ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ರಾಜ್ಯ ಸರ್ಕಾರದಿಂದ ಮೇಡ್‌ ಇನ್‌ ಕರ್ನಾಟಕ ಕಂಪ್ಯೂಟರ್‌ ಅಭಿವೃದ್ಧಿ, ಇಂದು ಬಿಡುಗಡೆ – News Kadaba

ರಾಜ್ಯ ಸರ್ಕಾರದಿಂದ ಮೇಡ್‌ ಇನ್‌ ಕರ್ನಾಟಕ ಕಂಪ್ಯೂಟರ್‌ ಅಭಿವೃದ್ಧಿ, ಇಂದು ಬಿಡುಗಡೆ

(ನ್ಯೂಸ್‌ ಕಡಬ) newskadaba.com,  ನ.18 ಬೆಂಗಳೂರು : ಐಟಿ-ಬಿಟಿ ಇಲಾಖೆ, ಕಿಯೋನಿಕ್ಸ್ ಸಹಯೋಗದಲ್ಲಿ ಕರ್ನಾಟಕದ ಸ್ಟಾರ್ಟಪ್‌ಗಳು ನಿರ್ಮಿಸಿರುವ ಕೃತಕ ಬುದ್ಧಿಮತ್ತೆ ಆಧಾರಿತ ‘ಕಿಯೋ’ (ಕೆಇಒ) ಹೆಸರಿನ ಕಂಪ್ಯೂಟರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಬೆಂಗಳೂರು ಟೆಕ್ ಸಮ್ಮಿಟ್‌-2025ರ ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆ ಮಾಡಲಿದ್ದಾರೆ. ಇದು ಸರ್ಕಾರವೇ ಅಭಿವೃದ್ಧಿಪಡಿಸಿದ ಮೊದಲ ಎಐ ಪರ್ಸನಲ್‌ ಕಂಪ್ಯೂಟರ್‌ ಆಗಿದೆ. ಇಂಥ ಪ್ರಯತ್ನ ವಿಶ್ವದಲ್ಲೇ ಮೊದಲು ಎನ್ನಲಾಗಿದೆ……………

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ಹಂಚಿಕೊಂಡ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ‘ಕೆಇಒ’ ಅಂದರೆ ಜ್ಞಾನ ಆಧಾರಿತ, ಕಡಿಮೆ ಖರ್ಚಿನ, ಓಪನ್ ಸೋರ್ಸ್‌ ರಿಸ್ಕ್‌-ವಿ ಪ್ರೊಸೆಸರ್‌ ಆಧಾರಿತ ಎಐ ಕಂಪ್ಯೂಟರ್‌ ಎಂದರ್ಥ. ಚಿಪ್ ಸೇರಿ ಎಲ್ಲವನ್ನೂ ಸಂಪೂರ್ಣವಾಗಿ ಕರ್ನಾಟಕದಲ್ಲಿ ಅಭಿವೃದ್ಧಿಪಡಿಸಿ ನಿರ್ಮಿಸಲಾಗಿದೆ. ಅಲ್ಲದೆ, ಇದು ಕೈಗೆಟುಕುವ ದರದಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ನ.18ರಿಂದ ಕಿಯೋನೆಕ್ಸ್ಟ್‌ಪೋರ್ಟಲ್‌ ಅಲ್ಲಿ ಪ್ರೀಬುಕ್ಕಿಂಗ್ ಲಭ್ಯವಿದೆ. 2 ತಿಂಗಳ ನಂತರ ಡೆಲಿವರಿ ಆರಂಭವಾಗುತ್ತದೆ ಎಂದು ತಿಳಿಸಿದರು.

ಲೀನಕ್ಸ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಕಿಯೋ, ಕಂಪ್ಯೂಟಿಂಗ್‌ನ ನೈಜ ಅನುಭವ ನೀಡುತ್ತದೆ. 4ಜಿ, ವೈ-ಫೈ, ಎಥರ್‌ನೆಟ್‌, ಯುಎಸ್‌ಬಿ-ಎ ಮತ್ತು ಯುಎಸ್‌ಬಿ-ಸಿ ಪೋರ್ಟ್, ಎಚ್‌ಡಿಎಂಐ ಮತ್ತು ಆಡಿಯೋ ಜಾಕ್ ಕೂಡ ಕಿಯೋ ಹೊಂದಿರಲಿದೆ. ಇದರಲ್ಲಿ ಕಲಿಕೆಗೆ ಸಂಬಂಧಿಸಿದ ಸಾಫ್ಟ್‌ವೇರ್‌ಗಳು, ಪ್ರೋಗ್ರಾಮ್‌ಗಳು ಮತ್ತು ಪ್ರೊಡಕ್ಟಿವಿಟಿ ಟೂಲ್ಸ್ ಇರುತ್ತವೆ ಎಂದು ಸಚಿವರು ತಿಳಿಸಿದರು.

Scroll to Top