ಕ್ರೈಸ್ತ ಧರ್ಮಗುರು ವಂ| ವಿ.ಐ. ಮಾಥ್ಯೂಸ್ ಕೋರ್ ಎಪ್ಪಿಸ್ಕೋಪ್ಪಾ ವಿಧಿವಶ ► ಇಚಿಲಂಪಾಡಿ, ಸಂಪ್ಯಾಡಿ, ನೆಲ್ಯಾಡಿ, ಪದವು ಸೇರಿದಂತೆ ಕರಾವಳಿಯ ಹಲವೆಡೆ ಸೇವೆ
(ನ್ಯೂಸ್ ಕಡಬ) newskadaba.com ಕಡಬ, ಸೆ.09. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲಂಕರ ಓರ್ಥೋಡೋಕ್ಸ್ ಸಿರಿಯನ್ ಚರ್ಚಿನ ವಿವಿಧ ದೇವಾಲಯಗಳಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದ ವಂದನೀಯ ವಿ.ಐ. ಮಾಥ್ಯೂಸ್ ಕೋರ್ ಎಪ್ಪಿಸ್ಕೋಪ್ಪಾ (88) ಭಾನುವಾರದಂದು ಬೆಂಗಳೂರಿನ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು. ದಿ|ವಿ.ಐ. ಐಸ್ಸಾಕ್ ಹಾಗೂ ದಿ|ಬೀನಾಮ್ಮ ಐಸ್ಸಾಕ್ ರವರ ಹಿರಿಯ ಪುತ್ರರಾದ ಇವರು ಇಚಿಲಂಪಾಡಿ ಜೋರ್ಜಿಯನ್ ತೀರ್ಥಾಟಕ ಕೇಂದ್ರದ ಅಭಿವೃದ್ದಿಯಲ್ಲಿ ಗಣನೀಯ ಪಾತ್ರ ವಹಿಸಿದ್ದರು. 18 ವರ್ಷಗಳ ಕಾಲ ಇಚಿಲಂಪಾಡಿ ಜೋರ್ಜಿಯನ್ ತೀರ್ಥಾಟಕ ಕೇಂದ್ರದ ಧರ್ಮಗುರುಗಳಾಗಿ ಸೇವೆ […]










