ ನಡೆದಿದೆ ಎಂದು ಕಮಿಲದ ಯುವಕನೋರ್ವ ಪ್ರಧಾನಮಂತ್ರಿಗಳಿಗೆ ದೂರು ನೀಡಿದ್ದು, ಅದರಂತೆ ಪ್ರಧಾನಮಂತ್ರಿ ಕಾರ್ಯಾಲಯದಿಂದ ಸಂಬಂಧಪಟ್ಟ ಇಲಾಖೆಗಳಿಗೆ ತನಿಖೆ ನಡೆಸುವಂತೆ ಸೂಚನೆ ಬಂದಿದೆ. ಕೇಂದ್ರ ಸರಕಾರದ ಅನುದಾನದಲ್ಲಿ ನಡೆಯುತ್ತಿರುವ ಬಳ್ಪ-ಕಮಿಲ-ಗುತ್ತಿಗಾರು ರಸ್ತೆಯ ಅಭಿವೃದ್ಧಿ ಕಾಮಗಾರಿಯು ಕಳಪೆಯಾಗಿದೆ ಮತ್ತು ಅವ್ಯವಹಾರವಾಗಿದೆ ಎಂದು ಕಮಿಲ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿರುವ ಹರಿಸುಬ್ರಹ್ಮಣ್ಯ ಪುಚ್ಚಪ್ಪಾಡಿ ಎಂಬವರು ಪ್ರಧಾನಮಂತ್ರಿಯವರಿಗೆ ಇ-ಮೈಲ್ ಮೂಲಕ ದೂರು ನೀಡಿದ್ದರು. ಪ್ರಧಾನಮಂತ್ರಿಗಳ ಕಾರ್ಯಾಲಯವು ಜಿಲ್ಲಾ

ಗುತ್ತಿಗಾರು: ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಪ್ರಧಾನ ಮಂತ್ರಿಗೆ ದೂರು ನೀಡಿದ ಯುವಕ ► ಪ್ರಧಾನ ಮಂತ್ರಿ ಕಛೇರಿಯಿಂದ ಕಾಮಗಾರಿ ಪರಿಶೀಲನೆಗೆ ಆದೇಶ Read More »

ಕರಾವಳಿ

ಕಡಬ ಪ್ರಾ.ಕೃ.ಪ.ಸ.ಸಂಘದಲ್ಲಿ ನವೋದಯ ಸದಸ್ಯರಿಗೆ ಸಮವಸ್ತ್ರ ಸೀರೆ ವಿತರಣೆ ► ಸೀರೆಯಿಂದ ಸಮಾನತೆ ಮಾತ್ರವಲ್ಲ, ಹೃದಯ ವೈಶಾಲ್ಯತೆಯು ಬೇಕು: ಶಾಸಕ ಅಂಗಾರ

(ನ್ಯೂಸ್ ಕಡಬ) newskadaba.com ಕಡಬ, ಮಾ.03. ಸ್ವಸಹಾಯ ಸಂಘಗಳು ಸ್ವಾವಲಂಬಿ ಬದುಕಿನೊಂದಿಗೆ ದೇಶದ ಅಭಿವೃದ್ದಿಗೆ ಪ್ರಮುಖ ಪಾತ್ರ ವಹಿಸುತ್ತಿವೆ. ಸಂಘಗಳ ಮಹಿಳಾ ಸದಸ್ಯರು ಕೇವಲ ಒಂದೇ ರೀತಿಯ ಸೀರೆ ಉಡುವುದರಿಂದ ಸಮಾನತೆ ಬರಲು ಸಾಧ್ಯವಿಲ್ಲ, ಹೃದಯ ವೈಶಾಲ್ಯತೆಯಿಂದ ಮೇಲು ಕೀಳು ಭಾವನೆ ತೊರೆದು ಸಮಾನತೆ ತೋರುವ ಕೆಲಸ ಕೂಡ ಆಗಬೇಕು ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು. ಅವರು ಕಡಬ ಪ್ರಾ.ಕೃ.ಸ.ಸಂಘದ ಸಭಾಂಗಣದಲ್ಲಿ ಸಂಘದ ಸಹಯೋಗದೊಂದಿಗೆ ಮಂಗಳೂರು ನವೋದಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನವೋದಯ ಸ್ವಸಹಾಯ ಸಂಘದ ಮಹಿಳಾ

ಕಡಬ ಪ್ರಾ.ಕೃ.ಪ.ಸ.ಸಂಘದಲ್ಲಿ ನವೋದಯ ಸದಸ್ಯರಿಗೆ ಸಮವಸ್ತ್ರ ಸೀರೆ ವಿತರಣೆ ► ಸೀರೆಯಿಂದ ಸಮಾನತೆ ಮಾತ್ರವಲ್ಲ, ಹೃದಯ ವೈಶಾಲ್ಯತೆಯು ಬೇಕು: ಶಾಸಕ ಅಂಗಾರ Read More »

ಕರಾವಳಿ

ಎಸ್ಕೆಎಸ್ಸೆಸ್ಸೆಫ್‌ ಟ್ರೆಂಡ್ ಜಿಲ್ಲಾ ಸಂಚಾಲಕರಾಗಿ ಇಕ್ಬಾಲ್ ಬಾಳಿಲ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಮಾ.03. ಎಸ್ಕೆಎಸ್ಸೆಸ್ಸೆಫ್‌ ಇದರ ಉಪ ಸಮಿತಿ ವಿದ್ಯಾಭ್ಯಾಸ ರಂಗದಲ್ಲಿ ವಿಶೇಷ ಸೇವೆ ಸಲ್ಲಿಸುವ ಟ್ರೆಂಡ್ ಸಮಿತಿ ಇದರ ರೂವಾರಿಯಾಗಿ ಲೇಖಕ ಯುವ ವಾಗ್ಮಿ ಕೆ.ಎಂ.ಇಕ್ಬಾಲ್ ಬಾಳಿಲ ಆಯ್ಕೆಗೊಂಡಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ಉನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಎಸ್ಕೆಎಸ್ಸೆಸ್ಸೆಫ್‌ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಹಲವು ಉಪ ಸಮಿತಿಗಳನ್ನು ಜಾರಿಗೆ ತಂದಿರುತ್ತದೆ. ಶಿಕ್ಷಣ ಕ್ಷೇತ್ರಗಳಲ್ಲಿ ಸೇವೆ ನಿರ್ವಹಿಸಲು ಟ್ರೆಂಡ್ ಎಂಬ ಹೆಸರಿನ ಉಪ ಸಮಿತಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ದೇಶದ ನಾನಾ ರಾಜ್ಯಗಳಲ್ಲಿ ಟ್ರೆಂಡ್ ವಿಶೇಷ

ಎಸ್ಕೆಎಸ್ಸೆಸ್ಸೆಫ್‌ ಟ್ರೆಂಡ್ ಜಿಲ್ಲಾ ಸಂಚಾಲಕರಾಗಿ ಇಕ್ಬಾಲ್ ಬಾಳಿಲ ಆಯ್ಕೆ Read More »

ಕರಾವಳಿ

ಬಂಟ್ವಾಳ: ಬೈಕ್, ಓಮ್ನಿ ಹಾಗೂ ಕಂಟೈನರ್ ನಡುವೆ ಸರಣಿ ಅಪಘಾತ ► ನಾಲ್ವರಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ.02. ಬೈಕ್, ಓಮ್ನಿ ಹಾಗೂ ಕಂಟೈನರ್ ಲಾರಿ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ನಾಲ್ವರು ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಬಿ.ಸಿ.ರೋಡ್ ಸರ್ಕಲ್ ನಲ್ಲಿ ಬೈಕ್ ಹಾಗೂ ಓಮ್ನಿ ನಡುವೆ ಢಿಕ್ಕಿಯಾದ ಕಾರಣ ರಸ್ತೆಯಲ್ಲಿ ನಿಲ್ಲಿಸಿದ್ದ ಓಮ್ನಿಗೆ ಕಂಟೈನರ್ ಲಾರಿಯೊಂದು ಹಿಂದಿನಿಂದ ಢಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಬೈಕಿನಲ್ಲಿದ್ದ ಮಗು ಸೇರಿ ಮೂವರು ಹಾಗೂ ಓಮ್ನಿ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಂಟ್ವಾಳ: ಬೈಕ್, ಓಮ್ನಿ ಹಾಗೂ ಕಂಟೈನರ್ ನಡುವೆ ಸರಣಿ ಅಪಘಾತ ► ನಾಲ್ವರಿಗೆ ಗಾಯ Read More »

ಕರಾವಳಿ

ನಿಮಗೆ ಐಟಿಐ, ಡಿಪ್ಲೊಮಾ ಪದವೀಧರರಾಗಿದ್ದರೂ ನಿರುದ್ಯೋಗದ ಸಮಸ್ಯೆಯೇ..? ► ಉಚಿತ ಕೌಶಲ್ಯಾಭಿವೃದ್ಧಿ ಯೋಜನೆ ತರಬೇತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.02. ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಮುಖ್ಯ ಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ಉದ್ಯೋಗಾಧಾರಿತ ವಿವಿಧ ತಾಂತ್ರಿಕ ಕೌಶಲ್ಯ ತರಬೇತಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಐಟಿಐ/ಡಿಪ್ಲ್ಲೊಮಾ/ಬಿ.ಇ (ಮೆಕ್ಯಾನಿಕಲ್ ವಿಭಾಗ) ನಿರುದ್ಯೋಗಿ ಯುವಕ/ಯುವತಿಯರು ಈ ತರಬೇತಿಗಳಿಗೆ ಅರ್ಹರಾಗಿರುತಾರೆ. ಈ ತರಬೇತಿಯನ್ನು ಮಂಗಳೂರಿನಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಅಯೋಜಿಸಲಾಗಿದ್ದು, ಈ ಯೋಜನೆಯಡಿ ಸಿಎನ್‍ಸಿ ಮೆಷಿನ್ ಪ್ರೋಗ್ರಾಮಿಂಗ್ (1 ತಿಂಗಳು) ಹಾಗೂ ಆಟೂಕ್ಯಾಡ್/ಪ್ರೊಇ/ಕ್ಯಾಟಿಯ/ಮಾಸ್ಟರ್ ಕ್ಯಾಮ್ (1

ನಿಮಗೆ ಐಟಿಐ, ಡಿಪ್ಲೊಮಾ ಪದವೀಧರರಾಗಿದ್ದರೂ ನಿರುದ್ಯೋಗದ ಸಮಸ್ಯೆಯೇ..? ► ಉಚಿತ ಕೌಶಲ್ಯಾಭಿವೃದ್ಧಿ ಯೋಜನೆ ತರಬೇತಿಗೆ ಅರ್ಜಿ ಆಹ್ವಾನ Read More »

ಕರಾವಳಿ

ನೂಜಿಬಾಳ್ತಿಲ: ಟ್ರಾನ್ಸ್‌ಫಾರ್ಮರ್ ನಿಂದ ಹಾರಿದ ಬೆಂಕಿ ಕಿಡಿಯಿಂದಾಗಿ ರಬ್ಬರ್ ತೋಟ ಬೆಂಕಿಗಾಹುತಿ ► ಬೆಂಕಿ ನಂದಿಸಲು ಯಶಸ್ವಿಯಾದ ಬೆಥನಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಊರವರು

(ನ್ಯೂಸ್ ಕಡಬ) newskadaba.com ಕಡಬ, ಮಾ.02. ವಿದ್ಯುತ್ ಪರಿವರ್ತಕದಿಂದ ಎಸೆಯಲ್ಪಟ್ಟ ಬೆಂಕಿ ಕಿಡಿಯಿಂದಾಗಿ ಸುಮಾರು ಒಂದು ಎಕರೆ ಗುಡ್ಡ ಬೆಂಕಿಗಾಹುತಿಯಾದ ಘಟನೆ ಸುಬ್ರಹ್ಮಣ್ಯ ಧರ್ಮಸ್ಥಳ ರಾಜ್ಯ ಹೆದ್ದಾರಿಯ ನೂಜಿಬಾಳ್ತಿಲ ಎಂಬಲ್ಲಿ ಶುಕ್ರವಾರ ಅಪರಾಹ್ನ ನಡೆದಿದೆ. ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜಿಗೆ ಹೊಂದಿಕೊಂಡಂತೆ ಇರುವ ಸ್ಥಳೀಯರೊಬ್ಬರ ಸುಮಾರು ಒಂದು ಎಕರೆ ರಬ್ಬರ್ ತೋಟವು ಬೆಂಕಿಗಾಹುತಿಯಾಗಿದ್ದು, ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕ ವೃಂದದವರು ಹಾಗೂ ಊರವರು ಸೇರಿಕೊಂಡು ಬೆಂಕಿ ನಂದಿಸುವ ಮೂಲಕ ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ.

ನೂಜಿಬಾಳ್ತಿಲ: ಟ್ರಾನ್ಸ್‌ಫಾರ್ಮರ್ ನಿಂದ ಹಾರಿದ ಬೆಂಕಿ ಕಿಡಿಯಿಂದಾಗಿ ರಬ್ಬರ್ ತೋಟ ಬೆಂಕಿಗಾಹುತಿ ► ಬೆಂಕಿ ನಂದಿಸಲು ಯಶಸ್ವಿಯಾದ ಬೆಥನಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಊರವರು Read More »

ಕರಾವಳಿ

ಸುಳ್ಯ: ಲಾರಿ – ಟ್ಯಾಂಕರ್ ಮುಖಾಮುಖಿ ಢಿಕ್ಕಿ ► ಇಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ.02. ಟ್ಯಾಂಕರ್ ಹಾಗೂ ಲಾರಿ ನಡುವೆ ಢಿಕ್ಕಿ ಸಂಭವಿಸಿ ಚಾಲಕರಿಬ್ಬರು ಗಂಭೀರ ಗಾಯಗೊಂಡ ಘಟನೆ ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಸುಳ್ಯ ಸಮೀಪದ ಪರಿವಾರಕಾನ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ಮಂಗಳೂರಿನಿಂದ ಮಡಿಕೇರಿ ಕಡೆಗೆ ಡೀಸೆಲ್ ಹೇರಿಕೊಂಡು ತೆರಳುತ್ತಿದ್ದ ಟ್ಯಾಂಕರ್ ಹಾಗೂ ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ನಡುವೆ ಢಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಟ್ಯಾಂಕರ್ ರಸ್ತೆಗಡ್ಡವಾಗಿ ಮಗುಚಿ ಬಿದ್ದಿದ್ದು, ಗಾಯಾಳು ಚಾಲಕರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ಯಾಂಕರ್‌ನಿಂದ

ಸುಳ್ಯ: ಲಾರಿ – ಟ್ಯಾಂಕರ್ ಮುಖಾಮುಖಿ ಢಿಕ್ಕಿ ► ಇಬ್ಬರು ಗಂಭೀರ Read More »

ಕರಾವಳಿ
Scroll to Top