ಕಡಬ: ಬೆಳ್ಳಂಬೆಳಗ್ಗೆ ಅಗ್ನಿಗಾಹುತಿಯಾದ ಟಾಟಾ ಮ್ಯಾಜಿಕ್ ಐರಿಸ್ ➤ ಸಂಪೂರ್ಣ ಸುಟ್ಟು ಕರಕಲು

(ನ್ಯೂಸ್ ಕಡಬ) newskadaba.com ಕಡಬ, ಫೆ.14. ಟಾಟಾ ಮ್ಯಾಜಿಕ್ ಐರಿಸ್ ವಾಹನದಲ್ಲಿ ಆಕಸ್ಮಿಕ ಬೆಂಕಿಯುಂಟಾದ ಪರಿಣಾಮ ಹೊತ್ತಿ ಉರಿದ ಘಟನೆ ಕಡಬ ಕಲ್ಲುಗುಡ್ಡೆ ರಸ್ತೆಯ ಮುಲಿಮಜಲು ಎಂಬಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.

 

ಕಲ್ಲುಗುಡ್ಡೆ ಕಡೆಯಿಂದ ಕಡಬ ಕಡೆಗೆ ತೆರಳುತ್ತಿದ್ದ ಜಗ್ಗ ಎಂಬವರಿಗೆ ಸೇರಿದ ವಾಹನದಲ್ಲಿ ಮುಳಿಮಜಲು ತಲುಪಿದಾಗ ಬೆಂಕಿ ಕಂಡುಬಂದಿದ್ದು, ಪ್ರಯಾಣಿಕರು ಹೊರ ಬಂದಿದ್ದರಿಂದಾಗಿ ಪ್ರಾಣಾಪಾಯ ಸಂಭವಿಸಿಲ್ಲ‌. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿರಬಹುದೆಂದು ಶಂಕಿಸಲಾಗಿದೆ.

Scroll to Top