ಕಡಬ: ಶುಕ್ರವಾರ ರಾತ್ರಿ ಸುರಿದ ಭಾರೀ ಗಾಳಿ – ಮಳೆ ​► ಅಪಾರ ಪ್ರಮಾಣದ ಕೃಷಿ ನಾಶ, ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com ಕಡಬ, ಮೇ.12. ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಕಡಬ ಪರಿಸರದಲ್ಲಿ ಹಲವರ ಕೃಷಿ ನಾಶಗೊಂಡಿದ್ದು, ಕೆಲವು ಮನೆಗಳಿಗೆ ಹಾನಿಯಾಗಿವೆ. ಇಲ್ಲಿನ ಬಂಟ್ರ ಗ್ರಾಮದ ರಾತ್ರಿ ಬೀಸಿದ ಭಾರೀ ಗಾಳಿಗೆ ಐಸಮ್ಮ ಹಾಗೂ ಫೌಝಿಯಾ ಎಂಬವರ ಮನೆಯ ಶೀಟುಗಳು ಹಾರಿ ಹೋಗಿದ್ದು, ಮಳೆ ನೀರೆಲ್ಲ ಮನೆಯೊಳಗಡೆ ಸುರಿದಿದೆ. ರಾಧಾಕೃಷ್ಣ ಕೊಲ್ಲೆಸಾಗು ಎಂಬವರ ಮನೆಯ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿದ್ದು, 30 ಕ್ಕೂ ಅಧಿಕ ರಬ್ಬರ್ ಮರಗಳು ನೆಲಕ್ಕುರುಳಿವೆ. ಹರೀಶ್ ಕೊಲ್ಲೆಸಾಗು ಎಂಬವರ […]

ಕಡಬ: ಶುಕ್ರವಾರ ರಾತ್ರಿ ಸುರಿದ ಭಾರೀ ಗಾಳಿ – ಮಳೆ ​► ಅಪಾರ ಪ್ರಮಾಣದ ಕೃಷಿ ನಾಶ, ಲಕ್ಷಾಂತರ ರೂ. ನಷ್ಟ Read More »

ಕರಾವಳಿ

ಕಡಬ: ರಸ್ತೆ ದುರಸ್ತಿಯಾಗದ ಹಿನ್ನೆಲೆಯಲ್ಲಿ 140 ಜನರಿಂದ ಮತದಾನ ಬಹಿಷ್ಕರಿಸಿ ಶ್ರಮದಾನ

(ನ್ಯೂಸ್ ಕಡಬ) newskadaba.com ಕಡಬ, ಮೇ.12. ನೂಜಿಬಾಳ್ತಿಲ ಗ್ರಾಮದ ಬದಿಬಾಗಿಲು-ಮಂಜೋಳಿಮಳೆ ರಸ್ತೆ ಹಲವು ವರ್ಷಗಳಿಂದ ಅಭಿವೃದ್ಧಿಯಾಗದೆ ಇರುವುದರಿಂದ ಈ ರಸ್ತೆ  ಸಂಚಾರಕ್ಕೆ ತೊಂದರೆಯಾಗಿದ್ದು ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಅಲ್ಲಿನ ಸುಮಾರು 140 ರಷ್ಟು ನಾಗರಿಕರು ಚುನಾವಣೆ ಬಹಿಷ್ಕರಿಸಿ ರಸ್ತೆಯನ್ನು ಶ್ರಮದಾನ ಮಾಡಿದ ಘಟನೆ ನಡೆದಿದೆ. ಶ್ರಮದಾನದ ನೇತೃತ್ವ ವಹಿಸಿದ್ದ ಗ್ರಾ.ಪಂ.ಮಾಜಿ ಸದಸ್ಯ ಶ್ರೀಧರ ಕಂಪ ಹೇಳಿಕೆ ನೀಡಿ, ಬದಿಬಾಗಿಲು – ಮಂಜೋಳಿಮಳೆ ರಸ್ತೆಯಲ್ಲಿ ದಿನನಿತ್ಯ ನೂರಾರು ಜನ

ಕಡಬ: ರಸ್ತೆ ದುರಸ್ತಿಯಾಗದ ಹಿನ್ನೆಲೆಯಲ್ಲಿ 140 ಜನರಿಂದ ಮತದಾನ ಬಹಿಷ್ಕರಿಸಿ ಶ್ರಮದಾನ Read More »

ಕರಾವಳಿ

ಮೇ.12 – ವಿಶ್ವ ದಾದಿಯರ ದಿನ 

(ನ್ಯೂಸ್ ಕಡಬ) newskadaba.com ಮೇ.12. ಪ್ರತಿ ವರ್ಷ “ಮೇ 12ರಂದು ವಿಶ್ವ ದಾದಿಯರ ದಿನ” ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಈ ದಿನ ಖ್ಯಾತ ದಾದಿ ಪ್ಯಾರೆನ್ಸ್‌ ನೈಟಿಂಗೇಲ್ ಅವರು ಹುಟ್ಟಿದ ದಿನವೂ ಹೌದು. ಅವರು ಮನುಕುಲಕ್ಕೆ ನೀಡಿದ ಅಮೋಘ ಸೇವೆಯನ್ನು ಸ್ಮರಿಸುವ ಸಲುವಾಗಿ “ವಿಶ್ವ ದಾದಿಯರ ದಿನ” ಎಂದು ಜಗತ್ತಿನಾದ್ಯಂತ ಮೇ 12ರಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. 2018ರ ಆಚರಣೆಯ ಧ್ಯೇಯ ವಾಕ್ಯವೆಂದರೆ “ಆರೋಗ್ಯ ಪ್ರತಿ ಮನುಷ್ಯನ ಮೂಲಭೂತ ಹಕ್ಕು” ಎಂಬುದಾಗಿರುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೌಲಭ್ಯ ದೊರಕಬೇಕು

ಮೇ.12 – ವಿಶ್ವ ದಾದಿಯರ ದಿನ  Read More »

ಆರೋಗ್ಯ ಮಾಹಿತಿ

ಬೆಳ್ತಂಗಡಿ: ಮತದಾನಕ್ಕೆಂದು ತೆರಳಿದ್ದ ವ್ಯಕ್ತಿಗೆ ಹೃದಯಾಘಾತ ​► ಶಾಲೆಯ ಆವರಣದಲ್ಲೇ ಕುಸಿದು ಬಿದ್ದು ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮೇ.12. ಮತದಾನಕ್ಕೆಂದು ತೆರಳಿದ್ದ ವ್ಯಕ್ತಿಯೋರ್ವರು ಹೃದಯಾಘಾತದಿಂದಾಗಿ ಮೃತಪಟ್ಟ ಘಟನೆ ಅಂಡಿಜೆ ಎಂಬಲ್ಲಿ ಶನಿವಾರದಂದು ನಡೆದಿದೆ. ಮೃತ ವ್ಯಕ್ತಿಯನ್ನು ಬೆಳ್ತಂಗಡಿ ತಾಲೂಕಿನ ಜಾರಿಗೆದಡಿ ನಿವಾಸಿ ಅಣ್ಣಿ ಅಚಾರ್ಯ ಎಂದು ಗುರುತಿಸಲಾಗಿದೆ. ಇವರು ಮತದಾನ ಮಾಡಲೆಂದು ಅಂಡಿಂಜೆ ಸರಕಾರಿ ಶಾಲೆಗೆ ತೆರಳಿದ್ದು, ಶಾಲೆಯ ಮುಂಭಾಗದಲ್ಲಿ ಹೃದಯಘಾತವಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತಾದರೂ, ಅದಾಗಲೇ ಮೃತಪಟ್ಟಿದ್ದರು. ವೇಣೂರು ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳ್ತಂಗಡಿ: ಮತದಾನಕ್ಕೆಂದು ತೆರಳಿದ್ದ ವ್ಯಕ್ತಿಗೆ ಹೃದಯಾಘಾತ ​► ಶಾಲೆಯ ಆವರಣದಲ್ಲೇ ಕುಸಿದು ಬಿದ್ದು ಮೃತ್ಯು Read More »

ಕರಾವಳಿ

ಆಲಂಕಾರು: ಒಂದೇ ಕುಟುಂಬದ ಐವರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ► ಅಧಿಕಾರಿಗಳ ಎಡವಟ್ಟಿಗೆ ಮತದಾರರು ಕಂಗಾಲು

(ನ್ಯೂಸ್ ಕಡಬ) newskadaba.com ಆಲಂಕಾರು, ಮೇ.12.  ಜೀವಂತವಾಗಿದ್ದರೂ ಮತದಾರರ ಪಟ್ಟಿಯಿಂದ ಒಂದೇ ಕುಟುಂಬದ 5 ಜನರ ಹೆಸರನ್ನು ಡಿಲೀಟ್ ಮಾಡಿದ ಪ್ರಕರಣ ಮತದಾನದ ವೇಳೆ ಬೆಳಕಿಗೆ ಬಂದಿದೆ. ಇದರಿಂದಾಗಿ ಈ 5ಮಂದಿ ಸದಸ್ಯರು ಮತದಾನ ಮಾಡಲು ಅಸಾಧ್ಯವಾಗಿ ಹಿಂತಿರುಗಿದರು. ಡಿಲೀಟ್ ಮಾಡಿರುವ ಘಟನೆ ತಿಳಿಯುತ್ತಿದ್ದಂತೆ ಒಂದು ಪಕ್ಷದ ಕಾರ್ಯಕರ್ತರು ಯಾರೋ ಅಧಿಕಾರಿಗಳು ಮಾಡಿದ ಎಡವಟ್ಟಿಗೆ ಮತದಾರರಿಗೆ ಅನ್ಯಾಯವಾಗಬಾರದು, ಮತ ಚಲಾಯಿಸಲು ಅವಕಾಶ ನೀಡಿ ಎಂದು ಆಗ್ರಹಿಸಿದರು. ಆದರೆ 6 ತಿಂಗಳಿನಿಂದ ವಾಸ್ತವ್ಯ ಇಲ್ಲದ ಜನರ ಹೆಸರನ್ನು ಮತದಾರರ

ಆಲಂಕಾರು: ಒಂದೇ ಕುಟುಂಬದ ಐವರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ► ಅಧಿಕಾರಿಗಳ ಎಡವಟ್ಟಿಗೆ ಮತದಾರರು ಕಂಗಾಲು Read More »

ಕರಾವಳಿ

ಕೊಕ್ಕಡ: ಮತದಾನ ಮಾಡಿದ ಎಲ್ಲಾ 19 ಎಂಡೋ ಸಂತ್ರಸ್ಥರು

(ನ್ಯೂಸ್ ಕಡಬ) newskadaba.com ಕೊಕ್ಕಡ,ಮೇ.12. ಈ ಬಾರಿಯ ಮತದಾನವನ್ನು ಬಹಿಷ್ಕರಿಸುವುದಾಗಿ ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿಯಿಯ ಅಧ್ಯಕ್ಷ ಶ್ರೀಧರ ಗೌಡ ಕೊಕ್ಕಡ ಎಂಡೋ ಸಂತ್ರಸ್ಥರ ಸಮಲೋಚನಾ ಸಭೆಯಲ್ಲಿ ಘೋಷಿಸಿದ್ದರು. ಆದರೆ ಕೆಲ ದಿನಗಳ ಹಿಂದೆ ತಮ್ಮ ನಿಲುವನ್ನು ಬದಲಾಯಿಸಿದ ಶ್ರೀಧರ ಗೌಡರವರು ಎಂಡೋ ಸಂತ್ರಸ್ಥರು ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡುತ್ತೇವೆ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿರುವ ಎಲ್ಲಾ 19 ಎಂಡೋ ಸಂತ್ರಸ್ಥರು ಮತದಾನಕ್ಕೆ ಆಗಮಿಸಿ ಮತದಾನ ಮಾಡುವುದುರ ಮೂಲಕ ಶ್ರೀಧರ ಗೌಡರ ವಾಗ್ದಾನಕ್ಕೆ ಗೌರವ ಸಲ್ಲಿಸಿದರು.

ಕೊಕ್ಕಡ: ಮತದಾನ ಮಾಡಿದ ಎಲ್ಲಾ 19 ಎಂಡೋ ಸಂತ್ರಸ್ಥರು Read More »

ಕರಾವಳಿ

ಬಲ್ಯ: ಕೈಕೊಟ್ಟ ವಿವಿಪ್ಯಾಟ್ ► ಒಂದೂವರೆ ತಾಸು ಮತದಾನ ಸ್ಥಗಿತ

(ನ್ಯೂಸ್ ಕಡಬ) newskadaba.com ಕಡಬ, ಮೇ.12. ಬಲ್ಯ ಮತದಾನ ಕೇಂದ್ರದ ಬೂತ್‌ ಸಂಖ್ಯೆ 50 ರಲ್ಲಿ ವಿವಿಪ್ಯಾಟ್ ಕೈಕೊಟ್ಟ ಪರಿಣಾಮ ಸುಮಾರು ಒಂದೂವರೆ ಗಂಟೆಗಳ ಕಾಲ ಸ್ಥಗಿತಗೊಂಡ ಘಟನೆ ನಡೆದಿದೆ. 11 ಗಂಟೆಯಿಂದ ಮತದಾನ ಸ್ಥಗಿತಗೊಂಡಿದ್ದು, ಮತದಾರರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದುದು ಕಂಡುಬಂದಿತು. ಆ ಬಳಿಕ ಸ್ಥಳಕ್ಕಾಗಮಿಸಿದ ಮತಯಂತ್ರ ತಜ್ಞರು ವಿವಿಪ್ಯಾಟನ್ನು ದುರಸ್ತಿಗೊಳಿಸಿದ ಬಳಿಕ ಮತದಾನ ಆರಂಭವಾಯಿತು.

ಬಲ್ಯ: ಕೈಕೊಟ್ಟ ವಿವಿಪ್ಯಾಟ್ ► ಒಂದೂವರೆ ತಾಸು ಮತದಾನ ಸ್ಥಗಿತ Read More »

ಕರಾವಳಿ

ಮತ ಚಲಾಯಿಸಿ ಹಸೆ ಮಣೆ ಏರಿದ ಮದುಮಗಳು!

(ನ್ಯೂಸ್ ಕಡಬ) newskadaba.com ಮಡಿಕೇರಿ,ಮೇ.12. ಇದೀಗ ವಿದಾನ ಸಭಾ ಚುನಾವಣೆಯು ಅತ್ಯಂತ ಬಿರುಸಿನಿಂದ ನಡೆಯಿತ್ತಿದ್ದು, ಮದುಮಗಳೊಬ್ಬಳು ಹಸೆಮಣೆ ಏರುವ ಮುನ್ನ ಚುನಾವಣಾ ಕೇಂದ್ರಕ್ಕೆ ಬಂದು ಮತ ಚಲಾಯಿಸುವುದರ ಮೂಲಕ ತನ್ನ ಜವಾಬ್ದಾರಿಯನ್ನು ವ್ಯಕ್ತ ಪಡಿಸಿದ್ದಾಳೆ. ಮಡಿಕೇರಿ ತಾಲೂಕಿನ ಕಾಂಡನಕೊಲ್ಲಿ ಗ್ರಾಮದ ಮತಗಟ್ಟೆ ಸಂಖ್ಯೆ 131 ರ ಐಮಣಿಯಂಡ ಸ್ಮಿತಾ ಎಂಬವರು ಹಸೆ ಮಣೆ ಏರುವ ಮುನ್ನ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಮತಗಟ್ಟೆಗೆ ಅಲಂಕೃತವಾಗಿ ಬಂದು ಮತ ಚಲಾಯಿಸಿ ಹಿಂತಿರುಗಿದ್ದಾಳೆ.

ಮತ ಚಲಾಯಿಸಿ ಹಸೆ ಮಣೆ ಏರಿದ ಮದುಮಗಳು! Read More »

ಕರ್ನಾಟಕ

ಮತದಾರರನ್ನು ಕೊಂಡೊಯ್ಯುತ್ತಿದ್ದ ಆಟೋಗೆ ಲಾರಿ ಡಿಕ್ಕಿ ► ಸ್ಥಳದಲ್ಲೇ ಮೃತಪಟ್ಟ ಮಹಿಳೆ

(ನ್ಯೂಸ್ ಕಡಬ) newskadaba.com ಹಾಸನ,ಮೇ.12. ಮತದಾರರನ್ನು ಕೊಂಡೊಯ್ಯುತ್ತಿದ್ದ ಆಟೋಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆಯು ಹಾಸನ ಜಿಲ್ಲೆಯ ಬೇಲೂರು ರಸ್ತೆಯಲ್ಲಿ ಸಂಭವಿಸಿದೆ. ಇಂದು ಬೆಳಗ್ಗೆ ಮತದಾರರನ್ನು ಕೊಂಡೊಯ್ಯುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆಯು  ಬೇಲೂರು ರಸ್ತೆ ರಾಮೇನಹಳ್ಳಿ ಗೇಟ್ ಬಳಿ ಸಂಭವಿಸಿದ್ದು, ಆಟೋದಲ್ಲಿ ಇದ್ದ ಲಕ್ಷ್ಮಮ್ಮ(46) ಎಂಬ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಟೋದಲ್ಲಿದ್ದ ಇನ್ನೋರ್ವ ಮಹಿಳೆಗೆ ತೀರ್ವ ಗಾಯಗಳಾಗಿದ್ದು, ಉಳಿದ ಪ್ರಯಾಣಿಕರಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ. ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮತದಾರರನ್ನು ಕೊಂಡೊಯ್ಯುತ್ತಿದ್ದ ಆಟೋಗೆ ಲಾರಿ ಡಿಕ್ಕಿ ► ಸ್ಥಳದಲ್ಲೇ ಮೃತಪಟ್ಟ ಮಹಿಳೆ Read More »

ಕರ್ನಾಟಕ

ಮತಗಟ್ಟೆಯತ್ತ ಒಲವು ತೋರುತ್ತಿರುವ ಮತದಾರರು ► ಮಡ್ಯಡ್ಕ ಮತಗಟ್ಟೆಯಲ್ಲಿ 59% ಮತ ಚಲಾವಣೆ

(ನ್ಯೂಸ್ ಕಡಬ) newskadaba.com ಕಡಬ, ಮೇ.12. ಗ್ರಾಮೀಣ ಭಾಗದಲ್ಲಿ ಬಿರುಸಿನ ಚಲಾವಣೆಯಾಗುತ್ತಿದ್ದು, ಮತದಾರರು ಮತದಾನ ಕೇಂದ್ರದತ್ತ ಒಲವನ್ನು ತೋರಿಸುತ್ತಿದ್ದಾರೆ. ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಓಂತ್ರಡ್ಕ ಸರಕಾರಿ ಶಾಲೆಯ ಮತಗಟ್ಟೆ 96 ರಲ್ಲಿ 12 ಗಂಟೆಯ ವೇಳೆಗೆ 59 ಶೇಕಡಾ ಮತದಾನವಾಗಿದೆ. ಮಡ್ಯಡ್ಕ ಸರಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 93 ರಲ್ಲಿ ಮತಯಂತ್ರವು ಎರಡು ಮೂರು ಸಲ ಕೈಕೊಟ್ಟಿದ್ದರಿಂದಾಗಿ ಮತದಾನ ವಿಳಂಬವಾದ ಬಗ್ಗೆ ವರದಿಯಾಗಿದೆ.

ಮತಗಟ್ಟೆಯತ್ತ ಒಲವು ತೋರುತ್ತಿರುವ ಮತದಾರರು ► ಮಡ್ಯಡ್ಕ ಮತಗಟ್ಟೆಯಲ್ಲಿ 59% ಮತ ಚಲಾವಣೆ Read More »

ಕರಾವಳಿ
Scroll to Top