ಸುಳ್ಯ: ಮೇಲಿನಿಂದ ಕೆಳಕ್ಕೆ ಜಾರಿದ ಗುಡ್ಡ, ಬೃಹತ್ ಕಲ್ಲುಗಳೊಂದಿಗೆ ಹೊರಬರುತ್ತಿರುವ ನೀರು ► ಓರ್ವ ಮೃತ್ಯು – ಐವರು ನಾಪತ್ತೆ, ಮುಂದುವರಿದ ಕಾರ್ಯಾಚರಣೆ

(ನ್ಯೂಸ್ ಕಡಬ) newskadaba.com ಸುಳ್ಯ, ಆ.17. ಗುಡ್ಡವೊಂದು ಮೇಲಿನಿಂದ ಕೆಳಕ್ಕೆ ಜಾರುತ್ತಿರುವ ಪರಿಣಾಮ ಓರ್ವ ಮೃತಪಟ್ಟು ಐವರು ನಾಪತ್ತೆಯಾಗಿರುವ ಘಟನೆ ಸಂಪಾಜೆ -ಮಡಿಕೇರಿ ಮಧ್ಯದ ಜೋಡುಪಾಲ ಎಂಬಲ್ಲಿ ಶುಕ್ರವಾರ ನಡೆದಿದೆ. ಮೃತರನ್ನು ಜೋಡುಪಾಲ ನಿವಾಸಿ ಬಸಪ್ಪ ಎಂದು ಗುರುತಿಸಲಾಗಿದೆ. ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಹಾಗೂ ಹಮೀದ್ ಎಂಬವರ ಇಬ್ಬರು ಮಕ್ಕಳು ನಾಪತ್ತೆಯಾಗಿದ್ದು, ಪತ್ತೆ ಕಾರ್ಯಾಚರಣೆ ಮುಂದುವರಿದಿದೆ. ನೂರಕ್ಕೂ ಅಧಿಕ ಮಂದಿ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದು, ಸುಮಾರು ಅರುವತ್ತರಷ್ಟು ಮಂದಿಯನ್ನು ಹಗ್ಗದ ಸಹಾಯದಿಂದ ಕರೆತಂದು ಕಲ್ಲುಗುಂಡಿ ಶಾಲೆ […]

ಸುಳ್ಯ: ಮೇಲಿನಿಂದ ಕೆಳಕ್ಕೆ ಜಾರಿದ ಗುಡ್ಡ, ಬೃಹತ್ ಕಲ್ಲುಗಳೊಂದಿಗೆ ಹೊರಬರುತ್ತಿರುವ ನೀರು ► ಓರ್ವ ಮೃತ್ಯು – ಐವರು ನಾಪತ್ತೆ, ಮುಂದುವರಿದ ಕಾರ್ಯಾಚರಣೆ Read More »

ಕರಾವಳಿ

ಸುಳ್ಯ: ಹಬ್ಬಕ್ಕೆ ಬಟ್ಟೆ ಖರೀದಿಸುವ ವಿಚಾರದಲ್ಲಿ ಪತಿ – ಪತ್ನಿಯ ನಡುವೆ ಜಗಳ ► ಪತ್ನಿಯ ಕೊಲೆಯಲ್ಲಿ ಅಂತ್ಯ

(ನ್ಯೂಸ್ ಕಡಬ) newskadaba.com ಸುಳ್ಯ, ಆ.17. ಹಬ್ಬಕ್ಕೆ ಬಟ್ಟೆ ಖರೀದಿಸುವ ವಿಚಾರದಲ್ಲಿ ಪತಿ – ಪತ್ನಿಯ ನಡುವೆ ಜಗಳವುಂಟಾಗಿ ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಸುಳ್ಯದಲ್ಲಿ ಬುಧವಾರ ರಾತ್ರಿ ನಡೆದಿದೆ. ಸುಳ್ಯದ ಜ್ಯೋತಿ ಸರ್ಕಲ್ ನಿವಾಸಿ ಇಸ್ಮಾಯಿಲ್‌ ಎಂಬವರ ಪುತ್ರ ಫಿರೋಜ್‌ ಹಾಗೂ ಕಾರ್ಕಳದ ಅಬ್ದುಲ್ ರಶೀದ್‌ರ ಪುತ್ರಿ ಆಯಿಶಾ ನಡುವೆ ಹಬ್ಬಕ್ಕೆ ಬಟ್ಟೆ ಖರೀದಿಸುವ ವಿಚಾರದಲ್ಲಿ ಜಗಳವಾಗಿದ್ದು, ಜಗಳ ವಿಕೋಪಕ್ಕೆ ತೆರಳಿ ಗಂಡ ಫಿರೋಜ್ ಆಯಿಶಾಳನ್ನು ಶಾಲಿನಿಂದ ಗಂಟಲಿಗೆ ಬಿಗಿದಿದ್ದು, ಆ ವೇಳೆ ಆಯಿಶಾ ಮೃತಪಟ್ಟಿದ್ದಾರೆ.

ಸುಳ್ಯ: ಹಬ್ಬಕ್ಕೆ ಬಟ್ಟೆ ಖರೀದಿಸುವ ವಿಚಾರದಲ್ಲಿ ಪತಿ – ಪತ್ನಿಯ ನಡುವೆ ಜಗಳ ► ಪತ್ನಿಯ ಕೊಲೆಯಲ್ಲಿ ಅಂತ್ಯ Read More »

ಕರಾವಳಿ

ಶಿರಾಡಿ, ಸಂಪಾಜೆ ಘಾಟ್ ರಸ್ತೆ ತಡೆಯಿಂದಾಗಿ ಹೆಚ್ಚಿದ ವಾಹನ ದಟ್ಟಣೆ ► ಕರಾವಳಿ ಸಂಪರ್ಕದ ಏಕೈಕ ಸಂಪರ್ಕ ರಸ್ತೆ ಚಾರ್ಮಾಡಿ ಘಾಟ್ ಕುಸಿತ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ.17. ತೀವ್ರ ಮಳೆಯಿಂದಾಗಿ ತತ್ತರಿಸಿರುವ ಕರಾವಳಿಗೆ ರಾಜ್ಯ ರಾಜಧಾನಿಗೆ ಸಂಪರ್ಕಕ್ಕಾಗಿ ಇದ್ದ ಶಿರಾಡಿ ಹಾಗೂ ಚಾರ್ಮಾಡಿ ಘಾಟ್ ರಸ್ತೆಯ ಅಲ್ಲಲ್ಲಿ ಕುಸಿತಗೊಂಡು ಸಂಪರ್ಕ ಕಡಿತಗೊಂಡಿರುವುದರ ನಡುವೆ ಇದೀಗ ಸಂಪರ್ಕಕ್ಕಾಗಿ ಇರುವ ಏಕೈಕ ರಸ್ತೆಯು ಕುಸಿತದ ಭೀತಿಯಲ್ಲಿದೆ. ಚಾರ್ಮಾಡಿ ಘಾಟ್ ನ ಐದನೇ ತಿರುವಿನಲ್ಲಿ ಗುಡ್ಡ ಕುಸಿಯುವ ಸನ್ನಿವೇಶ ನಿರ್ಮಾಣವಾಗಿದ್ದು, ಇಲ್ಲಿ ಸಂಪೂರ್ಣ ಕುಸಿತವುಂಟಾದರೆ ಚಾರ್ಮಾಡಿ ಘಾಟ್ ರಸ್ತೆಯೂ ಹಲವಾರು ದಿನಗಳ ಕಾಲ ಬಂದ್ ಆಗುವ ಭೀತಿ ಎದುರಾಗಿದೆ. ಶಿರಾಡಿ ಮತ್ತು ಸಂಪಾಜೆ

ಶಿರಾಡಿ, ಸಂಪಾಜೆ ಘಾಟ್ ರಸ್ತೆ ತಡೆಯಿಂದಾಗಿ ಹೆಚ್ಚಿದ ವಾಹನ ದಟ್ಟಣೆ ► ಕರಾವಳಿ ಸಂಪರ್ಕದ ಏಕೈಕ ಸಂಪರ್ಕ ರಸ್ತೆ ಚಾರ್ಮಾಡಿ ಘಾಟ್ ಕುಸಿತ Read More »

ಕರ್ನಾಟಕ

ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿರುವ ಕರಾವಳಿಯ ನದಿಗಳು ► ನಾಳೆ ಕಡಬ, ಪುತ್ತೂರು, ಸುಳ್ಯ, ಬೆಳ್ತಂಗಡಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

(ನ್ಯೂಸ್ ಕಡಬ) newskadaba.com ಪುತ್ತೂರು, ಆ.16. ಕರಾವಳಿಯಲ್ಲಿ ಗುರುವಾರವೂ ಮಳೆ ಮುಂದುವರಿದಿರುವುದರಿಂದ ಪುತ್ತೂರು ಸುಳ್ಯ, ಬೆಳ್ತಂಗಡಿ ಹಾಗೂ ಕಡಬ ತಾಲೂಕಿನ ಶಾಲೆಗಳಿಗೆ ಆಗಸ್ಟ್ 17 ಶುಕ್ರವಾರದಂದು ರಜೆ ಘೋಷಿಸಲಾಗಿದೆ.   ನದಿಗಳಲ್ಲಿ ನೆರೆ ನೀರಿನ ಮಟ್ಟ ವಿಪರೀತ ಏರಿಕೆಯಾಗಿದ್ದು, ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗುರುವಾರದಂದು ರಜೆ ಘೋಷಿಸಿ ಪುತ್ತೂರು ಸಹಾಯಕ ಆಯುಕ್ತರು ಆದೇಶಿಸಿದ್ದಾರೆ.

ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿರುವ ಕರಾವಳಿಯ ನದಿಗಳು ► ನಾಳೆ ಕಡಬ, ಪುತ್ತೂರು, ಸುಳ್ಯ, ಬೆಳ್ತಂಗಡಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

ಕರಾವಳಿ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವಿಧಿವಶ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಆ.16. ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಇಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರದಂದು ನಿಧನರಾದರು. 1924ರ ಡಿಸೆಂಬರ್ 25 ರಂದು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಜನಿಸಿದ್ದ ವಾಜಪೇಯಿ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಜೂನ್ 11ರಂದು ಅವರನ್ನು ಚಿಕಿತ್ಸೆಗಾಗಿ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರದಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವಿಧಿವಶ Read More »

ರಾಷ್ಟ್ರೀಯ ನ್ಯೂಸ್

ಭಾರೀ ಮಳೆಯ ಹಿನ್ನೆಲೆ ► ಕಡಬ, ಉಪ್ಪಿನಂಗಡಿ ಪರಿಸರದ ಶಾಲೆಗಳಿಗೆ ರಜೆ

(ನ್ಯೂಸ್ ಕಡಬ) newskadaba.com ಪುತ್ತೂರು, ಆ.16. ಕರಾವಳಿಯಲ್ಲಿ ಗುರುವಾರವೂ ಮಳೆ ಮುಂದುವರಿದಿರುವುದರಿಂದ ನದಿ ಹಾಗೂ ಹೊಳೆಯ ಹತ್ತಿರ ಇರುವ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಜವಾಬ್ದಾರಿಯನ್ನು ಸ್ಥಳೀಯ ತಹಶೀಲ್ದಾರರಿಗೆ ವಹಿಸಲಾಗಿದೆ. ಪುತ್ತೂರು ತಾಲೂಕು ವ್ಯಾಪ್ತಿಯ ಉಪ್ಪಿನಂಗಡಿ, ಗುಂಡ್ಯ, ಕಡಬ ಹಾಗೂ ಕಾಣಿಯೂರು ಪರಿಸರದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಭಾರೀ ಮಳೆಯ ಹಿನ್ನೆಲೆ ► ಕಡಬ, ಉಪ್ಪಿನಂಗಡಿ ಪರಿಸರದ ಶಾಲೆಗಳಿಗೆ ರಜೆ Read More »

ಕರಾವಳಿ

ಶಿರಾಡಿ ಘಾಟ್: ಮಣ್ಣು ಕುಸಿದು 75 ಅಡಿ ಆಳಕ್ಕುರುಳಿದ ಗ್ಯಾಸ್ ಟ್ಯಾಂಕರ್ ► ಇಬ್ಬರು ಮೃತ್ಯು, ನಾಲ್ಕು ದಿನಗಳ ಕಾಲ ಸಂಚಾರ ನಿಷೇಧ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ.15. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಶಿರಾಡಿ ಘಾಟಿಯ ಮಾರನಹಳ್ಳಿ ಸಮೀಪದ ದೊಡ್ಡತಪ್ಲೆ ಎಂಬಲ್ಲಿ ಗುಡ್ಡ ಕುಸಿತಕ್ಕೊಳಗಾಗಿದ್ದು, ಆ ಸಮಯದಲ್ಲಿ ಸ್ಥಳದಿಂದಾಗಿ ಸಂಚರಿಸುತ್ತಿದ್ದ ಗ್ಯಾಸ್ ಟ್ಯಾಂಕರೊಂದು ರಸ್ತೆಯಿಂದ ಕೆಳಕ್ಕೆ ದೂಡಲ್ಪಟ್ಟು ಮಣ್ಣಿನ ಕುಸಿತದ ನಡುವೆ ಬಿದ್ದ ಪರಿಣಾಮ ಚಾಲಕ ಹಾಗೂ ನಿರ್ವಾಹಕರಿಬ್ಬರು ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ. ಮೃತರನ್ನು ಟ್ಯಾಂಕರ್ ಚಾಲಕ ರಾಯಚೂರು ನಿವಾಸಿ ಬಸವರಾಜ್ ಹಾಗೂ ನಿರ್ವಾಹಕ ಕೆ.ಆರ್.ಪೇಟೆಯ ಕಿಕ್ಕೇರಿ ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದೆ.

ಶಿರಾಡಿ ಘಾಟ್: ಮಣ್ಣು ಕುಸಿದು 75 ಅಡಿ ಆಳಕ್ಕುರುಳಿದ ಗ್ಯಾಸ್ ಟ್ಯಾಂಕರ್ ► ಇಬ್ಬರು ಮೃತ್ಯು, ನಾಲ್ಕು ದಿನಗಳ ಕಾಲ ಸಂಚಾರ ನಿಷೇಧ Read More »

ಕರಾವಳಿ

ಭಾರೀ ಮಳೆಗೆ ಘಾಟ್ ರಸ್ತೆಗಳು ಕುಸಿಯುತ್ತಿರುವ ಹಿನ್ನೆಲೆ ► ಶಿರಾಡಿ, ಸಂಪಾಜೆ ಘಾಟ್ ರಸ್ತೆಗಳಲ್ಲಿ ಸಂಚಾರ ನಿಷೇಧ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.15. ಭಾರೀ ಮಳೆಯಿಂದಾಗಿ ತತ್ತರಿಸಿರುವ ಶಿರಾಡಿ ಘಾಟ್ ಹಾಗೂ ಸಂಪಾಜೆ ಘಾಟ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ಘಾಟ್ ಪ್ರದೇಶದ ಅಲ್ಲಲ್ಲಿ ಗುಡ್ಡು ಕುಸಿತದಂತಹ ಅಪಾಯಕಾರಿ ಸನ್ನಿವೇಶಗಳು ಉಂಟಾಗುತ್ತಿರುವ ಮತ್ತು ಹಲವು ವಾಹನಗಳ ಪ್ರಯಾಣಿಕರು ರಸ್ತೆ ತಡೆಯಿಂದಾಗಿ ಪರದಾಡಿದ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ವಾಹನಗಳನ್ನು ನಿಷೇಧಿಸಿ, ಮುಂದಿನ ಆದೇಶದ ವರೆಗೆ ವಾಹನಗಳು ಚಾರ್ಮಾಡಿ ಘಾಟಿಯಲ್ಲಿ ಮಾತ್ರ ಸಂಚರಿಸಬಹುದು ಎಂದು

ಭಾರೀ ಮಳೆಗೆ ಘಾಟ್ ರಸ್ತೆಗಳು ಕುಸಿಯುತ್ತಿರುವ ಹಿನ್ನೆಲೆ ► ಶಿರಾಡಿ, ಸಂಪಾಜೆ ಘಾಟ್ ರಸ್ತೆಗಳಲ್ಲಿ ಸಂಚಾರ ನಿಷೇಧ Read More »

ಕರ್ನಾಟಕ

ಸ್ವಾತಂತ್ರ್ಯೋತ್ಸವ ವಿಶೇಷ ► ಇಂದಿನಿಂದ ಕಡಬದ ದುರ್ಗಾಂಬಾ ಮೊಬೈಲ್ ಸ್ಟೋರ್ ನಲ್ಲಿ ‘ಫ್ರೀಡಂ ಸೇಲ್’

(ನ್ಯೂಸ್ ಕಡಬ) newskadaba.com ಕಡಬ, ಆ.15. ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಡಬದ ಶ್ರೀ ದುರ್ಗಾಂಬಾ ಮೊಬೈಲ್ ಸ್ಟೋರ್ ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಫ್ರೀಡಂ ಸೇಲ್ ಆರಂಭಗೊಂಡಿದೆ. ಆಗಸ್ಟ್ 15 ರಿಂದ 17 ರವರೆಗೆ ನಡೆಯಲಿರುವ ಈ ಫ್ರೀಡಂ ಸೇಲ್ ನಲ್ಲಿ ಅತೀ ಕಡಿಮೆ ದರದಲ್ಲಿ ವಿವಿಧ ಕಂಪೆನಿಗಳ ಮೊಬೈಲ್ ಹಾಗೂ ಬಿಡಿಭಾಗಗಳು ಗ್ರಾಹಕರಿಗೆ ದೊರೆಯಲಿದ್ದು, ಲಕ್ಕೀ ಕೂಪನ್ ಸಿಗಲಿದೆ. ಪ್ರತಿಯೊಂದು ಸ್ಮಾರ್ಟ್ ಫೋನ್ ಖರೀದಿಯೊಂದಿಗೆ 8 ಜಿಬಿ ಮೆಮೊರಿ ಕಾರ್ಡ್ ಗಳು ಉಚಿತವಾಗಿ ಸಿಗಲಿದ್ದು, ಗ್ರಾಹಕರು

ಸ್ವಾತಂತ್ರ್ಯೋತ್ಸವ ವಿಶೇಷ ► ಇಂದಿನಿಂದ ಕಡಬದ ದುರ್ಗಾಂಬಾ ಮೊಬೈಲ್ ಸ್ಟೋರ್ ನಲ್ಲಿ ‘ಫ್ರೀಡಂ ಸೇಲ್’ Read More »

ಕರಾವಳಿ

ಪೆರಿಯಶಾಂತಿ: ಭಾರೀ ಗಾಳಿಗೆ ಕಾರಿನ ಮೇಲೆ ಬಿದ್ದ ಬೃಹತ್ ಮರ ► ಮುಂದೇನಾಯಿತು ಗೊತ್ತೇ..?

(ನ್ಯೂಸ್ ಕಡಬ) newskadaba.com ಕಡಬ, ಆ.13. ಕರಾವಳಿ ಪ್ರದೇಶದಲ್ಲಿ ಮಳೆಯ ಅಬ್ಬರ ತೀವ್ರಗೊಂಡಿರುವುದರ ನಡುವೆಯೇ ಟೂರಿಸ್ಟ್ ಕಾರೊಂದರ ಮೇಲೆ ಮರ ಬಿದ್ದು ಐವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಪೆರಿಯಶಾಂತಿ ಸಮೀಪ ಸೋಮವಾರ ಸಂಜೆ ನಡೆದಿದೆ. ಬೆಂಗಳೂರು ಮೂಲದ ಯಾತ್ರಾರ್ಥಿಗಳಿದ್ದ ಟೊಯೋಟಾ ಇಟಿಯೋಸ್ ಕಾರು ಸುಬ್ರಹ್ಮಣ್ಯದಿಂದ ಧರ್ಮಸ್ಥಳ ಕಡೆಗೆ ತೆರಳುತ್ತಿದ್ದ ಸಮಯ ಪೆರಿಯಶಾಂತಿ ತಲುಪಿದಾಗ ಬೃಹತ್ ಗಾತ್ರದ ಮರವೊಂದು ಕಾರಿನ ಮೇಲೆ ಬಿದ್ದಿದೆ. ಘಟನೆಯಲ್ಲಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು,

ಪೆರಿಯಶಾಂತಿ: ಭಾರೀ ಗಾಳಿಗೆ ಕಾರಿನ ಮೇಲೆ ಬಿದ್ದ ಬೃಹತ್ ಮರ ► ಮುಂದೇನಾಯಿತು ಗೊತ್ತೇ..? Read More »

ಕರಾವಳಿ
Scroll to Top