ಅಂಚೆ ಚೀಟಿ ಪ್ರದರ್ಶನ / ಸ್ಪರ್ಧೆ ➤ ಆನ್ ಲೈನ್ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.6.ಮಂಗಳೂರಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ರಾಜ್ಯಮಟ್ಟದ ಅಂಚೆ ಚೀಟಿ ಪ್ರದರ್ಶನ ” ಕರ್ನಾಪೆಕ್ಸ್ ” ಗೆ ಅಂಚೆ ಇಲಾಖೆಯು ಅಂಚೆ ಚೀಟಿ ಪ್ರದರ್ಶನಕ್ಕಾಗಿ / ಸ್ಪರ್ಧೆಗಾಗಿ ಆನ್ ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. www.karnapex2019.in  ವೆಬ್ ಸೈಟ್ ನಲ್ಲಿ ಆನ್‍ಲೈನ್ ಫಾರ್ಮ್ ನ್ನು ತುಂಬಬೇಕಾಗುತ್ತದೆ. ಅಪ್ಲಿಕೇಶನ್ ತುಂಬಲು ಕೊನೆಯ ದಿನ ಜುಲೈ 31. ಅರ್ಜಿಯನ್ನು ಭರ್ತಿ ಮಾಡಿ ಎರಡು ಪ್ರತಿಯನ್ನು ” ಸೆಕ್ರೆಟರಿ, ಹಂಚಿಕೆ ಸಮಿತಿ, ಕರ್ನಾಪೆಕ್ಸ್ 2019, ಚೀಫ್ ಪೋಸ್ಟ್ ಮಾಸ್ಟರ್ […]

ಅಂಚೆ ಚೀಟಿ ಪ್ರದರ್ಶನ / ಸ್ಪರ್ಧೆ ➤ ಆನ್ ಲೈನ್ ಅರ್ಜಿ ಆಹ್ವಾನ Read More »

ಕರಾವಳಿ

ಮಗುವಿನ ಪೋಷಕರ ಪತ್ತೆಗಾಗಿ ಮನವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.6.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಅಪಾರ್ಟ್‍ಮೆಂಟ್ ನಲ್ಲಿ ತಾಯಿಯಾದ ಮುಸ್ಕಾನ್ ಸುಮಾರು 6 ತಿಂಗಳು ಪ್ರಾಯದ ಮಗುವನ್ನು ತೊರೆದು ಹೋಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಂಗಳೂರು ಇವರ ಆದೇಶದನ್ವಯ ಪಾಲನೆ ಹಾಗೂ ಪೋಷಣೆಗಾಗಿ ವಾತ್ಸಲ್ಯಧಾಮ ದತ್ತು ಕೆಂದ್ರ, ಶ್ರೀ ರಾಮಕೃಷ್ಣ ಸೇವಾ ಸಮಾಜ ಪುತ್ತೂರು ಇಲ್ಲಿ ದಾಖಲಿಸಲಾಗಿದೆ. ಈ ಮಗುವಿನ ವಾರಸುದಾರರು ಯಾರಾದರೂ ಇದ್ದಲ್ಲಿ 60 ದಿನದೊಳಗೆ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ,1ನೇ ಮಹಡಿ,

ಮಗುವಿನ ಪೋಷಕರ ಪತ್ತೆಗಾಗಿ ಮನವಿ Read More »

ಕರಾವಳಿ

ಕಡಬ: ವಿದ್ಯುತ್ ಆಘಾತಕ್ಕೆ ಒಳಗಾಗಿ ಯುವಕ ಮೃತ್ಯು ➤ ಮನೆಯಲ್ಲಿ ಲೈಟ್ ಉರಿಸಲೆಂದು ಸ್ವಿಚ್ ಹಾಕುತ್ತಿದ್ದ ವೇಳೆ ಘಟನೆ

(ನ್ಯೂಸ್ ಕಡಬ) newskadaba.com ಕಡಬ, ಜು.06. ಎಚ್.ಟಿ. ವಿದ್ಯುತ್ ಮಾರ್ಗದ ತಂತಿಯು ಎಲ್.ಟಿ. ತಂತಿಗೆ ತಾಗಿದ ಪರಿಣಾಮ ಉಂಟಾದ ವಿದ್ಯುತ್ ಆಘಾತಕ್ಕೆ ಯುವಕನೋರ್ವ ಬಲಿಯಾದ ಘಟನೆ ಐತ್ತೂರು ಗ್ರಾಮದ ಸುಂಕದಕಟ್ಟೆ ಸಮೀಪದ ನೆಲ್ಲಿಕಟ್ಟೆ ಎಂಬಲ್ಲಿ ಶನಿವಾರದಂದು ಮುಂಜಾನೆ ಸಂಭವಿಸಿದೆ. ಮೃತ ಯುವಕನನ್ನು ನೆಲ್ಲಿಕಟ್ಟೆ ಕಾಲನಿ ನಿವಾಸಿ ಜಯರಾಮ ಎಂಬವರ ಪುತ್ರ ಮೋಹನ್(32) ಎಂದು ಗುರುತಿಸಲಾಗಿದೆ. ಮೋಹನ್ ಎಂದಿನಂತೆ ಶನಿವಾರ ಮುಂಜಾನೆ ಎದ್ದು ತನ್ನ ಮನೆಯ ಲೈಟ್ ಉರಿಸಲೆಂದು ಸ್ವಿಚ್ ಹಾಕುತ್ತಿದ್ದ ವೇಳೆ ವಿದ್ಯುತ್ ಆಘಾತಕ್ಕೆ ಒಳಗಾಗಿ ಕೆಳಕ್ಕೆಸೆಯಲ್ಪಟ್ಟು

ಕಡಬ: ವಿದ್ಯುತ್ ಆಘಾತಕ್ಕೆ ಒಳಗಾಗಿ ಯುವಕ ಮೃತ್ಯು ➤ ಮನೆಯಲ್ಲಿ ಲೈಟ್ ಉರಿಸಲೆಂದು ಸ್ವಿಚ್ ಹಾಕುತ್ತಿದ್ದ ವೇಳೆ ಘಟನೆ Read More »

ಕರಾವಳಿ

ಮಾರುಕಟ್ಟೆ ಮೌಲ್ಯ ನಿಗಧಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.6.ಜುಲೈ 2 ರಂದು ಮಂಗಳೂರು ತಾಲೂಕು ಮಾರುಕಟ್ಟೆ ಮೌಲ್ಯ ಮಾಪನ ಉಪಮಿತಿಯು 2018-19ನೇ ಸಾಲಿನಲ್ಲಿ ಹೊಸ/ಹಳೆಯ ಬಿಟ್ಟುಹೋದ ಹಾಗೂ ಗುರುತಿಸಲಾದ ಬಡಾವಣೆ ಅಪಾರ್ಟ್‍ಮೆಂಟ್‍ಗಳ ಮಾರುಕಟ್ಟೆ ಮೌಲ್ಯವನ್ನು ನಿಗಧಿ ಪಡಿಸಲಾಗಿತ್ತು. ಅದನ್ನು  ಸಂಬಂಧಪಟ್ಟ ಕಚೇರಿಯಲ್ಲಿ ಸಾರ್ವಜನಿಕ ಆಕ್ಷೇಪಣೆಗಾಗಿ ಈಗಾಗಲೇ ಪ್ರಕಟಣೆಗೊಳ್ಳಿಸಲಾಗಿದ್ದು, ಸಾರ್ವಜನಿಕರು ತಮ್ಮ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಜುಲೈ 17 ರೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಕಾರ್ಯದರ್ಶಿಗಳು ಮಂಗಳೂರು ತಾಲ್ಲೂಕು ಮಾರುಕಟ್ಟೆ ಮೌಲ್ಯಮಾಪನ ಉಪಸಮಿತಿಯ ಪ್ರಕಟಣೆ ತಿಳಿಸಿದೆ.

ಮಾರುಕಟ್ಟೆ ಮೌಲ್ಯ ನಿಗಧಿ Read More »

ಕರಾವಳಿ

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ➤ ಒಟ್ಟು 9 ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.6.ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ (ರಿ), ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಅಧ್ಯಕ್ಷ/ ಖಜಾಂಚಿ/ ರಾಜ್ಯ ಪರಿಷತ್ ಸದಸ್ಯ ಚುನಾವಣೆಗೆ ನಾಮ ಪತ್ರ ಸಲ್ಲಿಕೆಯ ಅಂತಿಮ ದಿನ ಜುಲೈ 4 ರವರೆಗೆ ಒಟ್ಟು 9 ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಹಾಲಿ ಖಜಾಂಚಿ ಯುವಜನ ಸೇವೆ ಮತ್ತು ಗ್ರಂಥಾಲಯ ಇಲಾಖೆ ಪಿ.ಕೆ. ಕೃಷ್ಣ , ಹಾಲಿ ಅಧ್ಯಕ್ಷ ನ್ಯಾಯಾಂಗ ಇಲಾಖೆ ಪ್ರಕಾಶ್ ನಾಯಕ್ , ಆರ್ಥಿಕ ಮತ್ತು

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ➤ ಒಟ್ಟು 9 ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಕೆ Read More »

ಕರಾವಳಿ

ಬೋಳಿಯಾರು ➤ ಗ್ರಾಮ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.6.ಮಂಗಳೂರು ತಾಲೂಕು ಬೋಳಿಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯನ್ನು ಆಯೋಜಿಸಲಾಗಿದೆ. ಜುಲೈ 11 ರಂದು ಬೆಳಿಗ್ಗೆ 10.30 ಗಂಟೆಗೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ.ಎಂದು ಸೂಚಿಸಲಾಗಿದೆ.

ಬೋಳಿಯಾರು ➤ ಗ್ರಾಮ ಸಭೆ Read More »

ಕರಾವಳಿ

ಮತ್ಸ್ಯ ವರ್ಣ ಕಲಾ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.6.ಕರಾವಳಿಯ ಸಾಂಸ್ಕøತಿಕ, ಸಂಪ್ರದಾಯಿಕ ಚಟುವಟಿಕೆಯನ್ನು ಮುಖ್ಯವಾಗಿ ಇಟ್ಟುಕೊಂಡು ನಡೆಯುತ್ತಿರುವ ಈ ಚಿತ್ರಕಲಾ ಶಿಬಿರವು ತುಂಬಾ ಆದರ್ಶಪ್ರಾಯವಾದದ್ದು ಎಂದು ಆಳ್ವಾಸ್ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ. ಮೋಹನ ಆಳ್ವಾ ಹೇಳಿದರು. ಇಂದು ನಡೆದ ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಹಾಗೂ ಮೀನುಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯ, ಬೀದರ, ಮೀನುಗಾರಿಕಾ ಕಾಲೇಜು ಮಂಗಳೂರು ಇದರ ಸುವರ್ಣ ಮಹೋತ್ಸವ ಸಂಭ್ರಮ ಆಚರಣೆ ಹಾಗೂ ಕರಾವಳಿ ಚಿತ್ರಕಲಾ ಚಾವಡಿ(ರಿ.) ಇವರ ಸಂಯುಕ್ತ ಆಶ್ರಯದಲ್ಲಿ ಮೀನುಗಾರಿಕಾ ವಿಶ್ವವಿದ್ಯಾಲಯ, ಮಂಗಳೂರಿನಲ್ಲಿ ಎರಡು ದಿನಗಳ

ಮತ್ಸ್ಯ ವರ್ಣ ಕಲಾ ಶಿಬಿರ Read More »

ಕರಾವಳಿ

ಗ್ಯಾಂಗ್ ರೇಪ್ ಮಾಸುವ ಮುನ್ನವೇ ಮತ್ತೊಂದು ವಿದ್ಯಾರ್ಥಿನಿಯ ಅತ್ಯಾಚಾರ ➤ 15 ವರ್ಷದ ಬಾಲಕಿಯ ಅತ್ಯಾಚಾರಕ್ಕೆ ಬೆಚ್ಚಿ ಬಿದ್ದ ಪುತ್ತೂರು

(ನ್ಯೂಸ್ ಕಡಬ) newskadaba.com ಪುತ್ತೂರು, ಜು.05. ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಬೆಚ್ಚಿಬಿದ್ದಿದ್ದ ಪುತ್ತೂರಿನಲ್ಲಿ ಮತ್ತೊಂದು ಅಂತಹುದೇ ಪ್ರಕರಣ ಶುಕ್ರವಾರದಂದು ನಡೆದಿದ್ದು, ಪ್ರೌಢಶಾಲಾ ವಿದ್ಯಾರ್ಥಿನಿಯ ಮೇಲೆ ವಿವಾಹಿತ ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿದ್ದು, ಆರೋಪಿಯನ್ನು ಬಂಧಿಸಿರುವ ಪುತ್ತೂರು ಗ್ರಾಮಾಂತರ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಬಾಲಕಿಯ ಮನೆಯ ನೆರೆಯವನಾದ ಅಜಿತ್ ಎಂದು ಗುರುತಿಸಲಾಗಿದೆ. ಪುತ್ತೂರಿನ ಪ್ರೌಢಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ಶುಕ್ರವಾರ ಬೆಳಿಗ್ಗೆ ಏಳು ಗಂಟೆಗೆ ಶಾಲೆಗೆ ಹೋಗುವ ಸಮಯ ಆರೋಪಿಯು ಸುಳ್ಳು ಹೇಳಿ ಬಾಲಕಿಯನ್ನು

ಗ್ಯಾಂಗ್ ರೇಪ್ ಮಾಸುವ ಮುನ್ನವೇ ಮತ್ತೊಂದು ವಿದ್ಯಾರ್ಥಿನಿಯ ಅತ್ಯಾಚಾರ ➤ 15 ವರ್ಷದ ಬಾಲಕಿಯ ಅತ್ಯಾಚಾರಕ್ಕೆ ಬೆಚ್ಚಿ ಬಿದ್ದ ಪುತ್ತೂರು Read More »

ಕರಾವಳಿ

ಕಡಬ: ಟೈಲರಿಂಗ್ ಕೆಲಸಕ್ಕೆಂದು ತೆರಳಿದ್ದ ಯುವತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಜು.05. ಟೈಲರಿಂಗ್ ಕೆಲಸಕ್ಕೆಂದು ತೆರಳಿದ ಯುವತಿಯೋರ್ವಳು ಕೆಲಸಕ್ಕೂ ಹೋಗದೆ ಮನೆಗೂ ಹಿಂತಿರುಗದೆ ನಾಪತ್ತೆಯಾಗಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಗುರಿಯಡ್ಕ ಎಂಬಲ್ಲಿ ಬುಧವಾರದಂದು ನಡೆದಿದೆ. ನಾಪತ್ತೆಯಾಗಿರುವ ಯುವತಿಯನ್ನು 102 ನೆಕ್ಕಿಲಾಡಿ ಗ್ರಾಮದ ಗುರಿಯಡ್ಕ ನಿವಾಸಿ ಪೊಡಿಯ ಎಂಬವರ ಪುತ್ರಿ ದಿವ್ಯಾ(20) ಎಂದು ಗುರುತಿಸಲಾಗಿದೆ. ಕಡಬದಲ್ಲಿ ಟೈಲರಿಂಗ್ ವೃತ್ತಿಯಲ್ಲಿದ್ದ ದಿವ್ಯಾ ಬುಧವಾರದಂದು ಮನೆಯಿಂದ ತೆರಳಿದ್ದು, ಹಿಂತಿರುಗದೆ ಇದ್ದುದರಿಂದ ಹುಡುಕಾಡಿದ ಮನೆಯವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ: ಟೈಲರಿಂಗ್ ಕೆಲಸಕ್ಕೆಂದು ತೆರಳಿದ್ದ ಯುವತಿ ನಾಪತ್ತೆ Read More »

ಕರಾವಳಿ

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೊನೆಗೂ ನೂತನ ಸಾರಥಿ ನೇಮಕ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜುಲೈ.5.ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೊನೆಗೂ ನೂತನ ಸಾರಥಿ ನೇಮಕಗೊಂಡಿದ್ದಾರೆ. ‘ರಾಜೀನಾಮೆ ಸ್ವೀಕರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ’ ಎಂಬ ವಿಶ್ವನಾಥ್ ಎಚ್ಚರಿಕೆ ನಂತರ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದೆಂಬುದನ್ನು ಅರಿತು ರಾಷ್ಟ್ರೀಯ ಆಧ್ಯಕ್ಷ ಎಚ್.ಡಿ. ದೇವೇಗೌಡ ಗುರುವಾರ ರಾಜ್ಯಾಧ್ಯಕ್ಷರ ಹೆಸರನ್ನು ಘೋಷಿಸಿದರು. ನೂತನ ಅಧ್ಯಕ್ಷರಾಗಿ ಸಕಲೇಶಪುರ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿರುವ ಎಚ್.ಕೆ. ಕುಮಾರಸ್ವಾಮಿ, ಕಾರ್ಯಾಧ್ಯಕ್ಷರಾಗಿ ಮಾಜಿ ಶಾಸಕ ಮಧು ಬಂಗಾರಪ್ಪ ನೇಮಕವನ್ನೂ ದೇವೇಗೌಡರು ಪ್ರಕಟಿಸಿದರು. ಹಠಾತ್ ರಾಜಕೀಯ ಬೆಳವಣಿಗೆಯಲ್ಲಿ ಮಂಡ್ಯದಿಂದ ಲೋಕಸಭೆಗೆ

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೊನೆಗೂ ನೂತನ ಸಾರಥಿ ನೇಮಕ Read More »

ಕರಾವಳಿ
Scroll to Top