►► ? ಕವರ್ ಸ್ಟೋರಿ ? ಮಂಗಳೂರು – ಸುಬ್ರಹ್ಮಣ್ಯ ರೋಡ್ – ಬೆಂಗಳೂರು ರೈಲು ಸಂಚಾರಕ್ಕೆ ಎದುರಾದ ವಿಘ್ನ ► ಕನಿಷ್ಠ ಆರು ತಿಂಗಳುಗಳ ಕಾಲ ಸ್ಥಗಿತಗೊಳ್ಳಲಿದೆ ಈ ರೈಲು ► ರಾಜ್ಯ ರಾಜಧಾನಿಯ ಸಂಪರ್ಕಕ್ಕೆ ರಸ್ತೆ ಮಾರ್ಗವೇ ಗತಿ
(ನ್ಯೂಸ್ ಕಡಬ) newskadaba.com ಕಡಬ, ಆ.25. ಪ್ರಕೃತಿ ಸೌಂದರ್ಯದ ಕಿರೀಟವಾಗಿರುವ ಸುಬ್ರಹ್ಮಣ್ಯ ರೋಡ್ ಹಾಗೂ ಎಡಕುಮೇರಿ ನಡುವೆ ಅಲ್ಲಲ್ಲಿ ಬೃಹತ್ ಗಾತ್ರದ ಗುಡ್ಡಗಳು ನಿರಂತರವಾಗಿ ಜರಿದು ಬೀಳುತ್ತಿರುವುದರಿಂದ ಮಂಗಳೂರು – ಬೆಂಗಳೂರು ರೈಲು ಸಂಚಾರಕ್ಕೆ ವಿಘ್ನವುಂಟಾಗಿದ್ದು, ಕನಿಷ್ಠ ಆರು ತಿಂಗಳುಗಳ ಕಾಲ ರೈಲು ಸಂಚಾರ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಸುಬ್ರಹ್ಮಣ್ಯ ರೋಡ್ ರೈಲ್ವೇ ನಿಲ್ದಾಣದಿಂದ ಸುಮಾರು 11 ಕಿ.ಮೀ. ದೂರದ ಸಿರಿಬಾಗಿಲು ಸಮೀಪ ಬೃಹತ್ ಗಾತ್ರದ ಗುಡ್ಡವೊಂದು ಕುಸಿದು ಮಾರ್ಗದ ಮಧ್ಯೆ ಬಿದ್ದ ಪರಿಣಾಮ ಹಳಿಗಳು ಹಾನಿಗೀಡಾಗಿದ್ದು, […]










