ದಿಲ್ಲಿಯಲ್ಲಿ ಮತ್ತೊಂದು ಅಗ್ನಿ ಅವಘಡ: 9ಮಂದಿ ಸಜೀವ ದಹನ

ಹೊಸದಿಲ್ಲಿ, ಡಿ.23 : ದಿಲ್ಲಿಯಲ್ಲಿ ಮತ್ತೊಂದು ಅಗ್ನಿಅವಘಡ ಸಂಭವಿಸಿದ್ದು,  ಬಟ್ಟೆಯ ಗೋದಾಮಿಗೆ ಬೆಂಕಿ ಹತ್ತಿ 9 ಮಂದಿ ಮೃತಪಟ್ಟ ಘಟನೆ ಕಿರಾರಿ ಎಂಬಲ್ಲಿ ನಡೆದಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆಂಕಿ ಹತ್ತಿಕೊಳ್ಳಲು ಕಾರಣವೇನೆಂದು ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಡಿಸೆಂಬರ್ ಆರಂಭದಲ್ಲಿ ದಿಲ್ಲಿಯ ಅನಜ್ ಮಾಂಡಿ ಕಾರ್ಖಾನೆಯಲ್ಲಿ ನಸುಕಿನ ಜಾವ ಬೆಂಕಿ ಹತ್ತಿಕೊಂಡು ಅಲ್ಲಿ ಮಲಗಿದ್ದ 43 ಮಂದಿ ಮೃತಪಟ್ಟಿದ್ದರು.

ದಿಲ್ಲಿಯಲ್ಲಿ ಮತ್ತೊಂದು ಅಗ್ನಿ ಅವಘಡ: 9ಮಂದಿ ಸಜೀವ ದಹನ Read More »

ರಾಷ್ಟ್ರೀಯ ನ್ಯೂಸ್

ದಾಂಪತ್ಯ ಸಮಸ್ಯೆಗೆ ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ.

ಸಾಂಸಾರಿಕ ಜೀವನದಲ್ಲಿ ಸುಖ, ನೆಮ್ಮದಿ, ಶಾಂತಿ ಇಲ್ಲದಿದ್ದರೆ ಪತಿ ನಿಮ್ಮ ಮಾತು ಕೇಳುತ್ತಿಲ್ಲ ಅಥವಾ ಪತ್ನಿ ನಿಮ್ಮ ಮಾತು ಕೇಳುತ್ತಿಲ್ಲ ಎಂಬ ವಿಚಾರಗಳು ನಿಮ್ಮಲ್ಲಿ ಬರಬಹುದು ಹಾಗೂ ಕೆಲವು ರೀತಿಯ ಮನಸ್ಸಿಗೆ ಆಘಾತ ನೀಡುವ ವಿಚಾರಗಳಿಂದ ತೊಂದರೆ ಬರಬಹುದು ಇದರಿಂದ ದಾಂಪತ್ಯ ಜೀವನ ಬಹಳಷ್ಟು ಕಷ್ಟಕರವಾಗಿರುತ್ತದೆ ಇಂತಹ ಸನ್ನಿವೇಶ ಸಂದರ್ಭಗಳನ್ನು ಎದುರಿಸಲು ಶಾಸ್ತ್ರಾಧಾರಿತ ಪರಿಹಾರವನ್ನು ಕಾಣಬಹುದಾಗಿದೆ. ಸೋಮವಾರ ದಿನ ಚಂದ್ರ ಶಾಂತಿಯನ್ನು ಮಾಡಿಸಿ ಹಾಗೂ ಸುದರ್ಶನ ಹೋಮವನ್ನು ನಡೆಸುವುದು ಸೂಕ್ತ. ಶ್ರೀ ಮಂಜುನಾಥ ಸ್ವಾಮಿಯ ಸ್ಮರಿಸುತ್ತಾ ಈ

ದಾಂಪತ್ಯ ಸಮಸ್ಯೆಗೆ ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ. Read More »

ಭವಿಷ್ಯ, ಲೈಫ್‍ಸ್ಟೈಲ್

ವಿಟ್ಲ: ಟಿಪ್ಪರ್ ಹಾಗೂ ಬುಲ್ಲೆಟ್ ನಡುವೆ ಢಿಕ್ಕಿ ➤ ಸವಾರ ಮೃತ್ಯು, ಸಹ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ವಿಟ್ಲ, ಡಿ.22. ಟಿಪ್ಪರ್ ಹಾಗೂ ಬುಲ್ಲೆಟ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬುಲ್ಲೆಟ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ವಿಟ್ಲ ಸಮೀಪದ ಕರೋಪಾಡಿ ಎಂಬಲ್ಲಿ ಭಾನುವಾರದಂದು ನಡೆದಿದೆ. ಮೃತ ಸವಾರನನ್ನು ವಿಟ್ಲದ ಮುಗುಳಿ ನಿವಾಸಿ ಅನ್ವರ್ ಎಂದು ಗುರುತಿಸಲಾಗಿದೆ. ಅನ್ವರ್ ತನ್ನ ಸ್ಮೇಹಿತನೊಂದಿಗೆ ಬುಲ್ಲೆಟ್ ನಲ್ಲಿ ತೆರಳುತ್ತಿದ್ದ ವೇಳೆ ಕರ್ನಾಟಕದಿಂದ ಕೇರಳಕ್ಕೆ ಎಂ.ಸ್ಯಾಂಡ್ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿ ನಡುವೆ ಮುಗುಳಿ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ವಿಟ್ಲ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ವಿಟ್ಲ: ಟಿಪ್ಪರ್ ಹಾಗೂ ಬುಲ್ಲೆಟ್ ನಡುವೆ ಢಿಕ್ಕಿ ➤ ಸವಾರ ಮೃತ್ಯು, ಸಹ ಸವಾರನಿಗೆ ಗಾಯ Read More »

ಕರಾವಳಿ

ಗುಂಡೇಟಿಗೆ ಬಲಿಯಾದ ಜಲೀಲ್ ರ ಮಕ್ಕಳನ್ನು ಸಅದಿಯ್ಯದಿಂದ ದತ್ತು: ಬೇಕಲ್ ಉಸ್ತಾದ್

ಮಂಗಳೂರು, ಡಿ.22: ಪೊಲೀಸ್ ಗುಂಡೇಟಿಗೆ ಬಲಿಯಾದ ಕಂದಕ್ ನಿವಾಸಿ ಅಬ್ದುಲ್ ಜಲೀಲ್ ರ  ಎರಡು ಮಕ್ಕಳನ್ನು ಕಾಸರಗೋಡಿನ ಜಾಮಿಅ ಸಅದಿಯ್ಯ ಅರಬಿಯ್ಯ ದತ್ತು ಪಡೆದಿದೆ ಎಂದು ಪ್ರಾಂಶುಪಾಲ, ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್ ತಿಳಿಸಿದ್ದಾರೆ. ಅವರು ಮೃತರ ಮನೆಗೆ ಭೇಟಿ ನೀಡಿದ ಸಂದರ್ಭ ದತ್ತು ಪಡೆದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಸುನ್ನೀ ಕೋ ಆರ್ಡಿನೇಶನ್ ಸಮಿತಿಯ ಅಧ್ಯಕ್ಷ ಎಸ್.ಪಿ. ಹಂಝ ಸಖಾಫಿ ಬಂಟ್ವಾಳ, ಕಾರ್ಯದರ್ಶಿ ಅಶ್ರಫ್ ಕಿನಾರ, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹಾಫಿಳ್ ಯಾಕೂಬ್

ಗುಂಡೇಟಿಗೆ ಬಲಿಯಾದ ಜಲೀಲ್ ರ ಮಕ್ಕಳನ್ನು ಸಅದಿಯ್ಯದಿಂದ ದತ್ತು: ಬೇಕಲ್ ಉಸ್ತಾದ್ Read More »

ಕರಾವಳಿ

ಮಂಗಳೂರು ಗೋಲಿಬಾರ್ ಗೆ ಬಲಿಯಾದವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಬೆಂಗಳೂರು, ಡಿ.22: ಪೌರತ್ವ ಕಾಯ್ದೆ ವಿರೋಧಿಸಿ ಡಿ.19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರ ಗುಂಡೇಟಿಗೆ ಬಲಿಯಾದ ಕಂದಕ್ ನಿವಾಸಿ ಜಲೀಲ್ ಹಾಗೂ ಕುದ್ರೋಳಿ ನಿವಾಸಿ ನೌಶೀನ್ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಗೋಲಿಬಾರ್ ಸಂಬಂಧಿಸಿ ಹೆಚ್ಚಿನ ತನಿಖೆಗೆ ಸರಕಾರ ಸಿದ್ದವಿದ್ದು, ಗೃಹ ಸಚಿವರೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುದಾಗಿ ಅವರು ತಿಳಿಸಿದರು.  

ಮಂಗಳೂರು ಗೋಲಿಬಾರ್ ಗೆ ಬಲಿಯಾದವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ Read More »

ಕರ್ನಾಟಕ

ಗೋಲಿಬಾರ್ ನಲ್ಲಿ ಮೃತಪಟ್ಟ ನೌಶೀನ್, ಜಲೀಲ್ ಮನೆಗೆ ಕುಮಾರಸ್ವಾಮಿ ಭೇಟಿ: 5 ಲಕ್ಷ ರೂ. ಚೆಕ್ ವಿತರಣೆ

ಮಂಗಳೂರು, ಡಿ.22: ಪೊಲೀಸ್ ಗೋಲಿಬಾರ್ ನಿಂದ ಮೃತಪಟ್ಟ ಕುದ್ರೋಳಿ ನಿವಾಸಿ ನೌಶೀನ್ ಹಾಗೂ ಕಂದಕ್ ನಿವಾಸಿ ಜಲೀಲ್ ಮನೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ 5ಲಕ್ಷ ರೂ.ವಿನ ಚೆಕ್ ವಿತರಿಸಿ ಸಾಂತ್ವಾನ ಹೇಳಿದರು. ಈ ಸಂದರ್ಭ  ವಿಧಾನ ಪರಿಷತ್ ಸದಸ್ಯರಾದ ಬೋಜೇಗೌಡ, ಬಿಎಂ ಫಾರೂಕ್, ಜೆಡಿಎಸ್ ಮುಖಂಡ ವಿಟ್ಲ ಮುಹಮ್ಮದ್ ಕುಂಞಿ, ಎಂಬಿ ಸದಾಶಿವ ಮತ್ತಿತರರು ಉಪಸ್ಥಿತರಿದ್ದರು.

ಗೋಲಿಬಾರ್ ನಲ್ಲಿ ಮೃತಪಟ್ಟ ನೌಶೀನ್, ಜಲೀಲ್ ಮನೆಗೆ ಕುಮಾರಸ್ವಾಮಿ ಭೇಟಿ: 5 ಲಕ್ಷ ರೂ. ಚೆಕ್ ವಿತರಣೆ Read More »

ಕರಾವಳಿ

ಸಹಜ ಸ್ಥಿತಿಯತ್ತ ಮಂಗಳೂರು

ಮಂಗಳೂರು, ಡಿ22: ನಗರದಲ್ಲಿ ಡಿ.19ರಿಂದ ವಿಧಿಸಲಾದ ಕಫ್ಯೂ೯ನಿಂದ ಅಸ್ತವ್ಯಸ್ತಗೊಂಡ ಜನಜೀವನ ಇಂದು ಅಲ್ಪಮಟ್ಟಿಗೆ ಸುಧಾರಿಸಿದೆ. ನಗರದಾದ್ಯಂತ ಅಂಗಡಿ ಮುಂಗಟ್ಟುಗಳು ತೆರೆಯಲ್ಪಟ್ಟಿವೆ. ಸಿಟಿ ಸಹಿತ ಸರಕಾರಿ ಬಸ್ ಸಂಚಾರ ಆರಂಭವಾಗಿದೆ. ಬಿಕೋ‌ ಎನ್ನುತ್ತಿದ್ದ ರಸ್ತೆಗಳಲ್ಲಿ‌ ವಾಹನ ಸಂಚಾರ, ಜನ ಸಂಚಾರ ಮತ್ತೆ ಪ್ರಾರಂಭವಾಗಿದೆ.  ಹಾಲು, ಆಹಾರ ಸಹಿತ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು  ಮುಗಿಬಿದ್ದಿದ್ದರು.  ಪೆಟ್ರೋಲ್ ಬಂಕ್ ಮುಂದೆ ಇಂಧನ ತುಂಬಿಸಲು ಸಾಲುಗಟ್ಟಿ ನಿಂತ ವಾಹನಿಗರ ದಂಡೆ ಇದ್ದವು.

ಸಹಜ ಸ್ಥಿತಿಯತ್ತ ಮಂಗಳೂರು Read More »

ಕರಾವಳಿ

ಮಹಿಳೆಯರ ಅವಮಾನ ಆರೋಪ: ಸಂಸದ ಶಶಿ ತರೂರು ವಿರುದ್ಧ ಬಂಧನ ವಾರಂಟ್

ತಿರುವನಂತಪುರಂ, ಡಿ.22: ತನ್ನ ಪುಸ್ತಕವೊಂದರಲ್ಲಿ ಮಹಿಳೆಯರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವನಂತಪುರಂನ ಸ್ಥಳೀಯ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ. ಶನಿವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ  ವಕೀಲರೊಂದಿಗೆ ಹಾಜರಾಗಲೂ ಸ್ಥಳೀಯ ಕೋರ್ಟ್ ಸೂಚಿಸಿತ್ತು. ಆದರೇ ಹಾಜರಾಗಲು ವಿಫಲವಾದ ಕಾರಣ ಕಾಂಗ್ರೆಸ್ ನಾಯಕನ ವಿರುದ್ಧ ಬಂಧನ ವಾರಂಟ್ ಅನ್ನು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಹೊರಡಿಸಿದ್ದಾರೆ.

ಮಹಿಳೆಯರ ಅವಮಾನ ಆರೋಪ: ಸಂಸದ ಶಶಿ ತರೂರು ವಿರುದ್ಧ ಬಂಧನ ವಾರಂಟ್ Read More »

ರಾಷ್ಟ್ರೀಯ ನ್ಯೂಸ್

ಮಾಡಿರುವ ಸಾಲವನ್ನು ತೀರಿಸುವ ಸರಳ ಮಾರ್ಗ. ದಿನ ಭವಿಷ್ಯ ನೋಡಿ

ವಿಪರೀತ ಸಾಲವನ್ನು ಮಾಡಿಕೊಂಡಿದ್ದರೆ ಅದರಿಂದ ನಿಮ್ಮ ಸ್ಥಿತಿ ಚಿಂತಾಜನಕವಾಗಿದ್ದರೆ ಚಿಂತಿಸಬೇಡಿ ಲಕ್ಷ್ಮಿ ಹೃದಯ ನಾರಾಯಣ ಹೋಮವನ್ನು ಮಾಡುವುದರಿಂದ ಸಾಲ ಹಿಂತಿರುಗಿಸುವ ಶಕ್ತಿ ಹಾಗೂ ದಾರಿಗಳು ಕಂಡುಬರುತ್ತದೆ ಮತ್ತು ನೀವು ಋಣಮುಕ್ತರಾಗುವುದು ಖಂಡಿತ ಸಾಧ್ಯವಿದೆ. ಶ್ರೀ ಆಂಜನೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ

ಮಾಡಿರುವ ಸಾಲವನ್ನು ತೀರಿಸುವ ಸರಳ ಮಾರ್ಗ. ದಿನ ಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್

ಕಲ್ಲೆಸೆತದಿಂದ ನೆಟ್ಟಿಗರಿಗೆ ಆಹಾರವಾದ ಮಂಗಳೂರಿನ ಪಂಪ್ ವೆಲ್ ಸರ್ಕಲ್ ➤ ಟ್ರೋಲ್ ಆಗುತ್ತಿದೆ ಸಂಸದರ ಟ್ವೀಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.21. ಪೌರತ್ವ ವಿರೋಧಿಸಿ ತುಳುನಾಡಿನಲ್ಲಿ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ ಎರಡು ಜೀವಗಳು ಬಲಿಯಾಗಿದ್ದು ಆಯಿತು. ಕರ್ಫ್ಯೂ ಹಾಕಿ ಜನಜೀವನ ಅಸ್ತವ್ಯಸ್ತ ಆಗಿದ್ದೂ ಆಯಿತು. ಇದೀಗ ಕಲ್ಲೆಸೆತವನ್ನು ಟ್ರೋಲ್ ಮಾಡುತ್ತಾ ಸಂಸದ ನಳಿನ್ ಕುಮಾರ್ ಕಟೀಲ್ ರ ನಕಲಿ ಟ್ವೀಟೊಂದು ನೆಟ್ಟಿಗರಿಗೆ ಆಹಾರವಾಗುತ್ತಿದೆ. ಮಂಗಳೂರಿನ ಮುಖ್ಯದ್ವಾರವಾದ ಪಂಪ್ ವೆಲ್ ನಲ್ಲಿ ಕಳೆದ 9 ವರ್ಷಗಳಿಂದ ನಿರ್ಮಿಸುತ್ತಿರುವ ಫ್ಲೈಓವರ್ ಕಾಮಗಾರಿಯ ಉದ್ಘಾಟನೆಗೆ ಹಲವು ಸಲ ದಿನಾಂಕ ನಿಗದಿಯಾಗಿ ಕೊನೆಯ ಹಂತದಲ್ಲಿ ಕಾಮಗಾರಿ ಪೂರ್ತಿಯಾಗದೆ

ಕಲ್ಲೆಸೆತದಿಂದ ನೆಟ್ಟಿಗರಿಗೆ ಆಹಾರವಾದ ಮಂಗಳೂರಿನ ಪಂಪ್ ವೆಲ್ ಸರ್ಕಲ್ ➤ ಟ್ರೋಲ್ ಆಗುತ್ತಿದೆ ಸಂಸದರ ಟ್ವೀಟ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top