ಹೆಬ್ರಿ: ಪಾದಚಾರಿ ದಂಪತಿಗೆ ಢಿಕ್ಕಿ ಹೊಡೆದ ಕಾರು ► ಪತಿ ಮೃತ್ಯು, ಪತ್ನಿ ಗಂಭೀರ



(ನ್ಯೂಸ್ ಕಡಬ) newskadaba.com ಕಾರ್ಕಳ, ಮಾ.21. ಕಾರೊಂದು ಪಾದಚಾರಿಯೋರ್ವರಿಗೆ ಢಿಕ್ಕಿಯಾದುದರ ಪರಿಣಾಮ ಪಾದಚಾರಿ ಮೃತಪಟ್ಟು, ಅವರ ಪತ್ನಿ ಗಂಭೀರ ನಡೆಸಿದ ಘಟನೆ ಹೆಬ್ರಿಯಲ್ಲಿ ಬುಧವಾರ ರಾತ್ರಿ ನಡೆದಿದೆ.







ಮೃತರನ್ನು ಹೆಬ್ರಿ ಸಮೀಪದ ಶಿವಪುರ ನಿವಾಸಿ ಸದಾನಂದ ಶೆಟ್ಟಿ(52) ಎಂದು ಗುರುತಿಸಲಾಗಿದೆ. ಸದಾನಂದರವರ ಪತ್ನಿ ಶೀಲ(35) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅತೀ ವೇಗವಾಗಿ ಹಾಗೂ ಅಜಾಗರೂಕತೆಯಿಂದಾಗಿ ಕಾರ್ಕಳದಿಂದ ತೀರ್ಥಹಳ್ಳಿ ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆಬ್ರಿ ಸಮೀಪದ ವರಂಗ ಎಂಬಲ್ಲಿ ಪಾದಚಾರಿ ದಂಪತಿಗೆ ಢಿಕ್ಕಿ ಹೊಡೆದಿದೆ. ಸ್ಥಳಕ್ಕೆ ಹೆಬ್ರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.






error: Content is protected !!
Scroll to Top