ಕೇರಳ ರಾಜ್ಯಪಾಲರ ಪ್ರವಾಸ

(ನ್ಯೂಸ್ ಕಡಬ) newskadaba.com, ಮಂಗಳೂರು, ನ.26. ಕೇರಳ ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ ಅವರು ನ. 30ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ರೈಲಿನ ಮೂಲಕ ಅಂದು ಬೆಳಿಗ್ಗೆ 5.15 ಕ್ಕೆ ನಗರಕ್ಕೆ ಆಗಮಿಸುವ ರಾಜ್ಯಪಾಲರು, 11 ಗಂಟೆಗೆ ನಗರದ ಟಿಎಂಎ ಪೈ ಸಭಾಂಗಣದಲ್ಲಿ ನಡೆಯುವ ಮಂಗಳೂರು ಲಿಟರೆರಿ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅಪರಾಹ್ನ 2.15 ಕ್ಕೆ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.

ಕೇರಳ ರಾಜ್ಯಪಾಲರ ಪ್ರವಾಸ Read More »

ಕರ್ನಾಟಕ

ಡಿ.10 ರಂದು ಅಂಚೆ ಪಿಂಚಣಿ ಅದಾಲತ್

(ನ್ಯೂಸ್ ಕಡಬ) newskadaba.com, ಮಂಗಳೂರು, ನ.26. ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿ, ಬಲ್ಮಠದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮವು ಡಿಸೆಂಬರ್ 10 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಮಂಗಳೂರು ಅಂಚೆ ವಿಭಾಗದಲ್ಲಿ ಪಿಂಚಣಿ ತೆಗೆದುಕೊಳ್ಳುವ  ನಿವೃತ್ತ ಅಂಚೆ ನೌಕರರು ಸಂಬಂಧಪಟ್ಟ ದೂರುಗಳೇನಾದರೂ ಇದ್ದಲ್ಲಿ ಪಿಂಚಣಿ ಅದಾಲತ್ ತಲೆ ಬರಹದಡಿಯಲ್ಲಿ ಡಿಸೆಂಬರ್ 3 ರೊಳಗೆ ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ ಬಲ್ಮಠ -575002 ವಿಳಾಸಕ್ಕೆ ಕಳುಹಿಸಬೇಕು ಎಂದು ಹಿರಿಯ ಅಂಚೆ ಅಧೀಕ್ಷಕರು ಮಂಗಳೂರು

ಡಿ.10 ರಂದು ಅಂಚೆ ಪಿಂಚಣಿ ಅದಾಲತ್ Read More »

ಕರಾವಳಿ

ಕಾನೂನು ದಿನ

(ನ್ಯೂಸ್ ಕಡಬ) newskadaba.com, ಮಂಗಳೂರು, ನ.26. ಮಂಗಳೂರು ಬಿಎಆರ್ ಅಸೋಸಿಯೇಷನ್(ರಿ), ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಜಂಟಿ ಆಶ್ರಯದಲ್ಲಿ ಕಾನೂನು ದಿನ-2019 ಆಚರಣೆ ಕಾರ್ಯಕ್ರಮವು ಇಂದು  ಸಂಜೆ 5.30 ಕ್ಕೆ ಜಿಲ್ಲಾ ನ್ಯಾಯಾಲಯದ ಆವರಣ, ಕೊಡಿಯಾಲ್  ಬೈಲ್ ನಲ್ಲಿ ನಡೆಯಲಿದೆ. ನಿವೃತ್ತ ನ್ಯಾಯಮೂರ್ತಿ ಎ.ವಿ ಚಂದ್ರಶೇಖರ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ದ.ಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮತ್ತು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಕಡ್ಲೂರ್ ಸತ್ಯನಾರಾಯಣ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾನೂನು ದಿನ Read More »

ಕರಾವಳಿ

ಗೃಹರಕ್ಷಕರ ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟ

 (ನ್ಯೂಸ್ ಕಡಬ) newskadaba.com ಮಂಗಳೂರು ನ.26.   ಜಿಲ್ಲಾ ಗೃಹರಕ್ಷಕ ದಳ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ವತಿಯಿಂದ 2019-20ನೇ ಸಾಲಿನ ಗೃಹರಕ್ಷಕರ ವಾರ್ಷಿಕ ಕ್ರೀಡಾಕೂಟವು ಮೇರಿಹಿಲ್‍ನ ಜಿಲ್ಲಾ ಕಚೇರಿಯಲ್ಲಿ  ಇಂದು ಮತ್ತು ನಾಳೆ  ನಡೆಯಲಿದೆ. ಕ್ರೀಡಾಕೂಟದ ಸಮಾರೋಪ ಸಮಾರಂಭವು ನವೆಂಬರ್ 27 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಕಚೇರಿಯಲ್ಲಿ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಸಮಾದೇಷ್ಟರಾದ ಡಾ: ಮುರಲೀ ಮೋಹನ ಚೂಂತಾರು ವಹಿಸಲಿದ್ದಾರೆ ಎಂದು ಜಿಲ್ಲಾ ಗೃಹರಕ್ಷಕ ದಳದ ಪ್ರಕಟಣೆಯಲ್ಲಿ ತಿಳಿಸಿದೆ.

ಗೃಹರಕ್ಷಕರ ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟ Read More »

ಕರಾವಳಿ

ಸಮಗ್ರ ಕೃಷಿ-ಮಾಹಿತಿ ಶಿಬಿರ

(ನ್ಯೂಸ್ ಕಡಬ) newskadaba.com  ಮಂಗಳೂರು, ನ. 25. ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆ, ಮಂಗಳೂರು ತಾಲೂಕು ಮತ್ತು ಕಲ್ಲಬೆಟ್ಟು ಸೇವಾ ಸಹಕಾರ ಸಂಘ (ನಿ) ಇದರ ಸಹಯೋಗದಲ್ಲಿ ಸಮಗ್ರ ಕೃಷಿ – ಮಾಹಿತಿ ಶಿಬಿರ ಕಾರ್ಯಕ್ರಮ ಡಿಸೆಂಬರ್ 3 ರಂದು ಬೆಳಿಗ್ಗೆ 9.45 ಗಂಟೆಗೆ ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ಅಕ್ಷಯಧಾಮ ಸಭಾಭವನದಲ್ಲಿ ನಡೆಯಲಿದೆ. ಮೂಡಬಿದ್ರೆ ಶಾಸಕ ಉಮಾನಾಥ ಎ ಕೋಟ್ಯಾನ್ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಕೃಷಿಕ ಸಮಾಜದ ಅಧ್ಯಕ್ಷ ಡಿ.ಸಂಪತ್ ಸಾಮ್ರಾಜ್ಯ

ಸಮಗ್ರ ಕೃಷಿ-ಮಾಹಿತಿ ಶಿಬಿರ Read More »

ಕರಾವಳಿ

ಲೇಡಿಗೋಷನ್ ನಲ್ಲಿದ್ದ ‘ಗೆಳತಿ’ ವಿಶೇಷ ಚಿಕಿತ್ಸಾ ಘಟಕ ಬಂದ್ ➤ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಇನ್ಮುಂದೆ “ಸಖಿ”ಯೇ ಆಸರೆ..!!

 (ನ್ಯೂಸ್ ಕಡಬ) newskadaba.com ಮಂಗಳೂರು, ನ.26.  ಜಿಲ್ಲಾ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ  ಕಾರ್ಯನಿರ್ವಹಿಸುತ್ತಿದ್ದ ಗೆಳತಿ ಜಿಲ್ಲಾ ವಿಶೇಷ ಚಿಕಿತ್ಸಾ ಘಟಕವು ನವೆಂಬರ್ 21 ರಿಂದ ಸ್ಥಗಿತಗೊಂಡಿರುತ್ತದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಸೇವೆ, ಪೊಲೀಸ್ ಸೇವೆ, ಕಾನೂನು ಸೇವೆ, ಸಮಾಲೋಚನೆ ಮತ್ತು ತಾತ್ಕಾಲಿಕ ವಸತಿ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಯೋಜನೆಯಾದ “ಸಖಿ” (ಒನ್ ಸ್ಟಾಪ್ ಸೆಂಟರ್) ಕೇಂದ್ರವು ಜಿಲ್ಲಾ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯ 2ನೇ ಮಹಡಿಯಲ್ಲಿ ದಿನದ 24×7 ಅವಧಿ ಕಾರ್ಯನಿರ್ವಹಿಸುತ್ತಿದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರು

ಲೇಡಿಗೋಷನ್ ನಲ್ಲಿದ್ದ ‘ಗೆಳತಿ’ ವಿಶೇಷ ಚಿಕಿತ್ಸಾ ಘಟಕ ಬಂದ್ ➤ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಇನ್ಮುಂದೆ “ಸಖಿ”ಯೇ ಆಸರೆ..!! Read More »

ಕರಾವಳಿ

ನ. 29 ರಂದು ವಿಕಲಚೇತನರಿಗೆ ಕ್ರೀಡಾಕೂಟ

 (ನ್ಯೂಸ್ ಕಡಬ) newskadaba.com ಮಂಗಳೂರು, ನ.26.  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ಉತ್ತರ ವಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದ.ಕ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ (ಡಿ.ಡಿ.ಆರ್.ಸಿ), ಲಯನ್ಸ್ ಲಿಂಬ್ ಸೆಂಟರ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವಿಕಲಚೇತನರ ಸಂಘ, ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ, ಗ್ರಾಮೀಣ & ತಾಲ್ಲೂಕು ಪುನರ್ವಸತಿ ಕಾರ್ಯಕರ್ತರು ಮಂಗಳೂರು ಇವರ ಸಹಯೋಗದೊಂದಿಗೆ

ನ. 29 ರಂದು ವಿಕಲಚೇತನರಿಗೆ ಕ್ರೀಡಾಕೂಟ Read More »

ಕರಾವಳಿ

ಬಿಸಿಯೂಟಕ್ಕೆ ಶಾಲೆಯಲ್ಲಿಯೇ ಬೆಳೆದರು ತರಕಾರಿ ➤ನೂಜಿಬಾಳ್ತಿಲ ಶಾಲೆಯಲ್ಲಿದೆ ವಿವಿಧ ಬಗೆಯ ತರಕಾರಿ ಕೈ ತೋಟ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ನ.26  ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿಯೇ ಸಮೃದ್ಧ ತರಕಾರಿ ಕೃಷಿಯ ಕೈ ತೋಟ ನಿರ್ಮಿಸಿ, ಮದ್ಯಾಹ್ನದ ಬಿಸಿಯೂಟಕ್ಕೆ ಅನುಕೂಲವಾಗುವಂತೆ ವಿವಿಧ ಬಗೆಯ ತರಕಾರಿಗಳನ್ನು ಬೆಳೆದು ಮಾದರಿಯಾಗಿದ್ದಾರೆ ಈ ಶಾಲೆಯವರು. ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವಿಶೇಷ ತರಕಾರಿ ಕೈ ತೋಟವನ್ನು ಮಾಡಿದ್ದು, ಇದೀಗ ತರಕಾರಿ ಯಥೇಚ್ಚವಾಗಿ ಬೆಳೆದು ಫಸಲು ಬಂದಿದ್ದು, ಶ್ರಮಪಟ್ಟ ತಂಡ ಇದೀಗ ಸಂತೋಷದ ನಗೆ ಬೀರಿದ್ದಾರೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ

ಬಿಸಿಯೂಟಕ್ಕೆ ಶಾಲೆಯಲ್ಲಿಯೇ ಬೆಳೆದರು ತರಕಾರಿ ➤ನೂಜಿಬಾಳ್ತಿಲ ಶಾಲೆಯಲ್ಲಿದೆ ವಿವಿಧ ಬಗೆಯ ತರಕಾರಿ ಕೈ ತೋಟ Read More »

ಕರಾವಳಿ

ನೆಟ್ಟಣ: ರೈಲಿನಡಿಗೆ ತಲೆಯಿಟ್ಟು ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ನೆಟ್ಟಣ, ನ.26. ರೈಲಿನಡಿಗೆ ತಲೆಯಿಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲ್ವೇ ನಿಲ್ದಾಣದ ಸಮೀಪ ಸೋಮವಾರ ರಾತ್ರಿ ನಡೆದಿದೆ. ಸೋಮವಾರ ರಾತ್ರಿ ರೈಲ್ವೆ ಹಳಿಯಲ್ಲಿ ಸ್ಥಳೀಯ ವ್ಯಕ್ತಿಯೋರ್ವರು ನಡೆದುಕೊಂಡು ಹೋಗುತ್ತಿದ್ದ ವೇಳೆ ಯುವಕನ ಮೃತದೇಹವು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದು ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮೃತದೇಹದ ಬಳಿ ಬ್ಯಾಂಕ್ ಪಾಸ್ ಪುಸ್ತಕವೊಂದು ದೊರೆತಿದ್ದು, ಅದರಲ್ಲಿ ಮಂಗಳೂರಿನ ಉಳ್ಳಾಲ ರೈಲ್ವೇ ನಿಲ್ದಾಣ ಬಳಿಯ ನಿವಾಸಿ ಪವನ್ ಕುಮಾರ್ ಎಂಬ

ನೆಟ್ಟಣ: ರೈಲಿನಡಿಗೆ ತಲೆಯಿಟ್ಟು ಯುವಕ ಆತ್ಮಹತ್ಯೆ Read More »

ಕರಾವಳಿ

ಶುಭ ಪ್ರಯಾಣಕ್ಕೆ ಮುಂಚೆ ಹೀಗೆ ಮಾಡಿದರೆ ಒಳ್ಳೆಯದು

ಕಾರ್ಯದ ನಿಮಿತ್ತ ಪ್ರಯಾಣ ಬೆಳೆಸಬೇಕಾದ ಸಂದರ್ಭದಲ್ಲಿ ಒಂದು ಹಿಡಿ ಗೋಧಿ ಮತ್ತು ಒಂದು ಹಿಡಿ ಅಕ್ಕಿಯನ್ನು ಹರಿಯುವ ನೀರಿನಲ್ಲಿ ಹಾಕಿರಿ. ನಿಮ್ಮ ಮನೆ ದೇವರನ್ನು ನಮಸ್ಕರಿಸಿ ಮುಂದೆ ಸಾಗಿ ಇದರಿಂದ ನಿಮ್ಮ ಪ್ರಯಾಣ ಸುಖಕರವಾಗಿ ಹಾಗೂ ಗೆಲುವಿನ ದಾರಿ ಕಂಡುಬರುತ್ತದೆ. ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ,

ಶುಭ ಪ್ರಯಾಣಕ್ಕೆ ಮುಂಚೆ ಹೀಗೆ ಮಾಡಿದರೆ ಒಳ್ಳೆಯದು Read More »

ಭವಿಷ್ಯ, ಲೈಫ್‍ಸ್ಟೈಲ್
Scroll to Top