ಬೆಳ್ಳಾರೆ: ಅಕ್ರಮ ಗಾಂಜಾ ಸಾಗಾಟ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಅ.26. ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, 200 ಗ್ರಾಂ ಗಾಂಜಾ ಹಾಗೂ ಬೊಲೆರೋ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಸುಳ್ಯ ತಾಲೂಕು ಬೆಳ್ಳಾರೆ ಸಮೀಪದ ಅಯ್ಯನಕಟ್ಟೆ ನಿವಾಸಿ ನಾಸಿರ್(25) ಎಂದು ಗುರುತಿಸಲಾಗಿದೆ. ಆರೋಪಿಯು ಬೊಲೆರೋ ವಾಹನದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತ್ಯಾಗರಾಜನಗರ ಎಂಬಲ್ಲಿ ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದು, ಬಂಧಿತನಿಂದ ಸುಮಾರು 4,000 […]

ಬೆಳ್ಳಾರೆ: ಅಕ್ರಮ ಗಾಂಜಾ ಸಾಗಾಟ ➤ ಆರೋಪಿಯ ಬಂಧನ Read More »

ಕರಾವಳಿ

ಪಾಜಪಳ್ಳದಲ್ಲಿ ದ್ವಿದಿನ ಪ್ರಭಾಷಣ ನವಂಬರ್ ನಲ್ಲಿ ಪ್ರಸಿದ್ಧ ವಾಗ್ಮಿ ವಲಿಯುದ್ದೀನ್ ಫೈಝಿ ಆಗಮನ 

ಬಾಳಿಲ ( ನ್ಯೂಸ್ ಕಡಬ ): ಮುಹಿಯುದ್ದೀನ್ ಜುಮಾ ಮಸೀದಿ ಅತ್ತಿಕ್ಕರ ಮಜಲು ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮಿನ್ನತುಲ್ ಹುದಾ ಪಂಚವಾರ್ಷಿಕ ಆಚರಣೆ ಪ್ರಯುಕ್ತ ನವಂಬರ್ 18  ಮತ್ತು 19 ರಂದು ಎರಡು ದಿವಸಗಳ ಧಾರ್ಮಿಕ ಮತಪ್ರಭಾಷಣ ನಡೆಯಲಿರುವುದು. ಮಯ್ಯತ್ ಪರಿಪಾಲನ ವಿಷಯದಲ್ಲಿ ಕ್ಲಿಪ್ಪಿಂಗ್ ಸಹಿತ ಎಲ್ .ಇ .ಡಿ ಸ್ಕ್ರೀನ್ ವ್ಯವಸ್ಥೆಯೊಂದಿಗೆ ಪ್ರಸಿದ್ಧ ವಾಗ್ಮಿ ಉಸ್ತಾದ್ ವಲಿಯುದ್ದೀನ್ ಫೈಝಿ ಎರಡು ದಿವಸಗಳ ಕಾಲ ಪ್ರಭಾಷಣ ನಡೆಸಲಿರುವರು ಎಂದು ಕಾರ್ಯಕ್ರಮದ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪಾಜಪಳ್ಳದಲ್ಲಿ ದ್ವಿದಿನ ಪ್ರಭಾಷಣ ನವಂಬರ್ ನಲ್ಲಿ ಪ್ರಸಿದ್ಧ ವಾಗ್ಮಿ ವಲಿಯುದ್ದೀನ್ ಫೈಝಿ ಆಗಮನ  Read More »

ಕರಾವಳಿ

ಯಶೋದಾ ಜನರಲ್ ಸ್ಟೋರ್ ನಲ್ಲಿ ವಿಶೇಷ ದರಕಡಿತ ಮಾರಾಟ ➤ 107 ಮಂದಿ ಅದೃಷ್ಟಶಾಲಿಗಳಿಗೆ ಬಹುಮಾನ ಗೆಲ್ಲುವ ಅವಕಾಶ

(ನ್ಯೂಸ್ ಕಡಬ) newskadaba.com ಕಡಬ, ಅ.26. ದೀಪಾವಳಿ ಹಬ್ಬದ ಪ್ರಯುಕ್ತ ಕಡಬದ ‘ಯಶೋದಾ ಜನರಲ್ ಸ್ಟೋರ್ & ಸೂಪರ್ ಶಾಪ್’ನಲ್ಲಿ ವಿಶೇಷ ದರಕಡಿತ ಮಾರಾಟ ಮತ್ತು 107 ಮಂದಿ ಅದೃಷ್ಟಶಾಲಿಗಳಿಗೆ ಬಹುಮಾನ ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿದೆ. ಪ್ರತೀ 1000 ಖರೀದಿಗೆ ಉಚಿತ‌ ಲಕ್ಕೀ ಕೂಪನ್ ದೊರೆಯಲಿದ್ದು, 02 ಮಂದಿ ಅದೃಷ್ಟಶಾಲಿಗಳಿಗೆ ವಿವೋ ಮೊಬೈಲ್, 05 ಮಂದಿ ಅದೃಷ್ಟಶಾಲಿಗಳಿಗೆ ಮಿಕ್ಸರ್ ಗ್ರೈಂಡರ್, 20 ಮಂದಿ ಅದೃಷ್ಟಶಾಲಿಗಳಿಗೆ ಸಾರಿ ಅಥವಾ ಪ್ಯಾಂಟ್ ಶರ್ಟ್, 30 ಮಂದಿ ಅದೃಷ್ಟಶಾಲಿಗಳಿಗೆ ಡೆಕ್ಕನ್ ಸ್ಟೂಲ್

ಯಶೋದಾ ಜನರಲ್ ಸ್ಟೋರ್ ನಲ್ಲಿ ವಿಶೇಷ ದರಕಡಿತ ಮಾರಾಟ ➤ 107 ಮಂದಿ ಅದೃಷ್ಟಶಾಲಿಗಳಿಗೆ ಬಹುಮಾನ ಗೆಲ್ಲುವ ಅವಕಾಶ Read More »

ಕರಾವಳಿ

ಕಡಬ ಗಜಾನನ ರೈಸ್ ಮಿಲ್ ಮಾಲಕ ನಾಗರಾಜ್ ಆಚಾರ್ಯ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಕಡಬ, ಅ.26. ಕಡಬ ನಿವಾಸಿ, ಗಜಾನನ ರೈಸ್ ಮಿಲ್ ನ ಮಾಲೀಕ ನಾಗರಾಜ ಆಚಾರ್ಯ ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಶನಿವಾರದಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕಡಬದಲ್ಲಿ ಗಜಾನನ ರೈಸ್ ಮಿಲ್‌ ನಡೆಸುತ್ತಿದ್ದ ಇವರು ಚಿರಪರಿಚಿತರಾಗಿದ್ದರು. ಕಳೆದ ಕೆಲವು ಸಮಯಗಳಿಂದ ಅನಾರೋಗ್ಯಕ್ಕೊಳಗಾಗಿದ್ದ ಇವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಅಪರಾಹ್ನ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಕಡಬ ಗಜಾನನ ರೈಸ್ ಮಿಲ್ ಮಾಲಕ ನಾಗರಾಜ್ ಆಚಾರ್ಯ ಇನ್ನಿಲ್ಲ Read More »

ಕರಾವಳಿ

ಬೆಳ್ತಂಗಡಿಯ ಕಿಂಡಿ ಅಣೆಕಟ್ಟುಗಳ ಮರುನಿರ್ಮಾಣಕ್ಕೆ 30 ಕೋ.ರೂ. ಬಿಡುಗಡೆ ➤ಸಣ್ಣ ನೀರಾವರಿ ಇಲಾಖಾ ಸಚಿವ ಜೆ.ಸಿ ಮಾಧುಸ್ವಾಮಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ.26. ಪ್ರವಾಹದಿಂದ ಹಾನಿಯಾಗಿರುವ ಕಿಂಡಿ ಅಣೆಕಟ್ಟುಗಳ ಮರು ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ 30 ಕೋ.ರೂ.ಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ಹಾಗೂ ಸಣ್ಣ ನೀರಾವರಿ ಇಲಾಖಾ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ. ಶನಿವಾರದಂದು ಬೆಳ್ತಂಗಡಿ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅವರು, ಪ್ರವಾಹದಿಂದ ಹಾನಿಯಾಗಿರುವ ಪ್ರದೇಶದಲ್ಲಿ ನದಿಗಳಿಗೆ ತಡೆಗೋಡೆ ನಿರ್ಮಾಣಕ್ಕೆ ಬೇಡಿಕೆ ಬರುತ್ತಿದ್ದು, ಈ ಬಗ್ಗೆ ತಜ್ಞರು ಅಧ್ಯಯನ ನಡೆಸಿ ಅವರ ವರದಿಯ ಆಧಾರದಲ್ಲಿ ತಡೆಗೋಡೆಗೆ ಅನುದಾನ ನೀಡುವ ಕಾರ್ಯ

ಬೆಳ್ತಂಗಡಿಯ ಕಿಂಡಿ ಅಣೆಕಟ್ಟುಗಳ ಮರುನಿರ್ಮಾಣಕ್ಕೆ 30 ಕೋ.ರೂ. ಬಿಡುಗಡೆ ➤ಸಣ್ಣ ನೀರಾವರಿ ಇಲಾಖಾ ಸಚಿವ ಜೆ.ಸಿ ಮಾಧುಸ್ವಾಮಿ Read More »

ಕರಾವಳಿ

ನ.01 ರಿಂದ ಅಂಗಡಿಗಳ ನಾಮಫಲಕದಲ್ಲಿ ಕನ್ನಡ ಕಡ್ಡಾಯ ➤ ಇಲ್ಲದಿದ್ದರೆ ಲೈಸೆನ್ಸ್ ಕ್ಯಾನ್ಸೆಲ್..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.26. ನವೆಂಬರ್‌ 1ರಿಂದ ನಗರದ ಎಲ್ಲ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗ‌ಳು ಹಾಗೂ ಖಾಸಗಿ ಕಂಪನಿಗಳು ಕನ್ನಡ ನಾಮಫಲಕ ಅಳವಡಿಸುವುದು ಕಡ್ಡಾಯ ಎಂದು ಬಿಬಿಎಂಪಿ ಆಯುಕ್ತ ಅನಿಲ್‌ ಕುಮಾರ್‌ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ಕನ್ನಡ ಭಾಷೆಯನ್ನು ನಾಮಫ‌ಲಕಗಳಲ್ಲಿ ನೀಡದಿದ್ದರೆ ಅಂತಹ ಮಳಿಗೆಗಳ ಪರವಾನಗಿಯನ್ನು ರದ್ದುಗೊಳಿಸ ಲಾಗುವುದು ಎಂದು ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಮಳಿಗೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯ ಬಳಕೆ ಬಳಕೆಯಾಗಬೇಕು, ಹಾಗೂ ನಾಮ ಫಲಕಗಳಲ್ಲಿ ಕನ್ನಡ ಪದಗಳು ಸ್ಪಷ್ಟವಾಗಿ

ನ.01 ರಿಂದ ಅಂಗಡಿಗಳ ನಾಮಫಲಕದಲ್ಲಿ ಕನ್ನಡ ಕಡ್ಡಾಯ ➤ ಇಲ್ಲದಿದ್ದರೆ ಲೈಸೆನ್ಸ್ ಕ್ಯಾನ್ಸೆಲ್..! Read More »

ಕರ್ನಾಟಕ

ಬಸ್ ಮತ್ತು ಕಾರ್ ನಡುವೆ ಡಿಕ್ಕಿ

(ನ್ಯೂಸ್ ಕಡಬ) newskadaba.com ಸುಳ್ಯ , ಅ.26. ಕಾರು ಹಾಗೂ ಬಸ್ ನಡುವೆ ಡಿಕ್ಕಿ ಸಂಭವಿಸಿದುದರ ಪರಿಣಾಮ ಕಾರಿನಲ್ಲಿರುವವರಿಗೆ ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದಲ್ಲಿ ಸಂಭವಿಸಿದೆ. ಕೊಡಗು ಜಿಲ್ಲೆಯ ಚಂದ್ರಪ್ರಸಾದ್ ಜೆ ಎಸ್ ಎಂಬವರು ತನ್ನ ಸ್ನೇಹಿತ ವಿಷ್ಣುಮೂರ್ತಿ ರಾವ್ ರೊಂದಿಗೆ ಕಾರಿನಲ್ಲಿ ಚಲಿಸುತ್ತಿದ್ದಾಗ ಸುಳ್ಯ  ತಾಲೂಕಿನ ಜಾಲ್ಸೂರು  ಎಂಬಲ್ಲಿ ಬಸ್ಸಿನ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಆಟೋ ರಿಕ್ಷಾವನ್ನು ಓವರ್ ಟೇಕ್ ಮಾಡಿ ಕಾರಿಗೆ ಡಿಕ್ಕಿ ಹೊಡೆದುದರಿಂದ ಕಾರು ಜಖಂಗೊಂಡು ಕಾರಿನಲ್ಲಿದ್ದವರು

ಬಸ್ ಮತ್ತು ಕಾರ್ ನಡುವೆ ಡಿಕ್ಕಿ Read More »

ಕರಾವಳಿ

ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಬೆಂಗಳೂರಿಗೆ ವರ್ಗಾವಣೆ ➤ ನೂತನ ವೃತ್ತ ನಿರೀಕ್ಷಕರಾಗಿ ನವೀನ್ ಚಂದ್ರ ನೇಮಕ

(ನ್ಯೂಸ್ ಕಡಬ) newskadaba.com ಸುಳ್ಯ, ಅ.26. ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್.ಸತೀಶ್ ಕುಮಾರ್ ಅವರನ್ನು ಬೆಂಗಳೂರು ಪೊಲೀಸ್ ಪ್ರಧಾನ ಕಚೇರಿಗೆ ವರ್ಗಾಯಿಸಿ ಸರಕಾರವು ಆದೇಶ ಹೊರಡಿಸಿದೆ. ರಾಜ್ಯ ಗುಪ್ತ ವಾರ್ತೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ನವೀನ್ ಚಂದ್ರ ಜೋಗಿಯವರನ್ನು ಸುಳ್ಯದ ನೂತನ ವೃತ್ತ ನಿರೀಕ್ಷಕರಾಗಿ ನೇಮಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಬೆಂಗಳೂರಿಗೆ ವರ್ಗಾವಣೆ ➤ ನೂತನ ವೃತ್ತ ನಿರೀಕ್ಷಕರಾಗಿ ನವೀನ್ ಚಂದ್ರ ನೇಮಕ Read More »

ಕರಾವಳಿ

ಕಾಲು ಜಾರಿ ಹಳ್ಳಕ್ಕೆ ಬಿದ್ದು ಮೃತಪಟ್ಟ ಬಾಲಕ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ , ಅ.26. ರವಿಯವರ ಹಿರಿಯ ಮಗ ಅಭಿಷೇಕ್ (12 ವರ್ಷ) ತನ್ನ ತಮ್ಮ ದೀಕ್ಷಿತ್ ನ  ಜೊತೆ ನಿನ್ನೆ ಬೆಳಗ್ಗೆ ಮನೆಯಿಂದ ಆಟ ಆಡಲೆಂದು ಹೋಗಿ, ಹಳ್ಳದ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ  ಹೊಸಂಗಡಿ ಗ್ರಾಮ, ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಕೂಲಿಕೆಲಸಗಾರನಾದ ರವಿಯು ಮಗ ಅಭಿಷೇಕ್ ಸಂಜೆಯಾದರೂ ಮನೆಗೆ ಬಾರದದ್ದನ್ನು ಗಮನಿಸಿ, ನೆರೆಯವರ ಸಹಾಯದಿಂದ ಹುಡುಕಾಡಿದಾಗ  ಮನೆಯ ಹತ್ತಿರದ ಪೇರಿಬೊಟ್ಟು ಎಂಬಲ್ಲಿ ಮಳೆ ನೀರು ನಿಂತಿದ್ದ ಹಳ್ಳದ ನೀರಿನ ಬದಿಯಲ್ಲಿ ಅಭಿಷೇಕ್

ಕಾಲು ಜಾರಿ ಹಳ್ಳಕ್ಕೆ ಬಿದ್ದು ಮೃತಪಟ್ಟ ಬಾಲಕ Read More »

ಕರಾವಳಿ

ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಕರ್ನಾಟಕಕ್ಕೆ ಚಾಂಪಿಯನ್ ಶಿಪ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.26. ಶುಕ್ರವಾರದಂದು ನಡೆದ ವಿಜಯ್ ಹಜಾರೆ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ತಮಿಳುನಾಡಿನ ವಿರುದ್ದ ಚಾಂಪಿಯನ್ ಶಿಪ್ ಪಡೆದಿದೆ. ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು 49.5 ಓವರ್ ಗಳಲ್ಲಿ 252 ರನ್ ಗೆ ಆಲ್ ಔಟ್ ಆಯಿತು. ಮಿಥುನ್ ಹ್ಯಾಟ್ರಿಕ್ ಸಹಿತ ಮೂರು ವಿಕೆಟ್ ಪಡೆದರು.   ಕರ್ನಾಟಕ ಒಂದು ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿದ್ದ ವೇಳೆ ಮಳೆ ಅಡ್ಡಿಯಾಯಿತು. ಮಳೆ ನಿಲ್ಲದ ಕಾರಣ ವಿಜೆಡಿ ನಿಯಮದ ಪ್ರಕಾರ ಕರ್ನಾಟಕ

ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಕರ್ನಾಟಕಕ್ಕೆ ಚಾಂಪಿಯನ್ ಶಿಪ್ Read More »

ಕ್ರೀಡಾ ನ್ಯೂಸ್
Scroll to Top