ಕಾಂಗ್ರೇಸ್ ಅಪಪ್ರಚಾರಕ್ಕೆ ಕ್ಷೇತ್ರದ ಜನ ತಕ್ಕ ಉತ್ತರ ನೀಡಿದ್ದಾರೆ: ಕೃಷ್ಣ ಶೆಟ್ಟಿ

(ನ್ಯೂಸ್ ಕಡಬ) newskadaba.com  ಕಡಬ,ಮೇ.18.ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ನವರ ನಿರಂತರ ಅಪಪ್ರಚಾರದ ನಡುವೆಯೂ ಬಿಜೆಪಿ ಅಭ್ಯರ್ಥಿ ಎಸ್.ಅಂಗಾರ ಆರನೇ ಬಾರಿಗೆ ಅಭೂತಪೂರ್ವ ವಿಜಯ ಸಾಧಿಸಿದ್ದಾರೆ, ಕ್ಷೇತ್ರದ ಜನತೆ ಕಾಂಗ್ರೇಸ್ನ ಕುಟಿಲ ತಂತ್ರಕ್ಕೆ ತಕ್ಕ ಉತ್ತರ ನೀಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಪುತ್ತೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಉಸ್ತುವಾರಿ ಕೃಷ್ಣ ಶೆಟ್ಟಿ ಕಡಬ ಹೇಳಿದರು. ಅವರು ಗುರುವಾರ ಮಧ್ಯಾಹ್ನ ಕಡಬ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದು ಶಾಸಕ ಅಂಗಾರ ನಿಷ್ಕಳಂಕ ಚಾರಿತ್ರ್ಯ, ನಿರಂತರ ಕ್ಷೇತ್ರದ ಒಡನಾಟ, ಅಭೂತಪುರ್ವ […]

ಕಾಂಗ್ರೇಸ್ ಅಪಪ್ರಚಾರಕ್ಕೆ ಕ್ಷೇತ್ರದ ಜನ ತಕ್ಕ ಉತ್ತರ ನೀಡಿದ್ದಾರೆ: ಕೃಷ್ಣ ಶೆಟ್ಟಿ Read More »

ಕರಾವಳಿ

ಇಂದಿನಿಂದ ಎನ್ಕೂಪ್ ಮುತ್ತು ಮಾರಿಯಮ್ಮ ದೇವಸ್ಥಾನ ಜಾತ್ರೋತ್ರವ

(ನ್ಯೂಸ್ ಕಡಬ) newskadaba.com  ಕಡಬ,ಮೇ.18. ಕಡಬ ತಾಲೂಕಿನ ಐತ್ತೂರು ಗ್ರಾಮದ ಸುಂಕದಕಟ್ಟೆ ಎನ್ಕೂಪ್ ಸಿಆರ್ಸಿ ಕಾಲೋನಿಯ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ಐದನೇ ವರ್ಷದ ವರ್ಷಾವಧಿ ಜಾತ್ರೋತ್ಸವ ಕಾರ್ಯಕ್ರಮ ಮೇ 18 ನೇ ಶುಕ್ರವಾರದಿಂದ 20 ನೇ ಭಾನುವಾರ ತನಕ ನಡೆಯಲಿದೆ. ಶುಕ್ರವಾರ ಬೆಳಿಗ್ಗೆ ಗಣಪತಿ ಹೋಮ, ಧ್ವಜಾರೋಹಣ, ಸಾಮೂಹಿಕ ಪ್ರಾರ್ಥನೆ, ಪುಜೆ ರಾತ್ರಿ ಕರಗ ಪ್ರತಿಷ್ಠಾ ಕಾರ್ಯಕ್ರಮ ಆರಂಭವಾಗಲಿದೆ. ಶನಿವಾರ ಬೆಳಿಗ್ಗೆ ಪ್ರತಿಷ್ಠಾ ಕರಗಳಿಗೆ ಪುಜೆ, ನಾಗನ ಕಟ್ಟೆಯಲ್ಲಿ ನಾಗ ತಂಬಿಲ, ಬಳಿಕ ಸತ್ಯನಾರಾಯಣ ಪುಜೆ, ಪ್ರಸಾದ ವಿತರಣೆ

ಇಂದಿನಿಂದ ಎನ್ಕೂಪ್ ಮುತ್ತು ಮಾರಿಯಮ್ಮ ದೇವಸ್ಥಾನ ಜಾತ್ರೋತ್ರವ Read More »

ಕರಾವಳಿ

ರಂಜಾನ್ ಉಪವಾಸ ಮತ್ತು ಆರೋಗ್ಯದ ಕಾಳಜಿ

(ನ್ಯೂಸ್ ಕಡಬ) newskadaba.com, ಮೇ.18.  ಪ್ರತಿ ವರ್ಷ ಪವಿತ್ರ ಮಾಸವಾದ ರಂಜಾನ್ ತಿಂಗಳಲ್ಲಿ ಮುಸ್ಲಿಂ ಸಮುದಾಯದ ನಮ್ಮ ಸಹೋದರ ಸಹೋದರಿಯರು ಬಹಳ ಶ್ರದ್ಧೆ ಮತ್ತು ಭಕ್ತಿಯಿಂದ ಉಪವಾಸ ಮಾಡುತ್ತಾರೆ. ಸೂರ್ಯೋದಯವಾಗುವುದಕ್ಕೆ ಮೊದಲೇ ಆಹಾರ ಸೇವಿಸಿ ಬಳಿಕ 12 ರಿಂದ 14 ಗಂಟೆಗಳ ಕಾಲ ನೀರು ಕೂಡ ಸೇವಿಸದೆ ಸೂಯಾಸ್ತವಾದ ಬಳಿಕವೇ ಆಹಾರ ಸೇವಿಸುತ್ತಾರೆ, ಹಾಗಾಗಿ ಒಂದು ಊಟಕ್ಕೂ ಮತ್ತೊಂದು ಊಟಕ್ಕೂ 12 ರಿಂದ 14 ಗಂಟೆಗಳ ಬಹಳ ಅಂತರವಿರುತ್ತದೆ. ಈ ಸಮಯದ ಅಂತರ ಜಾಸ್ತಿ ಇರುವ ಕಾರಣ

ರಂಜಾನ್ ಉಪವಾಸ ಮತ್ತು ಆರೋಗ್ಯದ ಕಾಳಜಿ Read More »

ಆರೋಗ್ಯ ಮಾಹಿತಿ

ಮೂಡಬಿದಿರೆ: ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ► ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಮೇ.17. ಮಾರುತಿ ಸೆಲೆರಿಯೋ ಹಾಗೂ ಮಾರುತಿ 800 ಕಾರುಗಳ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟ ಘಟನೆ ಗುರುವಾರದಂದು ಮಿಜಾರಿನಲ್ಲಿ ನಡೆದಿದೆ. ಮೈಟ್ ಕಾಲೇಜು ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಮಾರುತಿ 800 ಕಾರಿನ ಚಾಲಕ, ಮೂಡು ಪೆರಾರ ನಿವಾಸಿ ಶಿವಾನಂದ ಶೆಟ್ಟಿ (65) ಎಂದು ಗುರುತಿಸಲಾಗಿದೆ. ಇವರು ತನ್ನ ಕಾರಿನಲ್ಲಿ ಮೂಡುಬಿದಿರೆಯತ್ತ ತೆರಳುತ್ತಿದ್ದ ಸಂದರ್ಭದಲ್ಲಿ ಮಿಜಾರು ಎಂಐಟಿ ಕಾಲೇಜು ಬಳಿ ವಿರುದ್ಧ ದಿಕ್ಕಿನಿಂದ ಬಂದ ಮಾರುತಿ ಸೆಲೆರಿಯೋ ಕಾರು ಚಾಲಕನ ನಿಯಂತ್ರಣ

ಮೂಡಬಿದಿರೆ: ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ► ಓರ್ವ ಮೃತ್ಯು Read More »

ಕರಾವಳಿ

ನಾಪತ್ತೆಯಾಗಿದ್ದ ಬಳ್ಳಾರಿಯ ಕಾಂಗ್ರೆಸ್ ಶಾಸಕ ಕೊನೆಗೂ ಪತ್ತೆ..! ► ಶಾಸಕ ಆನಂದ ಸಿಂಗ್ ಬೆಂಬಲ ಯಾವ ಪಕ್ಷಕ್ಕೆ ಗೊತ್ತೇ..?

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.17. ಕ್ಷಣ ಕ್ಷಣವೂ ತೀವ್ರ ಕುತೂಹಲ‌ ಉಂಟು ಮಾಡುತ್ತಿರುವ ರಾಜ್ಯ ರಾಜಕೀಯ ಬೆಳವಣಿಗೆಯಲ್ಲಿ ನಿನ್ನೆಯಿಂದ ಕಣ್ಮರೆಯಾಗಿದ್ದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್‌ ಕೊನೆಗೂ ತನ್ನ ಇರುವಿಕೆಯನ್ನು ಗೊತ್ತುಪಡಿಸಿದ್ದಾರೆ. ಬಹುಮತ ಸಾಬೀತುಪಡಿಸುವ ನಿಟ್ಟಿನಲ್ಲಿ ಬಿಜೆಪಿಯು ಕಾರ್ಯತಂತ್ರಗಳನ್ನು ರೂಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ತಮ್ಮ ಶಾಸಕರನ್ನು ರೆಸಾರ್ಟ್ ನಲ್ಲಿ ಇರಿಸಿ ಕುದುರೆ ವ್ಯಾಪಾರದ ಆಮಿಷಕ್ಕೆ ಬಲಿಯಾಗದಂತೆ ನೋಡಿಕೊಳ್ಳುತ್ತಿದ್ದುರೂ ನಿನ್ನೆಯಿಂದ ಯಾರ ಕಣ್ಣಿಗೂ ಸಿಗದೆ ನಾಪತ್ತೆಯಾಗಿದ್ದ ಬಳ್ಳಾರಿಯ ಕಾಂಗ್ರೆಸ್ ಶಾಸಕ ಆನಂದ ಸಿಂಗ್

ನಾಪತ್ತೆಯಾಗಿದ್ದ ಬಳ್ಳಾರಿಯ ಕಾಂಗ್ರೆಸ್ ಶಾಸಕ ಕೊನೆಗೂ ಪತ್ತೆ..! ► ಶಾಸಕ ಆನಂದ ಸಿಂಗ್ ಬೆಂಬಲ ಯಾವ ಪಕ್ಷಕ್ಕೆ ಗೊತ್ತೇ..? Read More »

ಕರ್ನಾಟಕ

ವಿವಿಧ ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿದ ರಾಜ್ಯ ಸರಕಾರ ► ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ವರ್ಗಾವಣೆ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಮೇ.17. ನಿಷ್ಠಾವಂತ ಐಪಿಎಸ್ ಅಧಿಕಾರಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಅಣ್ಣಾಮಲೈಯವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿ ತನ್ನದೇ ಕಾರ್ಯವೈಖರಿಯಿಂದ ಯುವ ಮನಸ್ಸುಗಳನ್ನು ಗೆದ್ದಿದ್ದ ಅಣ್ಣಾಮಲೈ 2016 ರ ಆಗಸ್ಟ್‌ನಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು. ಅಲ್ಲಿಯೂ ತನ್ನದೇ ಶೈಲಿಯಲ್ಲಿ ಅಪರಾಧಿ ಕೃತ್ಯಗಳಿಗೆ ಕಡಿವಾಣ ಹಾಕಿದ್ದ ಅವರನ್ನು ನೂತನ ಸರಕಾರ ಅಸ್ಥಿತ್ವಕ್ಕೆ ಬಂದ ಕೂಡಲೇ ರಾಮನಗರ ಜಿಲ್ಲೆಗೆ

ವಿವಿಧ ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿದ ರಾಜ್ಯ ಸರಕಾರ ► ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ವರ್ಗಾವಣೆ Read More »

ಕರ್ನಾಟಕ

ಕಡಬ ಪೊಲೀಸ್ ಠಾಣೆಯಲ್ಲಿ ನಡೆದ ಭೀಕರ ಸ್ಫೋಟ ಪ್ರಕರಣ ► ವಿವಿಧ ತಜ್ಞರಿಂದ ಸ್ಥಳ ಪರಿಶೀಲನೆ

(ನ್ಯೂಸ್ ಕಡಬ) newskadaba.com ಕಡಬ, ಮೇ.17. ಇಲ್ಲಿನ ಪೊಲೀಸ್ ಠಾಣೆಯ ಹಳೆಯ ಕಟ್ಟಡದಲ್ಲಿ ಬುಧವಾರ ರಾತ್ರಿ ಭಾರೀ ಸದ್ದಿನೊಂದಿಗೆ ಭೀಕರ ಸ್ಫೋಟ ನಡೆದಿದ್ದು, ಘಟನಾ ಸ್ಥಳಕ್ಕೆ ಗುರುವಾರದಂದು ವಿವಿಧ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭೀಕರ ಸ್ಫೋಟಕ್ಕೆ ಕಾರಣ ನಿಗೂಢವಾಗಿದ್ದ ಹಿನ್ನೆಲೆಯಲ್ಲಿ ಫೋರೆನ್ಸಿಕ್ ತಜ್ಞರು, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳು, ನಕ್ಸಲ್ ನಿಗ್ರಹ ದಳದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಫೋಟಕ್ಕೆ ಸಂಬಂಧಿಸಿದಂತೆ ವಿವಿಧ ಮಾದರಿಗಳನ್ನು ಸಂಗ್ರಹಿಸಿದ್ದು, ಪ್ರಯೋಗಾಲಯಕ್ಕೆ ಕಳುಹಿಸಲಿದ್ದಾರೆ. ಪ್ರಯೋಗಾಲಯದ ವರದಿಯನ್ನು ಆಧರಿಸಿ

ಕಡಬ ಪೊಲೀಸ್ ಠಾಣೆಯಲ್ಲಿ ನಡೆದ ಭೀಕರ ಸ್ಫೋಟ ಪ್ರಕರಣ ► ವಿವಿಧ ತಜ್ಞರಿಂದ ಸ್ಥಳ ಪರಿಶೀಲನೆ Read More »

ಕರಾವಳಿ

ಮಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ► ಮಧ್ಯ ರಸ್ತೆಯಲ್ಲೇ ಸುಟ್ಟು ಕರಕಲಾದ ಕಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.17. ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿಯುಂಟಾದ ಪರಿಣಾಮ‌ ಕಾರು ಸುಟ್ಟು ಕರಕಲಾದ ಘಟನರ ನಗರದ ಜ್ಯೋತಿಯ ಮುಖ್ಯ ರಸ್ತೆಯಲ್ಲಿ ಗುರುವಾರದಂದು ನಡೆದಿದೆ. ನಗರದ ಜ್ಯೋತಿಯ‌ ಅಂಬೇಡ್ಕರ್ ವೃತ್ತದ ಬಳಿ ಚಲಿಸುತ್ತಿದ್ದ ಇಂಡಿಕಾ ಕಾರಿನಲ್ಲಿ ಇದ್ದಕ್ಕಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಕಾರನ್ನು ಆವರಿಸಿದೆ. ಅಪಾಯದ ಮುನ್ಸೂಚನೆ ಅರಿತ ಚಾಲಕ ಕಾರನ್ನು ರಸ್ತೆಯಲ್ಲೇ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿದ್ದರಿಂದ ಸಂಭಾವ್ಯ ಅಪಾಯದಿಂದ ಪಾರಾಗಿದ್ದಾರೆ. ಕಾರು ಭಾಗಶಃ ಸುಟ್ಟು‌ ಕರಕಲಾಗಿದ್ದು, ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು

ಮಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ► ಮಧ್ಯ ರಸ್ತೆಯಲ್ಲೇ ಸುಟ್ಟು ಕರಕಲಾದ ಕಾರು Read More »

ಕರಾವಳಿ

ಒಂದೆರಡು ದಿನಗಳಲ್ಲಿ ರೈತರ ಒಂದು‌ ಲಕ್ಷ ರೂ. ವರೆಗಿನ ಸಾಲ ಮನ್ನಾ ► ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.17. ಕರ್ನಾಟಕದ 23 ನೇ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಗುರುವಾರ ಬೆಳಗ್ಗೆ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ರೈತರ 1 ಲಕ್ಷ ರೂ. ವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಾರೆ. ಬಿಜೆಪಿಯು ಅಧಿಕಾರಕ್ಕೆ ಬಂದರೆ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಇಂದು ಒಂದು ಲಕ್ಷ ರೂ.ವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಬಿಜೆಪಿಯು ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಅದರಂತೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರು ಕ್ಷಣವೇ ರೈತರ ಹಾಗೂ

ಒಂದೆರಡು ದಿನಗಳಲ್ಲಿ ರೈತರ ಒಂದು‌ ಲಕ್ಷ ರೂ. ವರೆಗಿನ ಸಾಲ ಮನ್ನಾ ► ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ Read More »

ಕರ್ನಾಟಕ

ಮೈಸೂರು: ಇವಿಎಂ ಯಂತ್ರವನ್ನು ಹ್ಯಾಕ್ ಮಾಡಿದ ಆರೋಪ ► ನಾಲ್ವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಜೆಡಿಎಸ್ ಕಾರ್ಯಕರ್ತರು

(ನ್ಯೂಸ್ ಕಡಬ) newskadaba.com ಮೈಸೂರು, ಮೇ.17. ಮತ‌ ಯಂತ್ರಗಳನ್ನು ಹ್ಯಾಕ್ ಮಾಡಿರುವ ಆರೋಪದಲ್ಲಿ ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮತ್ತು ಕಾರ್ಯಕರ್ತರು ನಾಲ್ವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಫಲಿತಾಂಶದ ಬಳಿಕ ಎಸ್ಡಿಪಿಐ ಅಭ್ಯರ್ಥಿಗೆ ನಿರೀಕ್ಷೆಗಿಂತ ಕಡಿಮೆ ಮತಗಳು ಲಭಿಸಿದ ಕಾರಣ ಹಾಗೂ ಜೆಡಿಎಸ್ ಪ್ರಾಬಲ್ಯವಿರುವ ಹಲವು ಪ್ರದೇಶಗಳಲ್ಲಿ ಜೆಡಿಎಸ್ ಗೆ ಅತೀ ಕಡಿಮೆ ಮತ ಲಭಿಸಿರುವುದರಿಂದ ಮತಯಂತ್ರಗಳ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಚುನಾವಣೆಗೆ ಮೊದಲು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ

ಮೈಸೂರು: ಇವಿಎಂ ಯಂತ್ರವನ್ನು ಹ್ಯಾಕ್ ಮಾಡಿದ ಆರೋಪ ► ನಾಲ್ವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಜೆಡಿಎಸ್ ಕಾರ್ಯಕರ್ತರು Read More »

ಕರಾವಳಿ
Scroll to Top