ಕಟೀಲು‌ ದೇವಳದಲ್ಲಿ ಪಂಪ್ ಸೆಟ್ ಕಳವು ಪ್ರಕರಣ ► ಕಡಬದ ಇಬ್ಬರ ಸಹಿತ ಮೂವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.28. ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಪಂಪ್‌ಸೆಂಟ್‌ಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬದ ಇಬ್ಬರು ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು ಬಜ್ಪೆ ಪೊಲೀಸರು ಸೋಮವಾರದಂದು ಬಂಧಿಸಿದ್ದಾರೆ. ಬಂಧಿಂತರನ್ನು ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ದೊಡ್ಡಕೊಪ್ಪ ನಿವಾಸಿ ಬಾಲಚಂದ್ರ ಕುಂಬಾರ (22), ಕುಟ್ರುಪಾಡಿ ನಿವಾಸಿ ಅಶ್ವಿನ್ ಯು. ಗೌಡ (20) ಹಾಗೂ ಪುತ್ತೂರು ತಾಲೂಕಿನ ಬಜತ್ತೂರು ನಿವಾಸಿ ನಿತಿನ್ ಗೌಡ (21) ಎಂದು ಗುರುತಿಸಲಾಗಿದೆ. ಬಜ್ಪೆ ಠಾಣೆ ವ್ಯಾಪ್ತಿಯ ಕೊಂಡೆಮೂಲ ಗ್ರಾಮದ […]

ಕಟೀಲು‌ ದೇವಳದಲ್ಲಿ ಪಂಪ್ ಸೆಟ್ ಕಳವು ಪ್ರಕರಣ ► ಕಡಬದ ಇಬ್ಬರ ಸಹಿತ ಮೂವರು ಆರೋಪಿಗಳ ಬಂಧನ Read More »

ಕರಾವಳಿ

ಕಡಬ ತಾಲೂಕು ಉದ್ಘಾಟನಾ ಪ್ರಕ್ರಿಯೆಯ ಹಿನ್ನೆಲೆ ► ಭೂಮಿ ಕೇಂದ್ರದಲ್ಲಿ ಸೆ.03 ರ ವರೆಗೆ ಪಹಣಿ ಪತ್ರ ನಿಲುಗಡೆ

(ನ್ಯೂಸ್ ಕಡಬ) newskadaba.com ಕಡಬ, ಆ.28. ನೂತನ ಕಡಬ ತಾಲೂಕು ಉದ್ಘಾಟನೆಗೊಳ್ಳಲಿರುವ ಕಾರಣ ಸುಳ್ಯ ಹಾಗೂ ಪುತ್ತೂರಿನ ಕೆಲವು ಗ್ರಾಮಗಳನ್ನು ಕಡಬ ಭೂಮಿ ಕೇಂದ್ರಕ್ಕೆ ಸೇರ್ಪಡೆ ಗೊಳಿಸಲಿರುವುದರಿಂದ ಸಾಫ್ಟ್‌ವೇರ್ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದ್ದು ಆಗಸ್ಟ್ 28 ರಿಂದ ಸೆಪ್ಟೆಂಬರ್ 03 ರ ವರೆಗೆ ಕಡಬ ಭೂಮಿ ಕೇಂದ್ರದಲ್ಲಿ ಪಹಣಿ ಪತ್ರ ದೊರೆಯುವುದಿಲ್ಲ. ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕೆಂದು ಕಡಬ ತಾಲೂಕು ತಹಶೀಲ್ದಾರರಾದ ಜಾನ್ ಪ್ರಕಾಶ್ ರೊಡ್ರಿಗಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಡಬ ತಾಲೂಕು ಉದ್ಘಾಟನಾ ಪ್ರಕ್ರಿಯೆಯ ಹಿನ್ನೆಲೆ ► ಭೂಮಿ ಕೇಂದ್ರದಲ್ಲಿ ಸೆ.03 ರ ವರೆಗೆ ಪಹಣಿ ಪತ್ರ ನಿಲುಗಡೆ Read More »

ಕರ್ನಾಟಕ

►► ? ಕವರ್ ಸ್ಟೋರಿ ? ನೆರೆ ನೀರಿಗೆ ಸಿಲುಕಿ ನಾಶವಾದ ಭತ್ತ ಕೃಷಿ – ಕಂಗಾಲಾದ ಕೃಷಿಕರು ► ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’

(ನ್ಯೂಸ್ ಕಡಬ) newskadaba.com ಆಲಂಕಾರು, ಆ.28. ಈ ವರ್ಷದ ಆರಂಭದಿಂದ ರಾಜ್ಯದ ವಿವಿಧೆಡೆ ಸುರಿದ ಭಾರೀ ಮಳೆಗೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಜೀವ ಹಾನಿಯಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದರೆ, ಭಾರೀ ಪ್ರಮಾಣದ ಕೃಷಿ ನಾಶವಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಮುಖ್ಯವಾಗಿ ನೆರೆ ನೀರಿಗೆ ಸಿಲುಕಿ ಭತ್ತದ ಕೃಷಿ ನಾಶವಾಗಿದ್ದು, ಕಡಬ ತಾಲೂಕಿನಲ್ಲಿ ಒಟ್ಟು 20 ಎಕ್ರೆ ಭತ್ತದ ಕೃಷಿ ಸಂಪೂರ್ಣ ಕೊಳೆತು ನಾಶವಾಗಿದೆ. ಇಲ್ಲಿನ ಆಲಂಕಾರು ಗ್ರಾಮ ಕಡಬ ತಾಲೂಕಿನಲ್ಲಿಯೇ ಅತೀ ಹೆಚ್ಚು

►► ? ಕವರ್ ಸ್ಟೋರಿ ? ನೆರೆ ನೀರಿಗೆ ಸಿಲುಕಿ ನಾಶವಾದ ಭತ್ತ ಕೃಷಿ – ಕಂಗಾಲಾದ ಕೃಷಿಕರು ► ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ Read More »

ಕರಾವಳಿ

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿಗೆ ನೋಟಿಸ್ ನೀಡಿದ ಸಿಸಿಬಿ ಪೊಲೀಸರು ► ಯಾಕೆಂದು ಗೊತ್ತೇ…?

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.27. ಬಿಗ್‌ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಮಾದಕ ವಸ್ತು ಗಾಂಜಾ ಸೇವನೆ ಕುರಿತ ಪ್ರಚೋದನೆ ನೀಡುವ ಹಾಡು, ಸಾಹಿತ್ಯ ರಚನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. 2015 ರ ಜುಲೈನಲ್ಲಿ ‘ಅಂತ್ಯ’ ಹೆಸರಿನ ವಿಡಿಯೋವೊಂದನ್ನು ಟ್ಯೂಬ್‌ನಲ್ಲಿ ಹಾಕಲಾಗಿದ್ದು, ಇದುವರೆಗೂ ಈ ಹಾಡನ್ನು 90 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಈ ಹಾಡಿನಿಂದ ಪ್ರಚೋದನೆಗೆ ಒಳಗಾಗಿ ಯುವ ಸಮೂಹ ಮಾದಕ ವಸ್ತುವಾದ ಗಾಂಜಾ ಸೇವನೆಗೆ ಒಳಗಾಗುವ ಸಾಧ್ಯತೆ

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿಗೆ ನೋಟಿಸ್ ನೀಡಿದ ಸಿಸಿಬಿ ಪೊಲೀಸರು ► ಯಾಕೆಂದು ಗೊತ್ತೇ…? Read More »

ಕರ್ನಾಟಕ

ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಬಾಲಕ – ಬಾಲಕಿಯರ ಕಬಡ್ಡಿ ಪಂದ್ಯಾಟ ► ಕಡಬದ ಸೈಂಟ್ ಆ್ಯನ್ಸ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಆ.27. ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಕಡಬದ ಸೈಂಟ್ ಆ್ಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಭಕ್ತಕೋಡಿಯಲ್ಲಿ ನಡೆದ ಪಂದ್ಯಾಟದಲ್ಲಿ ಕಡಬದ ಸೈಂಟ್ ಆ್ಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಮಹಮ್ಮದ್ ಶಾಕಿರ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಬಾಲಕ – ಬಾಲಕಿಯರ ಕಬಡ್ಡಿ ಪಂದ್ಯಾಟ ► ಕಡಬದ ಸೈಂಟ್ ಆ್ಯನ್ಸ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಜಿಲ್ಲಾ ಮಟ್ಟಕ್ಕೆ ಆಯ್ಕೆ Read More »

ಕ್ರೀಡಾ ನ್ಯೂಸ್

►► Big Shocking News ಕೊಚ್ಚಿಹೋದ ಕೊಡಗಿನಲ್ಲಿ ಭೂಮಿಯಡಿಯಿಂದ ನೀರು ಹರಿಯುವ ಸದ್ದು..!! ► ಭಯಾನಕ ಘಟನೆ ಮಾಸುವ ಮುನ್ನವೇ ಪರಿಸರದ ಜನತೆ ಸುಸ್ತೋ ಸುಸ್ತು..!!

(ನ್ಯೂಸ್ ಕಡಬ) newskadaba.com ಸುಳ್ಯ, ಆ.27. ತೀವ್ರ ಮಳೆಯಿಂದಾಗಿ ಕೊಡಗು ಜಿಲ್ಲೆಯ ವಿವಿಧೆಡೆ ಕೊಚ್ಚಿಹೋಗಿ ಅಪಾರ ನಾಶ ನಷ್ಟ ಸಂಭವಿಸಿದ ಘಟನೆ ಮಾಸುವ ಮುನ್ನವೇ ಇದೀಗ ಭೂಮಿಯ ಒಳಗಿಂದ ನೀರು ಹರಿಯುವ ಶಬ್ದ ಕೇಳಿ ಬಂದಿದ್ದು ಮಡಿಕೇರಿ ತಾಲೂಕಿನ ಜನತೆ ಬೆಚ್ಚಿ ಬಿದ್ದಿದ್ದಾರೆ. ತಾಲೂಕಿನ ಕರಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಚೆತ್ತುಕಾಯ ಸಮೀಪದ ಕುಂಡತ್ತಿಕಾನ ನಿವಾಸಿ ಕೇಶವನಾಯ್ಕ್ ಎಂಬವರ ಮನೆಯ ಹಿಂಭಾಗದಲ್ಲಿ ಭೂಮಿಯ ಒಳಗಿನಿಂದ ನೀರು ಹರಿಯುವ ಶಬ್ದವು ಭಾನುವಾರ ರಾತ್ರಿಯಿಂದ ಕೇಳಿ ಬರುತ್ತಿದೆ. ಇದರಿಂದಾಗಿ ಸ್ಥಳೀಯರು

►► Big Shocking News ಕೊಚ್ಚಿಹೋದ ಕೊಡಗಿನಲ್ಲಿ ಭೂಮಿಯಡಿಯಿಂದ ನೀರು ಹರಿಯುವ ಸದ್ದು..!! ► ಭಯಾನಕ ಘಟನೆ ಮಾಸುವ ಮುನ್ನವೇ ಪರಿಸರದ ಜನತೆ ಸುಸ್ತೋ ಸುಸ್ತು..!! Read More »

ಕರ್ನಾಟಕ

ಸುಳ್ಯ: ಟಿಪ್ಪರ್ – ಮಿನಿಲಾರಿ ನಡುವೆ ಪರಸ್ಪರ ಢಿಕ್ಕಿ ► ಇಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಸುಳ್ಯ, ಆ.27. ಸಾಫ್ಟ್ ಡ್ರಿಂಕ್ ಸಾಗಾಟದ ಮಿನಿಲಾರಿ ಹಾಗೂ ಟಿಪ್ಪರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಪೈಚಾರು ಸಮೀಪ ಸೋಮವಾರದಂದು ನಡೆದಿದೆ. ಪುತ್ತೂರಿನ ಶಿವಾನಿ ಸಾಫ್ಟ್ ಡ್ರಿಂಕ್ ಸಂಸ್ಥೆಯ ಮಿನಿಲಾರಿ ಮತ್ತು ವಿರುದ್ಧ ದಿಕ್ಕಿನಿಂದ ಬಂದ ಟಿಪ್ಪರ್‌ ನಡುವೆ ಪೈಚಾರು ಸಮೀಪದ ಬೈತಡ್ಕ ಗ್ಯಾರೇಜ್ ಬಳಿ ಪರಸ್ಪರ ಢಿಕ್ಕಿಯುಂಟಾಗಿದ್ದು, ಘಟನೆಯಲ್ಲಿ ಸಾಫ್ಟ್ ಡ್ರಿಂಕ್ ಸಂಸ್ಥೆಯ ಮಿನಿ ಲಾರಿಯಲ್ಲಿದ್ದ ಇಬ್ಬರು ಗಂಭೀರ

ಸುಳ್ಯ: ಟಿಪ್ಪರ್ – ಮಿನಿಲಾರಿ ನಡುವೆ ಪರಸ್ಪರ ಢಿಕ್ಕಿ ► ಇಬ್ಬರು ಗಂಭೀರ Read More »

ಕರಾವಳಿ

ಕೆದಂಬಾಡಿ: ಅಕ್ರಮ ಕೋಳಿ ಅಂಕಕ್ಕೆ ದಾಳಿ ► ಏಳು ಜನರ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಆ.27. ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿರುವ ಪೊಲೀಸರು ಏಳು ಮಂದಿಯನ್ನು ಬಂಧಿಸಿ ಕೋಳಿಗಳನ್ನು ವಶಪಡಿಸಿಕೊಂಡ ಘಟನೆ ಭಾನುವಾರದಂದು ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೆದಂಬಾಡಿ ಗ್ರಾಮದ ಮಿತ್ರಂಪಾಡಿ ಎಂಬಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಆಡಿಸುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ದಾಳಿ ನಡೆಸಿ ಆರೋಪಿಗಳಾದ ಕೊರಗಪ್ಪ, ಪುನೀತ್, ಮಾಧವ, ಶೇಖರ , ರವಿ, ದಿನೇಶ್, ಜಯರಾಮ, ಸುಂದರರವರನ್ನು ಬಂಧಿಸಿದ್ದು, ಉಮೇಶ್ ಎಂಬಾತನು ಪರಾರಿಯಾಗಿದ್ದಾನೆ‌. ವಿವಿಧ

ಕೆದಂಬಾಡಿ: ಅಕ್ರಮ ಕೋಳಿ ಅಂಕಕ್ಕೆ ದಾಳಿ ► ಏಳು ಜನರ ಬಂಧನ Read More »

ಕರಾವಳಿ

ಜೇಸಿಐ ಭಾರತದ ವಲಯ 15ರ ವ್ಯವಹಾರ ಸಮ್ಮೇಳನ ► ಕಡಬದ ಜಯರಾಮ ಆರ್ತಿಲಗೆ ಜೇಸಿ ಸಾಧನಶ್ರೀ ಪುರಸ್ಕಾರ

(ನ್ಯೂಸ್ ಕಡಬ) newskadaba.com ಕಡಬ, ಆ.27. ಜೇಸಿಐ ಪುತ್ತೂರು ಇದರ ಆತಿಥ್ಯದಲ್ಲಿ ಪರ್ಪುಂಜದ ಶಿವಕೃಪಾ ಅಡಿಟೋರಿಯಂನಲ್ಲಿ ಶನಿವಾರ ಜರಗಿದ ಜೇಸಿಐ ಭಾರತದ ವಲಯ 15ರ ವ್ಯವಹಾರ ಸಮ್ಮೇಳನದಲ್ಲಿ ಜೇಸಿಐ ಕಡಬ ಕದಂಬ ಘಟಕದ ಪೂರ್ವಾಧ್ಯಕ್ಷ ಜಯರಾಮ ಆರ್ತಿಲ ಅವರನ್ನು ಜೇಸಿ ಸಾಧನಶ್ರೀ-2018 ಪುರಸ್ಕಾರ ನೀಡಿ ಗೌರವಿಸಲಾಯಿತು. ವ್ಯವಹಾರ ಕ್ಷೇತ್ರದಲ್ಲಿನ ಧನಾತ್ಮಕ ಸಾಧನೆ ಹಾಗೂ ಜೇಸಿ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತನ್ನ ಅಧ್ಯಕ್ಷಾವಧಿಯಲ್ಲಿ ಶಾಲೆ, ಅಂಗನವಾಡಿಗಳಿಗೆ ವಿವಿಧ ರೀತಿಯ ಕೊಡುಗೆ, ರಕ್ತ ವರ್ಗೀಕರಣ ಸಪ್ತಾಹದ ಮೂಲಕ ಕಡಬ ಪರಿಸರದ ವಿವಿಧ

ಜೇಸಿಐ ಭಾರತದ ವಲಯ 15ರ ವ್ಯವಹಾರ ಸಮ್ಮೇಳನ ► ಕಡಬದ ಜಯರಾಮ ಆರ್ತಿಲಗೆ ಜೇಸಿ ಸಾಧನಶ್ರೀ ಪುರಸ್ಕಾರ Read More »

ಕರಾವಳಿ

ರಾಮಕುಂಜ: ನೇಣುಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಆ.26. ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಶೆ ಮಾಡಿಕೊಂಡ ಘಟನೆ ಠಾಣಾ ವ್ಶಾಪ್ತಿಯ ಸಂಪ್ಮಾಡಿ ಎಂಬಲ್ಲಿ ಭಾನುವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ರಾಮಕುಂಜ ಗ್ರಾಮದ ಸಂಪ್ಮಾಡಿ ನಿವಾಸಿ ರುಕ್ಮಯ್ಶ ಗೌಡ (63) ಎಂದು ಗುರುತಿಸಲಾಗಿದೆ. ಕಿಡ್ನಿ ಮತ್ತು ಪೈಲ್ಸ್ ಖಾಯಿಲೆಯಿಂದ ಬಳಲುತ್ತಿದ್ದ ಇವರು ಜೀವನದಲ್ಲಿ ಜಿಗುಪ್ಸೆಗೊಂಡು ಭಾನುವಾರದಂದು ಮನೆಯ ಸಮೀಪದ ಗೇರುಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರ ಪುತ್ರ ರಮೇಶ್ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ

ರಾಮಕುಂಜ: ನೇಣುಬಿಗಿದು ಆತ್ಮಹತ್ಯೆ Read More »

ಕರಾವಳಿ
Scroll to Top