ಸುಬ್ರಹ್ಮಣ್ಯ: ಎಂಟನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ► ಗರ್ಭಿಣಿಯಾದ ಬಾಲಕಿ – ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.04. ಎಂಟನೇ ತರಗತಿಯ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪರಿಣಾಮ ಬಾಲಕಿ ಗರ್ಭಿಣಿಯಾದ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಸುಮಾರು ಐದು ತಿಂಗಳ ಹಿಂದೆ ಸುಬ್ರಹ್ಮಣ್ಯ ನಿವಾಸಿ ಯತೀಶ(28) ಎಂಬಾತ ತನ್ನ ಪರಿಚಯದ ಬಾಲಕಿಯು ಮನೆಯಲ್ಲಿ ಒಬ್ಬಳೇ ಇದ್ದಾಗ ಮನೆಗೆ ಬಂದು ಪ್ರೀತಿಸುವುದಾಗಿ ಹೇಳಿ ನಂಬಿಸಿದ್ದಲ್ಲದೆ ದೈಹಿಕ ಸಂಪರ್ಕ ಬೆಳೆಸಿದ ಪರಿಣಾಮ ಬಾಲಕಿ ಗರ್ಭವತಿಯಾಗಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಬಾಲಕಿಯ ತಾಯಿ ಮಂಗಳವಾರದಂದು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿ […]

ಸುಬ್ರಹ್ಮಣ್ಯ: ಎಂಟನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ► ಗರ್ಭಿಣಿಯಾದ ಬಾಲಕಿ – ಆರೋಪಿಯ ಬಂಧನ Read More »

ಕರಾವಳಿ

ಬಲ್ಯ: ಮದುವೆಯಾಗದ ಬಗ್ಗೆ ಮನನೊಂದ ವ್ಯಕ್ತಿ ► ನೇಣುಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಸೆ.04. ಮದುವೆಯಾಗದೆ ಮನನೊಂದ ವ್ಯಕ್ತಿಯೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಠಾಣಾ ವ್ಯಾಪ್ತಿಯ ಬಲ್ಯದಲ್ಲಿ ಮಂಗಳವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಬಲ್ಯದ ಹೊಸ್ಮಠ ನಿವಾಸಿ ಅಣ್ಣು ಗೌಡ ಎಂಬವರ ಪುತ್ರ ಜಯಾನಂದ ಗೌಡ(43) ಎಂದು ಗುರುತಿಸಲಾಗಿದೆ. ವಿವಾಹವಾಗದೆ ಮನನೊಂದು ವಿಪರೀತ ಮದ್ಯ ಸೇವನೆ ಮಾಡಿದ ಈತ ತನ್ನ ತಾಯಿ ಹಾಗೂ ತಂಗಿಯನ್ನು ಮನೆಯಿಂದ ಹೊರಹಾಕಿ ಮನೆಯೊಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಕಡಬ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿಗಳು

ಬಲ್ಯ: ಮದುವೆಯಾಗದ ಬಗ್ಗೆ ಮನನೊಂದ ವ್ಯಕ್ತಿ ► ನೇಣುಬಿಗಿದು ಆತ್ಮಹತ್ಯೆ Read More »

ಕರಾವಳಿ

ಇಚಿಲಂಪಾಡಿ: ರೇಬೀಸ್ ವೈರಾಣುವಿಗೆ ತುತ್ತಾಗಿ ಯುವಕ ಮೃತ್ಯು ► ಅಂತಿಮ ದರ್ಶನಕ್ಕೆ ತೆರಳಿದ್ದ ಗ್ರಾಮಸ್ಥರಲ್ಲಿ ವೈರಾಣು ಹರಡುವ ಆತಂಕ ► ಆ್ಯಂಟಿ ರೇಬೀಸ್ ಇಂಜೆಕ್ಷನ್ ಚುಚ್ಚಿಸಿಕೊಂಡ ಇನ್ನೂರಕ್ಕೂ ಮಿಕ್ಕಿದ ಜನ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ.03. ಇಲ್ಲಿನ ಇಚಿಲಂಪಾಡಿ ಗ್ರಾಮದ ಕಾಯರ್ತಡ್ಕ ಎಂಬಲ್ಲಿ ಕಳೆದ ಆರು ದಿನಗಳ ಹಿಂದೆ ಮೃತಪಟ್ಟ ಯುವಕನ ಅಂತಿಮ ದರ್ಶನದಲ್ಲಿ ಭಾಗವಹಿಸಿದ್ದ ನೂರಾರು ಮಂದಿ‌ ಇದೀಗ ಆತಂಕಗೊಂಡಿದ್ದು, ಆಂಟಿ ರೇಬಿಸ್ ಇಂಜೆಕ್ಷನ್ ಚುಚ್ಚಿಸಿಕೊಳ್ಳುತ್ತಿದ್ದಾರೆ‌. ಸುಳ್ಯದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಇಚ್ಲಂಪಾಡಿಯ ಕಾಯರ್ತಡ್ಕ ನಿವಾಸಿ ಆನಂದ ಪೂಜಾರಿ ಎಂಬವರ ಪುತ್ರ ಆಶಿತ್ ಪೂಜಾರಿ(24) ಹಠಾತ್ ಅನಾರೋಗ್ಯಕ್ಕೀಡಾಗಿ ಆಗಸ್ಟ್ 28 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆಶಿತ್

ಇಚಿಲಂಪಾಡಿ: ರೇಬೀಸ್ ವೈರಾಣುವಿಗೆ ತುತ್ತಾಗಿ ಯುವಕ ಮೃತ್ಯು ► ಅಂತಿಮ ದರ್ಶನಕ್ಕೆ ತೆರಳಿದ್ದ ಗ್ರಾಮಸ್ಥರಲ್ಲಿ ವೈರಾಣು ಹರಡುವ ಆತಂಕ ► ಆ್ಯಂಟಿ ರೇಬೀಸ್ ಇಂಜೆಕ್ಷನ್ ಚುಚ್ಚಿಸಿಕೊಂಡ ಇನ್ನೂರಕ್ಕೂ ಮಿಕ್ಕಿದ ಜನ Read More »

ಕರಾವಳಿ

ಪುತ್ತೂರು ನಗರಸಭೆ ಫಲಿತಾಂಶ ► ಬಿಜೆಪಿ ಭರ್ಜರಿ ಗೆಲುವು, ಮಂಡಿಯೂರಿದ ಕಾಂಗ್ರೆಸ್, ಎಸ್ಡಿಪಿಐಗೆ 1 ಸ್ಥಾನ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.03. ಪುತ್ತೂರು ನಗರಸಭೆಯ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಒಟ್ಟು 31 ವಾರ್ಡ್‌ಗಳ ಪೈಕಿ ಬಿಜೆಪಿ 25 ರಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ 5 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಎಸ್‌ಡಿಪಿಐ ಒಂದು ವಾರ್ಡ್‌ನಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಆಡಳಿತಾರೂಢ ಕಾಂಗ್ರೆಸ್ಸನ್ನು ಬಿಜೆಪಿ ಧೂಳೀಪಟಗೊಳಿಸಿದೆ.

ಪುತ್ತೂರು ನಗರಸಭೆ ಫಲಿತಾಂಶ ► ಬಿಜೆಪಿ ಭರ್ಜರಿ ಗೆಲುವು, ಮಂಡಿಯೂರಿದ ಕಾಂಗ್ರೆಸ್, ಎಸ್ಡಿಪಿಐಗೆ 1 ಸ್ಥಾನ Read More »

ಕರಾವಳಿ

ಬೆಳ್ತಂಗಡಿ: ಸ್ನಾನಕ್ಕೆಂದು ನದಿಗಿಳಿದ ಯುವಕ ನೀರುಪಾಲು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ.02. ಸ್ನಾನಕ್ಕೆಂದು ತನ್ನ ಗೆಳೆಯರ ಜೊತೆ ನದಿಗಿಳಿದಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರದಂದು ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ‌ ಯುವಕನನ್ನು ಕಳಿಯ ಗ್ರಾಮದ ಹರ್ಮಾಡಿ ನಿವಾಸಿ ಕೇಶವ ಪೂಜಾರಿ ಎಂಬವರ ಪುತ್ರ ಹರಿಪ್ರಸಾದ್ (18) ಎಂದು ಗುರುತಿಸಲಾಗಿದೆ. ಈತ ಭಾನುವಾರದಂದು ತನ್ನ ಗೆಳೆಯರೊಂದಿಗೆ ಗೇರುಕಟ್ಟೆ ಎರುಕಡಪು ಎಂಬಲ್ಲಿ ಸ್ನಾನಕ್ಕೆಂದು ನದಿಗೆ ಇಳಿದಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ನೀರುಪಾಲಾಗಿದ್ದು, ಸ್ಥಳೀಯರ ನೆರವಿನೊಂದಿಗೆ ಕೂಡಲೇ ಆತನನ್ನು ನೀರಿನಿಂದ ಮೇಲಕ್ಕೆತ್ತಿದರಾದರೂ

ಬೆಳ್ತಂಗಡಿ: ಸ್ನಾನಕ್ಕೆಂದು ನದಿಗಿಳಿದ ಯುವಕ ನೀರುಪಾಲು Read More »

ಕರಾವಳಿ

ದೇಶದಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದ ಪೆಟ್ರೋಲ್, ಡೀಸೆಲ್ ಬೆಲೆ ► ಮುಂಬಯಿಯಲ್ಲಿ ಪೆಟ್ರೋಲ್ ಲೀಟರೊಂದಕ್ಕೆ 86.25 ರೂ.

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.02. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಗರಿಷ್ಠ ಮಟ್ಟಕ್ಕೆ ತಲುಪಿದೆ. ಮುಂಬಯಿಯಲ್ಲಿ ಭಾನುವಾರದಂದು ಪೆಟ್ರೋಲ್ ಲೀಟರಿಗೆ 86.25 ರೂ. ಗಳಿಗೆ ತಲುಪಿದ್ದು, ಡೀಸೆಲ್‌ ಲೀಟರಿಗೆ 74.76 ರೂ. ಗಳಾಗಿವೆ. ಕಳೆದ ತಿಂಗಳು ಪೆಟ್ರೋಲಿಯಂ ಉತ್ಪನ್ನಗಳಿಗೆ ಕೇಂದ್ರ ಸರ್ಕಾರವು ಸ್ವಲ್ಪ ಮಟ್ಟಿನ ದರ ಇಳಿಕೆ ಮಾಡಿತ್ತಾದರೂ, ಕಳೆದ ಒಂದು ವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬರುತ್ತಿದೆ. ಬೆಂಗಳೂರಿನಲ್ಲೂ ಪೆಟ್ರೋಲ್​, ಡೀಸೆಲ್​ ಬೆಲೆ ಗಗನಕ್ಕೇರಿದ್ದು

ದೇಶದಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದ ಪೆಟ್ರೋಲ್, ಡೀಸೆಲ್ ಬೆಲೆ ► ಮುಂಬಯಿಯಲ್ಲಿ ಪೆಟ್ರೋಲ್ ಲೀಟರೊಂದಕ್ಕೆ 86.25 ರೂ. Read More »

ರಾಷ್ಟ್ರೀಯ ನ್ಯೂಸ್

ಸೆ.09: ಕಡಬದಲ್ಲಿ ಅದ್ದೂರಿ ಮೊಸರು ಕುಡಿಕೆ ಉತ್ಸವ, ಶೋಭಾಯಾತ್ರೆ, ಧಾರ್ಮಿಕ ಸಭೆ ► ದಿಕ್ಸೂಚಿ ಭಾಷಣಕಾರರಾಗಿ ಅಕ್ಷತಾ ಬಜಪೆ ಕಡಬಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಸೆ.02. ಕಡಬ ಪ್ರಖಂಡ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಆಶ್ರಯದಲ್ಲಿ ವಿಶ್ವಹಿಂದು ಪರಿಷತ್‍ನ ಸ್ಥಾಪನಾ ದಿನಾಚರಣೆ ಅಂಗವಾಗಿ ಅದ್ದೂರಿ ಮೊಸರು ಕುಡಿಕೆ ಉತ್ಸವ, ಬೃಹತ್ ಶೋಭಾಯಾತ್ರೆ ಮತ್ತು ಧಾರ್ಮಿಕ ಸಭೆ ಸೆ.9 ನೇ ಭಾನುವಾರ ಕಡಬ ಶ್ರೀದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಕಡಬ ಪ್ರಖಂಡ ಗೌರವಾಧ್ಯಕ್ಷ ಜನಾರ್ಧನ ರಾವ್ ಹೇಳಿದರು. ಅವರು ಮಂಗಳವಾರ ಕಡಬ ಪ್ರೆಸ್ ಕ್ಲಬ್‍ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಈ ವಿಚಾರ ತಿಳಿಸಿದರು.

ಸೆ.09: ಕಡಬದಲ್ಲಿ ಅದ್ದೂರಿ ಮೊಸರು ಕುಡಿಕೆ ಉತ್ಸವ, ಶೋಭಾಯಾತ್ರೆ, ಧಾರ್ಮಿಕ ಸಭೆ ► ದಿಕ್ಸೂಚಿ ಭಾಷಣಕಾರರಾಗಿ ಅಕ್ಷತಾ ಬಜಪೆ ಕಡಬಕ್ಕೆ Read More »

ಕರಾವಳಿ

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ ► ಕಡಬ ಕ್ನಾನಾಯ ಜ್ಯೊತಿ ಶಾಲೆಯ ಕು|ಪ್ರಣಮ್ಯ ಪಿ.ರಾವ್ ರಾಜ್ಯ ಮಟ್ಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಸೆ.02. ಮಂಗಳೂರಿನ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ 2018-19 ರ 26-30 ಕೆ.ಜಿ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಕು| ಪ್ರಣಮ್ಯ ಪಿ.ರಾವ್ ರವರು ಪ್ರಥಮ ಸ್ಥಾನ ಪಡೆದು ಗದಗನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಇವರು ಸಂಗೀತ ಹಾಗೂ ಭರತ ನಾಟ್ಯದಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ. ಇವರು ಕುಟ್ರುಪ್ಪಾಡಿ ಪುತ್ರಬೈಲು ಪ್ರಸನ್ನ ಕುಮಾರ್ ಎಂ.ಎಸ್. ಮತ್ತು

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ ► ಕಡಬ ಕ್ನಾನಾಯ ಜ್ಯೊತಿ ಶಾಲೆಯ ಕು|ಪ್ರಣಮ್ಯ ಪಿ.ರಾವ್ ರಾಜ್ಯ ಮಟ್ಟಕ್ಕೆ ಆಯ್ಕೆ Read More »

ಕರಾವಳಿ

ಶಿರಾಡಿ: ಪೊಲೀಸರು ಹಣ ಪಡೆದು ಲಾರಿಗಳನ್ನು ಬಿಡುತ್ತಾರೆಂಬ ಆರೋಪ ► ಜಿಲ್ಲಾಧಿಕಾರಿಗೆ ದೂರು ನೀಡುತ್ತೇನೆಂದ ಚಾಲಕ ► ಡಿಸಿಗಲ್ಲ, ನಿಮ್ಮಪ್ಪಂಗೆ ಹೇಳೆಂದ ಪೊಲೀಸಪ್ಪ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ.01. ಶಿರಾಡಿ ಘಾಟ್ ನಲ್ಲಿ ಹಣ ಪಡೆದು ವಾಹನಗಳನ್ನು ಬಿಡುವುದರ ಬಗ್ಗೆ ಡಿಸಿ ಗೆ ದೂರು ನೀಡುತ್ತೇನೆ ಎಂದು ಪೊಲೀಸರಲ್ಲಿ ಹೇಳಿದ ಟ್ರಕ್ ಚಾಲಕರೊಬ್ಬರಲ್ಲಿ ಪೊಲೀಸ್ ಸಿಬ್ಬಂದಿಯೋರ್ವ ಡಿಸಿಗಲ್ಲ… ನಿಮ್ಮಪ್ಪನಿಗೆ ಹೇಳು ಎಂದು ಉದ್ದಟತನದಿಂದ ವರ್ತಿಸಿದ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಶಿರಾಡಿಘಾಟ್ ರಸ್ತೆ ಬಂದ್​ ಆಗಿರುವುದರಿಂದ ಹಲವು ಟ್ರಕ್ ಚಾಲಕರು ಅನ್ನ ನೀರಿಲ್ಲದೇ ಟ್ರಕ್​ಗಳ ಕೆಳಗೆ ಪ್ಲಾಸ್ಟಿಕ್ ಟೆಂಟ್ ಕಟ್ಟಿಕೊಂಡು ದಿನ ದೂಡುತ್ತಿದ್ದಾರೆ. ಹೀಗಿರುವಾಗ ಪೊಲೀಸರು ಹಣ ಪಡೆದು ಕೆಲವು ವಾಹನಗಳನ್ನ

ಶಿರಾಡಿ: ಪೊಲೀಸರು ಹಣ ಪಡೆದು ಲಾರಿಗಳನ್ನು ಬಿಡುತ್ತಾರೆಂಬ ಆರೋಪ ► ಜಿಲ್ಲಾಧಿಕಾರಿಗೆ ದೂರು ನೀಡುತ್ತೇನೆಂದ ಚಾಲಕ ► ಡಿಸಿಗಲ್ಲ, ನಿಮ್ಮಪ್ಪಂಗೆ ಹೇಳೆಂದ ಪೊಲೀಸಪ್ಪ Read More »

ಕರ್ನಾಟಕ

ಸೆಪ್ಟೆಂಬರ್ 11 ರಿಂದ ಮತ್ತೆ ಸೌದೀಕರಣ ಪ್ರಾರಂಭ ► ನಿರುದ್ಯೋಗದ ಭೀತಿಯಲ್ಲಿ ಸಾವಿರಾರು ಮಂದಿ ಭಾರತೀಯರು

(ನ್ಯೂಸ್ ಕಡಬ) newskadaba.com ಸೌದಿ ಅರೇಬಿಯಾ, ಸೆ.01. ಸೌದಿ ಅರೇಬಿಯಾದ ಕಾರ್ಮಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಸಚಿವಾಯಲವು ಮತ್ತೆ 12 ವಲಯದ ಉದ್ಯೋಗಗಳನ್ನು ಸೌದೀಕರಣಗೊಳಿಸಿದ್ದು, ಸೆಪ್ಟೆಂಬರ್ 11 ರ‌ ನಂತರ ಲಕ್ಷಾಂತರ ವಿದೇಶಿಯರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಮೊದಲ ಹಂತದ ಸೌದೀಕರಣ ಪ್ರಾರಂಭಗೊಳ್ಳಲಿದ್ದು, ವಾಹನ ಶೋರೂಂ ಹಾಗೂ ಆಟೋಮೊಬೈಲ್, ಮಕ್ಕಳ ಹಾಗೂ ಗಂಡಸರ ಸಿದ್ಧ ಉಡುಪುಗಳ ಮಳಿಗೆಗಳು, ಪೀಠೋಪಕರಣ ಮಳಿಗೆಗಳು ಹಾಗೂ ಮನೆ ಬಳಕೆಯ ವಸ್ತುಗಳ ಮಾರಾಟ ಮಳಿಗೆಗಳು ಪ್ರಥಮ ಹಂತದಲ್ಲಿ ಸೌದೀಕರಣಕ್ಕೆ ಒಳಪಡಲಿದೆ. ದ್ವಿತೀಯ ಹಂತದಲ್ಲಿ

ಸೆಪ್ಟೆಂಬರ್ 11 ರಿಂದ ಮತ್ತೆ ಸೌದೀಕರಣ ಪ್ರಾರಂಭ ► ನಿರುದ್ಯೋಗದ ಭೀತಿಯಲ್ಲಿ ಸಾವಿರಾರು ಮಂದಿ ಭಾರತೀಯರು Read More »

ಅಂತರ್ರಾಷ್ಟ್ರೀಯ ನ್ಯೂಸ್
Scroll to Top