ಲೀಟರಿಗೆ 87.77 ರೂ. ಗೆ ಏರಿದ ಪೆಟ್ರೋಲ್ ► ದಿನೇ ದಿನೇ ಗಗನಕ್ಕೇರುತ್ತಿರುವ ಪೆಟ್ರೋಲ್, ಡೀಸೆಲ್ ದರ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.08. ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಗಗನಕ್ಕೇರುತ್ತಿದ್ದು, ಶನಿವಾರದಂದು ಮುಂಬಯಿಯಲ್ಲಿ ಪೆಟ್ರೋಲ್ ಲೀಟರಿಗೆ 87.77 ಹಾಗೂ ಡೀಸೆಲ್ ದರ 76.98 ರೂ. ಗಳಿಗೆ ತಲುಪಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ 80.38 ರೂ., ಬೆಂಗಳೂರಿನಲ್ಲಿ 82.94 ರೂ.ಗೆ ಏರಿಕೆಯಾಗಿದೆ. ನವದೆಹಲಿಯಲ್ಲಿ ಪ್ರತೀ ಲೀಟರ್ ಡೀಸೆಲ್ಗೆ 72.51 ರೂ., ಬೆಂಗಳೂರಿನಲ್ಲಿ 74.79 ರೂ. ಗೆ ಏರಿಕೆಯಾಗಿದೆ. ತೈಲ ಬೆಲೆ ನಿಯಂತ್ರಿಸುವಲ್ಲಿ ಕೇಂದ್ರ ಸರಕಾರವು ವಿಫಲವಾಗಿದೆ ಎಂದು ವಿರೋಧ ಪಕ್ಷಗಳು ಬೊಬ್ಬಿಡಲು […]

ಲೀಟರಿಗೆ 87.77 ರೂ. ಗೆ ಏರಿದ ಪೆಟ್ರೋಲ್ ► ದಿನೇ ದಿನೇ ಗಗನಕ್ಕೇರುತ್ತಿರುವ ಪೆಟ್ರೋಲ್, ಡೀಸೆಲ್ ದರ Read More »

ರಾಷ್ಟ್ರೀಯ ನ್ಯೂಸ್

ಉಪ್ಪಿನಂಗಡಿ: ವ್ಯಕ್ತಿಯ ಕೊಲೆಗೈದು ನದಿಗೆಸೆದ ಪ್ರಕರಣ ► ಪ್ರಮುಖ ಆರೋಪಿಗಳಿಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ.07. ಇತ್ತೀಚೆಗೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕುಪ್ಪೆಟ್ಟಿ ನದಿಯಲ್ಲಿ ಗಂಡಸಿನ ಮೃತದೇಹ ಪತ್ತೆಯ ಜಾಡು ಹಿಡಿದ ಡಿಸಿಐಬಿ ಪೊಲೀಸರು ಘಟನೆಗೆ ಸಂಬಂಧಿಸಿ ಕುಖ್ಯಾತ ರೌಡಿಗಳಿಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕೇರಳ ರಾಜ್ಯದ ಎರ್ನಾಕುಲಂ ಜಿಲ್ಲೆಯ ಅಳುವ ಕೊಟ್ಟಕ್ಕಾಕಾತ್‌ ನಿವಾಸಿ ಕೆ.ಎ ಸಿದ್ದಿಕ್‌ ಎಂಬವರ ಪುತ್ರ ಔರಂಗಝೀಬ್‌ (37) ಹಾಗೂ ಪಾಲಕ್ಕಾಡು ಜಿಲ್ಲೆಯ ಆಲೆತ್ತೂರು ತಾಲೂಕಿನ ಕೊಕ್ರತ್ತಲ್‌ ನಿವಾಸಿ ಮೊಯ್ದೀನ್‌ ಕುಟ್ಟಿ ಎಂಬವರ ಪುತ್ರ ಮಹಮ್ಮದ್‌ ಶಮನಾಝ್‌(23) ಎಂದು ಗುರುತಿಸಲಾಗಿದೆ. ಆರೋಪಿಗಳು ಕೇರಳದ

ಉಪ್ಪಿನಂಗಡಿ: ವ್ಯಕ್ತಿಯ ಕೊಲೆಗೈದು ನದಿಗೆಸೆದ ಪ್ರಕರಣ ► ಪ್ರಮುಖ ಆರೋಪಿಗಳಿಬ್ಬರ ಬಂಧನ Read More »

ರಾಷ್ಟ್ರೀಯ ನ್ಯೂಸ್

ಕಿನ್ನಿಗೋಳಿ: ಆ್ಯಕ್ಟಿವಾ – ಟಿಪ್ಪರ್ ಢಿಕ್ಕಿ ► ಕಾಲೇಜು ವಿದ್ಯಾರ್ಥಿ ಮೃತ್ಯು, ಓರ್ವ ಗಂಭೀರ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.07. ಆ್ಯಕ್ಟಿವಾ ಹಾಗೂ ಟಿಪ್ಪರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ನಗರದ ಹೊರವಲಯದ ಕಿನ್ನಿಗೋಳಿಯಲ್ಲಿ ಶುಕ್ರವಾರದಂದು ನಡೆದಿದೆ. ಮೃತ ಯುವಕನನ್ನು ಕಿನ್ನಿಗೋಳಿ ಪೊಂಪೈ ಕಾಲೇಜಿನ ಅಂತಿಮ ವರ್ಷದ ಬಿಬಿಎಮ್ ವಿದ್ಯಾರ್ಥಿ, ಕಾರ್ನಾಡು ನಿವಾಸಿ ವರ್ಶಿತ್(21) ಎಂದು ಗುರುತಿಸಲಾಗಿದೆ. ದ್ವಿತೀಯ ಬಿಬಿಎಮ್ ವಿದ್ಯಾರ್ಥಿ ಡೆರಿಕ್ ವಾಸ್ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಬ್ಬರೂ ಜೊತೆಯಾಗಿ ಶುಕ್ರವಾರ ಮಧ್ಯಾಹ್ನ ಊಟಕ್ಕೆಂದು ಹೊರಟ ಸಂದರ್ಭದಲ್ಲಿ ಟಿಪ್ಪರ್

ಕಿನ್ನಿಗೋಳಿ: ಆ್ಯಕ್ಟಿವಾ – ಟಿಪ್ಪರ್ ಢಿಕ್ಕಿ ► ಕಾಲೇಜು ವಿದ್ಯಾರ್ಥಿ ಮೃತ್ಯು, ಓರ್ವ ಗಂಭೀರ Read More »

ಕರಾವಳಿ

ಸುಳ್ಯ: 13 ವರ್ಷದ ಬಾಲಕಿಯ ಅತ್ಯಾಚಾರಗೈದು ಗರ್ಭಿಣಿಯನ್ನಾಗಿಸಿದ ಭೂಪ ► ಬುದ್ಧಿವಂತರ ಜಿಲ್ಲೆಯಲ್ಲೊಂದು ಅಮಾನವೀಯ ಕೃತ್ಯ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ.07. ಹದಿಮೂರು ವಯಸ್ಸಿನ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಬಾಲಕಿ ಗರ್ಭಿಣಿಯಾದ ಘಟನೆ ಸುಳ್ಯ ಠಾಣಾ ವ್ಯಾಪ್ತಿಯ ಸಂಪಾಜೆಯಲ್ಲಿ ನಡೆದಿದೆ. ಕಳೆದ ಸುಮಾರು ಎರಡು ತಿಂಗಳುಗಳಿಂದ ಸಂಪಾಜೆಯ ಬಾಲಕಿಯ ಮನೆಯಲ್ಲಿಯೇ ವಾಸವಿದ್ದ ಅವರ ದೂರದ ಸಂಬಂಧಿ ಗೋಪಾಲಕೃಷ್ಣ ಎಂಬಾತ ರಾತ್ರಿ ಮನೆಯವರೆಲ್ಲರೂ ಮಲಗಿದ ನಂತರ ಬಲಾತ್ಕಾರವಾಗಿ ಬಾಲಕಿಯ ಮೇಲೆ ಅತ್ಯಾಚಾರಗೈದುದರಿಂದ ಬಾಲಕಿಯು ಗರ್ಭಿಣಿಯಾಗಿದ್ದಾಳೆ ಎನ್ನಲಾಗಿದೆ‌. ಕೆಲವು ಸಮಯಗಳಿಂದ ಬಾಲಕಿಯು ಮನೆಯವರೊಂದಿಗೆ ಸರಿಯಾಗಿ ಮಾತನಾಡದೇ ಇದ್ದುದರಿಂದ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಿ, ಬಾಲಕಿಯನ್ನು

ಸುಳ್ಯ: 13 ವರ್ಷದ ಬಾಲಕಿಯ ಅತ್ಯಾಚಾರಗೈದು ಗರ್ಭಿಣಿಯನ್ನಾಗಿಸಿದ ಭೂಪ ► ಬುದ್ಧಿವಂತರ ಜಿಲ್ಲೆಯಲ್ಲೊಂದು ಅಮಾನವೀಯ ಕೃತ್ಯ Read More »

ಕರಾವಳಿ

ಅಡಿಕೆ ಮರಕ್ಕೆ ಕೊಳೆರೋಗ ಬಾಧಿಸಿದೆಯೇ..? ► ರೋಗ ನಿಯಂತ್ರಣಕ್ಕೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದೆಂದು ತಿಳಿಯಬೇಕೇ..?

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.07. ಈ ವರ್ಷ ಮಳೆ ಬೇಗನೆ ಆರಂಭವಾಗಿದ್ದಲ್ಲದೇ ಬಿರುಸಿನ ಮಳೆಯಿಂದಾಗಿ ಅಡಿಕೆ ಬೆಳೆಗೆ ಕೊಳೆರೋಗ ಕಂಡುಬಂದಿದೆ. ನಿರಂತರ ಸುರಿದ ಮಳೆಯಿಂದ ರೈತರಿಗೆ ಸಕಾಲದಲ್ಲಿ ಔಷಧ ಸಿಂಪರಣೆ ಮಾಡಲಾಗದೇ ಕೊಳೆ ರೋಗ ಉಲ್ಭಣಿಸಿ ಹಾನಿ ಅನುಭವಿಸುವಂತಾಗಿದೆ. ಮಳೆ ಕಡಿಮೆಯಾಗುತ್ತಿದ್ದರೂ ಕೊಳೆ ರೋಗದ ಹಾನಿ ಇಲ್ಲಿಗೆ ಮುಗಿದಿಲ್ಲ. ಹೀಗೆ ಉದುರಿದ ಕಾಯಿಗಳನ್ನು ಮತ್ತು ಸತ್ತ ಅಡಿಕೆ ಸಿಂಗಾರಗಳನ್ನು ತೋಟದಿಂದ ಹೊರ ಹಾಕಬೇಕು. ಅಡಿಕೆ ಗೊನೆಗಳಿಗೆ ಬೋರ್ಡೋದ್ರಾವಣ ಸಿಂಪಡಣೆಯಾಗಿ ಒಂದು ತಿಂಗಳಿಗಿಂತ ಹೆಚ್ಚಿನ ಅವಧಿಯಾಗಿದ್ದಲ್ಲಿ, ಅವಶ್ಯಕತೆಯಿದ್ದಲ್ಲಿ ಮತ್ತೊಮ್ಮೆ

ಅಡಿಕೆ ಮರಕ್ಕೆ ಕೊಳೆರೋಗ ಬಾಧಿಸಿದೆಯೇ..? ► ರೋಗ ನಿಯಂತ್ರಣಕ್ಕೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದೆಂದು ತಿಳಿಯಬೇಕೇ..? Read More »

ಕರ್ನಾಟಕ

ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಕರಾವಳಿಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.07. ಮಾನ್ಯ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರದಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಮಾಡಲಿದ್ದು, ವಿವರ ಈ ಕೆಳಗಿನಂತಿವೆ. ಸೆಪ್ಟಂಬರ್ 7 ಶುಕ್ರವಾರ ರಂದು ಪೂರ್ವಾಹ್ನ 8.50 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, 9 ಗಂಟೆಗೆ ಮಂಗಳೂರಿನಿಂದ ರಸ್ತೆಯ ಮೂಲಕ ಉಡುಪಿ ಜಿಲ್ಲೆಗೆ ತೆರಳಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮಂಗಳೂರಿಗೆ ಆಗಮಿಸಿ, ಮಂಗಳೂರು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಪರಿಶೀಲನಾ ಸಭೆ ನಡೆಸಲಿದ್ದಾರೆ. ರಾತ್ರಿ 9.55

ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಕರಾವಳಿಗೆ Read More »

ಕರಾವಳಿ

ಕಲ್ಲಾರೆ: ಹೊಂಡಕ್ಕೆ ಬಿದ್ದ ಬೈಕ್ ► ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.06. ಸವಾರನ ನಿಯಂತ್ರಣ ತಪ್ಪಿದ ಬೈಕೊಂದು ಹೊಂಡಕ್ಕೆ ಬಿದ್ದ ಪರಿಣಾಮ ಸವಾರ ಮೃತಪಟ್ಟ ಘಟನೆ ಇಲ್ಲಿನ ಕಲ್ಲಾರೆ ಸಮೀಪ ನಡೆದಿದೆ. ಮೃತ ಸವಾರನನ್ನು ಪುತ್ತೂರು ತಾಲೂಕಿನ ಕೊಕ್ಕಡ ಸಮೀಪದ ಹಲ್ಲಿಂಗೇರಿ ನಿವಾಸಿ ಉಮೇಶ್ ಪೂಜಾರಿ(42) ಎಂದು ಗುರುತಿಸಲಾಗಿದೆ. ಉಮೇಶ್ ತನ್ನ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಕಲ್ಲಾರೆ ಸಮೀಪ ರಸ್ತೆ ಬದಿಯ ಆಳವಾದ ಹೊಂಡಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಲಾಯಿತಾದರೂ,ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ

ಕಲ್ಲಾರೆ: ಹೊಂಡಕ್ಕೆ ಬಿದ್ದ ಬೈಕ್ ► ಸವಾರ ಮೃತ್ಯು Read More »

ಕರಾವಳಿ

ವಿಟ್ಲ ಮೂಲದ ವ್ಯಕ್ತಿ ರಿಯಾದ್ ನಲ್ಲಿ ಹೃದಯಾಘಾತದಿಂದ ನಿಧನ ► ಕೆಸಿಎಫ್ ಸಂಘಟನೆ ನೆರವಿನಲ್ಲಿ ರಿಯಾದ್ ನಲ್ಲೇ ದಫನ

(ನ್ಯೂಸ್ ಕಡಬ) newskadaba.com ರಿಯಾದ್, ಸೆ.06. ಇತ್ತೀಚೆಗೆ ರಿಯಾದ್ ನಲ್ಲಿ ಹೃದಯಾಘಾತದಿಂದ ನಿಧನರಾದ ವಿಟ್ಲ ಮೂಲದ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ಇಲ್ಲಿನ ಎಕ್ಸಿಟ್ 15 ರ ಅಲ್ ರಾಜ್’ಹಿ ಮಸೀದಿಯ ಸಾರ್ವಜನಿಕ ದಫನ ಭೂಮಿಯಲ್ಲಿ ನೆರವೇರಿಸಲಾಯಿತು. ಬಂಟ್ವಾಳ ತಾಲೂಕಿನ ಕಡಂಬು – ಅನಿಲಕಟ್ಟೆ ನಿವಾಸಿ ಮೋನು ಬ್ಯಾರಿಯ ಹಿರಿಯ ಪುತ್ರ ಮೆಹ್ಮೂದ್ (53) ಕಳೆದ ಇಪ್ಪತ್ತು ವರ್ಷಗಳಿಂದ ಸೌದಿ ಅರೇಬಿಯಾದ ರಿಯಾದ್ ನಲ್ಲಿ ನೌಕರಿ ಮಾಡುತ್ತಿದ್ದು ಇತ್ತೀಚೆಗಷ್ಟೇ ಊರಿನಿಂದ ಮರಳಿದ್ದರು ಎನ್ನಲಾಗಿದೆ. ಇತ್ತೀಚೆಗೆ ಇದ್ದಕ್ಕಿದ್ದಂತೆ ಎದೆ ನೋವು

ವಿಟ್ಲ ಮೂಲದ ವ್ಯಕ್ತಿ ರಿಯಾದ್ ನಲ್ಲಿ ಹೃದಯಾಘಾತದಿಂದ ನಿಧನ ► ಕೆಸಿಎಫ್ ಸಂಘಟನೆ ನೆರವಿನಲ್ಲಿ ರಿಯಾದ್ ನಲ್ಲೇ ದಫನ Read More »

ಅಂತರ್ರಾಷ್ಟ್ರೀಯ ನ್ಯೂಸ್

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ► ಸೆಪ್ಟೆಂಬರ್ 08 ರಂದು ದಕ್ಷಿಣ ಕನ್ನಡದಲ್ಲಿ ಶಾಲಾ – ಕಾಲೇಜುಗಳಿಗೆ ರಜೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.06. ಕೊಯಿಲು ಹಬ್ಬ/ಮರಿಯ ಜಯಂತಿ ಹಬ್ಬದ ನಿಮಿತ್ತ ಸೆ.08 ರಂದು ಶಾಲಾ-ಕಾಲೇಜು ಸಹಿತ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆಯನ್ನು ಘೋಷಿಸುವಂತೆ ದ.ಕ. ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ. ಕರಾವಳಿಯಲ್ಲಿ ಕ್ರೈಸ್ತರು ಪ್ರತೀ ವರ್ಷ ಸೆ.08 ರಂದು ಕೊಯಿಲು ಹಬ್ಬ/ಮರಿಯ ಜಯಂತಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಮಂಗಳೂರಿನ ಕೆಥೋಲಿಕ್ ಸಭಾ ಹಾಗೂ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸ್ಪಂದಿಸಿ ಪ್ರತೀ ವರ್ಷ ಸ್ಥಳೀಯ ಹಾಗೂ ಅಗತ್ಯಕ್ಕನುಗುಣವಾಗಿ ವರ್ಷದಲ್ಲಿ 4 ದಿನಗಳ ರಜೆ ನೀಡಲು ವಿವೇಚನಾಧಿಕಾರವಿದ್ದು, ಅದರಂತೆ

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ► ಸೆಪ್ಟೆಂಬರ್ 08 ರಂದು ದಕ್ಷಿಣ ಕನ್ನಡದಲ್ಲಿ ಶಾಲಾ – ಕಾಲೇಜುಗಳಿಗೆ ರಜೆ Read More »

ಕರಾವಳಿ

ಆಲಂಕಾರು ಸರಕಾರಿ ಶಾಲೆಯಲ್ಲಿ ಕಳ್ಳರ ಕೈಚಳಕ ► ಮೈಕ್ ಸೆಟ್, ಪುಸ್ತಕಗಳ ಕಳ್ಳತನ

(ನ್ಯೂಸ್ ಕಡಬ) newskadaba.com ಕಡಬ, ಸೆ.06. ಶಾಲಾ ಕೊಠಡಿಯ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಮೈಕ್ ಸೆಟ್ ಹಾಗೂ ಪುಸ್ತಕಗಳನ್ನು ಹೊತ್ತೊಯ್ದ ಘಟನೆ ಆಲಂಕಾರಿನಲ್ಲಿ ಸೆಪ್ಟೆಂಬರ್ 04 ಸಂಜೆಯಿಂದ ಸೆಪ್ಟೆಂಬರ್ 06 ಬೆಳಗ್ಗಿನ ನಡುವೆ ನಡೆದಿದೆ. ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಮೈಕ್ ಸೆಟ್ ನ ಆ್ಯಂಪ್, ಮೈಕ್ರೋಫೋನ್, ಕೇಬಲ್ ಹಾಗೂ ಸುಮಾರು 200 ರಷ್ಟು ಪುಸ್ತಕಗಳನ್ನು ಹೊತ್ತೊಯ್ದಿದ್ದಾರೆ. ಸೆಪ್ಟೆಂಬರ್ 05 ರಂದು ಶಿಕ್ಷಕರ ದಿನಾಚರಣೆ

ಆಲಂಕಾರು ಸರಕಾರಿ ಶಾಲೆಯಲ್ಲಿ ಕಳ್ಳರ ಕೈಚಳಕ ► ಮೈಕ್ ಸೆಟ್, ಪುಸ್ತಕಗಳ ಕಳ್ಳತನ Read More »

ಕರಾವಳಿ
Scroll to Top