ಸುಂಕದಕಟ್ಟೆ: ಮರದಲ್ಲಿ ನೇತಾಡುತ್ತಿದ್ದ ರೀತಿಯಲ್ಲಿ ಮಂಗದ ಮೃತದೇಹ ಪತ್ತೆ ➤ ಮಂಗನ ಖಾಯಿಲೆ ಭೀತಿಯಲ್ಲಿ ನಾಗರಿಕರು..!?

(ನ್ಯೂಸ್ ಕಡಬ) newskadaba.com ಕಡಬ, ಫೆ. 14. ಮರದಲ್ಲಿ ನೇತಾಡಿದ ಸ್ಥಿತಿಯಲ್ಲಿ ಮಂಗನ ಮೃತದೇಹವೊಂದು ಇಲ್ಲಿನ ಸುಂಕದಕಟ್ಟೆ ಸಮೀಪ ಗುರುವಾರದಂದು ಕಂಡುಬಂದಿದೆ. ಸುಂಕದಕಟ್ಟೆಯಿಂದ ಕೊಂಬಾರು ರಸ್ತೆಯ ಬದಿಯಲ್ಲಿನ ಮರದಲ್ಲಿ ನೇತಾಡುತ್ತಿದ್ದು, ಮೂರ್ನಾಲ್ಕು ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಐತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಪೂಜಾರಿ ಭೇಟಿ ನೀಡಿ ಉಜಿರೆಯ ಮಂಗನ ಖಾಯಿಲೆ ಕ್ಷೇತ್ರ ಘಟಕದ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.

ಸುಂಕದಕಟ್ಟೆ: ಮರದಲ್ಲಿ ನೇತಾಡುತ್ತಿದ್ದ ರೀತಿಯಲ್ಲಿ ಮಂಗದ ಮೃತದೇಹ ಪತ್ತೆ ➤ ಮಂಗನ ಖಾಯಿಲೆ ಭೀತಿಯಲ್ಲಿ ನಾಗರಿಕರು..!? Read More »

ಕರಾವಳಿ

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದು ಮದುವೆಗೆ ನಿರಾಕರಣೆ ➤ ಕಡಬ ನಿವಾಸಿಯ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ.14. ಮದುವೆ ಆಗುತ್ತೇನೆಂದು ನಂಬಿಸಿ ದೈಹಿಕ ಸಂಪರ್ಕ ನಡೆಸಿ ಎಂಟು ತಿಂಗಳ ನಂತರ ಇದೀಗ ಮದುವೆಯಾಗಲು ನಿರಾಕರಿಸಿದ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಡಬ ತಾಲೂಕಿನ ನೂಜಿಬಾಳ್ತಿಲ ನಿವಾಸಿ ಜಾರಪ್ಪ ಪೂಜಾರಿ ಎಂಬವರ ಪುತ್ರ ಸುಜಿತ್ ಎಂದು ಗುರುತಿಸಲಾಗಿದೆ. ಆರೋಪಿಯು ಬಂಟ್ವಾಳದ ಕಲ್ಲಿನ ಕೋರೆಯೊಂದರಲ್ಲಿ ಹಿಟಾಚಿ ಆಪರೇಟರ್ ಆಗಿ ಕರ್ತವ್ಯದಲ್ಲಿದ್ದು, ಅಲ್ಲೇ ಕೂಲಿ ಕಾರ್ಮಿಕಳಾಗಿದ್ದ ಬಾಗಲಕೋಟೆ ಮೂಲದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ ಇದೀಗ

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದು ಮದುವೆಗೆ ನಿರಾಕರಣೆ ➤ ಕಡಬ ನಿವಾಸಿಯ ಬಂಧನ Read More »

ಕರಾವಳಿ

ಕಡಬ: ಬೆಳ್ಳಂಬೆಳಗ್ಗೆ ಅಗ್ನಿಗಾಹುತಿಯಾದ ಟಾಟಾ ಮ್ಯಾಜಿಕ್ ಐರಿಸ್ ➤ ಸಂಪೂರ್ಣ ಸುಟ್ಟು ಕರಕಲು

(ನ್ಯೂಸ್ ಕಡಬ) newskadaba.com ಕಡಬ, ಫೆ.14. ಟಾಟಾ ಮ್ಯಾಜಿಕ್ ಐರಿಸ್ ವಾಹನದಲ್ಲಿ ಆಕಸ್ಮಿಕ ಬೆಂಕಿಯುಂಟಾದ ಪರಿಣಾಮ ಹೊತ್ತಿ ಉರಿದ ಘಟನೆ ಕಡಬ ಕಲ್ಲುಗುಡ್ಡೆ ರಸ್ತೆಯ ಮುಲಿಮಜಲು ಎಂಬಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.   ಕಲ್ಲುಗುಡ್ಡೆ ಕಡೆಯಿಂದ ಕಡಬ ಕಡೆಗೆ ತೆರಳುತ್ತಿದ್ದ ಜಗ್ಗ ಎಂಬವರಿಗೆ ಸೇರಿದ ವಾಹನದಲ್ಲಿ ಮುಳಿಮಜಲು ತಲುಪಿದಾಗ ಬೆಂಕಿ ಕಂಡುಬಂದಿದ್ದು, ಪ್ರಯಾಣಿಕರು ಹೊರ ಬಂದಿದ್ದರಿಂದಾಗಿ ಪ್ರಾಣಾಪಾಯ ಸಂಭವಿಸಿಲ್ಲ‌. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿರಬಹುದೆಂದು ಶಂಕಿಸಲಾಗಿದೆ.

ಕಡಬ: ಬೆಳ್ಳಂಬೆಳಗ್ಗೆ ಅಗ್ನಿಗಾಹುತಿಯಾದ ಟಾಟಾ ಮ್ಯಾಜಿಕ್ ಐರಿಸ್ ➤ ಸಂಪೂರ್ಣ ಸುಟ್ಟು ಕರಕಲು Read More »

ಕರಾವಳಿ

ಕಡಬ: ಅಪ್ರಾಪ್ತ ಬಾಲಕಿಯ ಅತ್ಯಾಚಾರಗೈದು ಗರ್ಭಿಣಿಯನ್ನಾಗಿಸಿದ ಜೀಪು ಚಾಲಕ ➤ ಫೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಫೆ.12. ಅಪ್ರಾಪ್ತ ಬಾಲಕಿಗೆ ಜೀಪು ಚಾಲಕನೋರ್ವ ಅತ್ಯಾಚಾರಗೈದುದರಿಂದ ಬಾಲಕಿ ಗರ್ಭಿಣಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಿರುವ ಕಡಬ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ರೆಂಜಿಲಾಡಿ‌ ಗ್ರಾಮದ ಪೇರಡ್ಕ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಕಡಬದಲ್ಲಿ ಜೀಪು ಚಾಲಕನಾಗಿದ್ದ ಸದ್ದಾಂ (25) ಎಂದು ಗುರುತಿಸಲಾಗಿದೆ. ಆರೋಪಿಯು ತಾಲೂಕಿನ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ್ದು, ಬಾಲಕಿ ಎಂಟು ತಿಂಗಳ

ಕಡಬ: ಅಪ್ರಾಪ್ತ ಬಾಲಕಿಯ ಅತ್ಯಾಚಾರಗೈದು ಗರ್ಭಿಣಿಯನ್ನಾಗಿಸಿದ ಜೀಪು ಚಾಲಕ ➤ ಫೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನ Read More »

ಕರಾವಳಿ

ಸರಸ್ವತೀ ವಿದ್ಯಾಲಯ ಕಡಬ ರಥಸಪ್ತಮಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.comಕಡಬ,ಫೆ.12. ರಥಸಪ್ತಮಿ ಕಾರ್ಯಕ್ರಮವನ್ನುದಿನಾಂಕ 12.02.2019ನೇ ಮಂಗಳವಾರದಂದು  ಸರಸ್ವತೀ ಸಮೂಹ ಸಂಸ್ಥೆಯಲ್ಲಿ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದ ಮಹತ್ವವನ್ನು ಶ್ರೀ ಮಹೇಶ್ ನಿಟಿಲಾಪುರ ಇವರು “ಭೂಮಿಗೆ ಬೆಳಕನ್ನೂ ಜೀವರಾಶಿಗಳಿಗೆ ಚೈತನ್ಯವನ್ನೂ ನೀಡುವ ಸೂರ್ಯನ ಉತ್ತರಾಯಣದ ಚಲಿಸುವ ಪರ್ವ”. ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಶ್ರೀಮತಿ ಪ್ರಮೀಳಾ ಲೋಕೇಶ್ ನಿರ್ದೇಶಕರು ಸರಸ್ವತೀ ಸಮೂಹ ಸಂಸ್ಥೆ ಕಡಬ ಇವರು ವಹಿಸಿದರು. ಮುಖ್ಯ ಅತಿಥಿಯಾಗಿ ಶ್ರೀ ಪ್ರಶಾಂತ್ ಆಚಾರ್ಯ ಶ್ರೀದೇವಿ ಜುವ್ಯೆಲರಿ ಕಡಬ. ದಿವ್ಯ ಉಪಸ್ಥಿತಿಯಲ್ಲಿ ಸಂಚಾಲಕರು ಶ್ರೀ ವೆಂಕಟರಮಣ ರಾವ್ ಮಂಕುಡೆ.

ಸರಸ್ವತೀ ವಿದ್ಯಾಲಯ ಕಡಬ ರಥಸಪ್ತಮಿ ಕಾರ್ಯಕ್ರಮ Read More »

ಕರಾವಳಿ

ಕಡಬ: ಸರಸ್ವತೀ ವಿದ್ಯಾಲಯ ಸಾಮರಸ್ಯ ಭೋಜನ

(ನ್ಯೂಸ್ ಕಡಬ) newskadaba.comಕಡಬ,ಫೆ.12.ಕಡಬ ಸರಸ್ವತೀ ವಿದ್ಯಾಲಯ ಸಾಮರಸ್ಯ ದಿನಾಚರಣೆ ಅಂಗವಾಗಿ ಸಾಮರಸ್ಯ ಭೋಜನ ನಡೆಯಿತು. ಗ್ರಾಮ ವಿಕಾಸ ಸಾಮರಸ್ಯ ವಿಭಾಗ ಪುತ್ತೂರು ಜಿಲ್ಲಾ ಸಂಚಾಲಕ ಉಮೇಶ್ ವೇಣೂರು ಮಾತನಾಡಿ, ಜಾತಿ, ಮತಗಳ ಭೇದವಿಲ್ಲದೇ ಪರೋಪಕಾರಿಯಾಗಿ ಬಾಳಬೇಕು ಆಗ ಸಮಾಜ ನಮ್ಮನ್ನು ಗುರುತಿಸುತ್ತದೆ. ಜಾತಿಗಳ ಒಗ್ಗಟ್ಟು ಸಮಾಜದ ಆರೋಗ್ಯಕರ ಬೆಳವಣಿಗೆಗೆ ಪೂರಕವಾಗಿರಬೇಕು ಹೊರತು ಜಾತಿಗಳ ನಡುವೆ ಕಂದಕಕ್ಕೆ ಎಡೆಮಾಡಿ ಕೊಡಬಾರದು ಎಂದರು. ಕಡಬ ಗ್ರಾಮ ಪಂಚಾಯಿತಿ ಸದಸ್ಯೆ ಕಾರ್ಯಕ್ರಮ ಉದ್ಘಾಟಿಸಿ, ಅದ್ಯಕ್ಷತೆ ವಹಿಸಿ ಶುಭಹಾರೈಸಿದರು. ಶಾಲಾ ಸಂಚಾಲಕ ವೆಂಕಟ್ರಮಣ

ಕಡಬ: ಸರಸ್ವತೀ ವಿದ್ಯಾಲಯ ಸಾಮರಸ್ಯ ಭೋಜನ Read More »

ಕರಾವಳಿ

ಕಡಬ ಸಂತ ಪೌಲರ ಸೀರೋ ಮಲಂಕರ ಕಥೋಲಿಕ್ ದೇವಾಲಯದ ವಾರ್ಷಿಕ ಹಬ್ಬ ಸಮಾಪನ ➤ ನಾವು ಏಸು ಕ್ರಿಸ್ತರ ಪ್ರತಿರೂಪವಾಗಬೇಕು-ಫಾ| ರೊನಾಲ್ಡ್ ಲೋಬೊ

(ನ್ಯೂಸ್ ಕಡಬ) newskadaba.comಕಡಬ,ಫೆ.12. ನಾವು ಏಸು ಕ್ರಿಸ್ತರ ಅನುಯಾಯಿ ಮಾತ್ರ ಆಗದೆ ಅವರ ಪ್ರತಿರೂಪವಾಗಬೇಕು ಎಂದು ಕಡಬ ಸಂತ ಜೋಕಿಮರ ಚರ್ಚಿನ ಧರ್ಮಗುರು ಫಾ| ರೊನಾಲ್ಡ್ ಲೋಬೊ ಹೇಳಿದರು. ಸಂತ ಪೌಲರ ಸೀರೋ ಮಲಂಕರ ಕಥೋಲಿಕ್ ದೇವಾಲಯದ ವಾರ್ಷಿಕ ಹಬ್ಬದ ಮೆರವಣಿಗೆ ಬಳಿಕ ಕಡಬ ಸಂತ ಜೋಕಿಮರ ಚರ್ಚ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಸಂತ ಪೌಲರು ಏಸು ಕ್ರಿಸ್ತರ ಕಟ್ಟಾ ಅನುಯಾಯಿಯಾಗಿದ್ದರು, ಅವರ ಆದರ್ಶ ನಡೆ ನುಡಿಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.   ಬೆಳಿಗ್ಗೆ ದೇವಾಲಯದಲ್ಲಿ

ಕಡಬ ಸಂತ ಪೌಲರ ಸೀರೋ ಮಲಂಕರ ಕಥೋಲಿಕ್ ದೇವಾಲಯದ ವಾರ್ಷಿಕ ಹಬ್ಬ ಸಮಾಪನ ➤ ನಾವು ಏಸು ಕ್ರಿಸ್ತರ ಪ್ರತಿರೂಪವಾಗಬೇಕು-ಫಾ| ರೊನಾಲ್ಡ್ ಲೋಬೊ Read More »

ಕರಾವಳಿ

ಅಬುದಾಬಿಯಲ್ಲಿ ನಡೆಯಲಿರುವ ವಲ್ಡ್ ಸ್ಪೇಷಲ್ ಓಲಂಪಿಕ್ಸ್ ➤ ಮರ್ದಾಳ ಭೆಥನಿ ವಿಶೇಷ ಶಾಲೆಯ ದಿವ್ಯಾ ಆಯ್ಕೆ ರಾಜ್ಯದ ಏಕೈಕ ಮಹಿಳಾ ಆಟಗಾರ್ತಿ

(ನ್ಯೂಸ್ ಕಡಬ) newskadaba.comಕಡಬ,ಫೆ.12. ಮಾ.2019ರಲ್ಲಿ ಅಬುದಾಬಿಯಲ್ಲಿ ನಡೆಯಲಿರುವ ವಿಶೇಷ ವಿಶ್ವ ಓಲಂಪಿಕ್ಸ್‍ಗೆ ಮರ್ದಾಳ ಜೀವನ್ ಜ್ಯೋತಿ ವಿಶೇಷ ಶಾಲಾ ವಿದ್ಯಾರ್ಥಿನಿ ದಿವ್ಯಾ ವಾಲಿಬಾಲ್ ಆಟಗಾರ್ತಿಯಾಗಿ ರಾಷ್ಟ್ರವನ್ನು ಪ್ರತಿನಿಧಿಸಲಿದ್ದಾರೆ. ಸುಮಾರು 170 ದೇಶಗಳು ಭಾಗವಹಿಸಲಿದ್ದು ದಿವ್ಯಾರವರು ಗುಜರಾತ್‍ನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಳಿಕ ರಾಜಸ್ಥಾನ, ಪಶ್ಚಿಮ ಬಂಗಾಳ, ಮತ್ತು ಗುಜರಾತ್ ಗಾಂಧಿನಗರದಲ್ಲಿ ನಡೆದ ರಾಷ್ಟ್ರ ಮಟ್ಟದ ತರಬೇತಿ ಮತ್ತು ಆಯ್ಕೆ ಶಿಬಿರಗಳಲ್ಲಿ ಭಾಗವಹಿಸಿ ತಂಡದ ಪ್ರಮುಖ ಆಟಗಾರ್ತಿಯಾಗಿ ಆಯ್ಕೆಯಾಗಿದ್ದಾರೆ. ಇವರು ಕೊಣಾಜೆ ಬೆತ್ತೋಡಿಯ ಪ್ರೇಮಾ ಮತ್ತು ರಘುನಾಥ ರೈಯವರ

ಅಬುದಾಬಿಯಲ್ಲಿ ನಡೆಯಲಿರುವ ವಲ್ಡ್ ಸ್ಪೇಷಲ್ ಓಲಂಪಿಕ್ಸ್ ➤ ಮರ್ದಾಳ ಭೆಥನಿ ವಿಶೇಷ ಶಾಲೆಯ ದಿವ್ಯಾ ಆಯ್ಕೆ ರಾಜ್ಯದ ಏಕೈಕ ಮಹಿಳಾ ಆಟಗಾರ್ತಿ Read More »

ಕರಾವಳಿ

ನೆಲ್ಯಾಡಿ ಶಾಲಾ ವಿದ್ಯಾರ್ಥಿ ನಾಪತ್ತೆ

(ನ್ಯೂಸ್ ಕಡಬ) newskadaba.comವೇಣೂರು, ಫೆ.12.ನೆಲ್ಯಾಡಿ ಖಾಸಗಿ ಶಾಲಾ 9ನೇ ತರಗತಿ ವಿದ್ಯಾರ್ಥಿ ಶಾಲೆಗೆಂದು ಹೋದವನು ನಾಪತ್ತೆಯಾದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣೆ ಯಿಂದ ವರದಿಯಾಗಿದೆ.ನಾಪತ್ತೆಯಾದ ವಿದ್ಯಾರ್ಥಿಯನ್ನು ಪುತ್ತೂರು ತಾಲೂಕು, ಕೊಣಾಲು ಗ್ರಾಮದ ಆರ್ಲ ನಿವಾಸಿ ಜಾರ್ಜ್‌ ಕುಟ್ಟಿ ಎಂಬವರ ಪುತ್ರ ಸೆಬಾಸ್ಟಿನ್ ಜಿ. ವಿ. ಎಂದು ಗುರುತಿಸಲಾಗಿದೆ.     ಸೋಮವಾರ ಮನೆಯಿಂದ ಬೆಳಗ್ಗೆ ಶಾಲಾ ಸಮವಸ್ತ್ರವನ್ನು ಧರಿಸಿಕೊಂಡು ಸ್ಕೂಲ್ ಬ್ಯಾಗಿನೊಂದಿಗೆ ಶಾಲೆಗೆಂದು ಹೋದವನು ಮನೆಗೆ  ಬರಲೇ ಇಲ್ಲ .ಪೋಷಕರು ಶಾಲಾ ಶಿಕ್ಷಕರಲ್ಲಿ ವಿಚಾರಿಸಿದಾಗ  ಸೆಬಾಸ್ಟಿನ್ ಜಿ. ವಿ

ನೆಲ್ಯಾಡಿ ಶಾಲಾ ವಿದ್ಯಾರ್ಥಿ ನಾಪತ್ತೆ Read More »

ಕರಾವಳಿ

ಸರ್ಕಾರಿ ವಾಹನಗಳ ಹರಾಜು ಮತ್ತು ಟೆಂಡರ್ ಆಹ್ವಾನ

(ನ್ಯೂಸ್ ಕಡಬ) newskadaba.comಮಂಗಳೂರು,ಫೆ.12.ಅಬಕಾರಿ ಉಪ ಆಯುಕ್ತರರವರ ಕಚೇರಿ, ದಕ್ಷಿಣ ಕನ್ನಡ ಜಿಲ್ಲೆ ಅಬಕಾರಿ ಭವನ ಮೇರಿಹಿಲ್ ಇಲ್ಲಿ ದುರಸ್ತಿಗೆ ಒಳಪಡಿಸಿದ ಅನುಪಯುಕ್ತಗೊಳಿಸಲಾದ ಸರ್ಕಾರಿ ವಾಹನಗಳಾದ ಮಹೀಂದ್ರ ಸ್ಕಾರ್ಪಿಯೋ ಸಂ. ಏಂ-19-ಉ-8080, ಟಾಟಾ ಸುಮಾ ಜೀಪು ಏಂ-19-ಉ-668, ಟಾಟಾ ಸುಮಾ ಜೀಪು ಏಂ-19-ಉ-357 ವಾಹನಗಳನ್ನು ಟೆಂಡರ್ ಕಮ್ ಬಹಿರಂಗ ಹರಾಜು ಅರ್ಜಿ ಆಹ್ವಾನಿಸಿದೆ.   ಟೆಂಡರ್ ಗೆ ಅರ್ಜಿ ಸ್ವೀಕರಿಸುವ ಕಡೆಯ ದಿನ ಪೆಬ್ರವರಿ 18 ರಂದು ಮದ್ಯಾನ 2 ಗಂಟೆಗೆ. ಮತ್ತು ಹರಾಜು ಸಮಯ ಪೆಬ್ರವರಿ 18

ಸರ್ಕಾರಿ ವಾಹನಗಳ ಹರಾಜು ಮತ್ತು ಟೆಂಡರ್ ಆಹ್ವಾನ Read More »

ಕರಾವಳಿ
Scroll to Top