ಭದ್ರತಾ ಪಡೆಗಳ ಎನ್ಕೌಂಟರ್ಗೆ ಓರ್ವ ನಕ್ಸಲ್ ಸಾವು

(ನ್ಯೂಸ್‌ ಕಡಬ) newskadaba.com,  ನ.18 : ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ನಕ್ಸಲ್ ಮೃತಪಟ್ಟ ಘಟನೆ ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. “ಎರ್ರಾಬೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದ ಬೆಟ್ಟದಲ್ಲಿ ನಕ್ಸಲರು ಇರುವ ಬಗ್ಗೆ ಖಚಿತ ಮಾಹಿತಿ ಆಧಾರದ ಮೇಲೆ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿತ್ತು. ಈ ಸಂಬಂಧ ಬೆಳಿಗ್ಗೆ ಗುಂಡಿನ ಚಕಮಕಿ ನಡೆದಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈವರೆಗೆ, ಓರ್ವ ನಕ್ಸಲನ ಮೃತದೇಹವನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಸದ್ಯ ಗುಂಡಿನ ಚಕಮಕಿ […]

ಭದ್ರತಾ ಪಡೆಗಳ ಎನ್ಕೌಂಟರ್ಗೆ ಓರ್ವ ನಕ್ಸಲ್ ಸಾವು Read More »

ರಾಷ್ಟ್ರೀಯ ನ್ಯೂಸ್

‘ಆತ್ಮಾಹುತಿ ಬಾಂಬ್ ದಾಳಿಯೆಂಬುದು ಹುತಾತ್ಮರ ಕಾರ್ಯಾಚರಣೆ’- ಉಗ್ರ ಉಮರ್

(ನ್ಯೂಸ್‌ ಕಡಬ) newskadaba.com,  ನ.18 : ಆತ್ಮಾಹುತಿ ಬಾಂಬ್ ದಾಳಿಯೆಂಬುದು ಹುತಾತ್ಮರ ಕಾರ್ಯಾಚರಣೆ ಎಂದು ಇಸ್ಲಾಂನಲ್ಲಿ ತಿಳಿಸಲಾಗಿದೆ ಎಂದು ಬಾಂಬರ್ ಉಮರ್ ಕೆಂಪುಕೋಟೆ ಬಳಿ ಕಾರು ಸ್ಫೋಟಕ್ಕೂ ಮುನ್ನ ಮಾಡಿದ್ದ ವಿಡಿಯೋವೊಂದರಲ್ಲಿ ಹೇಳಿರುವುದು ಇದೀಗ ಬೆಳಕಿಗೆ ಬಂದಿದೆ. ವೈರಲ್ ಆದ ವಿಡಿಯೋದಲ್ಲಿ ಉಮರ್ ಮಾತನಾಡುತ್ತಾ, “ಆತ್ಮಾಹುತಿ ಬಾಂಬ್ ದಾಳಿ ಬಗ್ಗೆ ತಪ್ಪಾಗಿ ಅರ್ಥೈಸಲಾಗಿದೆ. ಇದು ಯಾವುದೇ ರೀತಿಯ ಪ್ರಜಾಪ್ರಭುತ್ವವಲ್ಲ ಅಥವಾ ಯಾವುದೇ ನಾಗರಿಕ ಸಮಾಜದಲ್ಲಿ ಇದನ್ನು ಸ್ವೀಕರಿಸಲು ಸಾಧ್ಯವಿಲ್ಲ. ಇಸ್ಲಾಂನಲ್ಲಿ ಆತ್ಮಹತ್ಯೆಗೆ ಅವಕಾಶವಿಲ್ಲ. ಹೀಗಾಗಿ ಇದನ್ನು ಹುತಾತ್ಮರ

‘ಆತ್ಮಾಹುತಿ ಬಾಂಬ್ ದಾಳಿಯೆಂಬುದು ಹುತಾತ್ಮರ ಕಾರ್ಯಾಚರಣೆ’- ಉಗ್ರ ಉಮರ್ Read More »

ರಾಷ್ಟ್ರೀಯ ನ್ಯೂಸ್

SIR ಕೆಲಸ ಬಹಿಷ್ಕರಿಸಿದ ತಮಿಳುನಾಡು ಕಂದಾಯ ಇಲಾಖೆ ನೌಕರರು!

(ನ್ಯೂಸ್‌ ಕಡಬ) newskadaba.com,  ನ.18 ಚೆನ್ನೈ: ಅತಿಯಾದ ಕೆಲಸದ ಹೊರೆ, ಸಾಕಷ್ಟು ಮಾನವಶಕ್ತಿ, ಗಡುವಿನ ಒತ್ತಡ ಮತ್ತು ಅಸಮರ್ಪಕ ತರಬೇತಿಯನ್ನು ವಿರೋಧಿಸಿ ತಮಿಳುನಾಡು ಕಂದಾಯ ಇಲಾಖೆ ನೌಕರರ ಸಂಘಗಳ ಒಕ್ಕೂಟ(FERA)ದ ಸದಸ್ಯರು ಮಂಗಳವಾರದಿಂದ SIR ಕೆಲಸವನ್ನು ಬಹಿಷ್ಕರಿಸಿದ್ದಾರೆ. ಬಹಿಷ್ಕಾರಕ್ಕೆ ಮುಂಚಿತವಾಗಿ ಸೋಮವಾರ ಸಂಜೆ “ಪೆರುಂದಿರಲ್(ಸಾಮೂಹಿಕ) ಮನವಿ” ಕಾರ್ಯಕ್ರಮದ ಸಂದರ್ಭದಲ್ಲಿ ಸಂಘದ ಸದಸ್ಯರು 32 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ SIR ಕೆಲಸ ವಿರೋಧಿಸಿ ನೌಕರರು ಪ್ರತಿಭಟನೆ ನಡೆಸಿದರು ಎಂದು ಸಂಘ ತಿಳಿಸಿದೆ.

SIR ಕೆಲಸ ಬಹಿಷ್ಕರಿಸಿದ ತಮಿಳುನಾಡು ಕಂದಾಯ ಇಲಾಖೆ ನೌಕರರು! Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಗೋಳಿತ್ತಡಿ – ಕುದುಲೂರು ಹೊಂಡ ಗುಂಡಿಗೆ ಮಣ್ಣು ಹಾಕಿ ಮುಚ್ಚಿದ ಇಸಾಕ್ ಕುದುಲೂರು-ಏಕಾಂಗಿ ಶ್ರಮದಾನಕ್ಕೆ ಮೆಚ್ಚುಗೆ

(ನ್ಯೂಸ್‌ ಕಡಬ) newskadaba.com,  ನ.18 : ಕಡಬ, ನ.18. ಕಡಬ ತಾಲೂಕು ಕೊಯಿಲ ಮತ್ತು ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗೋಳಿತ್ತಡಿ – ಏಣಿತ್ತಡ್ಕ – ಕುದುಲೂರು ಸಂಪರ್ಕ ರಸ್ತೆಯ ಗೋಳಿತ್ತಡಿಯಿಂದ ಕುದುಲೂರು ವರೆಗಿನ ಸುಮಾರು 4 ಕಿಮೀ ಉದ್ದದ ರಸ್ತೆಯುದ್ದಕ್ಕೂ  ಉಂಟಾಗಿರುವ ಹೊಂಡಗಳಿಗೆ ಕುದುಲೂರು ನಿವಾಸಿ ಇಸಾಕ್ ಎಂಬುವವರು ಸ್ವಯಂಪ್ರೇರಿತರಾಗಿ ಯಾವುದೇ ಫಲಾಪೇಕ್ಷೆಯಿಲ್ಲದೆ ಏಕಾಂಗಿಯಾಗಿ ಗುರುವಾರ ಮತ್ತು ಶುಕ್ರವಾರ ಎರಡು ದಿನ  ಮಣ್ಣು ಹಾಕಿ ಹೊಂಡ ಮುಚ್ಚಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ವೃತ್ತಿಯಲ್ಲಿ ಅಡಿಕೆ ಸುಳಿಯುವ

ಗೋಳಿತ್ತಡಿ – ಕುದುಲೂರು ಹೊಂಡ ಗುಂಡಿಗೆ ಮಣ್ಣು ಹಾಕಿ ಮುಚ್ಚಿದ ಇಸಾಕ್ ಕುದುಲೂರು-ಏಕಾಂಗಿ ಶ್ರಮದಾನಕ್ಕೆ ಮೆಚ್ಚುಗೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮತ್ತೆ ಇಳಿಕೆಯಾದ ಬಂಗಾರದ ಬೆಲೆ

(ನ್ಯೂಸ್‌ ಕಡಬ) newskadaba.com,  ನ.18 : ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದು, ಇಂದು ಸಹ ದರ ಕಡಿಮೆಯಾಗಿದೆ. ಇಂದು 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 17,400 ರೂ.ಗಳಷ್ಟು ಕಡಿಮೆಯಾಗಿದೆ., ಇಂದಿನ 22 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂ: 11,335 ರೂಪಾಯಿ 8 ಗ್ರಾಂ: 90,680 ರೂಪಾಯಿ 10 ಗ್ರಾಂ: 1,13,350 ರೂಪಾಯಿ 100 ಗ್ರಾಂ: 11,33,500 ರೂಪಾಯಿ

ಮತ್ತೆ ಇಳಿಕೆಯಾದ ಬಂಗಾರದ ಬೆಲೆ Read More »

ಕರ್ನಾಟಕ

ರಾಜ್ಯ ಸರ್ಕಾರದಿಂದ ಮೇಡ್‌ ಇನ್‌ ಕರ್ನಾಟಕ ಕಂಪ್ಯೂಟರ್‌ ಅಭಿವೃದ್ಧಿ, ಇಂದು ಬಿಡುಗಡೆ

(ನ್ಯೂಸ್‌ ಕಡಬ) newskadaba.com,  ನ.18 ಬೆಂಗಳೂರು : ಐಟಿ-ಬಿಟಿ ಇಲಾಖೆ, ಕಿಯೋನಿಕ್ಸ್ ಸಹಯೋಗದಲ್ಲಿ ಕರ್ನಾಟಕದ ಸ್ಟಾರ್ಟಪ್‌ಗಳು ನಿರ್ಮಿಸಿರುವ ಕೃತಕ ಬುದ್ಧಿಮತ್ತೆ ಆಧಾರಿತ ‘ಕಿಯೋ’ (ಕೆಇಒ) ಹೆಸರಿನ ಕಂಪ್ಯೂಟರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಬೆಂಗಳೂರು ಟೆಕ್ ಸಮ್ಮಿಟ್‌-2025ರ ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆ ಮಾಡಲಿದ್ದಾರೆ. ಇದು ಸರ್ಕಾರವೇ ಅಭಿವೃದ್ಧಿಪಡಿಸಿದ ಮೊದಲ ಎಐ ಪರ್ಸನಲ್‌ ಕಂಪ್ಯೂಟರ್‌ ಆಗಿದೆ. ಇಂಥ ಪ್ರಯತ್ನ ವಿಶ್ವದಲ್ಲೇ ಮೊದಲು ಎನ್ನಲಾಗಿದೆ…………… ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ಹಂಚಿಕೊಂಡ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ‘ಕೆಇಒ’ ಅಂದರೆ ಜ್ಞಾನ

ರಾಜ್ಯ ಸರ್ಕಾರದಿಂದ ಮೇಡ್‌ ಇನ್‌ ಕರ್ನಾಟಕ ಕಂಪ್ಯೂಟರ್‌ ಅಭಿವೃದ್ಧಿ, ಇಂದು ಬಿಡುಗಡೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಂಗಳೂರು ಜಲಮಂಡಳಿಯ 224 ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್‌ ಕಡಬ) newskadaba.com,  ನ.18 ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಲ್ಯಾಣ ಕರ್ನಾಟಕ ಮತ್ತು ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ ಹಿಂಬಾಕಿ ಹುದ್ದೆ ಸೇರಿ ಒಟ್ಟು 224 ಹುದ್ದೆಗಳಿಗೆ ನೇರ ನೇಮಕಾತಿ ಮಾಡುವ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರು ಜಲಮಂಡಳಿಯ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಕೆಇಎ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಬೇಕು. ಈ ಬಗ್ಗೆ ನ.15ರಂದು ಕೆಇಎ ಅಧಿಸೂಚನೆ ಹೊರಡಿಸಿದೆ.

ಬೆಂಗಳೂರು ಜಲಮಂಡಳಿಯ 224 ಹುದ್ದೆಗೆ ಅರ್ಜಿ ಆಹ್ವಾನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತಿಮರೋಡಿ ವಿರುದ್ಧ ಗಡೀಪಾರು ಆದೇಶ ಹೈಕೋರ್ಟ್ಲ್ಲಿ ವಜಾ

(ನ್ಯೂಸ್‌ ಕಡಬ) newskadaba.com,  ನ.18 : ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ‌ ಕನ್ನಡ ಜಿಲ್ಲೆಯಿಂದ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ. ಪ್ರಕರಣವನ್ನು ಪುತ್ತೂರು ಉಪ ವಿಭಾಗಾಧಿಕಾರಿಗೆ ಹಿಂದಿರುಗಿಸಿರುವ ನ್ಯಾಯಾಲಯ, ಮುಂದಿನ 15 ದಿನಗಳಲ್ಲಿ ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸಬೇಕು. ವಿಚಾರಣೆ ವೇಳೆ ಅರ್ಜಿದಾರರ ವಾದ ಆಲಿಸಬೇಕು. ನಂತರ ಸೂಕ್ತ ಕಾರಣಗಳೊಂದಿಗೆ ಕಾನೂನು ಪ್ರಕಾರ ಆದೇಶ ಹೊರಡಿಸಬೇಕು ಎಂದು ಉಪ ವಿಭಾಗಾಧಿಕಾರಿಗೆ

ತಿಮರೋಡಿ ವಿರುದ್ಧ ಗಡೀಪಾರು ಆದೇಶ ಹೈಕೋರ್ಟ್ಲ್ಲಿ ವಜಾ Read More »

ಕರ್ನಾಟಕ

ಕಾಂಗೋದ ಗಣಿ ಸೇತುವೆ ಕುಸಿದು 32 ಜನ ಮೃತ್ಯು

(ನ್ಯೂಸ್‌ ಕಡಬ) newskadaba.com,  ನ.18 : ಸೇತುವೆ ಕುಸಿದು 32 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ಕಾಂಗೋದಲ್ಲಿ ತಾಮ್ರದ ಗಣಿ ಬಳಿ ನಡೆದಿದೆ. ಗಣಿ ಬಳಿ ಗುಂಡಿನ ಸದ್ದು ಕೇಳಿಬಂದಿತ್ತು, ಜನರು ಭಯದಿಂದ ಸೇತುವೆ ಮೇಲೆ ಓಡಿ ಹೋದ ಪರಿಣಾಮ ಸೇತುವೆ ಕುಸಿದು 32 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿದಿನ ನೂರಾರು ಗಣಿಗಾರರು ಕೆಲಸ ಮಾಡುವ ಲುವಾಲಾಬಾ ಪ್ರಾಂತ್ಯದ ಕಲಾಂಡೋ ಗಣಿಗಾರಿಕೆ ಸ್ಥಳದಲ್ಲಿ ಈ ಅವಘಡ ಸಂಭವಿಸಿದೆ. ಆ ಪ್ರದೇಶವನ್ನು ಕಾವಲು ಕಾಯುತ್ತಿದ್ದ ಮಿಲಿಟರಿ ಸಿಬ್ಬಂದಿ ಗುಂಡು

ಕಾಂಗೋದ ಗಣಿ ಸೇತುವೆ ಕುಸಿದು 32 ಜನ ಮೃತ್ಯು Read More »

ಅಂತರ್ರಾಷ್ಟ್ರೀಯ ನ್ಯೂಸ್

ಬೆಳಗಾವಿ: ಮೃಗಾಲಯದಲ್ಲಿ ಮತ್ತೊಂದು ಕೃಷ್ಣಮೃಗ ಮೃತ್ಯು; ಸಾವಿನ ಸಂಖ್ಯೆ 31ಕ್ಕೆ ಏರಿಕೆ

(ನ್ಯೂಸ್‌ ಕಡಬ) newskadaba.com,  ನ.18 : ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಬ್ಯಾಕ್ಟೀರಿಯದಿಂದ ಮೃತಪಟ್ಟ ಕೃಷ್ಣ ಮೃಗಗಳ ಸಾವಿನ ಸರಣಿ ಮುಂದುವರಿದಿದ್ದು, ಸಾವಿನ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಉಳಿದ 7 ಕೃಷ್ಣ ಮೃಗಗಳನ್ನ ಉಳಿಸಲು ವೈದ್ಯರು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಮೃಗಾಲಯದಲ್ಲಿ ಸರಣಿ ಸಾವು ಸಂಭವಿಸಿದ ಬೆನ್ನಲ್ಲೇ ವೈದ್ಯರು ಉಳಿದಿರುವ 7 ಕೃಷ್ಣಮೃಗಗಳಿಗೆ ಆಂಟಿ ಬಯೋಟೆಕ್ ಚಿಕಿತ್ಸೆ ನೀಡುತ್ತಿದ್ದಾರೆ. ಕೃಷ್ಣಮೃಗಗಳಿಗೆ ಸಾವಿಗೆ ಗಳಲೆ ರೋಗ ಕಾರಣ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಬ್ಬಂದಿ ಮೃಗಾಲಯದ ಒಳಗಡೆ ಔಷಧಿ

ಬೆಳಗಾವಿ: ಮೃಗಾಲಯದಲ್ಲಿ ಮತ್ತೊಂದು ಕೃಷ್ಣಮೃಗ ಮೃತ್ಯು; ಸಾವಿನ ಸಂಖ್ಯೆ 31ಕ್ಕೆ ಏರಿಕೆ Read More »

ಕರ್ನಾಟಕ
Scroll to Top