ಇಂದಿನಿಂದ (ಮಾ.23 – ಎ.06) ರ ವರೆಗೆ ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆ ► ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಸಕಲ ಸಿದ್ಧತೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.23. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿರುವ ಹಿನ್ನೆಲೆಯಲ್ಲಿ ಈ ಬಾರಿ ಮುಂಚಿತವಾಗಿಯೇ ಪರೀಕ್ಷೆಗಳು ನಡೆಯುತ್ತಿದ್ದು, ಅದರಂತೆ ಇಂದಿನಿಂದ ಎಪ್ರಿಲ್ 06 ಎ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ಈಗಾಗಲೇ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ರಾಜ್ಯದಲ್ಲಿ ಒಟ್ಟು 8,54,424 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಅದರಲ್ಲಿ 3,88,701 ವಿದ್ಯಾರ್ಥಿಗಳು ಹಾಗೂ 3,72,271 ವಿದ್ಯಾರ್ಥಿನಿಯರು ಸೇರಲಿದ್ದಾರೆ. ಇದರಲ್ಲಿ 70,253 ಪುನರಾವರ್ತಿತ ಅಭ್ಯರ್ಥಿಗಳು ಹಾಗೂ 23,199 ಖಾಸಗಿ ಅಭ್ಯರ್ಥಿಗಳೂ ಸೇರಿದ್ದಾರೆ. ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ […]

ಇಂದಿನಿಂದ (ಮಾ.23 – ಎ.06) ರ ವರೆಗೆ ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆ ► ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಸಕಲ ಸಿದ್ಧತೆ Read More »

ಕರ್ನಾಟಕ

ನೆಲ್ಯಾಡಿ: ಪ್ರಧಾನಿ ಮೋದಿಯನ್ನು ಅವಹೇಳನಕಾರಿಯಾಗಿ ಚಿತ್ರಿಸಿ ವಾಟ್ಸಪ್ ಗ್ರೂಪಿನಲ್ಲಿ ಹಂಚಿಕೆ ► ಗ್ರೂಪ್ ಅಡ್ಮಿನ್ ಹಾಗೂ ಸದಸ್ಯನ ವಿರುದ್ದ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.23. ಪ್ರಧಾನಿ ಮೋದಿಯವರ ಭಾವಚಿತ್ರವನ್ನು ವಿರೂಪಗೊಳಿಸಿ ವಾಟ್ಸಪ್ ಗ್ರೂಪ್ ನಲ್ಲಿ ಹಂಚಿದ ಹಿನ್ನೆಲೆಯಲ್ಲಿ ಗ್ರೂಪ್ ಅಡ್ಮಿನ್ ಹಾಗೂ ಸದಸ್ಯನೋರ್ವನ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ಫ್ರೆಂಡ್ಸ್ ಪಡುಬೆಟ್ಟು ಎಂಬ ಗ್ರೂಪ್ ನಲ್ಲಿ ಮಾರ್ಚ್ 20 ರಂದು ಅಪರಾಹ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮುಖವನ್ನು ಹಂದಿಯ ಮುಖದಂತೆ ಚಿತ್ರಿಸಿ ಹಂಚಿಕೊಂಡಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರೂಪ್ ಅಡ್ಮಿನ್ ಹಾಗೂ ಓರ್ವ ಸದಸ್ಯನ ವಿರುದ್ಧ ‘ನಮ್ಮ ಪ್ರಧಾನಿಯ ಘನತೆಗೆ ಧಕ್ಕೆ ಉಂಟಾಗಿದ್ದು, ಈ

ನೆಲ್ಯಾಡಿ: ಪ್ರಧಾನಿ ಮೋದಿಯನ್ನು ಅವಹೇಳನಕಾರಿಯಾಗಿ ಚಿತ್ರಿಸಿ ವಾಟ್ಸಪ್ ಗ್ರೂಪಿನಲ್ಲಿ ಹಂಚಿಕೆ ► ಗ್ರೂಪ್ ಅಡ್ಮಿನ್ ಹಾಗೂ ಸದಸ್ಯನ ವಿರುದ್ದ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು Read More »

ಕರಾವಳಿ

ಧರ್ಮಸ್ಥಳ: ಸ್ನಾನಕ್ಕೆಂದು ನದಿಗಿಳಿದ ಯುವಕ‌ ನೀರುಪಾಲು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮಾ.22. ಸ್ನಾನಕ್ಕೆಂದು ನದಿಗಿಳಿದ ಯುವಕನೋರ್ವ ನೀರುಪಾಲಾದ ಘಟನೆ ಧರ್ಮಸ್ಥಳ ಸಮೀಪ ಕುದ್ರಾಯ ಎಂಬಲ್ಲಿ ಗುರುವಾರದಂದು ನಡೆದಿದೆ. ಮೃತ ಯುವಕನನ್ನು ಧರ್ಮಸ್ಥಳ ನಿವಾಸಿ ಗಿರೀಶ್ (30) ಎಂದು ಗುರುತಿಸಲಾಗಿದೆ. ಈತ ಗುರುವಾರದಂದು ತನ್ನ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ನದಿಗೆ ತೆರಳಿದ್ದು, ನೀರಿಗೆ ಇಳಿಯುವ ಮುಂಚೆ ಮದ್ಯ ಸೇವಿಸಿದ್ದನೆನ್ನಲಾಗಿದೆ. ಇದರಿಂದಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ವಿಷಯ ತಿಳಿದ ಧರ್ಮಸ್ಥಳ ಪೋಲೀಸರು ಸ್ಥಳೀಯರ ಸಹಕಾರದೊಂದಿಗೆ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ‌. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧರ್ಮಸ್ಥಳ: ಸ್ನಾನಕ್ಕೆಂದು ನದಿಗಿಳಿದ ಯುವಕ‌ ನೀರುಪಾಲು Read More »

ಕರಾವಳಿ

ಬೇಟೆಗೆಂದು‌ ಕರಿಂಜ ಕಾಡಿಗೆ ತೆರಳಿ ನಾಪತ್ತೆಯಾಗಿದ್ದವರ ಮೃತದೇಹ ಪತ್ತೆ ► ಸಂಶಯಕ್ಕೀಡುಮಾಡಿದ ನಿಗೂಢ ಸಾವು

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಮಾ.22. ಕಳೆದ ಮೂರು ದಿನಗಳ ಹಿಂದೆ ಇಲ್ಲಿಗೆ ಸಮೀಪದ ಕರಿಂಜ ಕಾಡಿಗೆ ಬೇಟೆಗೆಂದು ತೆರಳಿ ನಾಪತ್ತೆಯಾಗಿದ್ದ ಇಬ್ಬರ ಮೃತದೇಹಗಳು ಗುರುವಾರದಂದು ಕರಿಂಜೆ ಗದ್ದೆಯ ಬಳಿ ಪತ್ತೆಯಾಗಿದೆ. ಮೃತರನ್ನು ಕರಿಂಜೆಯ ಕಕ್ಕೆಬೆಟ್ಟು ನಿವಾಸಿ ಕೃಷಿಕರಾಗಿರುವ ಪ್ರವೀಣ್ ತೌರೋ (32) ಮತ್ತು ಪ್ರಾಂತ್ಯ ಗ್ರಾಮದ ಪೇಪರ್‌ಮಿಲ್‌ ನಿವಾಸಿ ಉದ್ಯಮಿ ಗ್ರೇಶನ್ ರೊಡ್ರಿಗಸ್ (34) ಎಂದು ಗುರುತಿಸಲಾಗಿದೆ. ಇವರು ಮಂಗಳವಾರ ರಾತ್ರಿ ಬೇಟೆಗೆಂದು ತೆರಳಿದ್ದು, ನಂತರ ನಾಪತ್ತೆಯಾಗಿದ್ದರು. ಆದರೆ ಆದರೆ ಬೇಟೆಗೆಂದಜ ಮನೆಯಿಂದ ತೆರಳಿದ್ದ ಬೊಲೇರೋ

ಬೇಟೆಗೆಂದು‌ ಕರಿಂಜ ಕಾಡಿಗೆ ತೆರಳಿ ನಾಪತ್ತೆಯಾಗಿದ್ದವರ ಮೃತದೇಹ ಪತ್ತೆ ► ಸಂಶಯಕ್ಕೀಡುಮಾಡಿದ ನಿಗೂಢ ಸಾವು Read More »

ಕರಾವಳಿ

►► ಪ್ರಕಟಣೆ: ‘ಜೋಗಿಬೆಟ್ಟು ನಿಲಯ’ ಗೃಹಪ್ರವೇಶ ಮುಂದೂಡಿಕೆ

(ನ್ಯೂಸ್ ಕಡಬ) newskadaba.com ಕಡಬ, ಮಾ.22. ಕೋಡಿಂಬಾಳ ಸಮೀಪದ ಜೋಗಿಬೆಟ್ಟು ಎಂಬಲ್ಲಿ ಮಾರ್ಚ್ 23 ನೇ ಶುಕ್ರವಾರದಂದು ನಡೆಯಬೇಕಿದ್ದ ‘ಜೋಗಿಬೆಟ್ಟು ನಿಲಯ’ ಗೃಹಪ್ರವೇಶವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಮಾಲಕರಾದ ನಾರಾಯಣ ಗೌಡರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9448100502 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

►► ಪ್ರಕಟಣೆ: ‘ಜೋಗಿಬೆಟ್ಟು ನಿಲಯ’ ಗೃಹಪ್ರವೇಶ ಮುಂದೂಡಿಕೆ Read More »

ಕರಾವಳಿ

ಕುಂತೂರು: ಹೋಟೇಲ್‌ಗಳಿಗೆ ನುಗ್ಗಿದ ಕಳ್ಳರು ► ಚಿಲ್ಲರೆ ದುಡ್ಡಿನೊಂದಿಗೆ ಹರಿಕೆ‌ ಡಬ್ಬಿಯನ್ನು ಹೊತ್ತೊಯ್ದ ಕಳ್ಳರು

(ನ್ಯೂಸ್ ಕಡಬ) newskadaba.com ಕಡಬ, ಮಾ.22. ಠಾಣಾ ವ್ಯಾಪ್ತಿಯ ಕುಂತೂರು ಎಂಬಲ್ಲಿ ಹೊಟೇಲ್ ಗಳಿಗೆ ನುಗ್ಗಿರುವ ಪುಡಿಗಳ್ಳರು ತಮ್ಮ‌ ಕೈಚಳಕವನ್ನು ತೋರಿಸಿದ ಘಟನೆ ಬುಧವಾರ ರಾತ್ರಿ ವರದಿಯಾಗಿದೆ. ಕುಂತೂರು ಪೇಟೆಯಲ್ಲಿರುವ ನಾಸಿರ್ ಎಂಬವರಿಗೆ ಸೇರಿದ ಹೊಟೇಲ್ ಗೆ ನುಗ್ಗಿದ ಕಳ್ಳರು ಸುಮಾರು ಹತ್ತು ಸಾವಿರದಷ್ಟು ನಗದು ಹಾಗೂ ಹರಿಕೆ ಡಬ್ಬಿಗಳನ್ನು ದೋಚಿದ್ದಾರೆ. ಪಕ್ಕದಲ್ಲಿನ ಮತ್ತೊಂದು ಹೊಟೇಲಿನಲ್ಲೂ ತಮ್ಮ ಕೈಚಳಕವನ್ನು ತೋರಿಸಿರುವ ಕಳ್ಳರು ಸಿಗರೇಟ್ ಪ್ಯಾಕೆಟ್ ಸೇರಿದಂತೆ ಚಿಲ್ಲರೆ ಹಣವನ್ನು ಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಗುರುವಾರ ಬೆಳಿಗ್ಗೆ ಘಟನೆ

ಕುಂತೂರು: ಹೋಟೇಲ್‌ಗಳಿಗೆ ನುಗ್ಗಿದ ಕಳ್ಳರು ► ಚಿಲ್ಲರೆ ದುಡ್ಡಿನೊಂದಿಗೆ ಹರಿಕೆ‌ ಡಬ್ಬಿಯನ್ನು ಹೊತ್ತೊಯ್ದ ಕಳ್ಳರು Read More »

ಕರಾವಳಿ

ನೆಕ್ಕಿಲಾಡಿ: ಅತ್ಯಾಚಾರ ಪ್ರಕರಣದ ಆರೋಪಿ ಬಂಧನ ► ಸುಮಾರು ಹದಿನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.22. ಸುಮಾರು 14 ವರ್ಷಗಳ ಹಿಂದೆ ಅತ್ಯಾಚಾರ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ ಘಟನೆ ಗುರುವಾರದಂದು ನಡೆದಿದೆ. ಬಂಧಿತ ಆರೋಪಿಯನ್ನು 34ನೇ ನೆಕ್ಕಿಲಾಡಿ ಗ್ರಾಮದ ಬೀತಲಪ್ಪು ನಿವಾಸಿ ಹಿತೇಶ್ ಎಂದು ಗುರುತಿಸಲಾಗಿದೆ. 2004 ರಲ್ಲಿ ಉಪ್ಪಿನಂಗಡಿ ಸಮೀಪದ ಕರಾಯ ಎಂಬಲ್ಲಿ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದನೆನ್ನಲಾಗಿದೆ. ಆ ಬಳಿಕ ಆರೋಪಿಯು ಹೆಸರು ಬದಲಾಯಿಸಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ನೆನ್ನಲಾಗಿದ್ದು, ಗುರುವಾರದಂದು ಖಚಿತ ಮಾಹಿತಿಯ ಮೇರೆಗೆ ಉಪ್ಪಿನಂಗಡಿ ಪೊಲೀಸರು

ನೆಕ್ಕಿಲಾಡಿ: ಅತ್ಯಾಚಾರ ಪ್ರಕರಣದ ಆರೋಪಿ ಬಂಧನ ► ಸುಮಾರು ಹದಿನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ Read More »

ಕರಾವಳಿ

ಶಿಕ್ಷಣಕ್ಕಾಗಿ RTE ಕಾಯ್ದೆಯಡಿ ಅರ್ಜಿ ಸಲ್ಲಿಸಲು ಬಾಕಿಯಿರುವ ಪೋಷಕರಿಗೆ ಸಿಹಿ ಸುದ್ದಿ ► ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.22. ಶಿಕ್ಷಣ ಹಕ್ಕು ಕಾಯ್ದೆಯಡಿ ಮಕ್ಕಳನ್ನು ಶಾಲೆಗೆ ಸೇರಿಸಲು ಸಾಧ್ಯವಾಗದೇ ಇರುವ ಪೋಷಕರಿಗೆ ಸಿಹಿ ಸುದ್ದಿಯೊಂದು ದೊರೆತಿದ್ದು, ಅರ್ಜಿ ಸಲ್ಲಿಕೆಯ ಕಾಲಾವಕಾಶವನ್ನು ವಿಸ್ತರಿಸಲಾಗಿದೆ. 2018-19 ನೇ ಸಾಲಿನಲ್ಲಿ RTE ಅಡಿ ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ 1.44 ಲಕ್ಷ ಸೀಟುಗಳನ್ನು ಕಾಯ್ದಿರಿಸಲಾಗಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಶೇ.25 ರಷ್ಟು ಸೀಟುಗಳಿಗೆ ಉಚಿತವಾಗಿ ಪ್ರವೇಶ ನೀಡುವ ಬಗ್ಗೆ ಆರ್ ಟಿಇ ವೇಳಾಪಟ್ಟಿಯನ್ನು ಪ್ರಕಟಿಸಿ, ಫೆಬ್ರವರಿ 20 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿತ್ತು. ಮಾರ್ಚ್

ಶಿಕ್ಷಣಕ್ಕಾಗಿ RTE ಕಾಯ್ದೆಯಡಿ ಅರ್ಜಿ ಸಲ್ಲಿಸಲು ಬಾಕಿಯಿರುವ ಪೋಷಕರಿಗೆ ಸಿಹಿ ಸುದ್ದಿ ► ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ Read More »

ಕರ್ನಾಟಕ

ಇಚಿಲಂಪಾಡಿ: ಮನೆಗೆ ನುಗ್ಗಿ ಬೆದರಿಸಿ ನಗ, ನಗದು ದರೋಡೆಗೈದ ಆಗಂತುಕರ ತಂಡ ► ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದರೋಡೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.21. ಮನೆಗೆ ನುಗ್ಗಿದ ತಂಡವೊಂದು ಮನೆಯಲ್ಲಿದ್ದವರನ್ನು ಚಾಕು, ಚೂರಿ, ಪಿಸ್ತೂಲ್ ತೋರಿಸಿ ಬೆದರಿಸಿ ನಗ- ನಗದು ದರೋಡೆ ಮಾಡಿದ ಘಟನೆ ಇಚಿಲಂಪಾಡಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಇಚಿಲಂಪಾಡಿ ಗ್ರಾಮದ ಮಾನಡ್ಕ ನಿವಾಸಿ ನಿವೃತ್ತ ಸೈನಿಕ ನಾರಾಯಣ ಪಿಳ್ಳೆ ಎಂಬವರ ಮನೆಗೆ ನುಗ್ಗಿದ ಇಬ್ಬರು ಆಗಂತುಕರು ಮನೆಯವರನ್ನು ಬೆದರಿಸಿ 35,000 ನಗದು ಹಾಗೂ 8 ಪವನ್ ಚಿನ್ನ, 2 ಮೊಬೈಲ್ ದೋಚಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ನಾರಾಯಣ ಪಿಳ್ಳೆ ಮತ್ತು ಅವರ

ಇಚಿಲಂಪಾಡಿ: ಮನೆಗೆ ನುಗ್ಗಿ ಬೆದರಿಸಿ ನಗ, ನಗದು ದರೋಡೆಗೈದ ಆಗಂತುಕರ ತಂಡ ► ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದರೋಡೆ Read More »

ಕರಾವಳಿ

ಹೆಬ್ರಿ: ಪಾದಚಾರಿ ದಂಪತಿಗೆ ಢಿಕ್ಕಿ ಹೊಡೆದ ಕಾರು ► ಪತಿ ಮೃತ್ಯು, ಪತ್ನಿ ಗಂಭೀರ

(ನ್ಯೂಸ್ ಕಡಬ) newskadaba.com ಕಾರ್ಕಳ, ಮಾ.21. ಕಾರೊಂದು ಪಾದಚಾರಿಯೋರ್ವರಿಗೆ ಢಿಕ್ಕಿಯಾದುದರ ಪರಿಣಾಮ ಪಾದಚಾರಿ ಮೃತಪಟ್ಟು, ಅವರ ಪತ್ನಿ ಗಂಭೀರ ನಡೆಸಿದ ಘಟನೆ ಹೆಬ್ರಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಮೃತರನ್ನು ಹೆಬ್ರಿ ಸಮೀಪದ ಶಿವಪುರ ನಿವಾಸಿ ಸದಾನಂದ ಶೆಟ್ಟಿ(52) ಎಂದು ಗುರುತಿಸಲಾಗಿದೆ. ಸದಾನಂದರವರ ಪತ್ನಿ ಶೀಲ(35) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅತೀ ವೇಗವಾಗಿ ಹಾಗೂ ಅಜಾಗರೂಕತೆಯಿಂದಾಗಿ ಕಾರ್ಕಳದಿಂದ ತೀರ್ಥಹಳ್ಳಿ ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆಬ್ರಿ ಸಮೀಪದ ವರಂಗ ಎಂಬಲ್ಲಿ ಪಾದಚಾರಿ ದಂಪತಿಗೆ ಢಿಕ್ಕಿ

ಹೆಬ್ರಿ: ಪಾದಚಾರಿ ದಂಪತಿಗೆ ಢಿಕ್ಕಿ ಹೊಡೆದ ಕಾರು ► ಪತಿ ಮೃತ್ಯು, ಪತ್ನಿ ಗಂಭೀರ Read More »

ಕರಾವಳಿ
Scroll to Top