ಸರ್ವೆ: ಷಣ್ಮುಖ ಯುವಕ ಮಂಡಲದಿಂದ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ಸವಣೂರು, ಮಾ.29. ಸರ್ವೆ ಷಣ್ಮುಖ ಯುವಕ ಮಂಡಲ ಇದರ ವತಿಯಿಂದ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಸರ್ವೆ, ತಾಲೂಕು ಯುವಜನ ಒಕ್ಕೂಟ ಪುತ್ತೂರು, ನೆಹರು ಯುವ ಕೇಂದ್ರ ಮಂಗಳೂರು ಇದರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ರಕ್ತದಾನ ಮಾಹಿತಿ ಕಾರ್ಯಾಕ್ರಮ ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು. ರಕ್ತದಾನ ಶಿಬಿರ ಮತ್ತು ರಕ್ತದಾನ ಮಾಹಿತಿ ಕಾರ್ಯಕ್ರಮನ್ನು ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ  ವೈದ್ಯಾಧಿಕಾರಿ ಡಾ.ದೀಪಕ್ ರೈ […]

ಸರ್ವೆ: ಷಣ್ಮುಖ ಯುವಕ ಮಂಡಲದಿಂದ ರಕ್ತದಾನ ಶಿಬಿರ Read More »

ಕರಾವಳಿ

ಬೆಳಂದೂರು: ನೆರೆಹೊರೆ ಯುವ ಸಂಸತ್ತು ಕಾರ್ಯಾಗಾರ

(ನ್ಯೂಸ್ ಕಡಬ) newskadaba.com ಸವಣೂರು, ಮಾ.29. ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ತಾಲೂಕು ಯುವಜನ ಒಕ್ಕೂಟ ಪುತ್ತೂರು, ಶ್ರೀ ಗೌರಿ ಯುವತಿ ಮಂಡಲ ಸರ್ವೆ ಇದರ ಆಶ್ರಯದಲ್ಲಿ ನೆರೆಹೊರೆ ಯುವ ಸಂಸತ್ತು ಮಾಹಿತಿ ಕಾರ್ಯಗಾರ ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು. ಮಾಹಿತಿ ಕಾರ್ಯಾಗಾರವನ್ನು ಕಾಲೇಜಿನ ಪ್ರಾಚಾರ್ಯ ಪ್ರೋ.ಪದ್ಮನಾಭ ಕೆ. ಅವರು ಉದ್ಘಾಟಿಸಿ ಮಾತನಾಡಿ, ಯುವಜನತೆಯ ಬೆಳವಣಿಗೆಗೆ ಪೂರಕವಾಗಿ ತರಬೇತಿ ಕಾರ್ಯಗಳು ದೊರಕಿದರೆ ಬೆಳವಣಿಗೆ ಸಾಧ್ಯ. ಈ ನಿಟ್ಟಿನಲ್ಲಿ

ಬೆಳಂದೂರು: ನೆರೆಹೊರೆ ಯುವ ಸಂಸತ್ತು ಕಾರ್ಯಾಗಾರ Read More »

ಕರಾವಳಿ

ಪಣಂಬೂರು: ನಿಲ್ಲಿಸಿದ್ದ ಲಾರಿಗೆ ಇನ್ನೋವಾ ಢಿಕ್ಕಿ ► ಓರ್ವ ಮೃತ್ಯು, ಹಲವರು ಗಂಭೀರ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.29. ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಟ್ಯಾಂಕರ್‌ಗೆ ಇನ್ನೋವಾ ಕಾರೊಂದು ಢಿಕ್ಕಿಯಾದ ಪರಿಣಾಮ ಓರ್ವ ಮೃತಪಟ್ಟು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರದಂದು ಪಣಂಬೂರಿನಲ್ಲಿ‌ ನಡೆದಿದೆ. ಮೃತ ವ್ಯಕ್ತಿಯನ್ನು ಇನ್ನೋವಾ ಕಾರು ಚಾಲಕ ಬೆಳಗಾವಿಯ ಹನುಮಂತಯ್ಯ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿ ಮೂಲದವರು ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಗೆ ಢಿಕ್ಕಿ ಹೊಡೆದಿದ್ದರಿಂದಾಗಿ ಈ ಅವಘಡ

ಪಣಂಬೂರು: ನಿಲ್ಲಿಸಿದ್ದ ಲಾರಿಗೆ ಇನ್ನೋವಾ ಢಿಕ್ಕಿ ► ಓರ್ವ ಮೃತ್ಯು, ಹಲವರು ಗಂಭೀರ Read More »

ಕರಾವಳಿ

ಎಣ್ಮೂರು ಶ್ರೀ ನಾಗಬ್ರಹ್ಮ ಆದಿ ಬೈದೇರುಗಳ ಗರಡಿ

(ನ್ಯೂಸ್ ಕಡಬ) newskadaba.com ಎಣ್ಮೂರು, ಮಾ.29. ಸುಮಾರು 5 ಶತಮಾನಗಳ ಇತಹಾಸವಿರುವ ಎಣ್ಮೂರು ನಾಗಬ್ರಹ್ಮ ಆದಿ ಬೈದ್ಯರುಗಳ ಗರಡಿಯ ನೇಮೋತ್ಸವವು ಪೂರ್ವಪದ್ಧತಿ ಪ್ರಕಾರ ಪ್ರತಿ ವರ್ಷದಂತೆ ಈ ವರ್ಷವು ಸುಗ್ಗಿಯ ಪುವ್ವೆ (ಹೂವೆ) ಯಂದು ತಾ. 30-03-2018 ಶುಕ್ರವಾರದಂದು ನಡೆಯಲಿದೆ. ಅಜಿಪತ್ತಾಜಿ ಗರಡಿ ಮುಪ್ಪತ್ತ ಮೂಜಿ ತಾವು ಮೇಲಾಯಿ ಗರಡಿ ಎಣ್ಮೂರು ಗರಡಿ (ಆರುವತ್ತಾರು ಗರಡಿ ಮೂವತ್ತ ಮೂರು ಕಡೆ ನೆಲೆ ಊರಿದ ) ಎಂಬ ನುಡಿಗಟ್ಟಿನಂತೆ ತುಳುನಾಡಿನ ಕಾರಣಿಕ ಪುರುಷರಾದ ಕೋಟಿ ಚೆನ್ನಯರು ನೆಲೆಯೂರಿದ ಆದಿ  ಸ್ಥಳ –

ಎಣ್ಮೂರು ಶ್ರೀ ನಾಗಬ್ರಹ್ಮ ಆದಿ ಬೈದೇರುಗಳ ಗರಡಿ Read More »

ಕರಾವಳಿ

ಸುಳ್ಯ: ಅಕ್ರಮ ಗಾಂಜಾ ಪತ್ತೆ ► ಇಬ್ಬರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ.29. ಅಕ್ರಮ ಗಾಂಜಾವನ್ನು ವಶಪಡಿಸಿಕೊಂಡಿರುವ ಸುಳ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಸುಳ್ಯದಲ್ಲಿ ಬುಧವಾರದಂದು ನಡೆದಿದೆ. ಬಂಧಿತ ಆರೋಪಿಗಳನ್ನು ಸುಳ್ಯ ಕಸಬಾ ನಿವಾಸಿ ಮಹಮ್ಮದ್ ಕಲ್ಲಮಟ್ಟು ಎಂಬವರ ಪುತ್ರ ಪಿ.ಎಂ ಮೊಯ್ದಿನ್(35) ಹಾಗೂ ಸುಳ್ಯ ಕಲ್ಲುಮುಟ್ಟು ನಿವಾಸಿ ಚಿನ್ನ ಮುತ್ತು ಎಂಬವರ ಪುತ್ರ ಮುರಳಿ ಸಿ.(23) ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ಸುಳ್ಯ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಸುಳ್ಯ ಠಾಣಾ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ನಡೆಸುತ್ತಿದ್ದ

ಸುಳ್ಯ: ಅಕ್ರಮ ಗಾಂಜಾ ಪತ್ತೆ ► ಇಬ್ಬರು ಆರೋಪಿಗಳ ಬಂಧನ Read More »

ಕರಾವಳಿ

ಬಂಟ್ವಾಳ: ಪ್ರೀತಿಗೆ ಅಡ್ಡ ಬರುತ್ತಿದ್ದಾನೆ ಎಂದು ತನ್ನ ಸ್ನೇಹಿತನ ಕೊಲೆ ► ಕಬಡ್ಡಿಗೆ ತೆರಳುವ ನೆಪದಲ್ಲಿ ನೀರಿಗೆ ದೂಡಿ ಹಾಕಿದ ಭೂಪ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ.29. ಹುಡುಗಿಯ ವಿಚಾರದಲ್ಲಿ ಅಡ್ಡ ಬರುತ್ತಿದ್ದಾನೆಂಬ ಕಾರಣಕ್ಕಾಗಿ ತನ್ನ ಸ್ನೇಹಿತನನ್ನೇ ನೀರಿಗೆ ತಳ್ಳಿ ಕೊಲೆಗೈದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಮೃತ ಯುವಕನನ್ನು ನರಿಕೊಂಬು ಗ್ರಾಮದ ನಾರಾಯಣ ಎಂಬವರ ಪುತ್ರ ಯತೀಶ್ ಎಂದು ಗುರುತಿಸಲಾಗಿದೆ. ಯತೀಶ್ ನ ಸ್ನೇಹಿತ ಶಶಿಧರ್ ಬೆಳ್ತಂಗಡಿಯ ಯುವತಿಯೋರ್ವಳನ್ನು ಪ್ರೀತಿಸುವ ವಿಚಾರದಲ್ಲಿ ಸಣ್ಣಪುಟ್ಟ ಗಲಾಟೆ ನಡೆದಿದೆಯೆನ್ನಲಾಗಿದೆ. ತನ್ನ ಪ್ರೀತಿಗೆ ಸ್ನೇಹಿತ ಯತೀಶ್ ಅಡ್ಡಬರುತ್ತಿದ್ದು, ಆತನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಶಶಿಧರ್ ತನ್ನ ಸ್ನೇಹಿತರಲ್ಲಿ ಹೇಳುತ್ತಿದ್ದನೆನ್ನಲಾಗಿದೆ. ಮಾರ್ಚ್ 24 ರಂದು

ಬಂಟ್ವಾಳ: ಪ್ರೀತಿಗೆ ಅಡ್ಡ ಬರುತ್ತಿದ್ದಾನೆ ಎಂದು ತನ್ನ ಸ್ನೇಹಿತನ ಕೊಲೆ ► ಕಬಡ್ಡಿಗೆ ತೆರಳುವ ನೆಪದಲ್ಲಿ ನೀರಿಗೆ ದೂಡಿ ಹಾಕಿದ ಭೂಪ Read More »

ಕರಾವಳಿ

ಬಂಟ್ವಾಳ: ಅಕ್ರಮ ಮರಳು ಅಡ್ಡೆಗೆ ದಾಳಿ ► 48 ಬೋಟ್ ಗಳು ಸೇರಿ 60 ಲಕ್ಷ ರೂ‌. ಮೌಲ್ಯದ ಸ್ವತ್ತು ವಶ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ.28. ಖಚಿತ ಮಾಹಿತಿ ಆಧರಿಸಿ ಅಕ್ರಮ ಮರಳು ಅಡ್ಡೆಗೆ ದಾಳಿ ಮಾಡಿರುವ ಪೊಲೀಸರು 48 ಬೋಟ್ ಗಳ ಸಹಿತ 60 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಬುಧವಾರದಂದು ಬಂಟ್ವಾಳದಲ್ಲಿ ನಡೆದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗಬೆಳ್ಳೂರು ಎಂಬಲ್ಲಿ ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ ಎಂದು ಬಂದ ಖಚಿತ ಮಾಹಿತಿಯ ಮೆರೆಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ| ರವಿಕಾಂತೇಗೌಡರವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಪೊಲೀಸರು

ಬಂಟ್ವಾಳ: ಅಕ್ರಮ ಮರಳು ಅಡ್ಡೆಗೆ ದಾಳಿ ► 48 ಬೋಟ್ ಗಳು ಸೇರಿ 60 ಲಕ್ಷ ರೂ‌. ಮೌಲ್ಯದ ಸ್ವತ್ತು ವಶ Read More »

ಕರಾವಳಿ

ಸವಣೂರು ಮೆಸ್ಕಾಂ ಉಪವಿಭಾಗ ಜೆಇ ಆಗಿ ನಾಗರಾಜ್ ಕೆ.

(ನ್ಯೂಸ್ ಕಡಬ) newskadaba.com ಸವಣೂರು, ಮಾ.28. ಸವಣೂರು ಮೆಸ್ಕಾಂ ಉಪವಿಭಾಗಕ್ಕೆ ಜೆಇ ಆಗಿ ನಾಗರಾಜ್ ಕೆ. ಕರ್ತವ್ಯಕ್ಕೆ ಹಾಜರಾಗಿದ್ದಾರೆ. ನಾಗರಾಜ್ ಕೆ. ಅವರು ಈ ಹಿಂದೆ ಕಡಬದಲ್ಲಿ 3 ವರ್ಷ,ಮೂಡಿಗೆರೆಯಲ್ಲಿ 4 ತಿಂಗಳು ಕರ್ತವ್ಯ ನಿರ್ವಹಿಸಿದ್ದರು. ನಾಗರಾಜ್ ಕೆ ಅವರು ಮೂಲತಃ ಹಾಸನ ಜಿಲ್ಲೆ ಯ ಆಲೂರು ತಾಲೂಕಿನವರು.

ಸವಣೂರು ಮೆಸ್ಕಾಂ ಉಪವಿಭಾಗ ಜೆಇ ಆಗಿ ನಾಗರಾಜ್ ಕೆ. Read More »

ಕರಾವಳಿ

ಬೆಳಂದೂರು: ಜಯಪ್ರಕಾಶ್ ಅಲೆಕ್ಕಾಡಿಯವರಿಗೆ ಬೀಳ್ಕೊಡುಗೆ

(ನ್ಯೂಸ್ ಕಡಬ) newskadaba.com  ಸವಣೂರು, ಮಾ.28.  ಕಳೆದ ಏಳು ವರ್ಷಗಳಿಂದ ಬೆಳಂದೂರು ಗ್ರಾಮ ಪಂಚಾಯಿತಿನಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಇದೀಗ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮ ಪಂಚಾಯಿತಿಗೆ ಪಿಡಿಓ ಆಗಿ ಭಡ್ತಿಗೊಂಡು ವರ್ಗಾವಣೆಯಾದ ಜಯಪ್ರಕಾಶ್ ಅಲೆಕ್ಕಾಡಿಯವರನ್ನು ಬೆಳಂದೂರು ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ಸನ್ಮಾನಿಸಿ ಬೀಳ್ಕೊಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮೇಶ್ವರಿ ಅಗಳಿ ಮಾತನಾಡಿ, ಜಯಪ್ರಕಾಶ್ ಅಲೆಕ್ಕಾಡಿಯವರು ಸರಕಾರದ ಸೌಲಭ್ಯವನ್ನು ಜನಸಾಮಾನ್ಯರಿಗೆ ಒದಗಿಸಿಕೊಡುವಲ್ಲಿ ಮುತುವರ್ಜಿ ವಹಿಸುತ್ತಿದ್ದರು. ಅತ್ಯಂತ ಪ್ರಾಮಾಣಿಕತೆ, ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದ ಜಯಪ್ರಕಾಶರು ಎಲ್ಲರೊಂದಿಗೂ ಸೌಜನ್ಯತೆಯಿಂದಲೇ ಬೆರೆಯುತ್ತಿದ್ದರು ಎಂದು

ಬೆಳಂದೂರು: ಜಯಪ್ರಕಾಶ್ ಅಲೆಕ್ಕಾಡಿಯವರಿಗೆ ಬೀಳ್ಕೊಡುಗೆ Read More »

ಕರಾವಳಿ

ಸವಣೂರು ಕೆ. ಸೀತಾರಾಮ ರೈ ಹಾಗೂ ಕಸ್ತೂರಿಕಲಾ ಎಸ್.ರೈ ದಂಪತಿಯಿಂದ ಮುಗೇರು ದೇವಸ್ಥಾನಕ್ಕೆ ನೂತನ ವಸಂತಕಟ್ಟೆ ಸಮರ್ಪಣೆ

(ನ್ಯೂಸ್ ಕಡಬ) newskadaba.com ಸವಣೂರು, ಮಾ.28. ಇಲ್ಲಿನ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಸುಮಾರು ರೂ. 3 ಲಕ್ಷ ವೆಚ್ಚದಲ್ಲಿ ನೂತನ ವಸಂತ ಕಟ್ಟೆಯನ್ನು ಸೇವಾಕರ್ತರಾದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ ಹಾಗೂ ಕಸ್ತೂರಿಕಲಾ ಎಸ್. ರೈ ಅವರು ಶ್ರೀ ದೇವಸ್ಥಾನಕ್ಕೆ ಸಮರ್ಪಿಸಿದರು. ಈ ಸಂದರ್ಭ ನೂತನ ವಸಂತ ಕಟ್ಟೆಯ ಸೇವಾಕರ್ತರಾದ ಸವಣೂರು ಕೆ. ಸೀತಾರಾಮ ರೈ ಹಾಗೂ ಕಸ್ತೂರಿಕಲಾ ಎಸ್.ರೈ ದಂಪತಿಯನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ

ಸವಣೂರು ಕೆ. ಸೀತಾರಾಮ ರೈ ಹಾಗೂ ಕಸ್ತೂರಿಕಲಾ ಎಸ್.ರೈ ದಂಪತಿಯಿಂದ ಮುಗೇರು ದೇವಸ್ಥಾನಕ್ಕೆ ನೂತನ ವಸಂತಕಟ್ಟೆ ಸಮರ್ಪಣೆ Read More »

ಕರಾವಳಿ
Scroll to Top