ಕೊಣಾಜೆ: ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ ► ಆರೋಪಿ ತಂದೆ ಮತ್ತು ಬಾಡಿಗೆ ಮನೆಯ ಮಾಲಕನ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.04.‌ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಾಲಕಿಯ ತಂದೆ ಸೇರಿದಂತೆ ಇಬ್ಬರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ಮೂಲದ ಕುಟುಂಬವೊಂದು ಕಳೆದ ಕೆಲವು ವರ್ಷಗಳಿಂದ ಕೊಣಾಜೆ ಠಾಣಾ ವ್ಯಾಪ್ತಿಯ ಕಿಲ್ಲೂರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಕುಟುಂಬದ ಯಜಮಾನ ಹಾಗೂ ಬಾಡಿಗೆ ಮನೆಯ ಮಾಲಕ ತನ್ನ ಅಪ್ರಾಪ್ತ ವಯಸ್ಸಿನ ಹೆಣ್ಣು ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದುದಲ್ಲದೆ ಅತ್ಯಾಚಾರ ಎಸಗಿದ್ದರು. ತನ್ನ ತಂದೆಯು ಲೈಂಗಿಕ ಕಿರುಕುಳ ನೀಡುತ್ತಿರುವ ವಿಚಾರವನ್ನು […]

ಕೊಣಾಜೆ: ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ ► ಆರೋಪಿ ತಂದೆ ಮತ್ತು ಬಾಡಿಗೆ ಮನೆಯ ಮಾಲಕನ ಬಂಧನ Read More »

ಕರಾವಳಿ

ಸಾಮಾಜಿಕ ಜಾಲತಾಣದಲ್ಲಿ ಸಿಎಂ ಕುಮಾರಸ್ವಾಮಿಯವರ ನಿಂದನೆ ► ಬಂಟ್ವಾಳ ಮೂಲದ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.04. ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ ಯುವಕನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕು ಮೇರಮಜಲು ನಿವಾಸಿ ಪ್ರಶಾಂತ್ ಪೂಜಾರಿ (24) ಎಂದು ಗುರುತಿಸಲಾಗಿದೆ. ಈತ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಇನ್‌ಸ್ಟಾಗ್ರಾಮ್ ಮೂಲಕ ಅವಾಚ್ಯವಾಗಿ ನಿಂದಿಸಿದ್ದು, ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಕದ್ರಿ ಪೊಲೀಸರು ಶುಕ್ರವಾರ ಆರೋಪಿಯನ್ನು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಿಎಂ ಕುಮಾರಸ್ವಾಮಿಯವರ ನಿಂದನೆ ► ಬಂಟ್ವಾಳ ಮೂಲದ ಆರೋಪಿಯ ಬಂಧನ Read More »

ಕರ್ನಾಟಕ

ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಕೊಯಿಲ ಪಶು ವೈದ್ಯಕೀಯ ಕಟ್ಟಡದ ಪರಿಸರ ► ಕಟ್ಟಡ ಕಾರ್ಮಿಕರ ಬಯಲು ಶೌಚದಿಂದ ದುರ್ನಾತ ಬೀರುತ್ತಿರುವ ಕೊಯಿಲ ಗುಡ್ಡೆ

(ನ್ಯೂಸ್ ಕಡಬ) newskadaba.com ಕಡಬ, ಆ.03. ಸಾಲು ಸಾಲು ಗುಡ್ಡಗಳಿಗೆ ಪ್ರಕೃತಿಯ ಹಚ್ಚ ಹಸಿರಿನ ಹೊದಿಕೆ, ನೋಡುಗರ ಕಣ್ಮನ ಸೆಳೆಯುವ, ಪ್ರವಾಸಿಗರನ್ನು ಕೈಬೀಸಿ ಕರೆಯುವ ತಾಣ. ಮುಂಗಾರು ಮಳೆ ಇಳೆಗೆ ಬಿದ್ದು ತಂಪೆರೆದಾಗ ಬೆಳೆಯುವ ಹಸಿರು ಹುಲ್ಲಿನಿಂದ ಸುಂದರವಾಗಿ ಕಂಗೊಳಿಸುವ ಪುತ್ತೂರು ತಾಲೂಕಿನ ಕೊೈಲ ಗ್ರಾಮದ ಪಶುಸಂಗೋಪನಾ ಇಲಾಖೆಯ ಗುಡ್ಡಗಳು. ಈ ಸುಂದರ ತಾಣ ಇದೀಗ ಇಲ್ಲಿ ನಿರ್ಮಾಣವಾಗುತ್ತಿರುವ ಪಶುವೈದ್ಯಕೀಯ ಕಾಲೇಜು ಕಟ್ಟಡದ ಕಾರ್ಮಿಕರ ಬಯಲು ಶೌಚದ ಕಾರಣದಿಂದ ದುರ್ವಾಸನೆಯಿಂದ ಕೂಡಿದೆ. ಪಶುಪಾಲನಾ ಮತ್ತು ಪಶುವೈದ್ಯ ಸೇವಾ

ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಕೊಯಿಲ ಪಶು ವೈದ್ಯಕೀಯ ಕಟ್ಟಡದ ಪರಿಸರ ► ಕಟ್ಟಡ ಕಾರ್ಮಿಕರ ಬಯಲು ಶೌಚದಿಂದ ದುರ್ನಾತ ಬೀರುತ್ತಿರುವ ಕೊಯಿಲ ಗುಡ್ಡೆ Read More »

ಕರಾವಳಿ

ಕಡಬ: ಚಲಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಬಿದ್ದ ಬೃಹತ್ ಮರ

(ನ್ಯೂಸ್ ಕಡಬ) newskadaba.com ಕಡಬ, ಆ.03. ಚಲಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಮರ ಬಿದ್ದು ರಿಕ್ಷಾ ಜಖಂಗೊಂಡ ಘಟನೆ ಶುಕ್ರವಾರ ಬೆಳಿಗ್ಗೆ ಕಡಬ ಸಮೀಪದ ಮುಳಿಮಜಲು ಎಂಬಲ್ಲಿ ನಡೆದಿದೆ. ಕುಟ್ರುಪ್ಪಾಡಿ ಗ್ರಾಮದ ಮುಳಿಮಜಲು ಸಮೀಪದ ಕೊಳಂಬೆತಡ್ಡ ನಿವಾಸಿ ಜಗನ್ನಾಥ್ ಎಂಬವರು ತನ್ನ ಆಟೋರಿಕ್ಷಾದಲ್ಲಿ ಮನೆಯಿಂದ ಹೊರಟು ಕಡಬ ಕಡೆಗೆ ತೆರಳುತ್ತಿದ್ದಾಗ ಬೃಹತ್ ಗಾತ್ರದ ಮರವೊಂದು ರಿಕ್ಷಾದ ಮೇಲೆ ಬಿದ್ದು ರಿಕ್ಷಾದ ಮುಂಭಾಗ ಜಖಂಗೊಂಡಿದೆ. ಚಾಲಕ ಜಗನ್ನಾಥ್ ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಕಡಬ: ಚಲಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಬಿದ್ದ ಬೃಹತ್ ಮರ Read More »

ಕರಾವಳಿ

ಪುತ್ತೂರು: ಹತ್ತನೇ ತರಗತಿಯ ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಪುತ್ತೂರು, ಆ.03. ಹತ್ತನೇ ತರಗತಿಯ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಟ್ಟಂಪಾಡಿ ಗ್ರಾಮದ ಇರ್ದೆಎಂಬಲ್ಲಿ ಶುಕ್ರವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ಬೆಟ್ಟಂಪಾಡಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ, ಇರ್ದೆ ಜೋಗಿಮೂಲೆ ನಿವಾಸಿ ರಮಣ್(15) ಎಂದು ಗುರುತಿಸಲಾಗಿದೆ. ಈತನು ತನ್ನ ಮನೆಯ ಕೋಣೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದಿದ್ದು, ಶುಕ್ರವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಸಂಪ್ಯ ಠಾಣಾ ಪೊಲೀಸರು

ಪುತ್ತೂರು: ಹತ್ತನೇ ತರಗತಿಯ ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ Read More »

ಕರಾವಳಿ

ದುಬೈ ಸ್ಕಾಲರ್ಸ್ ಇಂಡಿಯನ್ ಸ್ಕೂಲ್ ಪ್ರಿನ್ಸಿಪಾಲ್ ಹಳೆನೇರಂಕಿ ನಫೀಸತುಲ್ ಮಿಸ್ರಿಯಾ ದಅವಾ ಕಾಲೇಜಿಗೆ ಭೇಟಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ.03. ಇಲ್ಲಿನ ಆತೂರು ಸಮೀಪದ ಹಳೇ ನೇರಂಕಿಯ ವಾದಿ ಹಿಕ್ಮದಲ್ಲಿ ಆರಂಭಗೊಂಡ ನಫೀಸತ್ತುಲ್ ಮಿಸ್ರಿಯಾ ಮೆಮೋರಿಯಲ್ ದಅವಾ ಕಾಲೇಜಿಗೆ ದುಬೈ ಸ್ಕಾಲರ್ಸ್ ಇಂಡಿಯನ್ ಸ್ಕೂಲ್ ನ ಪ್ರಾಂಶುಪಾಲರಾದ ಜನಾಬ್ ಅಬೂಬಕರ್ ತುಂಬೆಯವರು ಭೇಟಿ ನೀಡಿದರು. ನೂರಾರು ವರ್ಷಗಳ ಇತಿಹಾಸ ಇರುವ ಪ್ರಶಾಂತ ಸುಂದರವಾದ ಗ್ರಾಮೀಣ ಪ್ರದೇಶದ ಹಳೇ ನೇರಂಕಿ ಮುಹಿಯದ್ದೀನ್ ಮಸೀದಿ ಪರಿಸರದಲ್ಲಿ ಪುಣ್ಯ ಮಹಿಳೆ ಬೀವಿ ನಫೀಸತುಲ್ ಮಿಸ್ರಿಯ(ರ) ನಾಮಧೇಯದಲ್ಲಿ ಹಲವಾರು ಯೋಜನೆಯನ್ನು ಗುರಿಯಲ್ಲಿಟ್ಟುಕೊಂಡು ಆರಂಭಿಸಲಾದ ಸಂಸ್ಥೆಗೆ ಸರ್ವ ವಿಧದ

ದುಬೈ ಸ್ಕಾಲರ್ಸ್ ಇಂಡಿಯನ್ ಸ್ಕೂಲ್ ಪ್ರಿನ್ಸಿಪಾಲ್ ಹಳೆನೇರಂಕಿ ನಫೀಸತುಲ್ ಮಿಸ್ರಿಯಾ ದಅವಾ ಕಾಲೇಜಿಗೆ ಭೇಟಿ Read More »

ಅಂತರ್ರಾಷ್ಟ್ರೀಯ ನ್ಯೂಸ್

ಬೈಕಂಪಾಡಿ ಟ್ರಕ್ ಟರ್ಮಿನಲ್ ಕಾಮಗಾರಿಗೆ ಶೀಘ್ರ ಚಾಲನೆ ► ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್

(ನ್ಯೂಸ್ ಕಡಬ) newskadaba.com ಮಂಗಳೂರು, ಆ.03. ಬೈಕಂಪಾಡಿಯಲ್ಲಿ ಸ್ಥಾಪಿಸಲುದ್ದೇಶಿಸಿರುವ ಪ್ರಸ್ತಾವಿತ ಟ್ರಕ್ ಟರ್ಮಿನಲ್ ಕಾಮಗಾರಿಗೆ ರಾಜ್ಯ ಸರಕಾರ ಶೀಘ್ರವೇ ಮಂಜೂರಾತಿ ನೀಡಲಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಬುಧವಾರ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕೆನರಾ ಸಣ್ಣ ಕೈಗಾರಿಕಾ ಒಕ್ಕೂಟದ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪಣಂಬೂರು ಎನ್.ಎಂ.ಪಿ.ಟಿ, ಬೈಕಂಪಾಡಿ ಮತ್ತು ಸುರತ್ಕಲ್ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಕಷ್ಟು ಸಣ್ಣ ಹಾಗೂ ಬೃಹತ್ ಕೈಗಾರಿಕೆಗಳು ಕಾರ್ಯಾಚರಿಸುತ್ತಿವೆ. ಇದರಿಂದಾಗಿ ಈ ಪ್ರದೇಶಗಳಲ್ಲಿ ಹೆಚ್ಚಿನ

ಬೈಕಂಪಾಡಿ ಟ್ರಕ್ ಟರ್ಮಿನಲ್ ಕಾಮಗಾರಿಗೆ ಶೀಘ್ರ ಚಾಲನೆ ► ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ Read More »

ಕರ್ನಾಟಕ

ಮುಲ್ಕಿ: ಐದು ವರ್ಷದ ಮಗುವನ್ನು ಬಾವಿಗೆ ತಳ್ಳಿ ತಾಯಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಮುಲ್ಕಿ, ಆ.03. ತನ್ನ ಐದು ವರ್ಷದ ಮಗುವನ್ನು ಬಾವಿಗೆ ತಳ್ಳಿ ತದನಂತರ ಬಾವಿಗೆ ಹಾರಿದ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಲ್ಕಿಯಲ್ಲಿ ಗುರುವಾರದಂದು ನಡೆದಿದೆ. ಮುಲ್ಕಿ ಗೇರುಕಟ್ಟೆ ಜ್ಯೂನಿಯರ್ ಕಾಲೇಜು ಬಳಿಯ ನಿವಾಸಿ ಸುಧಾಕರ ಎಂಬವರ ಪತ್ನಿ ಸುಜಾತಾ(48) ಹಾಗೂ ಮಗಳು ಕೃತಿಕಾ(5) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಗುರುವಾರದಂದು ತಾಯಿ, ಮಗಳು ಮನೆಯಿಂದ ಕಾಣೆಯಾಗಿದ್ದು, ಈ ಬಗ್ಗೆ ಹುಡುಕಾಡಿದಾಗ ಸುಜಾತಾ ಹಾಗೂ ಕೃತಿಕಾರ ಮೃತದೇಹಗಳು ಮನೆಯ ಬಾವಿಯಲ್ಲಿ ತೇಲುತ್ತಿರುವುದು ಕಂಡುಬಂದಿದ್ದು, ಮಗುವನ್ನು ಬಾವಿಗೆ ತಳ್ಳಿ

ಮುಲ್ಕಿ: ಐದು ವರ್ಷದ ಮಗುವನ್ನು ಬಾವಿಗೆ ತಳ್ಳಿ ತಾಯಿ ಆತ್ಮಹತ್ಯೆ Read More »

ಕರಾವಳಿ

ಹಣಕಾಸಿನ ಅವ್ಯವಹಾರ ಮತ್ತು ಭ್ರಷ್ಟಾಚಾರದ ಆರೋಪ ► ಪುತ್ತೂರು ಮತ್ತು ಬಂಟ್ವಾಳ ಕೆಎಸ್ಸಾರ್ಟಿಸಿ ಡಿಪೋಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ಮಂಗಳೂರು, ಆ.02. ಪುತ್ತೂರು ಮತ್ತು ಬಿ.ಸಿ.ರೋಡ್ ಕೆಎಸ್ಸಾರ್ಟಿಸಿ ಡಿಪೋದಲ್ಲಿ ಹಣಕಾಸಿನ ಅವ್ಯವಹಾರ ಮತ್ತು ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಮಂಗಳೂರು ಎಸಿಬಿ ಅಧಿಕಾರಿಗಳು ಗುರುವಾರ ದಿಢೀರ್ ದಾಳಿ ನಡೆಸಿದ್ದಾರೆ. ಕೆಎಸ್ಸಾರ್ಟಿಸಿ ಸಿಬ್ಬಂದಿಯೊಬ್ಬರ ದೂರಿನ ಹಿನ್ನಲೆಯಲ್ಲಿ ಬಿ.ಸಿ.ರೋಡಿನ ಕೈಕಂಬ ಸಮೀಪದಲ್ಲಿ ಕಾರ್ಯಾಚರಿಸುತ್ತಿರುವ ಕೆಎಸ್ಸಾರ್ಟಿಸಿ ಡಿಪೋ ಹಾಗೂ ಪುತ್ತೂರಿನ ಕೆಎಸ್ಸಾರ್ಟಿಸಿ ಡಿಪೋಗಳಿಗೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಹಣಕಾಸಿನ ಅವ್ಯವಹಾರದ ಬಗ್ಗೆ ದಾಖಲೆಗಳನ್ನು ಪರಿಶೀಲನೆ ನಡೆಸಿ, ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು

ಹಣಕಾಸಿನ ಅವ್ಯವಹಾರ ಮತ್ತು ಭ್ರಷ್ಟಾಚಾರದ ಆರೋಪ ► ಪುತ್ತೂರು ಮತ್ತು ಬಂಟ್ವಾಳ ಕೆಎಸ್ಸಾರ್ಟಿಸಿ ಡಿಪೋಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು Read More »

ಕರಾವಳಿ

ಹಲವು ದಶಕಗಳ ಬೇಡಿಕೆ ಈಡೇರಿಕೆಗೆ ಹಸಿರು ನಿಶಾನೆ ► ಆಗಸ್ಟ್ 15 ರಂದು ನೂತನ ಕಡಬ ತಾಲೂಕು ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ಆ.02. ಕೊನೆಗೂ ಕಡಬ ಪರಿಸರದ ಜನರ ಕನಸು ನನಸಾಗುವ ಕ್ಷಣ ಹತ್ತಿರವಾಗಿದ್ದು, ಆಗಸ್ಟ್ 15 ಸ್ವಾತಂತ್ರ್ಯೋತ್ಸವದಂದು ನೂತನ ಕಡಬ ತಾಲೂಕು ಉದ್ಘಾಟನೆಗೊಳ್ಳಲಿದೆ. ಕಡಬ ತಾಲೂಕು ಕೇಂದ್ರವಾಗಬೇಕೆಂಬ ಕಳೆದ ಹಲವು ದಶಕಗಳ ಬೇಡಿಕೆಯಂತೆ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರಕಾರವು 43 ತಾಲೂಕುಗಳ ಜೊತೆಗೆ ಕಡಬವನ್ನೂ ನೂತನ ತಾಲೂಕಾಗಿ ಘೋಷಿಸಿತ್ತು. ತದನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅನುಷ್ಠಾನಗೊಳಿಸಿತ್ತು. ಆದರೆ ಉದ್ಘಾಟನಾ ಭಾಗ್ಯಕ್ಕೆ ಹಲವು ದಿನಾಂಕಗಳನ್ನು ಘೋಷಣೆ ಮಾಡಲಾಗಿತ್ತಾದರೂ ತಾಂತ್ರಿಕ

ಹಲವು ದಶಕಗಳ ಬೇಡಿಕೆ ಈಡೇರಿಕೆಗೆ ಹಸಿರು ನಿಶಾನೆ ► ಆಗಸ್ಟ್ 15 ರಂದು ನೂತನ ಕಡಬ ತಾಲೂಕು ಉದ್ಘಾಟನೆ Read More »

ಕರ್ನಾಟಕ
Scroll to Top